ನಿಮ್ಮ ಹಳೆಯ ಫೋನ್‌ ಎಸೆಯಬೇಡಿ; ಅದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ?

ನಿಮ್ಮ ಕಾರಿನಲ್ಲಿರುವ ಯುಎಸ್‌ಬಿ ಅಡಾಪ್ಟರ್‌ಗೆ ಹಳೆಯ ಫೋನ್ ಅನ್ನು ಕನೆಕ್ಟ್ ಮಾಡಿ ನಂತರ ಇದು ಕಾರಿನಲ್ಲಿ ಯಾವಾಗಲೂ ಡ್ಯಾಶ್‌ಬೋರ್ಡ್ ಕ್ಯಾಮೆರಾ ಆಗಿ ಕೆಲಸ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಸ್ಮಾರ್ಟ್‌ಫೋನ್‌ಗಳನ್ನು ಗ್ಯಾಜೆಟ್‌ಗಳನ್ನು ನಾವು ಬದಲಾಯಿಸುತ್ತಲೇ ಇರುತ್ತೇವೆ. ಹೊಸ ಓಎಸ್, ಕ್ಯಾಮೆರಾ ಫೀಚರ್ಸ್, ನೆಟ್‌ವರ್ಕ್ ಸುಧಾರಣೆ ಹೀಗೆ ಈ ಎಲ್ಲಾ ಅಂಶಗಳನ್ನು ಗಮನಿಸಿಕೊಂಡು ಮಾರುಕಟ್ಟೆಗೆ ಬಿಡುಗಡೆಯಾಗುವ ಹೊಸ ಹೊಸ ಡಿವೈಸ್‌ಗಳನ್ನು ನಾವು ಖರೀದಿಸುತ್ತೇವೆ. ಹೊಸಾ ವಸ್ತು ತೆಗೆದುಕೊಳ್ಳಬೇಕು ಎಂದು ಹೋದಾಗ ನಾವು ಹಿಂದೆ ಬಳಸಿದ್ದ ಡಿವೈಸ್‌ಗಳನ್ನು ಎಕ್ಸ್‌ಚೇಂಜ್ ಆಫರ್‌ನಲ್ಲಿ ಮಾರುತ್ತೇವೆ ಇಲ್ಲದಿದ್ದರೆ ಬೇರೆ ಯಾರಿಗಾದರೂ ನೀಡುತ್ತೇವೆ.


  ಆದರೆ ಈ ಲೇಖನದಲ್ಲಿ ಈ ಹಳೆಯ ಫೋನ್‌ ಬಳಸಿ ನಮ್ಮ ಯಾವ, ಯಾವ ಕೆಲಸಗಳಿಗೆ ಬಳಸಿಕೊಳ್ಳಬಹುದು ಹಾಗೂ ಮಾರ್ಪಾಡಿಕೊಳ್ಳಬಹುದು ಎನ್ನುವುದನ್ನು ತಿಳಿಸಲಿದ್ದೇವೆ. ಹಾಗಿದ್ದರೆ ಯಾವೆಲ್ಲಾ ರೀತಿಯಲ್ಲಿ ಹಳೆಯ ಸ್ಮಾರ್ಟ್‌ಫೋನ್ ಬಳಸಬಹುದು ಎಂಬುದನ್ನು ತಿಳಿಯೋಣ.


  ವೈ-ಫೈ ರೇಂಜರ್ ಎಕ್ಸ್‌ಟೆಂಡರ್


  ನಿಮ್ಮ ಹಳೆಯ ಫೋನ್ ಅನ್ನು ವೈಫೈ ಎಕ್ಸ್‌ಟೆಂಡರ್‌ನಂತೆ ಬಳಸಬಹುದು. ಇದಕ್ಕಾಗಿ ನೀವು ನೆಟ್‌ಶೇರ್ ಆ್ಯಪ್ ಅನ್ನು ಫೋನ್‌ನಲ್ಲಿ ಅಳವಡಿಸಬೇಕು. ಸ್ಯಾಮ್‌ಸಂಗ್ ಫೋನ್‌ಗಳು ಎಕ್ಸ್‌ಟೆಂಡರ್‌ನಂತೆ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ. ನೆಟ್‌ಶೇರ್‌ನಿಂದ ನೀವು ಹಳೆಯ ಫೋನ್‌ ಅನ್ನು ಹಾಟ್‌ಸ್ಪಾಟ್‌ನಂತೆ ಸೆಟ್ ಮಾಡಿಕೊಳ್ಳಬಹುದು.


  ಕಾರ್ ಡ್ಯಾಶ್‌ಬೋರ್ಡ್ ಕ್ಯಾಮೆರಾ


  ನಿಮ್ಮ ಕಾರಿನಲ್ಲಿರುವ ಯುಎಸ್‌ಬಿ ಅಡಾಪ್ಟರ್‌ಗೆ ಹಳೆಯ ಫೋನ್ ಅನ್ನು ಕನೆಕ್ಟ್ ಮಾಡಿ ನಂತರ ಇದು ಕಾರಿನಲ್ಲಿ ಯಾವಾಗಲೂ ಡ್ಯಾಶ್‌ಬೋರ್ಡ್ ಕ್ಯಾಮೆರಾ ಆಗಿ ಕೆಲಸ ಮಾಡುತ್ತದೆ.


  ಗೂಗಲ್ ಹೋಮ್


  ನಿಮ್ಮ ಬಜೆಟ್‌ಗೆ ಸರಿಹೊಂದುವ ಸ್ಮಾರ್ಟ್ ಹೋಮ್ ಸ್ಪೀಕರ್‌ನಂತೆ ಹಳೆಯ ಫೋನ್ ಅನ್ನು ಸೆಟ್ ಮಾಡಬಹುದು. ಮನೆಯಲ್ಲಿ ಸರಳವಾಗಿ ಗೂಗಲ್ ಹೋಮ್ ಸ್ಮಾರ್ಟ್ ಸ್ಪೀಕರ್ ಸೆಟಪ್‌ನಂತೆ ಹಳೆಯ ಡಿವೈಸ್ ಅನ್ನು ಬಳಸಬಹುದು.


  ಇ-ಬುಕ್ ರೀಡರ್


  ನಿಮ್ಮ ಹಳೆಯ ಫೋನ್ ಅನ್ನು ಇ-ಬುಕ್ ರೀಡರ್‌ನಂತೆ ಬಳಸಿ ನಿಮ್ಮ ಓದುವ ಹವ್ಯಾಸಕ್ಕೆ ಇನ್ನಷ್ಟು ಪುಷ್ಟಿ ನೀಡಬಹುದು. ಎಲ್ಲಾ ನೋಟಿಫಿಕೇಶನ್‌ಗಳನ್ನು ಡಿಲೀಟ್ ಮಾಡಿ ಹಾಗೂ ಬರಿ ಇ-ಬುಕ್‌ಗಾಗಿ ಮಾತ್ರವೇ ಹಳೆಯ ಡಿವೈಸ್ ಅನ್ನು ಬಳಸಿ. ಅಮೆಜಾನ್ ಕಿಂಡಲ್ ಆ್ಯಪ್, ಗೂಗಲ್ ಪ್ಲೇ ಬುಕ್ಸ್‌ ಅನ್ನು ಕೂಡ ಹಳೆಯ ಡಿವೈಸ್‌ನಲ್ಲಿ ಇನ್‌ಸ್ಟಾಲ್ ಮಾಡಬಹುದಾಗಿದೆ.


  ಯುನಿವರ್ಸಲ್ ರಿಮೋಟ್


  ಕೊನೆಯದಾಗಿ ನಿಮ್ಮ ಹಳೆಯ ಡಿವೈಸ್ ಅನ್ನು ಯುನಿವರ್ಸಲ್ ರಿಮೋಟ್ ಆಗಿ ಬಳಸಬಹುದು. ನಿಮ್ಮ ಡಿವೈಸ್‌ನಲ್ಲಿ ಯುನಿಫೈಡ್ ರಿಮೋಟ್ ಆ್ಯಪ್ ಅಥವಾ ನಿಮ್ಮ ಫೋನ್ ಅನ್ನು ಟ್ರ್ಯಾಕ್‌ಪ್ಯಾಡ್‌ಗಳನ್ನಾಗಿ ಪರಿವರ್ತಿಸುವ ಸಂಬಂಧಿತ ಆ್ಯಪ್ಗಳನ್ನು ಅಳವಡಿಸಿ. ಇದರಿಂದ ನಿಮ್ಮ ಏರ್ ಕಂಡೀಷನರ್ ಅನ್ನು ಕೂಡ ನಿಯಂತ್ರಿಸಬಹುದಾಗಿದೆ.


  ಇದನ್ನೂ ಓದಿ: ಜಮ್ಮು-ಕಾಶ್ಮೀರ: ಪ್ರಮುಖ ಎಲ್ಇಟಿ ಕಮಾಂಡರ್​ ಸೇರಿದಂತೆ ಇಬ್ಬರು ಭಯೋತ್ಪಾದಕರ ಹತ್ಯೆ

  ಹೀಗೆ ನಿಮ್ಮ ಹಳೆಯ ಡಿವೈಸ್ ಅನ್ನು ಬಳಸಿಕೊಂಡು ನಿಮ್ಮ ಹಳೆಯ ಲ್ಯಾಪ್‌ಟಾಪ್‌ಗೆ ವೆಬ್‌ಕ್ಯಾಮ್ ನಿರ್ಮಸಬಹುದು, ಸೆಕ್ಯುರಿಟಿ ಕ್ಯಾಮೆರಾದಂತೆ ಬಳಸಬಹುದು, ಬೇಬಿ ಮಾನಿಟರ್‌ನಂತೆ ಕೂಡ ಬಳಸಬಹುದು. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಲು ಈಗ ಹಲವಾರು ಆ್ಯಪ್ಗಳು ಲಭ್ಯವಿದ್ದು ನೀವು ಅವುಗಳನ್ನು ಅಳವಡಿಸಿಕೊಂಡು ಹಳೆಯ ಡಿವೈಸ್‌ನ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಹಳೆಯ ಫೋನ್‌ನಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಎಂದು ಅರಿತು ಕೂಡ ಅದನ್ನು ಕಸವೆಂದು ತ್ಯಜಿಸದರಿ ಇಲ್ಲವೇ ಮಾರದಿರಿ. ಕಸದಿಂದ ರಸ ತಯಾರಿಸಿ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: