• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ರಾತ್ರಿ ವೈನ್​ ಪಾರ್ಟಿ ಮಾಡಿದ ಮಹಿಳೆಗೆ ಬೆಳಗ್ಗೆ ಬೆಡ್​ ಮೇಲೆ ಕಾದಿತ್ತು ಶಾಕ್​: ಸ್ನ್ಯಾಪ್​ಚಾಟ್​ ವಿಡಿಯೋ ವೈರಲ್

ರಾತ್ರಿ ವೈನ್​ ಪಾರ್ಟಿ ಮಾಡಿದ ಮಹಿಳೆಗೆ ಬೆಳಗ್ಗೆ ಬೆಡ್​ ಮೇಲೆ ಕಾದಿತ್ತು ಶಾಕ್​: ಸ್ನ್ಯಾಪ್​ಚಾಟ್​ ವಿಡಿಯೋ ವೈರಲ್

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ರಾತ್ರಿಯ ಹೊತ್ತು ಈ ತೋಳ ಇಲ್ಲಿ ಏನು ಮಾಡುತ್ತಿದೆ ಎಂದು ಕ್ಯಾಮರಾದೊಟ್ಟಿಗೆ ತನ್ನ ಸಂಭಾಷಣೆ ಮುಂದುವರೆಸಿದ್ದಾಳೆ. ಅಲ್ಲದೇ ಎಸ್ಕೊಮೋ ಸಂಗಾತಿಯಂತೆ ಎಂದು ವಿವರಿಸಿದ್ದಾಳೆ.

  • Share this:

28 ವರ್ಷದ ಮಹಿಳೆ ಕುಡಿತದ ನಂತರದ ಪರಿಣಾಮದ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ಕಂಠಪೂರ್ತಿ ಕುಡಿದು ನಿದ್ರೆಗೆ ಶರಣಾದ ಮಹಿಳೆ ಬೆಳಗ್ಗೆ ಎದ್ದ ತಕ್ಷಣ ಆಶ್ವಯರ್ಚಕಿತಳಾಗಿದ್ದಾಳೆ. ಏಕೆಂದರೆ ಅವಳ ಹಾಸಿಗೆ ಮೇಲೆ ಅಪರಿಚಿತ ಶ್ವಾನವೊಂದು ಆಕೆಯನ್ನೇ ದಿಟ್ಟಿಸುತ್ತಾ ಮಲಗಿದೆ. ವೇಲ್ಸ್‌ನ ಮಿಯಾ ಫ್ಲಿನ್ ಎನ್ನುವವರು ಸ್ನ್ಯಾಪ್​ ಚಾಟ್​​ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಆಕೆ ಮೇ 16 ರ ರಾತ್ರಿ ಪಾರ್ಟಿಯಿಂದ ತನ್ನ ಗೆಳೆಯನ ಮನೆಯಿಂದ ಹೊರ ಬರುವಾಗ ಶ್ವಾನವೊಂದನ್ನು ಕಂಡಿದ್ದಾರೆ. ಆದರೆ ಹ್ಯಾಂಗ್​ ಓವರ್​​ನಿಂದ ನಾಯಿಯನ್ನು ತೋಳವೆಂದು ಭ್ರಮಿಸಿದ್ದಾರೆ. 
ವಿಡಿಯೋ ಆರಂಭವಾಗುತ್ತಿದ್ದಂತೆ ಆಕೆ ಕ್ಯಾಮರಾವನ್ನು ಉದ್ದೇಶಿಸಿ ಮಾತನಾಡಿದ್ದಾರೆ.


ತನಗೆ ಹಾಸಿಗೆಯಿಂದ ಇಳಿಯಲು ಭಯವಾಗುತ್ತಿದೆ ಎನ್ನುತ್ತಾರೆ. ಆ ನಂತರ ಕ್ಯಾಮರಾವನ್ನು ಹಸ್ಕಿ ಶ್ವಾನದ ಕಡೆಗೆ ತಿರುಗಿಸುತ್ತಾರೆ. ಹಸ್ಕಿ ಶ್ವಾನವು ಆರಾಮವಾಗಿ ಹಾಸಿಗೆ ಮೇಲೆ ವಿಶ್ರಮಿಸುವ ದೃಶ್ಯ ರೆಕಾರ್ಡ್​ ಆಗಿದೆ. ಇನ್ನು ಶ್ವಾನವು ಮನೆಯಲ್ಲಿ ಸ್ವಚ್ಚಂದವಾಗಿದೆ. ರಾತ್ರಿ ಮಹಿಳೆ ನೈಟ್​ಔಟ್​ ಮುಗಿಸಿಕೊಂಡು ಬರುವಾಗ ಶ್ವಾನವು ಆಕೆಯೊಟ್ಟಿಗೆ ಬಂದಿದೆ ಎಂದಿದ್ದಾಳೆ.


ಸ್ನೇಹಿತರ ಮನೆಯಲ್ಲಿ ಕುಡಿದ ನಂತರ ಮಿಯಾ, ರಾತ್ರಿ ನಡೆದ ಘಟನೆಗಳನ್ನು ಒಮ್ಮೆ ಮೆಲುಕು ಹಾಕುತ್ತಾಳೆ. ಈ ನಿಟ್ಟಿನಲ್ಲಿ ಮೊಬೈಲ್​ನಲ್ಲಿರುವ ವಿಡಿಯೋ ಆಕೆಗೆ ನೆರವಾಗುತ್ತದೆ. ಇನ್ನೂ ವಿಡಿಯೋಗೆ "ಕೆಲವು ಗಂಟೆಗಳ ಹಿಂದೆ"  ಆಕೆ ಮನೆ ಕಡೆಗೆ ನಡೆದು ಬರುವಾಗ ಭಯಾನಕ ತೋಳವೊಂದನ್ನು ಆಕೆ ಕಂಡಿದ್ದಾಳೆ ಎಂದು ವಿಡಂಬನಾತ್ಮಕವಾಗಿ ಶೀರ್ಷಿಕೆ ನೀಡಿದ್ದಾಳೆ. ರಾತ್ರಿಯ ಹೊತ್ತು ಈ ತೋಳ ಇಲ್ಲಿ ಏನು ಮಾಡುತ್ತಿದೆ ಎಂದು ಕ್ಯಾಮರಾದೊಟ್ಟಿಗೆ ತನ್ನ ಸಂಭಾಷಣೆ ಮುಂದುವರೆಸಿದ್ದಾಳೆ. ಅಲ್ಲದೇ ಎಸ್ಕೊಮೋ ಸಂಗಾತಿಯಂತೆ ಎಂದು ವಿವರಿಸಿದ್ದಾಳೆ. ಆದರೆ ಕೂಲಂಕುಷವಾಗಿ ಗಮನಿಸಿದಾಗ ಅದು ತೋಳವಾಗಿರಲಿಲ್ಲ, ಶ್ವಾನವಾಗಿತ್ತು.


ಇದನ್ನೂ ಓದಿ: Yellow Fungus: ಕೊರೋನಾ ಆಯ್ತು..ಬ್ಲಾಕ್​ ಫಂಗಸ್​ ಆಯ್ತು ಈಗ ಹಳದಿ ಫಂಗಸ್​ ಕಾಟ; ದೆಹಲಿಯಲ್ಲಿ ಪತ್ತೆಯಾಯ್ತು ಮೊದಲ ಕೇಸ್​!


ಮಿರರ್ ಯುಕೆ ಜೊತೆ ಮಾತನಾಡುತ್ತಾ, ಮಿಯಾ ಮೂರು ಬಾಟಲಿ ವೈನ್​ಗಳ ಜೊತೆಗೆ ತನ್ನ ಸ್ನೇಹಿತನ ಮನೆಯಲ್ಲಿ ಸಮಯ ಕಳೆದಿದ್ದಳು. ಬೆಳಿಗ್ಗೆ ಅಪರಿಚಿತ ಶ್ವಾನದೊಟ್ಟಿಗೆ ತನ್ನ ಹಾಸಿಗೆಯಿಂದ ಎಚ್ಚರವಾಗಿದ್ದಾಳೆ. ಎಲ್ಲಿ ಆ ನಾಯಿ ಅವಳ ಮೇಲೆ ಆಕ್ರಮಣ ಮಾಡಬಹುದೋ ಎಂದು ಹೆದರಿದ್ದಾಳೆ. ಆದರೆ ಅದು ಬಹಳ ಸ್ನೇಹ ಪರ ಶ್ವಾನದಂತೆ ಕಂಡು ಬಂದಿದೆ.  ಆ ಶ್ವಾನಕ್ಕೆ ಸದ್ಯ  "ಟೋಬಿ" ಎಂದು ಹೆಸರಿಟ್ಟಿರುವ ಮಿಯಾ ಅದರ ಮಾಲೀಕನಿಗಾಗಿ ಹುಡುಕಾಟ ಕೂಡ ನಡೆಸಿ ಯಶಸ್ವಿಯಾಗಿದ್ದಾಳೆ.


ಇದನ್ನೂ ಓದಿ: Corona Vaccine: ಶೀಘ್ರದಲ್ಲೇ ಮಕ್ಕಳಿಗೂ ಲಭ್ಯವಾಗಲಿದೆ ಕೋವಾಕ್ಸಿನ್ ಲಸಿಕೆ; ಅನುಮತಿ ನೀಡಿಲಿರುವ WHO?


ಫೇಸ್‌ಬುಕ್‌ನಲ್ಲಿ, ಮಾಲೀಕರನ್ನು ಹುಡುಕುವ ಆಶಯದೊಂದಿಗೆ ನಾಯಿಯ ಚಿತ್ರವನ್ನು ಹಂಚಿಕೊಂಡಿದ್ದಾಳೆ. ಅದೃಷ್ಟವಶಾತ್, ಸ್ನ್ಯಾಪ್​ ಚಾಟ್​ ಸಹಾಯದಿಂದ ವ್ಯಕ್ತಿಯೊಬ್ಬರು ಮಿಯಾಳಿಗೆ ಟೋಬಿಯಾ ಮಾಲೀಕನ ಪತ್ತೆಗೆ ನೆರವಾಗಿದ್ದಾರೆ.


ಶ್ವಾನದ ಮಾಲೀಕರು ಮಿಯಾ ಕಥೆ ಕೇಳಿ ಬೆಸ್ತು ಬಿದ್ದು, ಚಿಯರ್ಸ್ ಎಂದಿದ್ದಾರೆ.  ಅಲ್ಲದೇ ಶ್ವಾನವನ್ನು ಜತನದಿಂದ ಕಾಪಾಡಿಕೊಂಡಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಕುಡಿತದ ಅವಾಂತರದಿಂದ ಶ್ವಾನ ತೋಳವಾಯ್ತು ಸರಿ. ಒಂದು ವೇಳೆ ಚಿರತೆ ಆಗಿದ್ರೆ ಕಥೆ ಏನು ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

Published by:MAshok Kumar
First published: