Biscuit Making Business: ಈ ಬ್ಯುಸಿನೆಸ್ ಮಾಡಲು ಸರ್ಕಾರವೇ ನಿಮಗೆ ಹಣ ನೀಡುತ್ತೆ..! ಮತ್ಯಾಕೆ ತಡ?

Biscuit Making Business: ಬಿಸ್ಕೆಟ್​ ಬ್ಯುಸಿನೆಸ್​ ಆರಂಭಿಸಿಲು ಸರ್ಕಾರ ನಿಮಗೆ ಸಹಾಯ ಮಾಡುತ್ತೆ. ಪ್ರಧಾನ ಮಂತ್ರಿ ಮುದ್ರಾ ಯೋಜನಾ ಅಡಿಯಲ್ಲಿ ನಿಮಗೆ ಬ್ಯಾಂಕ್​ನಿಂದ ಸುಲಭವಾಗಿ ಹಣ ಸಿಗಲಿದೆ. ಈ ಯೋಜನೆ ಅಡಿಯಲ್ಲಿ ನೀವು 75 ಸಾವಿರದಿಂದ 95 ಸಾವಿರ ವರೆಗೆ ಹೂಡಿಕೆ ಮಾಡಿದರೆ ಸಾಕು. ಶೇ.80ರಷ್ಟು ಹೂಡಿಕೆಯನ್ನ ಸರ್ಕಾರವೇ ನೀಡುತ್ತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಿಸ್ಕೆಟ್(Biscuit)​ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲ ವಯಸ್ಸಿನವರಿಗೂ ಅಚ್ಚುಮೆಚ್ಚು ಈ ಬಿಸ್ಕೆಟ್​. ಕಾಫಿ(Coffee), ಟೀ(Tea) ಜೊತೆ ಬಿಸ್ಕೆಟ್​ ಇದ್ದರೇ ಸಾಕು ಸ್ವರ್ಗಕ್ಕೆ ಮೂರೇ ಗೇಣು. ಹೌದು, ಭಾರತದಲ್ಲಿ ಬಿಸ್ಕೆಟ್​ ಪ್ರೇಮಿಗಳು(Biscuit Lovers) ತುಂಬಾ ಇದ್ದಾರೆ. ಕೇವಲ ಭಾರತ(India) ಮಾತ್ರವಲ್ಲದೇ ವಿಶ್ವದಲ್ಲೂ ಬಿಸ್ಕೆಟ್​ ಬಲು ಫೇಮಸ್​. ಎಲ್ಲರೂ ಬಿಸ್ಕೆಟ್​ ತಿನ್ನಲು ಇಷ್ಟ ಪಡುತ್ತಾರೆ. ಎಲ್ಲಾ ರೀತಿಯ ಅಂಗಡಿಗಳಲ್ಲೂ ಬಿಸ್ಕೆಟ್​ ಸಿಗುತ್ತೆ. ಅದು ಕೈಗೆಟುಕುವ ದರದಲ್ಲಿ. ಬಿಸ್ಕೆಟ್​ಗಳಲ್ಲೂ ಬೇರೆ ಬೇರೆ ಟೆಸ್ಟ್(Taste)​, ಆಕಾರ(Size), ಸೇರಿ ಹಲವು ವಿಧಗಳಲ್ಲಿ ಬರುತ್ತವೆ. ನೀವೇನಾದರೂ ಹೊಸ ಬ್ಯುಸಿನೆಸ್(New Business)​ ಶುರು ಮಾಡಬೇಕು ಅಂದುಕೊಂಡಿದ್ದೀರಾ? ಕಡಿಮೆ ದುಡ್ಡಿದೆ ಹೇಗೆ ಬ್ಯುಸಿನೆಸ್​ ಶುರು ಮಾಡುವುದು ಎಂದು ಯೋಚನೆ ಮಾಡುತ್ತಾ ಇದ್ದೀರಾ? ಯೋಚನೆ ಬಿಡಿ ಕಡಿಮೆ ಇನ್ವೆಸ್ಟ್​ಮೆಂಟ್​(Investment)ನಲ್ಲಿ ಈ ಬಿಸ್ಕೆಟ್​ ಬ್ಯುಸಿನೆಸ್ ಆರಂಭಿಸಿ. ಅದು ಸರ್ಕಾರದ ಸಹಾಯದಲ್ಲಿ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ.

ಕಡಿಮೆ ಹೂಡಿಕೆ,ಉತ್ತಮ ಲಾಭ!

ಹೌದು, ಭಾರತದಲ್ಲಿ ಬಿಸ್ಕೆಟ್​ಗಳಿಗೆ ಬಹು ಬೇಡಿಕೆಯಿದೆ. ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಈ ಬಿಸ್ಕೆಟ್​ ಬ್ಯುಸಿನೆಸ್​ನಲ್ಲಿ ಗಳಿಸಬಹುದು. ತಿಂಗಳಿಗೆ ಮನೆಯಲ್ಲೇ ಮಾಡಿ 25 ಸಾವಿರದಿಂದ 35 ಸಾವಿರದ ವರೆಗೆ ಆದಾಯಗಳಿಸಬಹುದು. ಈಗಾಗಲೇ ಹಲವಾರು ಬ್ಯುಸಿನೆಸ್​ಗಳು ನೆಲಕಚ್ಚಿವೆ. ಈ ಸಮಯವನ್ನೇ ಸದುಪಯೋಗಪಡಿಸಿಕೊಂಡು ಬಿಸ್ಕೆಟ್​ ಬ್ಯುಸಿನೆಸ್​ ಆರಂಭಿಸಬಹುದು. ಮನೆಯಲ್ಲಿಯೇ ಸಣ್ಣದಾಗಿ ಸರ್ಕಾರದ ಸಹಾಯದಿಂದ ಈ ಬ್ಯುಸಿನೆಸ್​ ಆರಂಭಿಸಿ.

ಸರ್ಕಾರದಿಂದ ಸಿಗುತ್ತೆ ಶೇ.80ರಷ್ಟು ಹೂಡಿಕೆ

ಹೌದು, ಬಿಸ್ಕೆಟ್​ ಬ್ಯುಸಿನೆಸ್​ ಆರಂಭಿಸಿಲು ಸರ್ಕಾರ ನಿಮಗೆ ಸಹಾಯ ಮಾಡುತ್ತೆ. ಪ್ರಧಾನ ಮಂತ್ರಿ ಮುದ್ರಾ ಯೋಜನಾ ಅಡಿಯಲ್ಲಿ ನಿಮಗೆ ಬ್ಯಾಂಕ್​ನಿಂದ ಸುಲಭವಾಗಿ ಹಣ ಸಿಗಲಿದೆ. ಈ ಯೋಜನೆ ಅಡಿಯಲ್ಲಿ ನೀವು 75 ಸಾವಿರದಿಂದ 95 ಸಾವಿರ ವರೆಗೆ ಹೂಡಿಕೆ ಮಾಡಿದರೆ ಸಾಕು. ಶೇ.80ರಷ್ಟು ಹೂಡಿಕೆಯನ್ನ ಸರ್ಕಾರವೇ ನೀಡುತ್ತೆ. ಇದಕ್ಕಾಗಿ ಸರ್ಕಾರ ವಿಶೇಷ ಪ್ರಾಜೆಕ್ಟ್​ ವರದಿಯನ್ನು ಸಿದ್ಧಪಡಿಸಿದೆ. ಚಿಪ್​ ಬಿಸ್ಕೆಟ್​, ಬ್ರೆಡ್​, ಕೇಕ್​ ತಯಾರಿಸಲು ಸಣ್ಣ ಮಿಷಿನ್​ಗಳಿದ್ದರೆ ಸಾಕು. ಭಾರತದಲ್ಲಿ ಕೊರೋನಾ ಸಮಯದಲ್ಲೂ ಬಿಸ್ಕೆಟ್​​ಗೆ ಮಾರುಕಟ್ಟೆ ಕಡಿಮೆಯಾಗಿರಲಿಲ್ಲ.

ಬಿಸ್ಕೆಟ್​ಗೆ ಮಾರುಕಟ್ಟೆ ಎಂದಿಗೂ ಡೌನ್​ ಆಗಲ್ಲ
ಪ್ರತಿದಿನ ಬಿಸ್ಕಟ್​ ಖರೀದಿಸಿ ತಿನ್ನುವವರು ಇದ್ದಾರೆ. ಉತ್ತಮ್ಮ ತಂತ್ರ ಬಳಿಸಿ, ಹೊಸ ಹೊಸ ಆಕಾರದಲ್ಲಿ ಬಿಸ್ಕೆಟ್​ ಮಾಡಬೇಕು. ನಂತರ ಹೊಸದಾಗಿ ಯೋಚಿಸಿ ಪ್ಯಾಕಿಂಗ್​ ಮಾಡಬೇಕು, ಹೊಸ ಫ್ಲೇವರ್​, ಉತ್ತಮ ರುಚಿ ಇಷ್ಟೆ ಬಿಸ್ಕೆಟ್​ ಬ್ಯುಸಿನೆಸ್​ ಆರಂಭಿಸಲು ಬೇಕಾಗಿರುವ ಪ್ರಮುಖ ಅಂಶಗಳು. ಸಿಟಿಯಾಗಲಿ, ಹಳ್ಳಿಕಡೆಯಾಗಲಿ ಬಿಸ್ಕೆಟ್​ಗೆ ಬಹಳ ಬೇಡಿಕೆ ಇದೆ.

ಬೇಕಿರುವ ಒಟ್ಟು ಹಣವೆಷ್ಟು?
ಬಿಸ್ಕೆಟ್​ ತಯಾರಿಕಾ ಘಟಕ ಸ್ಥಾಪನೆಗೆ ಒಟ್ಟು ನಾಲ್ಕೂವರೆ ಲಕ್ಷದಿಂದ 5 ಲಕ್ಷ ವೆಚ್ಚವಾಗಲಿದೆ. ಆದರೆ ನಿಮ್ಮ ಬಳಿ 90 ಸಾವಿರ ರೂಪಾಯಿಗಳ ಇದ್ದರೇ ಸಾಕು, ಉಳಿದ ಹಣವನ್ನು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮೂಲಕ ಸಿಗುತ್ತದೆ.

ಇದನ್ನು ಓದಿ :ದಿನಕ್ಕೆ ಕೇವಲ ರೂ 50 ಹೂಡಿಕೆ ಮಾಡಿ, ಬರೋಬ್ಬರಿ 34 ಲಕ್ಷ ಲಾಭ ಗಳಿಸಿ; ಇಲ್ಲಿದೆ ಡಿಟೇಲ್ಸ್

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಪಡೆಯುವುದು ಹೇಗೆ?
ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್​ಗಳಲ್ಲಿ ಈ ಯೋಜನೆಯಡಿಯಲ್ಲಿ ನೀವು ಅರ್ಜಿ ಸಲ್ಲಿಸಬಹುದು. ಲೋನ್​ ಅಪ್ಲಿಕೇಶನ್​ ಫಾರ್ಮ್​ನಲ್ಲಿ ನಿಮ್ಮ ಮಾಹಿತಿಯನ್ನು ಸರಿಯಾಗಿ ಸಲ್ಲಿಸಬೇಕು. ಹೆಸರು, ವಿಳಾಸ, ಲೋನ್​ ಎಷ್ಟು ಬೇಕೆಂಬ ಎಲ್ಲಾ ಮಾಹಿತಿಗಳು ಭರ್ತಿ ಮಾಡಬೇಕು. ಈ ಯೋಜನೆಗೆ ಯಾವುದೇ ದಾಖಲೆಗಳು ಬೇಕು. ಕೊಡುವ ಲೋನ್​ ಹಣವನ್ನು 5 ವರ್ಷಗಳಲ್ಲಿ ಹಿಂತಿರುಗಿಸಬಹುದು.

ಬಿಸ್ಕೆಟ್​ ತಯಾರಿಕ ಘಟಕಕ್ಕೆ ಬೇಕಿರುವ ಜಾಗ?
ಬಿಸ್ಕೆಟ್​ ತಯಾರಿಕ ಘಟಕ ಸ್ಥಾಪಿಸಲು ಕೇವಲ 500 ರಂದ 600 ಚಡಿ ಅಡಿಗಳಷ್ಟು ಜಾಗವಿದ್ದರೆ ಸಾಕು. ಮನೆಯಲ್ಲೇ ಪ್ರಾರಂಭಿಸಲು ಕೆಲ ಅರ್ಜಿಗಳನ್ನು ನೀವು ಭರ್ತಿಮಾಡಬೇಕು. ಹಾಗೂ ಸ್ಥಳೀಯ ಅಧಿಕಾರಿಗಳು ನೀಡುವ ಕೆಲ ನಿಯಮಗಳನ್ನ ಫಾಲೋ ಮಾಡಿ ಶುರು ಮಾಡಬಹುದು. ವು ಬಿಸ್ಕೆಟ್​ ತಯಾರಿಸುವ ಅಡುಗೆ ಮನೆಯಲ್ಲಿ ಬೇರೆ ಯಾವ ರೀತಿಯ ಅಡುಗೆಗಳನ್ನು ಮಾಡಬಾರದು. ನೀರಿನ ವ್ಯವಸ್ಥೆ, ಕರೆಂಟ್​ ವ್ಯವಸ್ಥೆ, ಡ್ರೈನೇಜ್​ ವ್ಯವಸ್ಥೆಯನ್ನ ಹೊಂದಿರಬೇಕು.

ಇದನ್ನು ಓದಿ : ಗೃಹ ಸಾಲ ಪಡೆದುಕೊಳ್ಳುವ ಮುನ್ನ ಅರಿತುಕೊಳ್ಳಬೇಕಾಗಿರುವ ಅಂಶಗಳೇನು..? ಇಲ್ಲಿದೆ ವಿವರ

ಬಿಸ್ಕೆಟ್​ ಮಾಡಲು ಬೇಕಿರುವ ಕಚ್ಛಾ ವಸ್ತುಗಳು ಅಂದರೆ ಗೋಧಿ ಹಿಟ್ಟು, ಹಾಲು, ಸಕ್ಕರೆ, ಉಪ್ಪು, ತುಪ್ಪ, ಯೀಸ್​, ಬಣ್ಣಗಳು. ಇವುಗಳನ್ನ ನೀವು ಬಳಸಿಉತ್ತಮ ಗುಣಮಟ್ಟದ ರುಚಿಕರವಾದಬಿಸ್ಕೆಟ್​ ತಯಾರಿಸಿದರೆ. ನಿಮ್ಮ ಆದಾಯ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಹೀಗೆ ಮಾಡಿದರೆ ತಿಂಗಳಿಗೆ ನೀವು 35 ಸಾವಿರದಿಂದ 45 ಸಾವಿರು ಗಳಿಸಬಹುದು. ವರ್ಷಕ್ಕೆ 4.75 ಲಕ್ಷದಿಂದ 5 ಲಕ್ಷದವರೆಗೂ ಹಣ ಗಳಿಸಬಹುದು.
Published by:Vasudeva M
First published: