Japan: ಜಪಾನ್ ಅಪಾರ್ಟ್‌ಮೆಂಟ್‌ನಲ್ಲಿ ವಿಚಿತ್ರವಾದ ಜರಿ ಹುಳು

Viral Photo: ನೆಟ್ಟಿಗರೊಬ್ಬರು ವಿಚಿತ್ರವಾದ ಸೆಂಟಿಪೀಡ್‌ ಅಥವಾ ಜರಿ ಹುಳುವನ್ನು ನೋಡಿ ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದು, ಇದು ಹಲವರಲ್ಲಿ ಆತಂಕ ಹುಟ್ಟಿಸಿದೆ

ಜರಿ ಹುಳ

ಜರಿ ಹುಳ

  • Share this:

Insects: ಮನೆಯಲ್ಲಿ ತೆವಳುವ ಕೀಟವನ್ನು ಕಂಡರೆ ನಿಮಗೆ ಖುಷಿಯಾಗುತ್ತದಾ.. ಖಂಡಿತವಾಗಿಯೂ ಇಲ್ಲ ಅಂತೀರಾ..! ಒಂದು ವೇಳೆ ಆ ಕೀಟವು ಅಸಾಮಾನ್ಯವಾಗಿ ದೊಡ್ಡದಾದ ಮತ್ತು ವಿಷಪೂರಿತವಾಗಿದ್ದಾಗ, ಅದು ವಯಸ್ಕರನ್ನು ಹಾಗೂ ಧೈರ್ಯಶಾಲಿಗಳನ್ನೂ ಹೆದರಿಸಬಹುದು. ಇದೇ ರೀತಿ ನೆಟ್ಟಿಗರೊಬ್ಬರು ವಿಚಿತ್ರವಾದ ಸೆಂಟಿಪೀಡ್‌ ಅಥವಾ ಜರಿ ಹುಳುವನ್ನು ನೋಡಿ ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದು, ಇದು ಹಲವರಲ್ಲಿ ಆತಂಕ ಹುಟ್ಟಿಸಿದೆ. ಜರಿ ಹುಳು ಮಾನ್ಯವಾಗಿ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಆದರೆ ಅವುಗಳು ಅಪಾಯಕಾರಿ ಎಂದರೆ ಅವು ವಿಷಕಾರಿ. ಅವರ ಕಚ್ಚುವಿಕೆಯು ತೀವ್ರವಾದ ನೋವುಉಂಟುಮಾಡಬಹುದು ಮತ್ತು ಫೋರ್ಸಿಪ್ಯೂಲ್ಸ್ ಎಂದು ಕರೆಯಲ್ಪಡುವ ಪಿನ್ಸರ್ ತರಹದ ಅನುಬಂಧಗಳ ಮೂಲಕ ವಿಷವನ್ನು ಇನ್ಜೆಕ್ಟ್‌ ಮಾಡಬಹುದು. ಜರಿ ಹುಳುವಿನ ವಿಷ ಅನಾಫಿಲ್ಯಾಕ್ಸಿಸ್, ಕಾರ್ಡಿಯಾಕ್ ಇಷ್ಕೆಮಿಯಾ ಮತ್ತು ನ್ಯೂರೋಟಾಕ್ಸಿಸಿಟಿಯಂತಹ ತೀವ್ರ ಪರಿಣಾಮಗಳಿಗೆ ಕಾರಣವಾಗಬಹುದು.


ಆದ್ದರಿಂದ, ಜರಿ ಹುಳುವಿನ ಗಾತ್ರ ಚಿಕ್ಕದಾಗಿದೆ ಎಂದು ನಾವು ನಿಮಗೆ ಹೇಳಿದ್ದೇವೆ, ಸರಿಯೇ.. ಆದರೆ ರೆಡ್ಡಿಟ್ ಬಳಕೆದಾರ @u/Saucy_Lemur ಎಂಬುವರು ನೋಡಿರುವ ಜರಿ ಹುಳು ಆ ರೀತಿ ಇರಲಿಲ್ಲ. ಜಪಾನ್‌ನ ಅಪಾರ್ಟ್‌ಮೆಂಟ್‌ವೊಂದರ ಮನೆಯಲ್ಲಿ ತೆವಳುತ್ತಿರುವ ಕೀಟವು ಸಾಮಾನ್ಯ ಜರಿ ಹುಳಕ್ಕಿಂತ ದೊಡ್ಡದಾಗಿತ್ತು ಮತ್ತು ವೇಗವಾಗಿ ಚಲಿಸುತ್ತಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ''ಜಪಾನ್‌ನಲ್ಲಿ ವಾಸಿಸುತ್ತಿರುವಾಗ ನನ್ನ ಅಪಾರ್ಟ್‌ಮೆಂಟ್‌ನಲ್ಲಿ ಇದು ಕಂಡುಬಂದಿದೆ. ಎಂದು ಬಳಕೆದಾರರು ಬರೆದಿದ್ದಾರೆ. ಆಡ್ಲಿ ಟೆರಿಫೈಯಿಂಗ್‌ ಎಂಬ ಪೇಜ್‌ನಲ್ಲಿ @u/Saucy_Lemur ಎಂಬ ಬಳಕೆದಾರ ಈ ಸಂದೇಶವನ್ನು ಆ ಹುಳುವಿನ ಫೋಟೋ ಜತೆಗೆ ಹಾಕಿದ್ದಾರೆ.

ಇದನ್ನೂ ಓದಿ: ನಾಯಿಯ ಎದುರೇ ರಾಜಾರೋಷವಾಗಿ ಅಡ್ಡಾಡುತ್ತಿವೆ ಬೆಕ್ಕಿನ ಮರಿಗಳು.! ವಿಡಿಯೋ ನೋಡಿ

ಈ ಜರಿ ಹುಳುವಿನ ಫೋಟೋಗೆ ಆನ್‌ಲೈನ್‌ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, , ರೆಡ್ಡಿಟ್‌ನಲ್ಲಿ 77,000ಕ್ಕೂ ಅಧಿಕ ವೋಟ್‌ಗಳನ್ನು ಗಳಿಸಿತು. ಜರಿ ಹುಳುಗಳ ಗಾತ್ರದ ಬಗ್ಗೆ ತಮ್ಮ ವಿಸ್ಮಯ ವ್ಯಕ್ತಪಡಿಸಿದ ಬಳಕೆದಾರರ ಪ್ರತಿಕ್ರಿಯೆಗಳಿಂದ ಕಮೆಂಟ್‌ ವಿಭಾಗ ತುಂಬಿತ್ತು. "ಇದು ನಿಜವಲ್ಲ" ಎಂದೂ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.


ಈ ಮಧ್ಯೆ, ಇತರ ಬಳಕೆದಾರರು ಕೀಟವು ಚಲಿಸುವ ವೇಗದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು. ಮನೆಯ ಜರಿ ಹುಳು ಪ್ರತಿ ಸೆಕೆಂಡಿಗೆ 1.3 ಅಡಿ (0.4 ಮೀ) ವೇಗದಲ್ಲಿ ಚಲಿಸಬಹುದೆಂದು ಉಲ್ಲೇಖಿಸಿದರು ಮತ್ತು ಅದರ ವೇಗವು 67 ಕಿಮೀ ವೇಗದಲ್ಲಿ ಮಾನವ ಚಲಿಸುವ ವೇಗಕ್ಕೆ ಸಮಾನವಾಗಿರುತ್ತದೆ ಎಂದು ಹೇಳಿದರು.

ಇನ್ನು, ಈ ಕೀಟವನ್ನು ಹಿಡಿಯುವ ತೊಡಕುಗಳ ಬಗ್ಗೆ ಮತ್ತೊಬ್ಬ ಬಳಕೆದಾರ ಒಂದು ಕುತೂಹಲಕಾರಿ ವಿಚಾರವನ್ನು ಉಲ್ಲೇಖಿಸಿ "ಕೆಟ್ಟದೆಂದರೆ, ಅದರ ಕಾಲುಗಳು ಉದುರುತ್ತವೆ. ಮತ್ತು ಮುರಿದ ಕಾಲುಗಳು ಸೆಳೆದುಕೊಳ್ಳುತ್ತಲೇ ಇರುತ್ತವೆ, ಈ ಹಿನ್ನೆಲೆ ಜರಿ ಹುಳುವಿನ ದೇಹ ದೂರ ಹೋದರೂ ಅದು ನಿಮ್ಮನ್ನು ಈ ರೀತಿ ವಿಚಲಿತಗೊಳಿಸುತ್ತದೆ'' ಎಂದು ಆ ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ.


ಇದೇ ರೀತಿ, ಕೀಟಗಳೊಂದಿಗೆ ನಿಮಗೂ ಸಾಕಷ್ಟು ಅನುಭವಗಳಾಗಿರುತ್ತದೆ ಅಲ್ಲವೇ..?
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: