HOME » NEWS » Trend » HOW TO LINK YOUR PF AND AADHAAR IN ONLINE TO GET EPF MONEY HERE IS THE DETAILS STG AE

EPF Amount: ಇಪಿಎಫ್ ಹಣ ಪಡೆಯಲು ಪಿಎಫ್- ಆಧಾರ್ ಲಿಂಕ್‌ ಕಡ್ಡಾಯ: ಆನ್‌ಲೈನ್‌ನಲ್ಲಿ ಲಿಂಕ್​ ಮಾಡುವುದು ಹೀಗೆ

Aadhaar: ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಪಿಎಫ್‌ನ ಸಾರ್ವತ್ರಿಕ ಖಾತೆ ಸಂಖ್ಯೆಯೊಂದಿಗೆ (ಯುಎಎನ್) ಲಿಂಕ್ ಮಾಡದಿದ್ದರೆ, ಈ ತಿಂಗಳಿನಿಂದ ನಿಮ್ಮ ಪಿಎಫ್ ಖಾತೆಯಲ್ಲಿ ಉದ್ಯೋಗದಾತರ ಕೊಡುಗೆಯನ್ನು ನೀವು ಸ್ವೀಕರಿಸಲಾಗುವುದಿಲ್ಲ.

Trending Desk
Updated:June 11, 2021, 11:45 AM IST
EPF Amount: ಇಪಿಎಫ್ ಹಣ ಪಡೆಯಲು ಪಿಎಫ್- ಆಧಾರ್ ಲಿಂಕ್‌ ಕಡ್ಡಾಯ: ಆನ್‌ಲೈನ್‌ನಲ್ಲಿ ಲಿಂಕ್​ ಮಾಡುವುದು ಹೀಗೆ
ಸಾಂದರ್ಭಿಕ ಚಿತ್ರ
  • Share this:
ಜೂನ್‌ನಿಂದ ಆರಂಭಗೊಂಡು, ನಿವೃತ್ತಿ ನಂತರ ಸಿಗುವ ನಿಧಿಯ ವಿವಿಧ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಅನ್ನು ಭವಿಷ್ಯನಿಧಿಯೊಂದಿಗೆ (ಪಿಎಫ್) ಲಿಂಕ್ ಮಾಡುವುದು ಈಗ ಕಡ್ಡಾಯವಾಗಿದೆ. ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಪಿಎಫ್‌ನ ಸಾರ್ವತ್ರಿಕ ಖಾತೆ ಸಂಖ್ಯೆಯೊಂದಿಗೆ (ಯುಎಎನ್) ಲಿಂಕ್ ಮಾಡದಿದ್ದರೆ, ಈ ತಿಂಗಳಿನಿಂದ ನಿಮ್ಮ ಪಿಎಫ್ ಖಾತೆಯಲ್ಲಿ ಉದ್ಯೋಗದಾತರ ಕೊಡುಗೆಯನ್ನು ನೀವು ಸ್ವೀಕರಿಸಲಾಗುವುದಿಲ್ಲ. ಜೂನ್ 1, 2021 ರಿಂದ ಯುಎಎನ್‌ಗೆ ಆಧಾರ್ ಸಂಪರ್ಕವಿಲ್ಲದ ಪಿಎಫ್ ಕೊಡುಗೆಗಳನ್ನು ಉದ್ಯೋಗದಾರರಿಗೆ ರವಾನಿಸಲು ಸಾಧ್ಯವಾಗುವುದಿಲ್ಲ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಸರಸ್ವತಿ ಕಸ್ತೂರಿ ರಂಗನ್ ಹೇಳಿದ್ದಾರೆ.

ಈ ಹೊಸ ನಿಯಮವನ್ನು ಜಾರಿಗೆ ತರಲು ನೌಕರರ ಭವಿಷ್ಯ ನಿಧಿ ಸಂಸ್ಥೆ ಸಾಮಾಜಿಕ ಭದ್ರತೆ 2020 ಸಂಹಿತೆಯ ಸೆಕ್ಷನ್ 142 ಅನ್ನು ತಿದ್ದುಪಡಿ ಮಾಡಿದೆ. ಕೆವೈಸಿ ಅಪ್ಡೇಟ್‌ ಆಗಿರಬಹುದು, ಮುಂಗಡಗಳಿಗಾಗಿ ವಿನಂತಿ, ಹಿಂಪಡೆಯುವಿಕೆ ಇತ್ಯಾದಿ- ಹೀಗೆ ಎಲ್ಲಾ ಪ್ರಯೋಜನಗಳಿಗಾಗಿ ಇಪಿಎಫ್‌ಒ ಆನ್‌ಲೈನ್ ವಿಧಾನದತ್ತ ಸಾಗುತ್ತಿದೆ. ಈ ಹಿನ್ನೆಲೆ ಫಲಾನುಭವಿಯ ಗುರುತನ್ನು ಸ್ಥಾಪಿಸುವುದು ನಿರ್ಣಾಯಕವಾಗುತ್ತದೆ, ಮತ್ತು ಇದಕ್ಕಾಗಿ ಆಧಾರ್ ಕಾರ್ಡ್‌ ಅನ್ನು ಕೇಳಲಾಗುತ್ತಿದೆ ಎಂದೂ ಕಸ್ತೂರಿ ರಂಗನ್‌ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ


ನಿಮ್ಮ ಪಿಎಫ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಹೇಗೆ ಲಿಂಕ್ ಮಾಡಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ...
1) ನೌಕರರ ಭವಿಷ್ಯ ನಿಧಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ - www.epfindia.gov.in ಗೆ ಭೇಟಿ ನೀಡಿ.

2) ಉದ್ಯೋಗಿಗಳ ಟ್ಯಾಬ್‌ ಬಟನ್‌ ಕ್ಲಿಕ್ ಮಾಡಿ ಮತ್ತು ‘ಯುಎಎನ್ ಸದಸ್ಯ ಇ-ಸೇವಾ’ ಲಿಂಕ್ ಆಯ್ಕೆ ಮಾಡಿ.

3) ನಿಮ್ಮ ಯುಎಎನ್ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ.4) ‘ಟ್ಯಾಬ್ ನಿರ್ವಹಿಸು’ಅಥವಾ ಮ್ಯಾನೇಜ್‌ ಟ್ಯಾಬ್‌ ಅಡಿಯಲ್ಲಿ, ಕೆವೈಸಿ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.

5) ನಿಮ್ಮನ್ನು ಬೇರೊಂದು ವೆಬ್‌ ಪೇಜ್‌ಗೆ ಮರು ನಿರ್ದೇಶಿಸಲಾಗುತ್ತದೆ.

ನಿಮ್ಮ ಇಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಲು ಹಲವಾರು ದಾಖಲೆಗಳನ್ನು ಅಪ್‌ಲೋಡ್ ಮಾಡಲು ನೀವು ಅಲ್ಲಿ ಟ್ಯಾಬ್‌ಗಳನ್ನು ಕಾಣಬಹುದು.

6) ‘ಆಧಾರ್’ಎಂದು ತೋರಿಸುವ ಟ್ಯಾಬ್ ಅನ್ನು ಆಯ್ಕೆ ಮಾಡಿ.

7) ವಿವರಗಳನ್ನು ಭರ್ತಿ ಮಾಡಿ ಮತ್ತು 'ಸೇವ್‌' ಆಪ್ಷನ್‌ ಮೇಲೆ ಕ್ಲಿಕ್‌ ಮಾಡಿ.

8) ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ಪರಿಶೀಲಿಸಲಾಗುತ್ತದೆ.

9) ಉದ್ಯೋಗದಾತರು ಮತ್ತು ಯುಐಡಿಎಐ ನಿಮ್ಮ ವಿವರಗಳನ್ನು ಅನುಮೋದಿಸಿದ ನಂತರ, ನಿಮ್ಮ ಇಪಿಎಫ್ ಖಾತೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗುತ್ತದೆ.

ಇದನ್ನೂ ಓದಿ: Sonam Kapoor: ಸೂಪರ್​ ಹಾಟ್​ ಲುಕ್ಸ್​ನಲ್ಲಿ ಸೋನಮ್​ ಕಪೂರ್​..!

ಇಸಿಆರ್ ಫೈಲಿಂಗ್ ಮಾನದಂಡ ಪ್ರಕ್ರಿಯೆಗಳ ನವೀಕರಣ

ಇನ್ನು, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ ) ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಫೈಲಿಂಗ್ ಮಾನದಂಡಗಳನ್ನು ಸಹ ನವೀಕರಣ ಮಾಡಿದೆ. ಉದ್ಯೋಗದಾತರು ತಮ್ಮ ಆಧಾರ್ ಅನ್ನು ಪಿಎಫ್ ಯುಎಎನ್‌ಗೆ ಲಿಂಕ್ ಮಾಡಿದ ಉದ್ಯೋಗಿಗಳಿಗೆ ಮಾತ್ರ ಇಸಿಆರ್ ಸಲ್ಲಿಸಬಹುದು ಎಂದು ಇಪಿಎಫ್‌ಒ ತಿಳಿಸಿದೆ. ಆಧಾರ್‌ ಸೀಡಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಉದ್ಯೋಗದಾತರು ಆಧಾರ್ ಅಲ್ಲದ ಯುಎಎನ್‌ಗೆ ಪ್ರತ್ಯೇಕ ಇಸಿಆರ್ ಸಲ್ಲಿಸಬಹುದು ಎಂದು ನಿಯಂತ್ರಕ ಸಂಸ್ಥೆ ತಿಳಿಸಿದೆ.

ಹೊಸ ಸಾಮಾಜಿಕ ಭದ್ರತಾ ಸಂಹಿತೆ 2002 ರ ಅಡಿಯಲ್ಲಿ, ಈ ಸಂಹಿತೆಯಡಿ ಪ್ರಯೋಜನಗಳನ್ನು ಬಯಸುವ ನೌಕರರನ್ನು ಗುರುತಿಸುವ ಉದ್ದೇಶದಿಂದ ಆಧಾರ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ. ಸಾಮಾಜಿಕ ಭದ್ರತಾ ಸಂಹಿತೆ, 2002 ಇನ್ನೂ ಜಾರಿಗೆ ಬಂದಿಲ್ಲವಾದರೂ, ಆಧಾರ್ ಒದಗಿಸುವ ಅಗತ್ಯವನ್ನು ಕಡ್ಡಾಯಗೊಳಿಸುವ ಈ ನಿರ್ದಿಷ್ಟ ನಿಬಂಧನೆಯನ್ನು ಸರ್ಕಾರ ತಿಳಿಸಿದೆ ಎಂದು ಅನಂತ್‌ ಲಾ ಪಾಲುದಾರ ಸುಬೋಧ್ ಹೇಳಿದ್ದಾರೆ.

ಇದನ್ನೂ ಓದಿ: Nusrat Jahan: ನುಸ್ರತ್ ಜಹಾನ್​​ರಂತೆ ವಿದೇಶಕ್ಕೆ ಹೋಗಿ ವಿವಾಹವಾದ ಬಾಲಿವುಡ್​ ಸೆಲೆಬ್ರಿಟಿಗಳು ಇವರೇ..!

ಸಾಮಾಜಿಕ ಭದ್ರತಾ ಸಂಹಿತೆ, 2002 ಅನ್ನು ಜಾರಿಗೊಳಿಸಿದ ನಂತರ ಅದನ್ನು ಸುಗಮವಾಗಿ ಅನುಷ್ಠಾನಗೊಳಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಯುಎಎನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿರುವುದು ನೌಕರನು ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುವುದನ್ನು ತಡೆಯುವುದಿಲ್ಲ. ಆದರೂ, ಹೊಸ ಸಂಹಿತೆಯ ಅಡಿಯಲ್ಲಿರುವ ಪ್ರಯೋಜನಗಳನ್ನು ಯುಎಎನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದಕ್ಕೆ ಒಳಪಟ್ಟಿರುತ್ತದೆ ಎಂದು ಸುಬೋಧ್ ತಿಳಿಸಿದ್ದಾರೆ.




Published by: Anitha E
First published: June 11, 2021, 11:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories