ವಿಶ್ವದಾದ್ಯಂತ ಜನರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾದು ಕುಳಿತಿದ್ದಾರೆ. ಮತ್ತೊಂದೆಡೆ 2020ನೇ ವರ್ಷಕ್ಕೆ ಗುಡ್ ಬಾಯ್ ಹೇಳಲು ಮುಂದಾಗಿದ್ದಾರೆ. 2021ನೇ ವರ್ಷದ ಆಗಮನದ ಸಂತಸದಲ್ಲಿರುವ ಜನರು ತಮ್ಮ ಸ್ನೇಹಿತರು, ಸಹಪಾಠಿಗಳಿಗೆ ಗ್ರೀಟಿಂಗ್ ಕಾರ್ಡ್(Greeting card) ಹಂಚುವ ಮೂಲಕ ಹೊಸ ವರ್ಷ ಸುಖಕರವಾಗಿರಲಿ ಎಂದು ಶುಭಾಶಯ ನುಡಿಗಳನ್ನು ಬರೆದು ಕಳುಹಿಸುತ್ತಿದ್ದಾರೆ.
ಅಂದಹಾಗೆಯೇ, ಹೆಚ್ಚಿನ ಜನರು 2020ನೇ ವರ್ಷ ಮತ್ತೊಮ್ಮೆ ಬರದಿರಲಿ ಎಂದು ಆಶಿಸುತ್ತಿದ್ದಾರೆ. ಮಹಾಮಾರಿ ಕೊರೋನಾ ಸಾಕಷ್ಟು ಜನರನ್ನು ಬಲಿ ಪಡೆದುಕೊಂಡಿದ್ದಲ್ಲದೆ. ಅನೇಕರನ್ನು ಸಂಕಷ್ಟಕ್ಕೆ ದೂಡಿತ್ತು. ಆದರೀಗ 2021ನೇ ವರ್ಷದತ್ತ ಮುನ್ನುಗ್ಗುತ್ತಿದ್ದೇವೆ. ಹೀಗಿರುವಾಗ ನೂತನ ವರ್ಷ ಯಾವುದೇ ಸಂಕಷ್ಟ ತರಬಾರದೆಂದು ಮನದಾಸೆ ಹಂಚಿಕೊಳ್ಳುತ್ತಿದ್ದಾರೆ.
ಹೊಸ ವರ್ಷಾರಂಭದ ಸಂತೋಷದಲ್ಲಿರುವ ಜನತೆ ಗ್ರೀಟಿಂಗ್ ಕಾರ್ಡ್ ರಚಿಸಿ ಅದನ್ನು ಸ್ನೇಹಿತರಿಗೆ, ಆಪ್ತರಿಗೆ ಹಂಚಿಕೊಳ್ಳುತ್ತಾ ನೂತನ ವರ್ಷದ ಸುಖ-ಸಂತೋಷ ನೀಡಲಿ ಎಂದು ಹಾರೈಸುತ್ತಿದ್ದಾರೆ.
ಅಂದಹಾಗೆಯೇ, ಸುಲಭ ಪರಿಕರಗಳನ್ನು ಬಳಸಿ ಗ್ರೀಟಿಂಗ್ ಮಾಡಬಹುದಾಗಿದೆ. ಸುಲಭವಾಗಿ ಗ್ರೀಟಿಂಗ್ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಯ್ಯೂಟೂಬ್ನಲ್ಲಿ ಸುಲಭವಾಗಿ ಗ್ರೀಟಿಂಗ್ ರಚಿಸುವ ವಿಡಿಯೋಗಳನ್ನು ಹಲವಿವೆ. ಅವುಗಳನ್ನು ವೀಕ್ಷಿಸುವ ಮೂಲಕ ಕೈಯಾರೆ ಗ್ರೀಟಿಂಗ್ ಕಾರ್ಡ್ ಬರೆಯಬಹುದಾಗಿದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ