Cat And Kitten: ಬೆಕ್ಕಿನ ಮರಿಗಳ ಕ್ಯೂಟ್ ವಿಡಿಯೋ ಈಗ ಎಲ್ಲೆಡೆ ವೈರಲ್‌

ಈ ವಿಡಿಯೋ ಯಾಕೆ ವಿಶೇಷ ಆಗಿದೆ ಎಂದ್ರೆ, ಒಬ್ಬ ವ್ಯಕ್ತಿ ಸಾಕಿರುವ ಬೆಕ್ಕು ಮರಿಯೊಂದಕ್ಕೆ ಜನ್ಮ ನೀಡಿದ್ದು, ಆ ಮರಿ ಬೆಕ್ಕನ್ನು ತಾಯಿ ಬೆಕ್ಕಿಗೆ ಕೊಟ್ಟಾಗ, ಅಲ್ಲಿ ಒಂದು ಅದ್ಭುತ ದೃಶ್ಯ ಸೆರೆಯಾಗಿದೆ. ಆ ದೃಶದಲ್ಲಿ ತಾಯಿ ಬೆಕ್ಕು, ಮರಿ ಬೆಕ್ಕನ್ನು ಕೊಟ್ಟಾಗ ಕೂಡಲೇ ಅದನ್ನು ತನ್ನ ವಶಕ್ಕೆ ತೆಗೆದುಕೊಂಡು ತನ್ನ ಎರಡು ಬಂಧಿಗಳಲ್ಲಿ ತಬ್ಬಿಕೊಂಡಿರುವ ವಿಡಿಯೋವನ್ನು ಎಷ್ಟು ಸಲ ನೋಡಿದರೂ ಮತ್ತೆ-ಮತ್ತೆ ನೋಡಬೇಕು ಎನಿಸುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪ್ರಾಣಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಬೆಕ್ಕು (Cat)-ಬೆಕ್ಕಿನ ಮರಿ (Kitten) ಎಂದ್ರೆ ಎಲ್ಲರಿಗೂ ತುಂಬಾ ಪ್ರೀತಿ. ಅವುಗಳು ಮಾಡುವ ತುಂಟಾಟ, ಆಟಗಳನ್ನು ನೋಡಿ ಮನಸೂರೆಗೊಳ್ಳುವವರೂ ಹೆಚ್ಚು. ಎಲ್ಲರ ಮನೆಯಲ್ಲಿ ಈ ಸ್ಮಾರ್ಟ್‌ ಪೋನ್‌ಗಳು (Smart Phone) ವಿಧ-ವಿಧವಾಗಿ ಇವೆಯೋ ಹಾಗೆಯೇ ಈ ಬೆಕ್ಕಿನ ಮರಿಗಳಲ್ಲೂ ವೈರೆಟಿ ತಂದು ತಮ್ಮ ಮನೆಯಲ್ಲಿ ಸಾಕುವ ಜನ ಇಂದಿನ ಕಾಲದಲ್ಲಿ ಇದ್ದಾರೆ. ಒಂದು ಮನೆಯಲ್ಲಿ ಒಬ್ಬ ಕುಟುಂಬ ಸದಸ್ಯ ಹೇಗೆ ಮಹತ್ವವಾಗುತ್ತಾನೋ ಹಾಗೆಯೇ ಪ್ರಸ್ತುತ ಕಾಲದಲ್ಲಿ ಈ ಸಾಕು ಪ್ರಾಣಿಗಳು (Pet Animals) ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ತಮ್ಮ ಸ್ವಂತ ಮಕ್ಕಳಂತೆ ಆ ಸಾಕು ಪ್ರಾಣಿಗಳನ್ನು ಸಾಕುವುದು, ಅವುಗಳ ಆಟ-ತುಂಟಾಟಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವುದು ಈಗ ಎಲ್ಲ ಕಡೆ ಸಾಮಾನ್ಯ ಆಗಿದೆ. ನೀವು ಪೆಟ್‌ ಲವರ್‌ ಆಗಿದ್ದರೆ, ಈ ವಿಡಿಯೋ (Video) ನೋಡಿ ಸಕತ್‌ ಎಂಜಾಯ್‌ ಮಾಡೋಡು ಖಂಡಿತ.

ಈ ವಿಡಿಯೋದಲ್ಲಿ ಅಂತಹ ವಿಶೇಷತೆ ಏನಿದೆ?
ಈ ವಿಡಿಯೋ ಯಾಕೆ ವಿಶೇಷ ಆಗಿದೆ ಎಂದ್ರೆ, ಒಬ್ಬ ವ್ಯಕ್ತಿ ಸಾಕಿರುವ ಬೆಕ್ಕು ಮರಿಯೊಂದಕ್ಕೆ ಜನ್ಮ ನೀಡಿದ್ದು, ಆ ಮರಿ ಬೆಕ್ಕನ್ನು ತಾಯಿ ಬೆಕ್ಕಿಗೆ ಕೊಟ್ಟಾಗ, ಅಲ್ಲಿ ಒಂದು ಅದ್ಭುತ ದೃಶ್ಯ ಸೆರೆಯಾಗಿದೆ. ಆ ದೃಶದಲ್ಲಿ ತಾಯಿ ಬೆಕ್ಕು, ಮರಿ ಬೆಕ್ಕನ್ನು ಕೊಟ್ಟಾಗ ಕೂಡಲೇ ಅದನ್ನು ತನ್ನ ವಶಕ್ಕೆ ತೆಗೆದುಕೊಂಡು ತನ್ನ ಎರಡು ಬಂಧಿಗಳಲ್ಲಿ ತಬ್ಬಿಕೊಂಡಿರುವ ವಿಡಿಯೋವನ್ನು ಎಷ್ಟು ಸಲ ನೋಡಿದರೂ ಮತ್ತೆ-ಮತ್ತೆ ನೋಡಬೇಕು ಎನಿಸುತ್ತಿದೆ.

ಮನಮೋಹಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ 
ಈ ಸುಂದರ ಮನಮೋಹಕ ವಿಡಿಯೋವನ್ನು ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. (Reddit/@Dark_Gladiator66) ಈ ಖಾತೆಯಿಂದ ಈ ತಾಯಿ ಮತ್ತು ಮರಿ ಬೆಕ್ಕುಗಳ ಮಾತೃ ಪ್ರೇಮವಿರುವ ವಿಡಿಯೋ ಎಲ್ಲ ಕಡೆ ವೈರಲ್‌ ಆಗ್ತಿದೆ.

ಇದನ್ನೂ ಓದಿ: Viral Video: ಬಣ್ಣಗಳನ್ನು ನೋಡಿ ಕರಡಿ ಫುಲ್ ಖುಷ್, ಏನ್ಮಾಡಿದೆ ನೋಡಿ!

ಆ ತಾಯಿ ಅದೆಷ್ಟು ಮುದ್ದಾಗಿದೆ ಮತ್ತು ಆ ಮರಿ ಬೆಕ್ಕು ಇನ್ನು ಮುದ್ದಾಗಿದೆ. ಆ ಮುದ್ದಿನ ತಾಯಿ ಬೆಕ್ಕು ಮತ್ತು ಆ ಬೆಕ್ಕಿನ ಮರಿಗಳ ನಡುವಿನ ಪ್ರೀತಿಯನ್ನು ವ್ಯಕ್ತಪಡಿಸುವ ವಿಡಿಯೋಗಳು, ದೃಶ್ಯಗಳು ಮತ್ತು ಪೋಟೋಗಳು ನೋಡಲು ಯಾವಾಗಲೂ ಅದ್ಭುತವಾಗಿರುತ್ತವೆ. ಬೇರೆ ಎಲ್ಲೋ ಮನಸ್ಸು ಚಂಚಲದಿಂದ ಹರಿದಾಡುತ್ತಿದ್ದರೂ ಈ ವಿಡಿಯೋ ನೋಡುತ್ತಲೇ ಒಬ್ಬ ವ್ಯಕ್ತಿಯ ಸಂಪೂರ್ಣ ಗಮನ ಆ ತಾಯಿ ಬೆಕ್ಕು ಮತ್ತು ಮರಿ ಬೆಕ್ಕುಗಳ ಮೇಲೆ ಹೋಗುವುದು, ಎಲ್ಲರಿಗೂ ಪ್ರಾಣಿಗಳ ಆಟ-ತುಂಟಾಟಗಳು ಮತ್ತು ಮಾತೃ ಪ್ರೇಮದ ಕುರಿತು ಇರುವ ಬಾಂಧವ್ಯದ ಪ್ರೀತಿಯನ್ನು ತೋರಿಸುತ್ತವೆ. ಈ ಪಟ್ಟಿಗೆ ಈ ಹೊಸ ವಿಡಿಯೋ ಸೇರುತ್ತಿರುವುದು ನಿಜಕ್ಕೂ ಒಳ್ಳೆಯ ವಿಚಾರ. ಈ ವಿಡಿಯೋದಲ್ಲಿ ತಾಯಿ ಬೆಕ್ಕು- ಮರಿ ಬೆಕ್ಕನ್ನು ಅತ್ಯಂತ ಪ್ರೀತಿಯಿಂದ ತಬ್ಬಿಕೊಳ್ಳುತ್ತಿರುವುದು ಎಲ್ಲರ ಮನ ಗೆಲ್ಲುತ್ತಿದೆ. ನಿಮ್ಮ ಹೃದಯದ ತುಂಬಾ ಬರೀ ದುಖಃವೇ ತುಂಬಿದ್ದರೂ ಕೂಡ ಈ ವಿಡಿಯೋ ನೋಡುತ್ತಲೇ ನೀವು ಸಂತೋಷದಿಂದ ಕರಗುತ್ತಿರಿ.

ತಾಯಿ- ಮಗುವಿನ ಸಂಬಂಧ ಹೇಗಿದೆ ಅಂತೆ ಗೊತ್ತಾ
ಈ ವಿಡಿಯೋವನ್ನು "ತಾಯಿ ಬೆಕ್ಕು ಮರಿ ಬೆಕ್ಕನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದೆ” ಎಂಬ ಸಿಂಪಲ್‌ ಕ್ಪಾಪ್ಷನ್‌ದೊಂದಿಗೆ ರೆಡ್ಡಿಟ್ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. “ಬೆಕ್ಕೊಂದು ಹಾಸಿಗೆಯ ಮೇಲೆ ಮಲಗಿರುವುದನ್ನು ಶೂಟ್‌ ಮಾಡುತ್ತಲೇ ಆರಂಭಗೊಳ್ಳುವ ಈ ವಿಡಿಯೋ ಸ್ವಲ್ಪ ಸಮಯದರಲ್ಲಿಯೇ ಒಬ್ಬ ವ್ಯಕ್ತಿಯು ಮರಿ ಬೆಕ್ಕನ್ನು ಮಲಗಿರುವ ಬೆಕ್ಕಿಗೆ ಕೊಟ್ಟಾಗ ಅದು ತಬ್ಬಿ ಮುದ್ದಾಡುತ್ತದೆ, ಆಗಲೇ ಎಲ್ಲರಿಗೂ ಗೊತ್ತಾಗುವುದು ಇವೆರಡು ತಾಯಿ-ಮಗು ಸಂಬಂಧ ಹೊಂದಿವೆ.

ಕೇವಲ ಒಂದು ದಿನದ ಹಿಂದೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಈ ಕ್ಲಿಪ್ 1,100 ಕ್ಕೂ ಹೆಚ್ಚು ಅಪ್‌ವೋಟ್‌ಗಳನ್ನು ಸಂಗ್ರಹಿಸಿದೆ ಮತ್ತು ಲೈಕ್‌ ಮಾಡುತ್ತಿರುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಈ ವಿಡಿಯೋ ಅನೇಕ ಕಮೆಂಟ್‌ಗಳನ್ನು ಕೂಡ ಕಲೆಕ್ಟ್‌ ಮಾಡುತ್ತಿದೆ. "ಅದು ನೋಡಲು ತುಂಬಾ ಸುಂದರವಾಗಿದೆ" ಎಂದು ರೆಡ್ಡಿಟ್ ಬಳಕೆದಾರರು ಒಬ್ಬರು ಕಮೆಂಟ್‌ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  Viral Video: ಮರ ಹತ್ತಿ ಕೂತ ಮರಿ ಕೋತಿ ಮೇಲೆ ಚಿರತೆ ಅಟ್ಯಾಕ್! ವಿಡಿಯೋ ನೋಡಿ ನೆಟ್ಟಿಗರು ಶಾಕ್

"ವಾಹ್ವ್‌, ತಾಯಿಯ ಪ್ರೀತಿಯಂತೆ ಮತ್ತೆ ಯಾವ ಪ್ರೀತಿಯೂ ಇಲ್ಲ" ಎಂದು ಇನ್ನೊಬ್ಬರು ಬರೆದಿದ್ದಾರೆ. "ಇದು ಬಹುಶಃ ಈ ವರ್ಷ ನಾನು ನೋಡಿದ ಸುಂದರ ವಿಡಿಯೋ ಆಗಿದೆ. ನಿಮಗೆ ನನ್ನ ಅತ್ಯುತ್ತಮ ಕೃತಜ್ಞತೆ!” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು "ಸೋ ಸ್ವಿಟ್‌!" ಕಮೆಂಟ್‌ ಬರೆದಿದ್ದಾರೆ.
Published by:Ashwini Prabhu
First published: