Yoga For Depression : ಈ ಸಿಂಪಲ್​ ಯೋಗಾಸಾನಗಳನ್ನು ಟ್ರೈ ಮಾಡಿ.. ಖಿನ್ನತೆಯಿಂದ ದೂರ ಇರಿ!

Benefits of yoga :ಯೋಗ ಒಂದು ರೀತಿ ಸರ್ವರೋಗಕ್ಕೂ ಮದ್ದು. ಪುರಾತನ ಕಾಲದಿಂದಲೂ ಯೋಗಗಳು ಮನುಷ್ಯನ ಆರೋಗ್ಯದಲ್ಲಿ ಸುಧಾರಣೆಯನ್ನು ಮಾಡುತ್ತಾ ಬಂದಿವೆ.. ದೇಹ ಸೌಂದರ್ಯಕ್ಕೆ ಮುದ್ದಾಗಿರುವ ಯೋಗ ಮನಸ್ಸಿನ ಆರೋಗ್ಯಕ್ಕೂ ಮದ್ದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಬಾರಿಯಾದರೂ ಖಿನ್ನತೆಗೆ(Depression) ಒಳಗಾಗಿರುತ್ತಾರೆ. ಒಂದಲ್ಲ ಒಂದು ಹಂತದಲ್ಲಿ ಎಲ್ಲರಿಗೂ ಸಾಯಬೇಕು (Suicide) ಎನ್ನಿಸಿರುತ್ತದೆ. ಆ ಭಾವನೆ ನೀರ ಮೇಲೆ ಗುಳ್ಳೆ ಏಳುವಂತೆ. ಗುಳ್ಳೆಗಳು ಎದ್ದು ಹೇಗೆ ಫಟ್​ ಅಂತ ಒಡೆಯುತ್ತವೆಯೋ ಹಾಗೇ ಕಾಡುವ ಸಮಸ್ಯೆ ಖಿನ್ನತೆ. ಒಮ್ಮೆ ಖಿನ್ನತೆ ಉಂಟಾದರೆ ದಿನನಿತ್ಯದ ಚಟುವಟಿಕೆಗಳಲ್ಲಿ(Daily Routine) ಆಲೋಚಿಸುವ, ಭಾವಿಸುವಂತಹ ರೀತಿಯು ಬದಲಾಗುತ್ತದೆ. ಖಿನ್ನತೆಯು ವೃತ್ತಿ, (Job)ಶಿಕ್ಷಣ,(Education) ಊಟ, ನಿದ್ರೆ,  ಭಾವನೆಗಳು,(Expression)  ವರ್ತನೆ, ಸಂಬಂಧಗಳು, ಕೆಲಸ ಮಾಡುವ ಸಾಮರ್ಥ್ಯ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ತೀವ್ರವಾದ ಖಿನ್ನತೆ ಇರುವ ವ್ಯಕ್ತಿ ಆತ್ಮಹತ್ಯೆಯ ಪ್ರಯತ್ನ ಕೂಡ ಮಾಡಬಹುದು.ಹೀಗಾಗಿ ನಮ್ಮ ಜೀವನದಿಂದ ಖಿನ್ನತೆಯನ್ನು ತೊಡೆದುಹಾಕಲು ಹಲವಾರು ಮಾರ್ಗಗಳಿವೆ. ಇವುಗಳನ್ನು ನಿಯಮಿತವಾಗಿ ಮಾಡುವುದರ ಮೂಲಕ ಖಿನ್ನತೆಯಿಂದ ನಾವು ಹೊರಬರಬಹುದು.. ಅದನ್ನು ಪ್ರತಿನಿತ್ಯ ಯೋಗಗಳನ್ನು ಮಾಡುವ ಮೂಲಕ ಯಾವ ವ್ಯಕ್ತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುತ್ತಾರೆ ಸುಲಭವಾಗಿ ಹೊರ ಹೋಗಬಹುದಾಗಿದೆ.

    ಯೋಗಗಳಿಂದ ನಿವಾರಣೆ ಖಿನ್ನತೆ.

    ಯೋಗ ಒಂದು ರೀತಿ ಸರ್ವರೋಗಕ್ಕೂ ಮದ್ದು. ಪುರಾತನ ಕಾಲದಿಂದಲೂ ಯೋಗಗಳು ಮನುಷ್ಯನ ಆರೋಗ್ಯದಲ್ಲಿ ಸುಧಾರಣೆಯನ್ನು ಮಾಡುತ್ತಾ ಬಂದಿವೆ.. ದೇಹ ಸೌಂದರ್ಯಕ್ಕೆ ಮುದ್ದಾಗಿರುವ ಯೋಗ ಮನಸ್ಸಿನ ಆರೋಗ್ಯಕ್ಕೂ ಮದ್ದು.. ಹೀಗಾಗಿ ಪ್ರತಿನಿತ್ಯ ಈ ಕೆಳಗಿನ ಯೋಗಗಳನ್ನು ಮಾಡುವ ಮೂಲಕ ವ್ಯಕ್ತಿಯು ಖಿನ್ನತೆಯಿಂದ ಹೊರಬರ ಬಹುದಾಗಿದೆ.

    1)ಬಾಲಾಸನ (child's pose)

    ಬಾಲಾಸನ ನೋಡಲು ಸುಲಭ ಅಂತ ಅನಿಸಿದರೂ ಇದು ಮಾಡಲು ಬಲು ಕಷ್ಟವಾದ ಆಸನ.. ಆದರೆ ಬಾಲಾಸನ ಒಂದು ಮೃದುವಾದ ವಿಶ್ರಾಂತಿಯ ಭಂಗಿ ಯಾಗಿರುವುದರಿಂದ.. ಬಾಲಾಸನ ಮಾಡುವುದರಿಂದ ನಮ್ಮ ದೇಹದಲ್ಲಿ ಒತ್ತಡ ಕಡಿಮೆಯಾಗಿ ಕಿನ್ನತೆ ಹಾಕುವದರ ಆತಂಕದ ಲಕ್ಷಣಗಳು ಕಡಿಮೆಯಾಗುತ್ತವೆ.. ಅಲ್ಲದೇ ಬಾಲಸಂನ್ಯಾಸ ನಿವಾರಣೆ ಮಾಡಲು ಸಹಕಾರಿಯಾಗಿದ್ದು ಪಾದಗಳು ಸೊಂಟ ಮತ್ತು ಭುಜಗಳನ್ನು ಆರೋಗ್ಯದಿಂದ ಇಡಲು ಕೂಡ ಈ ಆಸನ ಸಹಾಯಕವಾಗಿದೆ

    2) ಹಲಸಾನ (Plow pose )

    ಸಂಸ್ಕೃತದಲ್ಲಿ ಹಾಲ ಎಂದರೇ ನೇಗಿಲು ಎಂದು ಅರ್ಥ.. ನೇಗಿಲಿನ ಆಕೃತಿಯಲ್ಲಿ ಅನುಸರಿಸುವ ಆಸನ ಹಲಾಸನ. ಈ ಆಸನವನ್ನು ಪ್ರತಿನಿತ್ಯ ಮಾಡುವುದರಿಂದ ಕೇವಲ ದೇಹಕ್ಕೆ ಮಾತ್ರವಲ್ಲದೇ ಮನಸ್ಸು ಮತ್ತು ಆತ್ಮಕ್ಕೂ ಹೊಸ ಚೈತನ್ಯ ದೊರಕುತ್ತದೆ.. ಖಿನ್ನತೆಯಿಂದ ಬಳಲುತ್ತಿರುವವರು ಬಹುಬೇಗ ಖಿನ್ನತೆಯಿಂದ ಹೊರಬರಲು ಸಹಾಯ ಮಾಡುತ್ತದೆ.. ಬೆನ್ನಿನ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.. ನಿದ್ರಾಹೀನತೆ ಹಾಗೂ ತಲೆನೋವಿನಿಂದ ಬಳಲುತ್ತಿರುವವರಿಗೆ ಈ ಆಸನ ಸಹಾಯಕಾರಿ..

    ಇದನ್ನೂ ಓದಿ :60ರ ಇಳಿ ವಯಸ್ಸಿನಲ್ಲೂ ಮಾಡಬಹುದು ಈ 4 ವ್ಯಾಯಾಮ

    3) ಸೇತುಬಂಧಾಸನ (Bridge pose)

    ಸೇತು ಎಂದರೆ ಸೇತುವೆ ಎಂದರ್ಥ.. ದೇಹವನ್ನು ಬಾನಿನಂತೆ ಭಾವಿಸುವುದಕ್ಕೆ ಸೇತುಬಂದಾಸನ ಎಂದು ಕರೆಯುತ್ತಾರೆ.. ಈ ಆಸನವನ್ನು ಮಾಡುವುದರಿಂದ ಬೆನ್ನಿನ ಭಾಗ ಸಿಗುವುದು.. ಬೆನ್ನಿನ ಭಾಗದ ನರಗಳು ಚೈತನ್ಯಗೊಳ್ಳುವವು.. ಅಲ್ಲದೆ ನಾಭಿಯ ಕೊಬ್ಬಿನಂಶ ಕರಗುವುದು. ಅಲ್ಲದೆ ಒತ್ತಡ ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿರುವವರು ಚೇತರಿಕೆ ಕಾಣಲು ಸಹಾಯಕಾರಿಯಾಗಿದೆ..

    4) ಅಧೋಮುಖ ಶ್ವಾನಾಸನಾ(Downward-facing dog )

    ಅಧೋಮುಖ ಶ್ವಾನಾಸನ ಎಂದರೆ ನಾಯಿ ಮುಂದೆ ಬಾಗಿದಾಗ ಹೇಗೆ ಕಾಣಿಸುತ್ತದೆಯೋ ಹಾಗೆ ಇರುವುದು. ಅದು ಮುಖ ಶ್ವಾನಾಸನವನ್ನ ಮಾಡುವುದರಿಂದ ರಕ್ತದೊತ್ತಡ ಕಡಿಮೆಯಾಗುವುದು. ಹೊಟ್ಟೆಯ ಸುತ್ತಲಿನ ಕೊಬ್ಬು ಕರಗುವುದು.. ಈ ಆಸನವು ಮನಸ್ಸನ್ನು ಆರಾಮ ಮತ್ತು ಶಾಂತವಾಗಿರಿಸಿ ಆತಂಕ ನಿವಾರಣೆ ಮಾಡುವುದು.. ಕುತ್ತಿಗೆ ಮತ್ತು ಬೆನ್ನು ಮೂಳೆಯ ಮೇಲೆ ಬೀರುವ ಒತ್ತಡ ಆಸನ ಮಾಡುವುದರಿಂದ ಕಡಿಮೆಯಾಗುವುದು

    ಇದನ್ನೂ ಓದಿ :ದಿನಾ ಈ 6 ಯೋಗಾಸನ ಮಾಡಿದ್ರೆ ಕೆಲವೇ ವಾರಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಬಹುದು ನೋಡಿ

    5) ಶವಾಸನ(Corpse)

    ಶವಾಸನ ಮಾಡುವುದರಿಂದ ನಮ್ಮ ದೇಹ ಧ್ಯಾನದ ಸ್ಥಿತಿಗೆ ಹೋಗುತ್ತದೆ.. ಸ್ಮರಣಶಕ್ತಿ ಏಕಾಗ್ರತೆಯ ಶಕ್ತಿ ಶವಾಸನ ದಿಂದ ಹೆಚ್ಚಾಗುತ್ತವೆ.. ನಮ್ಮ ಮನಸ್ಸು ಹೊಂದಿದ್ದರೆ ಅದನ್ನು ಶಾಂತಗೊಳಿಸಲು ಶವಾಸನ ಸಹಕಾರಿಯಾಗಿದೆ.. ದೇಹದ ವಯಸ್ಸು ಕಡಿಮೆ ಮಾಡುವುದರ ಜೊತೆಗೆ ಅಧಿಕಾರಕ್ಕೆ ಒತ್ತಡ ಮಧುಮೇಹ ಹೃದಯ ರೋಗದ ಸಮಸ್ಯೆಗಳು ಬರದಂತೆ ತಡೆಯುತ್ತದೆ.
    Published by:ranjumbkgowda1 ranjumbkgowda1
    First published: