ಮನೆಯಿಂದ ನಾವು ಹೊರಹೋಗಲು ಗಾಡಿ(Vehicle) ತೆಗೆಯುವ ಮುನ್ನ, ಎಲ್ಲ ದಾಖಲೆಗಳು(Documents) ಅಗತ್ಯವಾಗಿ ಇದೆಯ ಎಂದು ಪರೀಕ್ಷೆ ಮಾಡಿಕೊಳ್ಳುತ್ತೇವೆ. ಅದ್ರಲ್ಲೂ ಗಾಡಿ ಡ್ರೈವಿಂಗ್ ಲೈಸೆನ್ಸ್ (driving License )ಇದ್ಯಾ ಅಂತ ಪದೇಪದೇ ಚೆಕ್ ಮಾಡಿಕೊಳ್ಳುತ್ತೇವೆ.ಇಲ್ಲದಿದ್ದರೆ ಸುಲಭವಾಗಿ ಪೊಲೀಸರ ಕೈಗೆ ಸಿಕ್ಕಿ ದಂಡ ಕಟ್ಟುವ ಸಾಧ್ಯತೆ ಇರುತ್ತದೆ..ಹೀಗಾಗಿ ಆಧಾರ್ ಕಾರ್ಡ್, (Aadhar)ಪ್ಯಾನ್ ಕಾರ್ಡ್ನಂತೆ(Pan) ಡ್ರೈವಿಂಗ್ ಲೈಸೆನ್ಸ್ ಕೂಡ ಒಂದು ರೀತಿಯಲ್ಲಿ ಅಗತ್ಯ ದಾಖಲೆಯಾಗಿರುವ ಡ್ರೈವಿಂಗ್ ಲೈಸೆನ್ಸ್ ದ್ವಿಚಕ್ರ ವಾಹನ ಅಥವಾ ಫೋರ್ ವೀಲರ್ ಚಾಲನೆ ಮಾಡುವಾಗ ಬಹಳ ಅತ್ಯಗತ್ಯ.. ಆದರೆ ಅಚಾನಕ್ಕಾಗಿ ಡ್ರೈವಿಂಗ್ ಲೈಸೆನ್ಸ್ ಕಳೆದುಹೋಗುವ ಅಥವಾ ಹಾಳಾಗುವ ಸಾಧ್ಯತೆ ಇರುತ್ತದೆ.. ಇಂತಹ ಸಂದರ್ಭದಲ್ಲಿ ಡ್ರೈವಿಂಗ್ ಲೈಸೆನ್ಸ್ ನಕಲಿ ಪ್ರತಿಗಳನ್ನು ಇಟ್ಟುಕೊಂಡು ಬೇಕಾಗಿರುತ್ತದೆ. ಇಲ್ದಿದ್ರೆ ಏನಪ್ಪಾ ಮಾಡೋದು ಅನ್ನೋ ಚಿಂತೆ ನಿಮ್ಮನ್ನು ಕಾಡ್ತಾ ಇದ್ರೆ ಅದಕ್ಕೆ ಪರಿಹಾರ ಇಲ್ಲಿದೆ.
ಲೈಸೆನ್ಸ್ ಕಳೆದು ಹೋದ ತಕ್ಷಣ ಸ್ಥಳೀಯ ಠಾಣೆಯಲ್ಲಿ ದೂರು ನೀಡಿ
ನಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದು ಹೋದ ತಕ್ಷಣ ನಾವು ಮಾಡಬೇಕಾದ ಮೊದಲ ಕೆಲಸ ಅಂದ್ರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಲೈಸೆನ್ಸ್ ಕಳೆದು ಹೋಗಿರುವ ಬಗ್ಗೆ ದೂರು ನೀಡುವುದು.. ಹೀಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ ಪ್ರತಿಯ ವರದಿ ನಕಲಿ ಚಾಲನಾ ಪರವಾನಿಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆ ಇದಾಗಿದೆ..
ಆನ್ಲೈನ್ ಮೂಲಕ ಪಡೆಯಬಹುದು ನಕಲಿ ಡ್ರೈವಿಂಗ್ ಲೈಸೆನ್ಸ್
ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ದಾಖಲೆಯನ್ನು ಕಳೆದುಕೊಂಡಿದ್ದರೆ ಹಾಗೂ ನಿಮ್ಮ ಡ್ರೈವಿಂಗ್ ಲೈಸೆಸ್ಸ್ನ ಯಾವುದೇ ನಕಲು ಪ್ರತಿಗಳನ್ನು ಹೊಂದಿಲ್ಲದಿದ್ದರೆ ಚಿಂತಿಸಬೇಡಿ. ಏಕೆಂದರೆ, ಇದೀಗ ಆನ್ಲೈನಿನಲ್ಲೇ ಓರಿಜಿನಲ್ ಡಿಎಲ್ ಕಳೆದು ಹೋದರೇ ಅಥವಾ ಹಾಳಾಗಿದ್ದರೆ ನಕಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಧ್ಯವಿದೆ. ಒಂದು ವೇಳೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಹರಿದು ಹೋಗಿದ್ದರೇ ಅಥವಾ ಹಾಳಾಗಿದ್ದರೇ, ಇಂತಹ ಸಂದರ್ಭದಲ್ಲಿ ನಕಲಿ ಡಿಎಲ್ ಪಡೆಯಲು, ಅರ್ಜಿ ಜೊತೆಗೆ ಓರಿಜಿನಲ್ ಡಿಎಲ್ ಅನ್ನು ಸಲ್ಲಿಸಬೇಕಾಗುತ್ತದೆ. ಈ ವಿಷಯಗಳನ್ನು ತಿಳಿದು ನೀವು ಆನ್ಲೈನ್ ಮೂಲಕ ನಕಲಿ DL ಪಡೆಯಲು ಅರ್ಜಿ ಸಲ್ಲಿಸಲು ಈ ಕ್ರಮಗಳನ್ನು ಪಾಲಿಸಬೇಕು.
ನಕಲಿ ಡಿಎಲ್ ಅರ್ಜಿಸಲ್ಲಿಸಲು ಈ ಕ್ರಮಗಳನ್ನು ಅನುಸರಿಸಿ
*ಮೊದಲು ರಸ್ತೆ ಸಾರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆಹೋಗಿhttps://parivahan.gov.in/parivahan/ ಭೇಟಿ ನೀಡ ಬೇಕು
*ಬಳಿಕ ನಾನು ಯಾವ ರಾಜ್ಯದಲ್ಲಿ ಡ್ರೈವಿಂಗ್ ಲೈಸನ್ಸ್ ಅಪ್ಲೈ ಮಾಡುತ್ತಿದ್ದೇವೆ ಎನ್ನುವುದನ್ನು ಡ್ರಾಪ್ ಮೆನುವಿನಲ್ಲಿ ಸೆಲೆಕ್ಟ್ ಮಾಡಿಕೊಳ್ಳಬೇಕು. ಕರ್ನಾಟಕ ಎಂದು ಸೆಲೆಕ್ಟ್ ಮಾಡಿಕೊಳ್ಳಬೇಕು
*ಮುಂದಿನ ವಿಂಡೋದಲ್ಲಿ, ಸರ್ವಿಸ್ ಆನ್ ಡ್ರೈವಿಂಗ್ ಲೈಸೆನ್ಸ್ ಆಯ್ಕೆಯನ್ನು ಆಯ್ಕೆ ಮಾಡಿದ ನಂತರ ದಯವಿಟ್ಟು ಆನ್ಲೈನ್ನಲ್ಲಿ ಅನ್ವಯಿಸು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ, ಪರದೆಯಲ್ಲಿ ಕಾಣುವ ಎಲ್ಲಾ ವಿವರಗಳನ್ನು ಬೂದಿ ಮತ್ತು ಮುಂದಿನ ಪರದೆಯನ್ನ ಪಡೆಯಲು ಮುಂದುವರಿಸಿ ಎಂಬ ಬಟನ್ ಕ್ಲಿಕ್ ಮಾಡಬೇಕು
ಇದನ್ನೂ ಓದಿ :ನೀವು ಅನುಭವಿ ಚಾಲಕರೇ ಅಥವಾ ಆರಂಭಿಕರೇ ಎಂದು ತಿಳಿಯುವುದು ಹೀಗೆ
* ಮುಂದುವರಿಸಿ ಬಟನ್ ಕ್ಲಿಕ್ ಮಾಡಿದ ನಂತರ ಅಲ್ಲಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ನಂತರ LLD ಫಾರ್ಮ್ ಭರ್ತಿ ಮಾಡಬೇಕು
*ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ನಿಮ್ಮ ಪ್ರಿಂಟ್ ಔಟ್ ತೆಗೆದುಕೊಂಡು ಅದನ್ನು ಇರಿಸಿಕೊಳ್ಳ ಬೇಕು
* ಬಳಿಕನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿದ ಬಳಿಕ ಈ ಫಾರ್ಮ್ ಅನ್ನು RTO ಕಚೇರಿಗೆ ಹೋಗಿ ಸಲ್ಲಿಸಬೇಕು.
*RTO ಕಚೇರಿಯಲ್ಲಿ ಸೂಕ್ತವಾದ ದಾಖಲೆಗಳು ಹಾಗೂ ಮೊದಲ ಜೊತೆಗೆ ಅಧಿಕಾರಿಗಳು ನೀಡಿದ ಸಲಹೆಯನ್ನು ಪಾಲಿಸಿ ನಕಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಕೆ ಮಾಡಬೇಕು.
ಇದನ್ನೂ ಓದಿ :RTOದಲ್ಲಿ ಪರೀಕ್ಷೆ ನೀಡದೆ ಹೀಗೂ ಚಾಲನಾ ಪರವಾನಗಿ ಪಡೆಯಬಹುದು! ಇನ್ಮುಂದೆ ಸುಲಭವಾಗಿ ಸಿಗತ್ತೆ ಡ್ರೈವಿಂಗ್ ಲೈಸನ್ಸ್!
*ಈ ಪ್ರಕ್ರಿಯೆ ಮುಗಿದ 30 ದಿನಗಳ ನಂತರ ನೀವು ನಕಲು DL ಅನ್ನು ಪಡೆಯುತ್ತೀರಿ.
ನಕಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅಗತ್ಯವಿರುವ ದಾಖಲೆಗಳು
*ಪೊಲೀಸ್ ಪ್ರಮಾಣಪತ್ರ (ಕಳ್ಳತನದ ಸಂದರ್ಭದಲ್ಲಿ)
*ಆನ್ಲೈನ್ ಅರ್ಜಿ ನಮೂನೆಗಳಿಗೆ ಲಿಂಕ್: ಅರ್ಜಿ ನಮೂನೆ
*ಫಾರ್ಮ್ LLD ನಲ್ಲಿ ಅರ್ಜಿ
*ಚಾಲನಾ ಪರವಾನಗಿಯ ವಿವರಗಳು
*ಆಧಾರ್ ಕಾರ್ಡ್
*ಪಾಸ್ಪೋರ್ಟ್ ಗಾತ್ರದ ಫೋಟೋಗಳು - 2 ಪ್ರತಿಗಳು
*ಡ್ರೈವಿಂಗ್ ಲೈಸೆನ್ಸ್ ತುಂಡಾದರೆ, ಹರಿದ ಅಥವಾ ಹಾನಿಗೊಳಗಾದ ಸಂದರ್ಭದಲ್ಲಿ ಮಾತ್ರ ಒರಿಜಿನಲ್ ಡ್ರೈವಿಂಗ್ ಲೈಸೆನ್ಸ್ ಪ್ರತಿ ಒಪ್ಪಿಸಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ