• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Lost Mayan City: ಮೆಕ್ಸಿಕೋ ನಗರದಲ್ಲಿ ಪತ್ತೆ ಆಯ್ತು ಪ್ರಾಚೀನ ನಗರ; ಇದಕ್ಕೂ ಇದೆ 2,500 ವರ್ಷಗಳ ಇತಿಹಾಸ

Lost Mayan City: ಮೆಕ್ಸಿಕೋ ನಗರದಲ್ಲಿ ಪತ್ತೆ ಆಯ್ತು ಪ್ರಾಚೀನ ನಗರ; ಇದಕ್ಕೂ ಇದೆ 2,500 ವರ್ಷಗಳ ಇತಿಹಾಸ

ಮೆಕ್ಸಿಕೋ ನಗರದ ಪ್ರಾಚೀನ ನಗರ

ಮೆಕ್ಸಿಕೋ ನಗರದ ಪ್ರಾಚೀನ ನಗರ

ಪ್ರಾಚೀನ ಕಾಲದ ಯಾವುದೇ ವಸ್ತು ಅಥವಾ ನಗರ ಪತ್ತೆಯಾದರೂ ಅದರಿಂದ ಆಧುನಿಕತೆಗೆ ಅನೇಕ ಪ್ರಯೋಜನಗಳು ಆಗುವುದು ಖಂಡಿತವಾಗಿದೆ. ಹೀಗೆಯೇ ಈಗ ಒಂದು ದೇಶದಲ್ಲಿ ಈಗ ಒಂದು ದೊಡ್ಡ ನಗರ ಪ್ತತೆಯಾಗಿದೆ. ಅದು ಯಾವ ದೇಶ? ಆ ನಗರದ ಹೆಸರೇನು? ಮುಂತಾದ ವಿಷಯಗಳನ್ನು ನಾವಿಂದು ಇಲ್ಲಿ ತಿಳಿಯೋಣ ಬನ್ನಿ.

ಮುಂದೆ ಓದಿ ...
  • Share this:

ಹಲವು ದಶಕಗಳ ನಂತರ ಒಂದು ನಗರ ಪತ್ತೆಯಾದರೆ ಹೇಗಿರಬಹುದು? ಅಲ್ವಾ..? ಆ ನಗರದಲ್ಲಿನ ಹಲವಾರು ಅಂಶಗಳು ಬೆಳಕಿಗೆ ಬರುತ್ತವೆ. ಅದರಿಂದ ಇಂದಿನ ಆಧುನಿಕತೆಗೆ ಬಹಳಷ್ಟು ಪ್ರಯೋಜನಗಳು ಕೂಡ ಆಗಬಹುದು. ಹೌದು ಪ್ರಾಚೀನ (Ancient) ಕಾಲದ ಯಾವುದೇ ವಸ್ತು (Things) ಅಥವಾ ನಗರ ಪತ್ತೆಯಾದರೂ ಅದರಿಂದ ಆಧುನಿಕತೆಗೆ ಅನೇಕ ಪ್ರಯೋಜನಗಳು ಆಗುವುದು ಖಂಡಿತವಾಗಿದೆ. ಹೀಗೆಯೇ ಈಗ ಒಂದು ದೇಶದಲ್ಲಿ ಈಗ ಒಂದು ದೊಡ್ಡ ನಗರ (City) ಪ್ತತೆಯಾಗಿದೆ. ಅದು ಯಾವ ದೇಶ? ಆ ನಗರದ ಹೆಸರೇನು? ಮುಂತಾದ ವಿಷಯಗಳನ್ನು ನಾವಿಂದು ಇಲ್ಲಿ ತಿಳಿಯೋಣ ಬನ್ನಿ. ಸುಮಾರು ದಶಕಗಳ ನಿಗೂಢತೆಯ ನಂತರ, ಮೆಕ್ಸಿಕೋದಲ್ಲಿನ (Mexico) ಪ್ರಾಚೀನ ನಗರವೊಂದು ಬೆಳಕಿಗೆ ಬಂದಿದೆ.


ಈ ನಗರವು ಬೆಳಕಿಗೆ ಬರಲು ಸಂಶೋಧಕರ ಹಲವಾರು ವರ್ಷಗಳ ಪರಿಶ್ರಮವಿದೆ. ಕೊನೆಗೂ, ಸಂಶೋಧಕರು ಪ್ರಾಚೀನ ನಗರವಾದ ಸಾಕ್ ಜಿ ಯನ್ನು ಕಂಡುಹಿಡಿದಿದ್ದಾರೆ.  ಈ ನಗರವು 100 ಎಕರೆ ಕಾಡಿನಲ್ಲಿ ವ್ಯಾಪಿಸಿಸಿದೆ ಮತ್ತು ಕನಿಷ್ಠ 2,500 ವರ್ಷಗಳಷ್ಟು ಹಳೆಯದಾಗಿದ್ದು ರಾಜವಂಶಕ್ಕೆ ಸೇರಿದೆ.


ಸಾಕ್ ಜಿ ನಗರದ ಹಿನ್ನೆಲೆ:
ಸಾಕ್ ಜಿ ನಗರವು 750 C.E. ನಲ್ಲಿ 1,000 ರಷ್ಟು ಗರಿಷ್ಠ ಜನಸಂಖ್ಯೆಯನ್ನು ಹೊಂದಿತ್ತು ಎಂದು ಹೇಳಲಾಗಿದೆ. ಆದರೆ ರೇಡಿಯೊಕಾರ್ಬನ್ ಡೇಟಿಂಗ್ ಇದು 750 BCE ಯಲ್ಲಿ ಮೊದಲು ಇರುವ ವಸಾಹತುಶಾಹಿ ಆಗಿರಬಹುದು ಎಂದು ಸೂಚಿಸುತ್ತದೆ. ಇದರ ಅವಶೇಷಗಳಲ್ಲಿ ಆಕ್ರೊಪೊಲಿಸ್, ಬಾಲ್ ಕೋರ್ಟ್ ಮತ್ತು ವಿಧ್ಯುಕ್ತ ಕೇಂದ್ರಗಳು ಕೂಡ ಸೇರಿವೆ.




ಇದನ್ನೂ ಓದಿ: Fish Skeleton: 380 ಮಿಲಿಯನ್‌ ವರ್ಷ ಹಳೆಯ ಮೀನಿನ ಹೃದಯದ ಪಳೆಯುಳಿಕೆ ಪತ್ತೆ


1994 ರಿಂದ, ಒಂಬತ್ತನೇ ಶತಮಾನದಲ್ಲಿ ಸಾಕ್ ಜಿ ಮತ್ತು ಇತರ ನಗರ-ರಾಜ್ಯಗಳನ್ನು ಏಕೆ ಕೈಬಿಡಲಾಗಿದೆ ಎಂಬುದನ್ನು ಕಂಡುಹಿಡಿಯಲು ಸಂಶೋಧಕರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. "ಈ ನಗರವು ಪ್ರಯಾಣಿಕರಿಗೆ, ವ್ಯಾಪಾರಕ್ಕೆ ಮತ್ತು ಸಾಮ್ರಾಜ್ಯಗಳಿಂದ ಯೋಧರು ಬರಲು ಪ್ರಮುಖ ಸಾರಿಗೆ ಮಾರ್ಗವನ್ನು ರೂಪಿಸಿತ್ತು" ಎಂದು ಸಂಶೋಧನಾ ತಂಡದ ಸಹ ನೇತೃತ್ವದ ಮಾನವ ಶಾಸ್ತ್ರಜ್ಞ ಚಾರ್ಲ್ಸ್ ಗೋಲ್ಡನ್ ಅವರು ಇಮೇಲ್‌ನಲ್ಲಿ ಆರ್ಟ್‌ನೆಟ್ ನ್ಯೂಸ್‌ಗೆ ತಿಳಿಸಿದರು.


ಈ ಬಗ್ಗೆ ಮಾನವ ಶಾಸ್ತ್ರಜ್ಞ ಚಾರ್ಲ್ಸ್ ಗೋಲ್ಡನ್  ಏನು ಹೇಳಿದ್ದಾರೆ?
ಮಧ್ಯಕಾಲೀನ ಯುರೋಪಿನ ನಕ್ಷೆಯಲ್ಲಿ ಈ ನಗರದ ವ್ಯಾಪ್ತಿ ಎಷ್ಟಿದೆ ಎಂಬುದನ್ನು ಕಂಡುಹಿಡಿಯಲು ಈ ಆವಿಷ್ಕಾರವನ್ನು ಮಾಡಲಾಗಿದೆ ಎಂದು ಚಾರ್ಲ್ಸ್‌ ಗೋಲ್ಡನ್ ಹೇಳಿದರು. ಇದು ಅತ್ಯಂತ ನಿರ್ಣಾಯಕ ನಗರವಾಗಿದೆ ಎಂದು ಅವರು ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದರು. "ಸಾಕ್ ಜಿ' ನಗರದ ಅಥವಾ ಹಳೆಯ ಈ ಕಾಲದ ನಿವಾಸಿಗಳು ಹೆಚ್ಚು ವಿಶಾಲವಾದ ಗುಣಗಳನ್ನು ಹೊಂದಿದ್ದರು. ಇತರ ಯಾವುದೇ ಸಮಾಜಕ್ಕಿಂತ ಹೆಚ್ಚು ಯುದ್ದ ಅಥವಾ ಯುದ್ದ ಮಾಡದೇ ಇರುತ್ತಿರಲಿಲ್ಲ. ಸಂದರ್ಭಕ್ಕೆ ತಕ್ಕಂತೆ ಯುದ್ದ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು” ಎಂದು ಚಾರ್ಲ್ಸ್‌ ಗೋಲ್ಡನ್ ಹೇಳಿದರು.




“ಅವರ ರಾಜಮನೆತನದಲ್ಲಿ ಆಡಳಿತಗಾರರು ಮತ್ತು ಗಣ್ಯರಿಗೆ, ಈ ಯುದ್ಧವು ತಮ್ಮ ಅಕ್ಕ-ಪಕ್ಕದ ರಾಜ್ಯದವರೊಂದಿಗೆ ರಾಜಕೀಯ ಮತ್ತು ಆರ್ಥಿಕ ಸ್ಪರ್ಧೆಯ ಸಾಂದರ್ಭಿಕ ಫಲಿತಾಂಶವಾಗಿತ್ತು. ಅಂತಹ ಘರ್ಷಣೆಗಳಲ್ಲಿ ಹೋರಾಡಬೇಕಾದ ಅನಿರ್ವಾಯತೆ ಖಂಡಿತ ಇದ್ದೆ ಇರುತ್ತಿತ್ತು. ಇನ್ನು ಪ್ರಮುಖವಾಗಿ ಅವರು ತಮ್ಮ ಕುಟುಂಬಗಳನ್ನು ರಕ್ಷಿಸಲು ಯುದ್ದಗಳನ್ನು ಮಾಡುತ್ತಿದ್ದರು" ಎಂದು ಚಾರ್ಲ್ಸ್‌ ಗೋಲ್ಡನ್ ಹೇಳಿದರು. ಈ ಸ್ಥಳದಲ್ಲಿ ಈ ನಗರವು ನಿಜವಾಗಲೂ ಪತ್ತೆಯಾಗಿದೆಯೇ ಎಂಬುದನ್ನು ತಿಳಿಯಲು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರಾಗಿರುವ ಚಾರ್ಲ್ಸ್‌ ಗೋಲ್ಡನ್ ಮತ್ತು ಅವರ ಸಹೋದ್ಯೋಗಿ ಆಂಡ್ರ್ಯೂ ಸ್ಕೆರೆರ್ ಅವರು ಇಲ್ಲಿಗೆ ಭೇಟಿ ನೀಡಿದ್ದರು.


ಡ್ರೋನ್‌ಗಳು ಮತ್ತು ವಿಮಾನಗಳನ್ನು ಹಾರಿಸಿ ಸಂಪೂರ್ಣ ಚಿತ್ರಣ 
ಇದನ್ನು ಹಿಂದೆ ಲಕಾಂಜಾ ಟ್ಜೆಲ್ಟಾಲ್ ಎಂದು ಕರೆಯಲಾಗುತ್ತಿತ್ತು. 2019 ರಲ್ಲಿ, ಸಂಶೋಧನಾ ತಂಡದವರು ಈ ನಗರದ ಸೈಟ್‌ನ ಮೇಲೆ LIDAR-ಸುಸಜ್ಜಿತ ಡ್ರೋನ್‌ಗಳು ಮತ್ತು ವಿಮಾನಗಳನ್ನು ಹಾರಿಸಿ ಅದರ ಸಂಪೂರ್ಣ ಚಿತ್ರವನ್ನು ತೆಗೆದರು. ಕಳೆದ ಜೂನ್ ನಿಂದ, ಅವರು ಪ್ರಾಚೀನ ಕಲ್ಲುಗಳನ್ನು ಬಲಪಡಿಸಲು ಸ್ಥಳೀಯ ಸಿಬ್ಬಂದಿಗಳೊಂದಿಗೆ ಕೆಲಸ ಮಾಡುವ ಮೂಲಕ ಅದನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.


ಇದನ್ನೂ ಓದಿ:  Meghalaya: ಮೇಘಾಲಯದ ಈ ವಿಶ್ವವಿಖ್ಯಾತ ಏಕಶಿಲೆಗಳ ಇತಿಹಾಸ ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ




ಇಲ್ಲಿಯವರೆಗೆ, ಅವರು ನಗರದ ಕಲ್ಲಿನ ಗೋಡೆಗಳ ಜೊತೆಗೆ ಕಲ್ಲಿನ ಸ್ಟೆಲೇಗಳು, ಅಡುಗೆ ಉಪಕರಣಗಳು ಮತ್ತು ವಯಸ್ಕ ಮಹಿಳೆಯ 2,500 ವರ್ಷಗಳ ಹಳೆಯ ಕಳೆಬರವನ್ನು ಕಂಡುಕೊಂಡಿದ್ದಾರೆ. “ಪುರಾತನ ಸಮಾಜದ ಪರಿಸರದ ಏರಿಳಿತಗಳು, ಸುರಕ್ಷಿತ ಆಹಾರ, ಸಂಘರ್ಷವನ್ನು ತಗ್ಗಿಸುವುದು ಮತ್ತು ಸಾಮಾನ್ಯವಾಗಿ "ನಗರದ ಮೂಲ ಮತ್ತು ದೀರ್ಘಾವಧಿಯ ಇತಿಹಾಸವನ್ನು ಅನ್ವೇಷಿಸಲು" ಮೆಕ್ಸಿಕನ್ ಅಧಿಕಾರಿಗಳೊಂದಿಗೆ ಹೆಚ್ಚಿನ ಸಂಶೋಧನೆ ಮಾಡಲು ತಂಡವು ಉದ್ದೇಶಿಸಿದೆ” ಎಂದು ಗೋಲ್ಡನ್ ಹೇಳಿದರು.

top videos
    First published: