• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಒಂದು ಕೂಗಿನಲ್ಲಿದೆ 5 ವಿವಿಧ ಭಾವನೆಗಳು, ಕಿರುಚುವುದಕ್ಕೂ ಇದೆ ನಾನಾ ಕಾರಣ ಎನ್ನುತ್ತದೆ ಅಧ್ಯಯನ

ಒಂದು ಕೂಗಿನಲ್ಲಿದೆ 5 ವಿವಿಧ ಭಾವನೆಗಳು, ಕಿರುಚುವುದಕ್ಕೂ ಇದೆ ನಾನಾ ಕಾರಣ ಎನ್ನುತ್ತದೆ ಅಧ್ಯಯನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜೂರಿಚ್ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಸುಸ್ಚಾ ಫ್ರುಹ್‍ಲೋಜ್ ಎಂಬುವವರ ಮಾರ್ಗದರ್ಶನಲ್ಲಿ ಮಾನವನ ಕಿರುಚುವಿಕೆಯ ವರ್ಣಪಟಲದ ಹಿಂದಿರುವ ಅಂಶಗಳ ಕುರಿತು ಅಧ್ಯಯನ ನಡೆಸಲಾಯಿತು. ಆಗ ಮಾನವನ ಅರಚುವಿಕೆ ಆರು ಭಾವನೆಗಳ ಮೇಲೆ ಅವಲಂಬಿತವಾಗಿದೆ ಎಂದು ತಿಳಿದು ಬಂದಿತು.

  • Share this:

Trending Desk: ಮನುಷ್ಯನ ಕಿರುಚಾಟ ಭಯ ಮಾತ್ರವಲ್ಲ ಇನ್ನಿತರೆ ಐದು ಭಾವನೆಗಳನ್ನು ಹೊರಹಾಕುತ್ತವೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಮನುಷ್ಯನ ಕೂಗಿನ ಗಾಢತೆ ಈ ಹಿಂದೆ ಯಾವ ವಿಚಾರದ ಬಗ್ಗೆ ಯೋಚಿಸುತ್ತಿದ್ದ ಎಂಬುದನ್ನು ಅವಲಂಬಿಸಿರುತ್ತದೆ. ಜೊತೆಗೆ ಆತ/ಆಕೆ ಅನುಭವಿಸಿದ ನೋವು ಕೂಡ ಮುಖ್ಯವಾಗುತ್ತದೆ. ಕೆಲವೊಮ್ಮೆ ಸಂತೋಷ, ಉತ್ಸಾಹ, ಆಕ್ರಮಣ ಭಾವನೆಗಳೂ ಪೂರಕವಾಗುತ್ತದೆ. 


PLOS ಬಯಾಲಜಿ ಎಂಬಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಕಾರಾತ್ಮಕ ಅಂಶಗಳಲ್ಲದೇ ಕೆಲವೊಮ್ಮೆ ಆತಂಕಕಾರಿಯಾದ ಆಕ್ರಮಣ ಸಂದರ್ಭಗಳಲ್ಲಿಯೂ ಮೆದುಳು ಹೆಚ್ಚು ದಕ್ಷತೆಯನ್ನು ಗ್ರಹಿಸುತ್ತದೆ ಮತ್ತು ಯಾವುದು ಉತ್ತಮ, ಯಾವುದು ಬೇಡ ಎನ್ನುವುದನ್ನು ಸಂಸ್ಕರಿಸುತ್ತದೆ ಎಂದು ಹೇಳಿದೆ. ಇನ್ನು ಈ ಹಿಂದೆಯೂ ಕೇವಲ ಭಯದಲ್ಲಿ ಕಿರುಚುವಾಗ ಮಾನವನಲ್ಲಿ ಹೊರಹೊಮ್ಮುವ ಶಬ್ದದ ಗಾಢತೆ, ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳಲ್ಲಾಗುವ ವ್ಯತ್ಯಾಸವನ್ನು ಕುರಿತು ಅಧ್ಯಯನ ನಡೆಸಲಾಗಿತ್ತು. ಆದರೆ ಅದರಲ್ಲಿ ಸಮರ್ಪಕವಾದ ಫಲಿತಾಂಶ ದೊರೆಯಲಿಲ್ಲ.


ನಂತರ ಜೂರಿಚ್ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಸುಸ್ಚಾ ಫ್ರುಹ್‍ಲೋಜ್ ಎಂಬುವವರ ಮಾರ್ಗದರ್ಶನಲ್ಲಿ ಮಾನವನ ಕಿರುಚುವಿಕೆಯ ವರ್ಣಪಟಲದ ಹಿಂದಿರುವ ಅಂಶಗಳ ಕುರಿತು ಅಧ್ಯಯನ ನಡೆಸಲಾಯಿತು. ಆಗ ಮಾನವನ ಅರಚುವಿಕೆ ಆರು ಭಾವನೆಗಳ ಮೇಲೆ ಅವಲಂಬಿತವಾಗಿದೆ ಎಂದು ತಿಳಿದು ಬಂದಿತು.


ನೋವು, ಕೋಪ, ಭಯ, ಒತ್ತಡ, ದುಃಖ, ಮತ್ತು ಸಂತೋಷ ಈ ಆರು ಭಾವನೆಗಳು ಮಾನವನ ಕೂಗಾಟವನ್ನು ನಿರ್ಧರಿಸುತ್ತದೆ ಎಂದು ತಿಳಿಯಿತು. ಇನ್ನು ಅಧ್ಯಯನದ ವೇಳೆ ಕೇಳುಗರು ನಿಖರವಾಗಿ ತುಂಬಾ ವೇಗವಾಗಿ ನರವ್ಯೂಹದ ಸೂಕ್ಷ್ಮತೆಗನುಗುಣವಾಗಿ ಪ್ರತಿಕ್ರಿಯಿಸಿದರು ಎಂದು ತಿಳಿಸಿದರು.


ಫ್ರುಹ್‍ಲೋಜ್ ತಂಡ ಅವರ ಅಧ್ಯಯನದ ವೇಳೆ ನಾಲ್ಕು ಪ್ರಯೋಗಗಳನ್ನು ಕೈಗೊಂಡರು. ಇದರಲ್ಲಿ 12 ಮಂದಿ ಭಾಗವಹಿಸಿದ್ದರು. ಆಗ ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಕೆಲವು ಧನಾತ್ಮಕ ಧ್ವನಿ ಮತ್ತು ನಕಾರಾತ್ಮಕ ಧ್ವನಿಗಳು ಕೇಳಿ ಬಂದವು. ನಂತರ ಮತ್ತೊಂದು ಅಧ್ಯಯನದಲ್ಲಿ ಕಿರುಚಾಟದ ಭಾವನಾತ್ಮಕ ಅಂಶಗಳ ಆಧಾರದ ಮೇಲೆ ವಿಂಗಡಿಸಿ ಪ್ರತ್ಯೇಕವಾಗಿ ಅಧ್ಯಯನಕ್ಕೊಳಪಡಿಸಲಾಯಿತು.


ಆಗ ಮೆದುಳಿನ ಮುಂಭಾಗದ, ಶ್ರವಣೇಂದ್ರಿಯ ಪ್ರದೇಶಗಳು ಅತಿ ವೇಗವಾಗಿ ಪ್ರತಿಕ್ರಿಯಿಸಿದವು. ಮಾನವ ಹಾಗೂ ಸಸ್ತನಿಗಳ ಮೆದುಳು ಬೆದರಿಕೆ, ಅಪಾಯದ ಮುನ್ಸೂಚನೆಗಳನ್ನು ಗುರುತಿಸುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಆದರೆ ಮಾನವನ ಕೂಗು ವೈವಿಧ್ಯಮಯ ಹಂತಗಳಲ್ಲಿರಲಿದ್ದು, ಮಾನವನ ವಿಕಾಸಕ್ಕನುಗುಣವಾಗಿ ವಿಭಿನ್ನವಾದ ಭಾವನೆಗಳನ್ನು ಹೊರಹಾಕುತ್ತದೆ ಎಂದು ಈ ಹಿಂದಿನ ಅಧ್ಯಯನ ಹೇಳಿತ್ತು.


ಮಾನವನ ಕೂಗು ಸಕಾರಾತ್ಮಕ ಧ್ವನಿಯಾಗಿ ಅಂದರೆ ಸಂತೋಷ ಅಥವಾ ಒತ್ತಡವಾಗಿ ಪರಿವರ್ತಿತವಾಗುವ ಎಲ್ಲಾ ಸಾಧ್ಯತೆಗಳು ಇವೆ. ಹಾಗಾಗಿ ಮಾನವನ ಕೂಗು ಅಥವಾ ಕಿರುಚುವಿಕೆಯನ್ನು ತಕ್ಷಣ ಇಂತಹದ್ದೇ ಕಾರಣಕ್ಕಾಗಿ ಸಂಭವಿಸುತ್ತಿದೆ ಎಂದು ನಿರ್ಧರಿಸಲು ಸಾಧ್ಯವಾಗದು. ಗಾಢತೆ, ಸಂದರ್ಭ ಇವುಗಳನ್ನೆಲ್ಲಾ ಪರಿಶೀಲಿಸಿಯೇ ನಿರ್ಧರಿಸಬೇಕು ಎಂದು ಅಧ್ಯಯನದಿಂದ ತಿಳಿದು ಬಂದಿದೆ.

Published by:Soumya KN
First published: