ಅದು 1859 ಮಧ್ಯರಾತ್ರಿ ಇದ್ದಕ್ಕಿದ್ದಂತೆ ಸೂರ್ಯೋದಯದ (Sun Rise) ಅನುಭವವಾಯ್ತು. ಬೆಳಗಾಯಿತೆಂದು ಕೆಲವರು ನಿತ್ಯದ ಕೆಲಸಗಳಲ್ಲಿ (Work) ತೊಡಗಿಕೊಂಡ್ರು, ಇನ್ನೂ ಕೆಲವರು ಅಚ್ಚರಿ ಪಟ್ಟರು, ಜೊತೆಗೆ ಆಗ ಇದ್ದ ಟೆಲಿಗ್ರಾಫ್ ಮೆಷಿನ್ ಸ್ವಯಂ ಚಾಲಿತವಾಗಿ ಕೆಲಸ ಮಾಡುವುದಕ್ಕೆ ಆರಂಭಿಸಿಬಿಡ್ತು. ಕೊನೆಗೆ ಬೆಂಕಿ ಕಿಡಿ (Fire) ಕಾಣಿಸಿಕೊಳ್ಳುವುದಕ್ಕೂ ಶುರುವಾಯ್ತು! ಇದ್ದಕ್ಕಿದ್ದಂತೆ ಹೀಗ್ಯಾಕಾಯ್ತು ಅಂದುಕೊಂಡ್ರಾ? ಈ ಎಲ್ಲಾ ಅಚ್ಚರಿಗಳ ಹಿಂದೆ ಇದ್ದದ್ದು ಸೌರಬಿರುಗಾಳಿ. ಹೌದು! ಸೌರ ಬಿರುಗಾಳಿ (Solar Storm) ಕಾಣಿಸಿಕೊಂಡ್ರೆ ಅದು ಭೂಮಿ ಮೇಲಿನ ಜೀವನವನ್ನೇ ಅಲ್ಲೋಲ ಕಲ್ಲೋಲ ಮಾಡುತ್ತದೆ ಅನ್ನೋದಕ್ಕೆ ಇದೊಂದು ಉದಾಹರಣೆ. ಇಷ್ಟಕ್ಕೂ ಈ ಸೌರ ಬಿರುಗಾಳಿ ಬಗ್ಗೆ ಈಗ ಯಾಕೆ ಹೇಳ್ತಿದ್ದೀವಿ ಅಂತಿದ್ದೀರಾ! ಈ ಸೌರ ಬಿರುಗಾಳಿ ಇದೇ ವಾರ ಶುಕ್ರವಾರ ರಾತ್ರಿ ಶನಿವಾರ ಬೆಳಗ್ಗೆಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಕರೋನಾ ಹೋಲ್
ಸೂರ್ಯನಲ್ಲಿ ಕಾಣಿಸಿಕೊಂಡಿರುವ ಕರೋನಾ ಹೋಲ್ ಇದಕ್ಕೆ ಕಾರಣ. ಈ ವಾರದಲ್ಲಿ ಎರಡನೇ ಕರೋನಾ ಹೋಲ್ ಕಾಣಿಸಿಕೊಂಡಿದೆ. ಇದರ ಪರಿಣಾಮ ಸೂರ್ಯನ ತಾಪದ ಒಂದು ಭಾಗ ಭೂಮಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಸೌರ ಗಾಳಿಯೂ ಒಂದು ಗಂಟೆಗೆ 1.8 ಮಿಲಿಯನ್ ಮೈಲಿಯಷ್ಟು ವೇಗದಲ್ಲಿ ಭೂಮಿಯ ಬಳಿಗೆ ಬರಲಿದೆ.
ಸೌರಬಿರುಗಾಳಿ ಹೇಗೆ ಉಂಟಾಗುತ್ತದೆ?
ಸೂರ್ಯನಲ್ಲಿರುವ ಪ್ಲಾಸ್ಮ ಅದರ ಸುತ್ತಲಿರುವ ಮ್ಯಾಗ್ನೆಟಿಕ್ ಫೀಲ್ಡ್ನೊಳಗೆ ಸೇರಿಕೊಂಡು ಕೆಲವೊಂದು ಕಡೆ ಲೂಪ್ಗಳು ಕಾಣಿಸಿಕೊಳ್ಳುತ್ತವೆ. ಈ ಲೂಪ್ಗಳು ಮ್ಯಾಗ್ನೆಟಿಕ್ ಫೀಲ್ಡ್ ನಲ್ಲಿ ಬೆಂಡಾಗಿ ಬೇರ್ಪಡುತ್ತವೆ. ಇನ್ನೂ ಪ್ಲಾಸ್ಮ ಸೌರ ಜ್ವಾಲೆ ಮತ್ತು ಕರೋನಲ್ ಮಾಸ್ ಇಜೆಕ್ಷನ್ ನಿಂದ ಸೌರ ಬಿರುಗಾಳಿಯಾಗಿ ಹೊರಹೊಮ್ಮುತ್ತದೆ.
ಹಾಗಾದ್ರೆ ಭೂಮಿ ಸೇಫಾ?
ಈ ಸೌರ ಬಿರುಗಾಳಿ ಭೂಮಿಗೆ ಅಪ್ಪಳಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ರೀತಿ ಸೌರ ಬಿರುಗಾಳಿಯಿಂದ ರಕ್ಷಿಸಿಕೊಳ್ಳಲು ಭೂಮಿಗೆ ರಕ್ಷಾ ಕವಚವು ಇದೆ. ಆದ್ದರಿಂದ ಯಾವುದೇ ಅಪಾಯ ಸಂಭವಿಸುವುದಿಲ್ಲ. ಆದರೆ ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್ ಮೇಲೆ ಪರಿಣಾಮ ಬೀರುತ್ತದೆ. ಭೂಮಿಯ ಮೇಲಿನ ರಕ್ಷಾ ಕವಚದಂತಿರುವ ಮ್ಯಾಗ್ನೆಟೋಸ್ಪಿಯರ್ ನಲ್ಲಿ ಅಡಚಣೆಗಳು ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ: ಇಲ್ಲಿ ಮಗನ ಬದಲಿಗೆ ಮಗಳಿಗೆ ಆಸ್ತಿ, ಎಲ್ಲರಿಗೂ ಆಹಾರ-ವಸತಿ ಫ್ರೀ! ಇದು ವಿಶ್ವದಲ್ಲೇ ವಿಶೇಷ ದೇಶ
ಅದರಲ್ಲೂ ನಾರ್ದನ್ ಲೈಟ್ಸ್ ಅಥವಾ ಅರೋರಾ ಇದರ ಬಹುಮುಖ್ಯ ಪರಿಣಾಮಗಳು. ಸೂರ್ಯನ ಚಾರ್ಜ್ಡ್ ಪಾರ್ಟಿಕಲ್ಸ್ಗಳು ಭೂಮಿಯ ವಾತಾವರಣಕ್ಕೆ ಬಂದಾಗ ವಾಯುಮಂಡಲದ ಅಣು, ಗಾಳಿಯ ಪರಿಣಾಮದಿಂದ ಅರೋರಾ ಕಾಣಸಿಕೊಳ್ಳುತ್ತದೆ.
ಸೌರಬಿರುಗಾಳಿಯಿಂದ ಇಂಟರ್ನೆಟ್ ಬಂದ್ !
ಸೂರ್ಯನ ಮೇಲ್ಮೈಯಲ್ಲಿ ಕಂಡು ಬರುವ ಸೂರ್ಯನ ಕಲೆಗಳನ್ನು ಸೌರಶಕ್ತಿಯನ್ನು ಅಂದಾಜು ಮಾಡಲು ಬಳಸಲಾಗುತ್ತದೆ. ಒಂದು ವೇಳೆ ಸೌರ ಬಿರುಗಾಳಿ ಕಾಣಿಸಿಕೊಂಡರೆ ಸ್ಯಾಟಲೈಟ್ಗಳನ್ನು ಹೊಡೆದು ಹಾಕುವ ಸಂಭವಿರುತ್ತದೆ. ಅಷ್ಟೇ ಅಲ್ಲದೇ ನಮ್ಮ ದಿನನಿತ್ಯದ ಎಲ್ಲಾ ಕೆಲಸಗಳು ಅಲ್ಲೋಲ ಕಲ್ಲೋಲವಾಗಬಹುದು. ಸೌರಶಕ್ತಿಯಿಂದ ಉಂಟಾಗುವ ರೇಡಿಯೋ ಬ್ಲಾಕ್ಗಳು ಅನೇಕ ಸಮಸ್ಯೆಗಳನ್ನು ತಂದೊಡ್ಡಬಹುದು. ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳಬಹುದು. ವಿದ್ಯುತ್ ಕಡಿತಗೊಳ್ಳುವ ಸಂಭವವೂ ಇರುತ್ತದೆ. ಅಷ್ಟೆ ಅಲ್ಲದೇ ಎಲ್ಲಾ ಸಾರಿಗೆಗಳ ಮೇಲೂ ಬೀರುವ ಪರಿಣಾಮದಿಂದ ಬದುಕು ಅಸ್ತವ್ಯಸ್ತವಾಗಬಹುದು. ಇದು ಆರ್ಥಿಕ ಮತ್ತು ತಂತ್ರಜ್ಞಾನಕ್ಕೆ ಭಾರೀ ನಷ್ಟವನ್ನುಂಟು ಮಾಡಬಹುದು. ಜಗತ್ತು ಸಾಕಷ್ಟು ವರ್ಷ ಹಿಂದಕ್ಕೆ ಹೋಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ
ಎಲ್ಲೆಲ್ಲಿ ಅಲರ್ಟ್?
ಸೌತ್ ಈಸ್ಟ್ ಏಷ್ಯಾ , ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಭಾಗಗಳಲ್ಲಿ ರೇಡಿಯೋ ಬ್ಲಾಕ್ಔಟ್ಗಳು ಉಂಟಾಗುವ ಸಾಧ್ಯತೆಯನ್ನು ವಿಜ್ಞಾನಿಗಳು ತಿಳಿಸಿದ್ದಾರೆ. 2023 ರಲ್ಲಿ ಮೂರು ತಿಂಗಳಲ್ಲಿ ಇದು 7 ನೇ ಸ್ಫೋಟವಾಗಿದೆ. ಇನ್ನೂ ಭೂಕಾಂತೀಯ ಚಂಡಮಾರುತವು ಭೂಮಿಗೆ ಅಪ್ಪಳಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ಬಂದಿದೆ. ಸೂರ್ಯನ ದಕ್ಷಿಣ ಗೋಳಾರ್ಧದಲ್ಲಿ ದೊಡ್ಡ ಕರೋನಲ್ ರಂಧ್ರದಿಂದ ಬೃಹತ್ ಸ್ಫೋಟದ ಪರಿಣಾಮ ಭೂಕಾಂತೀಯ ಚಂಡಮಾರುತವು ಅಪ್ಪಳಿಸಿದೆ. ಒಟ್ಟಿನಲ್ಲಿ ಖಗೋಳದ ಬೆಳವಣಿಗೆಗಳು ಜನಸಾಮಾನ್ಯರನ್ನು ಬೆಚ್ಚಿಬೀಳಿಸುತ್ತಲೇ ಇರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ