ಕೊರೋನಾ ವೈರಸ್ ಬಂದ ನಂತರ ಎಲ್ಲರ ಜೀವನಶೈಲಿಯೇ ಬದಲಾಗಿಬಿಟ್ಟಿದೆ. ನಗರ ಭಾಗದಲ್ಲಿ ಅನೇಕರು ಹೋಟೆಲ್ಗೆ ತೆರಳುವುದನ್ನು ಬಿಟ್ಟು ಮನೆಯಲ್ಲೇ ಅಡುಗೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಇನ್ನೂ ಕೆಲವರು ಮನೆಯಲ್ಲೇ ತರಕಾರಿ ಬೆಳೆಯಲು ಆರಂಭಿಸಿದ್ದಾರೆ. ನಗರ ಭಾಗದಲ್ಲಿ ತರಕಾರಿ ಬೆಳೆಯೋದು ಹೇಗೆ ಎನ್ನುವ ಪ್ರಶ್ನೆ ನಿಮ್ಮದೇ? ಅದಕ್ಕೆ ಇಲ್ಲಿದೆ ಉತ್ತರ.
ತರಕಾರಿ ಬೆಳೆಯಲು ವಿಶಾಲವಾದ ಜಾಗಬೇಕು. ಅದು ನಗರ ಭಾಗದಲ್ಲಿ ಸಾಧ್ಯವೇ ಇಲ್ಲ. ಅದಕೇನಿದ್ದರೂ ಹಳ್ಳಿಯೇ ಆಗಬೇಕು ಎನ್ನುವುದು ಅನೇಕರ ನಂಬಿಕೆ. ಆದರೆ, ಕಾಲ ಮೊದಲಿನಂತಿಲ್ಲ. ಕೊರೋನಾ ಬಂದ ನಂತರವೂ ಜನರು ಸಾಕಷ್ಟು ಬದಲಾಗಿದ್ದಾರೆ. ಬೆಂಗಳೂರಿನಲ್ಲೇ ಖಾಲಿ ಸೈಟ್ನಲ್ಲಿ ತರಕಾರಿ ಬೆಳೆದು ಯಶಸ್ಸು ಕಂಡ ಸಾಕಷ್ಟು ಜನರಿದ್ದಾರೆ. ಇನ್ನು, ಮನೆಯಲ್ಲಿ ತರಕಾರಿ ಬೆಳೆಯೋದು ಹೇಗೆ ಎಂಬುದಕ್ಕೆ ಇಲ್ಲಿವೆ ಕೆಲವು ಟಿಪ್ಸ್.
ನಗರ ಕೃಷಿ ಅನ್ನೋದು ಇತ್ತೀಚೆಗೆ ತುಂಬಾನೇ ಖ್ಯಾತಿ ಪಡೆದುಕೊಳ್ಳುತ್ತಿದೆ. ನಗರ ಭಾಗದಲ್ಲಿ ತರಕಾರಿ ಬೆಳೆಯಬೇಕು ಎಂದರೆ ಅಲ್ಲಿ ಜಾಗ ತುಂಬಾನೇ ಮುಖ್ಯವಾಗುತ್ತದೆ. ಮನೆಯ ಎದುರುಗಡೆಯಲ್ಲಿರುವ ಚಿಕ್ಕ ಜಾಗದಲ್ಲಿ ನೀವು ಕೃಷಿ ಮಾಡಬಹುದು. ಇಲ್ಲವೇ ಟೆರೇಸ್ ಮೇಲೆ ಸಿಗುವ ವಿಶಾಲ ಜಾಗದಲ್ಲಿ ನೀವು ಕೃಷಿ ಮಾಡಬಹುದಾಗಿದೆ.
ಟೊಮ್ಯಾಟೋ, ಮೆಣಸು, ಸೊಪ್ಪುಗಳನ್ನು ನೀವು ಪಾಟ್ನಲ್ಲಿ ಬೆಳೆಸಬಹುದು. ಟೆರೇಸ್ ಮೇಲೆ ಇವುಗಳು ಉತ್ತಮವಾಗಿ ಬೆಳೆಯುತ್ತವೆ. ಇದಲ್ಲದೆ, ಬಿಟ್ರೋಟ್, ಬೀನ್ಸ್, ಕ್ಯಾರೇಟ್ ಅನ್ನು ಕೂಡ ಟೆರೇಸ್ನಲ್ಲಿ ಬೆಳೆಯುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ