Viral News: ಊಟ ಕೊಡಲ್ಲ ಎಂದ ವರನ ಮುಂದೆ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ ಫೋಟೋಗ್ರಾಫರ್ ..

Hungry Photographer Deletes Photo: ಇನ್ನು ಮೂಲಗಳ ಪ್ರಕಾರ ನವವಿವಾಹಿತರು ತಮ್ಮ ಹನಿಮೂನ್‌ಗೆ  ಹೋಗಿದ್ದು, ತಮ್ಮ ಸಾಮಾಜಿಕ ಮಾಧ್ಯಮದಿಂದ ಹೊರಗುಳಿದಿದ್ದಾರೆ. ಆದರೆ ಜನರು ಅವರ ಬಳಿ ಮದುವೆಯ ಫೋಟೋ ಬಗ್ಗೆ ಕೇಳುತ್ತಿದ್ದಾರೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮದುವೆ(Wedding) ಎಂದ ಮೇಲೆ ಫೋಟೋಗ್ರಾಫರ್ (Photographer)ಇರಲೇಬೇಕು. ಆ ಸುಂದರ ದಿನದ ಪ್ರತಿ ಕ್ಷಣಗಳನ್ನು ಸೆರೆ ಹಿಡಿಯಲು ಅವರ ಬೇಕೆ ಬೇಕು. ಆದರೆ ಅವರನ್ನು ಸಹ ಗೌರವದಿಂದ ನೋಡಿಕೊಳ್ಳುವುದು ಅಗತ್ಯವಿದೆ. ಆದರೆ ಸಾಮಾನ್ಯ ಮದುವೆಯಲ್ಲಿ ಫೋಟೋಗ್ರಾಫರ್​ಗಳನ್ನು ಕಡೆಗಾಣಿಸಲಾಗುತ್ತದೆ. ಅವರು ಎಲ್ಲರ ಊಟವಾದ ನಂತರ ಊಟ ಮಾಡುತ್ತಾರೆ. ನಮ್ಮ ಪ್ರತಿ ಕ್ಷಣಗಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತಾರೆ. ಹೆಚ್ಚು ತಾಳ್ಮೆಯಿಂದ ಇರುತ್ತಾರೆ. ಆದರೆ ಮದುವೆಯಲ್ಲಿ ಆಹಾರವನ್ನು ನಿರಾಕರಿಸಿದ ಕಾರಣ ವರನ ಮುಂದೆ ತನ್ನ ಕ್ಯಾಮೆರಾದಲ್ಲಿರುವ ಎಲ್ಲಾ ಫೋಟೋಗಳನ್ನು ಫೋಟೋಗ್ರಾಪರ್ ಅಳಿಸಿದ ಘಟನೆ ನಡೆದಿದೆ. ಅಲ್ಲದೇ ತನ್ನ ನಿರ್ಧಾರದ ಬಗ್ಗೆ ಜನರ ಅಭಿಪ್ರಾಯ ಕೇಳಿದ್ದಾರೆ.

ನಾನು ನಿಜವಾಗಿ ಛಾಯಾಗ್ರಾಹಕನಲ್ಲ, ನಾಯಿ ಸಾಕುವವನು. ನನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಲು ನಾನು ದಿನವಿಡೀ ಸಾಕಷ್ಟು ನಾಯಿಗಳ ಫೋಟೋಗಳನ್ನು ತೆಗೆದುಕೊಳ್ಳುತ್ತೇನೆ, ಅರ್ಥವಾದರೆ ಅದು ನನ್ನ ಬದುಕು ಎಂದು ಹೇಳಿದ್ದಾರೆ.  ಹಣವನ್ನು ಉಳಿಸಲು  ಸಲುವಾಗಿ ಸ್ನೇಹಿತನು ತನ್ನ ಮದುವೆಯ  ಫೋಟೋಗಳನ್ನು ತೆಗೆಯಲು ತನ್ನನ್ನ ಕೇಳಿಕೊಂಡಿದ್ದನು. ಆತನಿಗಾಗಿ ನಾನು ಒಪ್ಪಿಕೊಂಡೆ.ಇದು ನಿಜವಾಗಿಯೂ ನನ್ನಿಂದ ಸಾಧ್ಯವಿಲ್ಲ ಎಂದು ನಾನು ಅವನಿಗೆ ಹೇಳಿದೆ ಆದರೆ ಅವನು ಹೇಗಿದ್ದರೂ ಸರಿ ಎಂದು ಹೇಳಿ ನನ್ನ ಒಪ್ಪಿಸಿದ್ದರು ಎಂದಿದ್ದಾರೆ.

ಅದಕ್ಕೆ ಫೋಟೋಗ್ರಾಫರ್ $ 250 ಗೆ  ಚಿತ್ರೀಕರಣ ಮಾಡಲು ಒಪ್ಪಿಕೊಂಡಿದ್ದಾರೆ.  ಆ ದಿನ  ಬೆಳಿಗ್ಗೆ 11 ಗಂಟೆಗೆ ಕೆಲಸ ಮಾಡಲು ಪ್ರಾರಂಭಿಸಿದ್ದರೂ ಅದು ಸಂಜೆ 7: 30 ಕ್ಕೆ ಮುಗಿಯಬೇಕಿತ್ತು. ಸಂಜೆ 5 ಗಂಟೆ ಸುಮಾರಿಗೆ, ಆಹಾರವನ್ನು ನೀಡಲಾಗುತ್ತಿತ್ತು, ಆದರೆ ನಾನು ಫೋಟೋ ತೆಗೆಯಬೇಕಿರುವುದರಿಂದ ಊಟ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು, ಅಲ್ಲದೇ ನನಗೆ ಅಲ್ಲಿ ಒಂದು ಸ್ಥಳವನ್ನು ಸಹ ನೀಡಿರಲಿಲ್ಲ.

ಇದನ್ನೂ ಓದಿ: ಐಸ್​ ಕ್ರೀಂ ಕಡ್ಡಿಯಲ್ಲಿ ಇಡ್ಲಿ ತಿಂದಿದ್ದೀರಾ? ಬೆಂಗಳೂರಿನ ಹೋಟೆಲ್​ವೊಂದರ ವಿನೂತನ ಪ್ರಯೋಗ.. ಫೋಟೋ ವೈರಲ್​!

ನನಗೆ ಆಯಾಸವಾಗುತ್ತಿತ್ತು, ಅಲ್ಲದೇ ಸ್ಥಳ ಹೆಚ್ಚು ಸೆಖೆಯಿಂದ ಕೂಡಿತ್ತು. ಬಹಳ ಕಷ್ವಾಗುತಿತ್ತು. ಇದರ ಮಧ್ಯೆ ಅಲ್ಲಿ ಕುಡಿಯಲು ಒಂದು ಲೋಟ ನೀರು ಕೊಡುವವರು ಯಾರು ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ವಲ್ಪ ಸಮಯದ ನಂತರ ವರನಿಗೆ ತಿನ್ನಲು ಮತ್ತು ಕುಡಿಯಲು 20 ನಿಮಿಷಗಳ ವಿರಾಮ ಬೇಕು ಎಂದು ಕೇಳಿದೆ, ಅದಕ್ಕೆ ಆತ ಅದೆಲ್ಲ ಸಾಧ್ಯವಿಲ್ಲ, ಫೋಟೋಗಳನ್ನು ತೆಗಿ ಅಥವಾ ಯಾವುದೇ ವೇತನವಿಲ್ಲದೆ ಹೋಗಬೇಕಾಗುತ್ತದೆ ಎಂದು ಹೇಳಿದ.   ಸೆಖೆಯಿಂದ ಮತ್ತು ಹಸಿವಿನಿಂದ ನಾನು ಸಿಟ್ಟಿನಿಂದ ಮತ್ತೊಮ್ಮೆ ಕೇಳಿದೆ. ಕೊನೆಯ ಬಾರಿ ಹೇಳು ಎಂದೆ ಅದಕ್ಕೂ ಸಹ ಆತ ಹೌದು ಎಂದ. ಇದರಿಂದ ಸಿಟ್ಟಿಗೆದ್ದ ನಾನು ಆತನ ಮುಂದೆ ತೆಗೆದ ಎಲ್ಲಾ ಫೋಟೋಗಳನ್ನು ಅಳಿಸಿದೆ. ಅಲ್ಲದೇ ನಾನು ಈಗ ನಿಮ್ಮ ಫೋಟೋಗ್ರಾಫರ್ ಅಲ್ಲ. ನೀವು ನನಗೆ  $ 250 ಕೊಡಬೇಕಾದರೆ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದಿದ್ದಾರೆ.

ಇನ್ನು ಮೂಲಗಳ ಪ್ರಕಾರ ನವವಿವಾಹಿತರು ತಮ್ಮ ಹನಿಮೂನ್‌ಗೆ  ಹೋಗಿದ್ದು, ತಮ್ಮ ಸಾಮಾಜಿಕ ಮಾಧ್ಯಮದಿಂದ ಹೊರಗುಳಿದಿದ್ದಾರೆ. ಆದರೆ ಜನರು ಅವರ ಬಳಿ ಮದುವೆಯ ಫೋಟೋ ಬಗ್ಗೆ ಕೇಳುತ್ತಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು,  ನೆಟ್ಟಿಗರು ಫೋಟೋಗರಾಪರ್ ಬೆಂಬಲಕ್ಕೆ ನಿಂತಿದ್ದಾರೆ.  ಒಬ್ಬ ಬಳಕೆದಾರರು, ಅವರು ನಿಮಗೆ ಆಹಾರವನ್ನು ಸಹ ಉಳಿಸಲಿಲ್ಲವೇ? ಈ ಸ್ನೇಹಿತರಿಗಿಂತ ನಾಯಿಗಳು ಉತ್ತಮ ಎಂದು ಬರೆದಿದ್ದಾರೆ.

ಇನ್ನೊಬ್ಬರು ನೀವು ಯಾರಿಗಾದರೂ ಆಹಾರ ಮತ್ತು ನೀರು ಮತ್ತು ವಿಶ್ರಾಂತಿ ವಿರಾಮವನ್ನು ನಿರಾಕರಿಸಿದರೆ, ನೀವು ಖಂಡಿತವಾಗಿಯೂ  ಒಳ್ಳೆಯ ಮನುಷ್ಯರಲ್ಲ ಎಂದು  ಹೇಳಿದ್ದಾರೆ.

ಇದನ್ನೂ ಓದಿ; ವಾರ ಪೂರ್ತಿ ಕೆಲಸ, ಮನೆ ಖರೀದಿಸಲಾಗದೆ ಆಫೀಸಿನಲ್ಲೇ ವಾಸ... ಟೆಸ್ಲಾ ಸಿಇಒ ಎಲಾನ್​ ಮಸ್ಕ್​ನ ಕಥೆಯಿದು!

ಓಹ್, ನೀವು ಫೋಟೋಗಳನ್ನು ಅಳಿಸಬಾರದಿತ್ತು. ಅಲ್ಲಿಂದ ಹಾಗೆಯೇ ಹೊರಡಬೇಕಿತ್ತು. ಸ್ನೇಹಿತ ಫೋಟೋಗಳನ್ನು ಕೇಳಿದಾಗ ದುಪ್ಪಟ್ಟು ಬೆಲೆ ಹೇಳಬೇಕಿತ್ತು ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.
Published by:Sandhya M
First published: