Pets: ಸಾಕುನಾಯಿಗೆ ಮನೆಯೊಳಗೆ ಗಲೀಜು ಮಾಡದಂತೆ ತರಬೇತಿ ಕೊಡುವುದು ಹೇಗೆ ? ಇಲ್ಲಿದೆ ಸಿಂಪಲ್ ಟ್ರಿಕ್ಸ್ !

ನಾಯಿಗೆ ಮನೆಯಿಂದ ಹೊರಹೋಗಿ ಮಲ ವಿಸರ್ಜನೆ ಮಾಡಲು ತರಬೇತಿ ಕೊಡ್ತೀರಾ? ಹಾಗಾದ್ರೆ ನೀವೂ ಹೀಗೆ ಮಾಡಿ.

ಸಾಕುನಾಯಿ.

ಸಾಕುನಾಯಿ.

  • Share this:

    ನಿತ್ಯ ತನ್ನ ಒಡೆಯನೊಂದಿಗೆ ವಾಕಿಂಗ್‍ಗೆ ಬರುವ ನಾಯಿಯನ್ನು ಕಂಡು ನೀವು ಬಹಳಷ್ಟು ಬಾರಿ ‘ಹಯ್’ ಎಂದು ಖುಷಿಯಿಂದ ಕಣ್ಣರಳಿಸಿರಬಹುದು. ಆದರೆ ಅದರ ಒಡೆಯನ ತಾಪತ್ರಯವನ್ನು ಎಂದಾದರೂ ಗಮನಿಸಿದ್ದೀರಾ? ವಾಕಿಂಗ್ ಜೊತೆ ಜೊತೆಗೆ ನಾಯಿ ತನಗೆ ಮನಬಂದ ಜಾಗವನ್ನು ಅರಸಿ, ಮಲಮೂತ್ರ ವಿಸರ್ಜನೆ ಮಾಡುವವರಗೆ ಆತ ಮನೆ ದಾರಿ ಹಿಡಿಯುವಂತಿಲ್ಲ. ನಾಯಿಯ ಮಲಮೂತ್ರವಿಸರ್ಜನೆ ಅಷ್ಟೊಂದು ಚಿಂತಿಸುವ ಸಂಗತಿಯೇ? ಹೌದು , ನಾಯಿ ಸಾಕುವುದು ಮೇಲ್ನೋಟಕ್ಕೆ ಕಂಡಷ್ಟು ಸುಲಭವಲ್ಲ. ಊಟ, ನಿದ್ರೆಯಂತೆ ಅದರ ಮಲಮೂತ್ರ ವಿಸರ್ಜನೆ ಅಭ್ಯಾಸದ ಬಗ್ಗೆ ಗಮನ ಕೊಡುವುದು ಅತ್ಯಗತ್ಯ.


    ನಾಯಿಗೆ ಮಲ ವಿಸರ್ಜನೆ ಮಾಡುವ ತರಬೇತಿ ಕೊಡಬೇಕೆಂದಿದ್ದರೆ ಎರಡು ಆಯ್ಕೆಗಳಿವೆ - ಹೊರಾಂಗಣದಲ್ಲಿ ಮಲ ವಿಸರ್ಜನೆ ಮಾಡುವ ತರಬೇತಿ ಅಥವಾ ಒಳಗಡೆಯೇ ಮಲ ವಿಸರ್ಜನೆ ಮಾಡಿಸಿ, ಬಳಿಕ ಅದನ್ನು ಹೊರಚೆಲ್ಲುವುದು.


    ಹೊರಾಂಗಣದಲ್ಲಿ ಮಲ ವಿಸರ್ಜನೆ ಮಾಡುವ ತರಬೇತಿ ಕೊಡುವುದು ಹೇಗೆ?
    ನಾಯಿ ತಾನಾಗಿಯೇ ಮಲವಿರ್ಜನೆಗೆ ಹೋಗಬೇಕೆಂದು ಹೇಳುತ್ತದೆಯೇ ಅಥವಾ ಹೇಳಬಲ್ಲದೇ? ಖಂಡಿತಾ! ನೀವು ಅದಕ್ಕೆ ಸೂಚನೆ ನೀಡುವುದನ್ನು ಕಲಿಸಬಹುದು.


    ಹಂತ 1: ನಾಯಿಗೆ ಮಲ ವಿಸರ್ಜನೆಯ ಸೂಚನೆ ನೀಡಲು ಕಲಿಸಿ
    ನಾಯಿಯನ್ನು ಬಾಗಿಲ ಹಿಂದೆ ಕೂರಿಸಿ. ಅದು ಬೊಗಳಿದಾಗ ಬಾಗಿಲು ತೆಗೆದು ಹೊರಗೆ ಬಿಡಿ. ಬೊಗಳುವುದು ಬೇಡದಿದ್ದರೆ, ಅದಕ್ಕೆ ಬೆಲ್ ಹೊಡೆಯಲು ಕಲಿಸಿ. ನಾಯಿ ಬೆಲ್ ಹೊಡೆದಾಗ, ಹೊರಗೆ ಕರೆದುಕೊಂಡು ಹೋಗಿ. ನೆನಪಿಡಿ, ಈ ಸೂಚನೆ ಕೇವಲ ಮಲವಿಸರ್ಜನೆಗೆ ಮಾತ್ರ, ಹೊರಗೆ ಹೋದಾಗ ನಾಯಿಗೆ ಮನಬಂದಷ್ಟು ಹೊತ್ತು ಆಡಲು ಬಿಡಬೇಡಿ. ಹಾಗಾದಲ್ಲಿ, ನಾಯಿ ಬೆಲ್ ಹೊಡೆಯುವುದನ್ನು ಆಟದ ಸಮಯದ ಸೂಚನೆ ಎಂದು ಅಪಾರ್ಥ ಮಾಡಿಕೊಳ್ಳಬಹುದು. ಬೆಲ್ ಹೊಡೆಯುವುದು ಮಾತ್ರವಲ್ಲ, ನಿಮಗೆ ಇಷ್ಟವಾದ ಅಥವಾ ಅನುಕೂಲವೆನಿಸಿದ ಸೂಚನೆಗಳನ್ನು ಕೂಡ ಕಲಿಸಬಹುದು.


    ಹಂತ 2: ನಿರ್ದಿಷ್ಟ ಸ್ಥಳ ನಿಗದಿ ಪಡಿಸಿ
    ನಿಮ್ಮ ನಾಯಿಯ ಕತ್ತಿಗೆ ಪಟ್ಟಿ ಹಾಕಿ, ಅದು ಮಲ ವಿಸರ್ಜನೆ ಮಾಡಲು ನೀವು ಬಯಸುವ ಜಾಗಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಿ. ಅಲ್ಲಿಂದ ನಡಿಗೆಯನ್ನು ಮುಂದುವರೆಸಬೇಡಿ. ಬದಲಿಗೆ, ನಾಯಿ ಅಲ್ಲಿಯೇ ಮಲವಿಸರ್ಜನೆ ಮಾಡುವವರೆಗೆ ಕಾಯಿರಿ. ನಾಯಿ ಮಲವಿಸರ್ಜನೆ ಮಾಡಿದರೆ, ಅದಕ್ಕೆ ಏನಾದರೂ ತಿನ್ನಲು ಕೊಡಿ ಅಥವಾ ಅದನ್ನು ಹೊಗಳಿರಿ. ನಾಯಿ ಮಲವಿಸರ್ಜನೆ ಮಾಡದಿದ್ದರೆ, ಮನೆಗೆ ವಾಪಸ್ ಕರೆದುಕೊಂಡು ಹೋಗಿ, ವಾಪಸ್ಸು ಕರೆತಂದು ಹಿಂದಿನ ಪ್ರಕ್ರಿಯೆಯನ್ನೇ ಮುಂದುವರಿಸಿ. ನಾಯಿಗಳು ಬೇಗ ಅರ್ಥ ಮಾಡಿಕೊಳ್ಳುತ್ತವೆ.


    ಹಂತ 3: ನೀವು ಮನೆಯಲ್ಲಿ ಇಲ್ಲದಾಗ ಕ್ರೇಟ್ ಬಳಸಿ
    ನೀವು ಮನೆಯಲ್ಲಿ ಇಲ್ಲದಾಗ, ನಿರ್ದಿಷ್ಟ ಜಾಗದಲ್ಲಿ ಮಲವಿಸರ್ಜನೆ ಮಾಡಲು ಕಲಿಸಿ. ಉದಾಹರಣೆಗೆ ಕ್ರೇಟ್. ಇದು ನೀವಿಲ್ಲದಾಗ ನಾಯಿ ಮನೆಯೊಳಗೆ ಎಲ್ಲೆಂದರಲ್ಲಿ ಮಲ ವಿಸರ್ಜನೆ ಮಾಡುವುದನ್ನು ತಪ್ಪಿಸುತ್ತದೆ.


    ಒಳಾಂಗಣದಿಂದ ಹೊರಾಂಗಣ ಮಲವಿಸರ್ಜನೆ
    ನಿಮ್ಮ ಮನೆಯಲ್ಲಿ ಅಂಗಳವಿಲ್ಲದಿದ್ದರೆ, ನಾಯಿಗೆ ಮೊದಲು ಮನೆಯೊಳಗೆ ಮಲವಿರ್ಜನೆ ಮಾಡುವ ಅಭ್ಯಾಸ ಕಲಿಸಿ, ಬಳಿಕ ಹೊರಗಡೆಯ ಅಭ್ಯಾಸ ಮಾಡಿಸುವುದು ಒಳಿತು. ಅಂದರೆ ಪೊಟ್ಟಿ ಪ್ಯಾಡ್‍ಗಳಲ್ಲಿ ಅಥವಾ ಕ್ರೇಟ್‍ಗಳಲ್ಲಿ ಮಲವಿಸರ್ಜನೆ ಮಾಡಲು ಕಲಿಸಿ.


    ಪೊಟ್ಟಿ ಪ್ಯಾಡ್ ತರಬೇತಿ
    ಇದಕ್ಕಾಗಿ ಬಾತ್‍ರೂಮ್ ಅಥವಾ ಬಟ್ಟೆ ಒಗೆಯುವ ಸ್ಥಳದಂತಹ, ಸುಲಭವಾಗಿ ನೀರು ಹಾಕಿ ತೊಳೆಯಲು ಅನುಕೂಲ ಇರುವ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಯಾವುದೇ ಅಪಾಯಕಾರಿ ವಸ್ತುಗಳು ಇಲ್ಲದಂತೆ ನೋಡಿಕೊಳ್ಳಿ. ನೆಲದ ಮೇಲೆ ಪೀ ಪ್ಯಾಡ್‍ಗಳನ್ನು ಹಾಕಿ ಮತ್ತು ನಿಮ್ಮ ನಾಯಿಯ ಹಾಸಿಗೆಯನ್ನು ಕೋಣೆಯ ಮೂಲೆಯಲ್ಲಿ ಇಡಿ.


    ಹಂತ 1:ಆಗಾಗ ಪೀ ಪ್ಯಾಡ್‍ಗಳನ್ನು ಬದಲಾಯಿಸಿ, ಆದರೆ ನಾಯಿ ಮಲ ವಿಸರ್ಜಿಸಲಿ ಎಂದು ನೀವು ಬಯಸುವ ಜಾಗದಲ್ಲಿ ಕೊಳೆಯಾದ ಪ್ಯಾಡ್‍ನ ಸಣ್ಣ ಭಾಗವನ್ನು ಇಟ್ಟಿರಿ. ಆಗ ಅದು ಮಲ ವಿಸರ್ಜನೆ ಮಾಡುವ ಜಾಗ ಎಂದು ನಾಯಿ ವಾಸನೆಯಿಂದಲೇ ಗ್ರಹಿಸುತ್ತದೆ.


    ಹಂತ 2:ನಿಮ್ಮ ನಾಯಿ ಅದೇ ಜಾಗದಲ್ಲಿ ಮಲಮೂತ್ರ ವಿಸರ್ಜಿಸಿದಾಗ, ಹಾಸಿಗೆ ಪಕ್ಕ ಇರುವ ಪೀ ಪ್ಯಾಡ್‍ಗಳನ್ನು ತೆಗೆದುಬಿಡಿ.


    ಹಂತ 3:ಒಂದು ಅಥವಾ ಎರಡು ಪೀ ಪ್ಯಾಡ್‍ಗಳನ್ನು ಹೊರತುಪಡಿಸಿ, ಎಲ್ಲಾ ಪ್ಯಾಡ್‍ಗಳನ್ನು ತೆಗೆಯುವುದು ಅಭ್ಯಾಸ ಮಾಡಿ.


    ಕ್ರಮೇಣ ಪೀ ಪ್ಯಾಡ್‍ಗಳನ್ನು ಹೊರಗೆ ಇಡುವುದನ್ನು ಅಭ್ಯಾಸ ಮಾಡಿದರೆ, ನಾಯಿ ಮರಿಯು ಕೂಡ ಅಲ್ಲೇ ಹೋಗಿ ಮಲ ವಿಸರ್ಜನೆ ಮಾಡುವುದನ್ನು ಕಲಿಯುತ್ತದೆ.


    ಇದನ್ನೂ ಓದಿ: ಪ್ರೀತ್ಸೋದ್​ ತಪ್ಪಾ: ಪ್ರೀತಿಸಿ ವಿವಾಹವಾಗಿದ್ದಕ್ಕೆ 20 ವರ್ಷಗಳಿಂದ ಅರಣ್ಯವಾಸ..!

    ಕ್ರೇಟ್ ಮಲ ವಿಸರ್ಜನೆ ತರಬೇತಿ
    ಕ್ರೇಟ್ ತರಬೇತಿ ಆರಂಭಿಸುವ ಮೊದಲು, ಸೂಕ್ತ ಗಾತ್ರದ ಕ್ರೇಟ್ ಖರೀದಿಸಿ. ನಾಯಿ ನಿಲ್ಲಲು, ಕೂರಲು ಆದರೆ ಸಾಕು. ಅದಕ್ಕಿಂತ ಹೆಚ್ಚು ದೊಡ್ಡದಿದ್ದರೆ ಅದು ಒಂದು ಮೂಲೆಯಲ್ಲಿ ಮಲ ವಿಸರ್ಜನೆ ಮಾಡಿ, ಮತ್ತೊಂದು ಮೂಲೆಯಲ್ಲಿ ಮಲಗಿ ಬಿಡುವ ಸಾಧ್ಯತೆ ಇದೆ. ಕೆಲವು ಕ್ರೇಟ್‍ಗಳಲ್ಲಿ ಡಿವೈಡರ್‌ಗಳು ಇರುತ್ತವೆ, ನಾಯಿ ಬೆಳೆದಂತೆ ಅದರ ಗಾತ್ರವನ್ನು ಹೊಂದಿಸಬಹುದು. ಕ್ರೇಟ್‍ನೊಳಗೆ ತಿಂಡಿ ಎಸೆದು, ನಾಯಿಗೆ ಅಲ್ಲಿ ಹೋಗಿ ಬಂದು ಮಾಡುವ ಅಭ್ಯಾಸ ಕಲಿಸಿ. ಪ್ರತಿ ಸರಿ ಹಾಗೆ ಮಾಡಿದಾಗಲೂ ನಾಯಿಯನ್ನು ಪ್ರಶಂಸಿಸಿ. ನಾಯಿಗೆ 10 ಅಥವಾ ಅದಕ್ಕಿಂತ ಹೆಚ್ಚು ಸಮಯ ಅಲ್ಲೇ ಇರುವಂತೆ ಪ್ರೋತ್ಸಾಹಿಸಿ. ಅದು ಅಭ್ಯಾಸವಾದ ಬಳಿಕ, ತರಬೇತಿ ಆರಂಭಿಸಿ.


    ನಾಯಿಗಳು ತಾವು ಮಲಗುವ, ತಿನ್ನುವ ಜಾಗವನ್ನು ಗಲೀಜು ಮಾಡುವ ಬದಲು, ತಾವೇ ಮಲ ವಿಸರ್ಜನೆಗೆ ಹೋಗಬೇಕೆಂದು ತಿಳಿಸುತ್ತವೆ. ಊಟ, ಆಟ ಮತ್ತು ನೀರು ಕುಡಿದ 15 ನಿಮಿಷದ ಒಳಗೆ ಅವುಗಳಿಗೆ ಮಲಮೂತ್ರ ವಿಸರ್ಜನೆಯ ಅವಕಾಶ ಸಿಗಬೇಕು.


    ಇದನ್ನೂ ಓದಿ: Video Viral: 18 ಸಾವಿರ ಎತ್ತರ, ಶೂನ್ಯ ತಾಪಮಾನದಲ್ಲಿ ಸೂರ್ಯ ನಮಸ್ಕಾರ ಮಾಡಿದ ಪೊಲೀಸ್ ಅಧಿಕಾರಿ!

    ಎಷ್ಟು ಸಮಯ ಹಿಡಿಯುತ್ತದೆ?
    ನಾಯಿಗೆ ಮಲ ವಿಸರ್ಜನೆ ತರಬೇತಿ ನೀಡಲು ಇಂತಿಷ್ಟೇ ಸಮಯ ಬೇಕಾಗುತ್ತದೆ ಎಂಬುದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಅದು ಹಲವಾರು ಸಂಗತಿಗಳನ್ನು ಅವಲಂಬಿಸಿದೆ. ಆದರೆ ತರಬೇತಿಯಲ್ಲಿ ನಾಯಿ ನಿಮ್ಮ ಸೂಚನೆಗಳನ್ನು ಸರಿಯಾಗಿ ಪಾಲಿಸಿದರೆ ಅದಕ್ಕೆ ಬಹುಮಾನ ಕೊಡುವುದನ್ನು ಮಾತ್ರ ಮರೆಯಬೇಡಿ.




    ಎಷ್ಟೋ ಸಾರಿ ನಾಯಿ ಆಕಸ್ಮಿಕವಾಗಿ ಮನೆಯೊಳಗೆ ಮಲಮೂತ್ರ ವಿಸರ್ಜಿಸಬಹುದು. ಆಗ ತಾಳ್ಮೆಗೆಡಬೇಡಿ. ಮಲಮೂತ್ರ ವಿಸರ್ಜನೆಯ ನಿರ್ದಿಷ್ಟ ಸಮಯವನ್ನು ನಿಗದಿ ಪಡಿಸಿ, ಅದನ್ನು ಪಾಲಿಸುವುದು, ನಾಯಿಯನ್ನು ನಿಮ್ಮೊಂದಿಗೆ ಸುತ್ತಾಡಲು ಕರೆದುಕೊಂಡು ಹೋಗುವುದು ಇತ್ಯಾದಿಗಳಿಂದ ಇಂತಹ ಆಕಸ್ಮಿಕಗಳನ್ನು ತಡೆಯಲು ಪ್ರಯತ್ನಿಸಬಹುದು.

    First published: