• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Dogs Chasing Bike: ಬೈಕ್​​​ ಸವಾರರೇ! ಬೀದಿ ನಾಯಿ ಅಟ್ಟಿಸಿಕೊಂಡು ಬಂದರೆ ಗಾಬರಿಯಾಗಬೇಡಿ, ಹೀಗೆ ಮಾಡಿ

Dogs Chasing Bike: ಬೈಕ್​​​ ಸವಾರರೇ! ಬೀದಿ ನಾಯಿ ಅಟ್ಟಿಸಿಕೊಂಡು ಬಂದರೆ ಗಾಬರಿಯಾಗಬೇಡಿ, ಹೀಗೆ ಮಾಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Street dog: ರಾತ್ರಿ ವೇಳೆಯಂತೂ ಬೀದಿ ನಾಯಿಗಳು ಬೈಕ್​ ಸವಾರರನ್ನು ಅಟ್ಟಿಸಿಕೊಂಡು ಬರುತ್ತದೆ. ಕೆಲವೊಮ್ಮೆ ಇದರ ಕಾಟಕ್ಕೆ ಹೆದರಿ ಬೈಕ್​ನಿಂದ ಬಿದ್ದು ಗಾಯಗೊಂಡವರು ಅದೇಷ್ಟೋ ಮಂದಿ ಇದ್ದಾರೆ. ಆದರೆ ರಾತ್ರಿ ವೇಳೆ ಪ್ರಯಾಣಿಸುವಾಗ ಇಂತಹ ಸಮಸ್ಯೆ ಎದುರಾಗದಿರಲು ಉಪಾಯ​ವೊಂದಿದೆ. ಅದೇನು ಗೊತ್ತಾ?

ಮುಂದೆ ಓದಿ ...
  • Share this:

    ಭಾರತದಲ್ಲಿ ಬಹುತೇಕರು ಇಂಧನ (ರFuel) ಉಳಿಸುವ ಸಲುವಾಗಿ ಮತ್ತು ಖರ್ಚು ಕಡಿಮೆ ಮಾಡುವ ಸಲುವಾಗಿ ಕಾರಿನಲ್ಲಿ (Car) ಪ್ರಯಾಣಿಸುವ ಬದಲು ಬೈಕ್‌ನಲ್ಲಿ (Bike) ಪ್ರಯಾಣಿಸುತ್ತಾರೆ. ನಗರ ಪ್ರದೇಶಗಳಲ್ಲಿ ಬೈಕು ಓಡಿಸುವವರಿಗೆ ಎದುರಾಗುವ ದೊಡ್ಡ ಸಮಸ್ಯೆ ಎಂದರೆ ಬೀದಿ ನಾಯಿಗಳ (Street Dog) ಕಾಟ. ರಾತ್ರಿ ವೇಳೆಯಂತೂ ಬೀದಿ ನಾಯಿಗಳು ಬೈಕ್​ ಸವಾರರನ್ನು ಅಟ್ಟಿಸಿಕೊಂಡು ಬರುತ್ತದೆ. ಕೆಲವೊಮ್ಮೆ ಇದರ ಕಾಟಕ್ಕೆ ಹೆದರಿ ಬೈಕ್​ನಿಂದ ಬಿದ್ದು ಗಾಯಗೊಂಡವರು (accident) ಅದೇಷ್ಟೋ ಮಂದಿ ಇದ್ದಾರೆ. ಆದರೆ ರಾತ್ರಿ ವೇಳೆ ಪ್ರಯಾಣಿಸುವಾಗ ಇಂತಹ ಸಮಸ್ಯೆ ಎದುರಾಗದಿರಲು ಉಪಾಯ​ವೊಂದಿದೆ. ಅದೇನು ಗೊತ್ತಾ?


    ಸಾಮಾನ್ಯವಾಗಿ ಶ್ವಾನಗಳಿಗೆ ಸಣ್ಣ ಮುನ್ನೆಚ್ಚರಿಕೆ ಬಂದಾಗ ಅವು ಬೊಗಳಲು ಶುರುಮಾಡುತ್ತದೆ. ಕೆಲವು ಶ್ವಾನಗಳಿಗೆ ರಾಥ್ರಿ ವೇಳೆ ಬೈಕಿನ ಸೌಂಡ್​ ಕೇಳಿದರೆ ಕಚ್ಚಲು ಅಥವಾ ವಾಹನ ಸವಾರರನ್ನು ಓಡಿಸಿಕೊಂಡು ಬರುತ್ತದೆ. ಇನ್ನು ಕೆಲವೊಮ್ಮೆ ಶ್ವಾನಕ್ಕೆ ಏನಾದರು ತೊಂದರೆ ಮಾಡಿದ್ದರೂ ಸಹ ಅದು ತೊಂದರೆ ಮಾಡಿದ ವ್ಯಕ್ತಿಯನ್ನು ಆತನ ವಾಹನವನ್ನು ಅಟ್ಟಾಡಿಸಿಕೊಂಡು ಬರುತ್ತದೆ. ಆದರೆ ದಿನೇ ದಿನೇ ಆಫೀಸು ಹೋಗುವ ಸಮಯದಲ್ಲಿ ಅಥವಾ ರಾತ್ರಿ ಆಫೀಸು ಬಿಟ್ಟು ಮನೆಗೆ ಬರುವ ಸಮಯದಲ್ಲಿ ಬೀದಿ ನಾಯಿಗಳು ಬೈಕ್​ ಸವಾರರನ್ನು ಓಡಿಸಿಕೊಂಡು ಬಂದಾಗ ಮೊದಲೇನು ಮಾಡಬೇಕು ಗೊತ್ತಾ? ಬೀದಿ ನಾಯಿಗಳ ಇಂತಹ ಸಮಸ್ಯೆ ನಿಜವಾಗಿಯೀ ಬೇಸತ್ತಿದ್ದರೆ. ಅದಕ್ಕೊಂದು ಉಪಾಯವಿದೆ.


    ನಾಯಿಗಳು ಬೈಕ್‌ಗಳನ್ನು ಹಿಂಬಾಲಿಸಿ ಬೊಗಳುವುದನ್ನು ತಡೆಯುವುದು ಹೇಗೆ?


    ವಾಸ್ತವವಾಗಿ, ಒಂದು ಮಾರ್ಗವಿದೆ, ಅದನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಬೈಕ್‌ನಲ್ಲಿ ನಾಯಿಗಳು ಬೊಗಳುವುದನ್ನು ಮತ್ತು ಬೆನ್ನಟ್ಟುವುದನ್ನು ತಡೆಯಬಹುದು. ಇದೊಂದು ಮಾನಸಿಕ ತಂತ್ರ. ನೀವು ಅತಿ ವೇಗದ ಬೈಕ್‌ನಲ್ಲಿ ಹೋಗುವಾಗ ಮಾತ್ರ ನಾಯಿಗಳು ಬೊಗಳುತ್ತವೆ ಮತ್ತು ನಿಮ್ಮನ್ನು ಬೆನ್ನಟ್ಟುವುದನ್ನು ಗಮನಿಸಿರಬಹುದು.


    ಶ್ವಾನಗಳು ಓಡುತ್ತಿರುವ ವಾಹನವನ್ನು ಹಿಡಿಯಲು ಬಯಸುತ್ತವೆ. ಆದರೆ, ನೀವು ಹೋಗುವ ದಾರಿಯಲ್ಲಿ ನಾಯಿಯನ್ನು ನೋಡಿದಾಗ, ನಿಮ್ಮ ಬೈಕನ್ನು ನಿಧಾನಗೊಳಿಸಿ ನಂತರ ಹಾದುಹೋದರೆ ಆಗ ನಾಯಿ ಬೊಗಳುವುದಿಲ್ಲ ಮತ್ತು ಬೆನ್ನಟ್ಟುವುದಿಲ್ಲ.


    ಇದನ್ನೂ ಓದಿ: Health Tips: ಹೃದಯ ಸಮಸ್ಯೆ, ಸಂಧಿವಾತ, ಅಸ್ತಮಾ, ಹೊಟ್ಟೆ ನೋವು , ಕರುಳಿನ ಸೆಳೆತ ನಿವಾರಣೆಗೆ ಹಿಪ್ಪು ನೇರಳೆಯಲ್ಲಿದೆ ಔಷಧಿ


    ಇದಲ್ಲದೆ, ಅಗತ್ಯವಿದ್ದರೆ, ಒಬ್ಬರು ಮೋಟಾರ್ಸೈಕಲ್ ಅನ್ನು ನಿಲ್ಲಿಸಿ. ನಂತರ ಆ ಮಾರ್ಗದಿಂದ ನಿಧಾನವಾಗಿ ಚಲಿಸಬಹುದು. ಹೀಗೆ ಮಾಡುವುದರಿಂದ ನಾಯಿಗಳು ನಿಮ್ಮ ಮೇಲೆ ಬೊಗಳುವುದನ್ನು ನಿಲ್ಲಿಸುವುದನ್ನು ನೀವು ನೋಡುತ್ತೀರಿ. ನಾಯಿಗಳು ಬೊಗಳಿದಾಗ ಗಾಬರಿಯಾಗದಂತೆ ಮತ್ತು ಹೆಚ್ಚು ವೇಗವಾಗಿ ಮೋಟಾರ್ ಸೈಕಲ್ ಓಡಿಸದಂತೆ ನೀವು ಕಾಳಜಿ ವಹಿಸಬೇಕು. ಒಂದು ವೇಳೆ ವೇಗವಾಗಿ ವಾಹನ ಓಡಿಸಿದರೆ ಅಪಘಾತ ಆಗುವ ಸಾಧ್ಯತೆಗಳು ಹೆಚ್ಚು ಮತ್ತು ನಾಯಿಗಳು ಸಹ ಇದರಿಂದ ಪ್ರಚೋದಿಸಲ್ಪಡುತ್ತವೆ.


    ಇದನ್ನೂ ಓದಿ: Paternity Leaves: ಪುರುಷ ಉದ್ಯೋಗಿಗಳೇ ನೀವು ತಂದೆಯಾದರೆ ಎಷ್ಟು ದಿನ ರಜೆ ಸಿಗುತ್ತೆ ಗೊತ್ತೇ?


    ಸಾಮಾನ್ಯವಾಗಿ ಯಾವುದೇ ಪ್ರಾಣಿಗಳಾಗಲಿ ಕಚ್ಚಲು ಬರುವುದಿಲ್ಲ. ಆದರೆ ಪ್ರಾಣಿಗಳಿಗೆ ತೊಂದರೆ ಮಾಡಿದಾಗ ಮಾತ್ರ ಅವು ರಕ್ಷಿಸಿಕೊಳ್ಳಲು ಕಚ್ಚುತ್ತವೆ. ಅದರಂತೆಯೇ ಶ್ವಾನಗಳು ಕೂಡ ಹಾಗೆಯೇ ಯಾರಾದರು ಬೈಕ್​ ಸವಾರ ಅದಕ್ಕೆ ತೊಂದರೆ ಮಾಡಿದರೆ ಸಾಕು, ಆ ರಸ್ತೆಯಲ್ಲಿ ಓಡಾಡುವ ಎಲ್ಲಾ ಬೈಕ್​ ಸವಾರರನ್ನ ಬೆನ್ನಟ್ಟುತ್ತದೆ. ಶ್ವಾನಗಳಿಗೆ ಅಪಾಯದ ಮುನ್ನೂಚನೆ ಬಂದಾಗ ಬೊಗಳುವುದು ಮತ್ತು ಓಡಿಕೊಂಡು ಕಚ್ಚಲು ಬರುವಂತೆ ಮಾಡುತ್ತದೆ.


    ಬೈಕ್​ ಸವಾರ ಇಂತಹ ಸಮಯಲ್ಲಿ ನಿಧಾನವಾಗಿ ಕ್ರಮಿಸಿದರೆ ಬೀದಿ ನಾಯಿಗಳು ನಿಮ್ಮ ಬಳಿ ಬರುವುದಿಲ್ಲ. ಮಾತ್ರವಲ್ಲದೆ, ಶ್ವಾನಗಳು ವಾಸನೆ ತೆಗೆದುಕೊಂಡ ಬಳಿಕ ಮತ್ತೆ ನಿಮ್ಮನ್ನು ಅಟ್ಟಿಸಿಕೊಂಡು ಬರುವುದಿಲ್ಲ.

    Published by:Harshith AS
    First published: