Helmet: ಹೆಲ್ಮೆಟ್​ ಆಯ್ಕೆ ಮಾಡುವಾಗ ಈ ವಿಷಯಗಳು ನೆನಪಿರಲಿ; ಯಾವ ಹೆಲ್ಮೆಟ್​ ಸುರಕ್ಷಿತ? ಇಲ್ಲಿದೆ ಮಾಹಿತಿ

ಸಾಮಾನ್ಯವಾಗಿ ಡಾಟ್ ಮತ್ತು ECE22,05 ಎರಡೂ ಪ್ರಮಾಣೀಕರಣವನ್ನು ಹೊಂದಿರುವ ಹೆಲ್ಮೆಟ್‌ಗಳು, ಒಂದು ಪ್ರಮಾಣೀಕರಣವನ್ನು ಹೊಂದಿರುವ ಹೆಲ್ಮೆಟ್‌ಗಿಂತ ಸುರಕ್ಷಿತವೆಂದು ಪರಿಗಣಿಸಲಾಗಿದೆ.

ಹೆಲ್ಮೆಟ್

ಹೆಲ್ಮೆಟ್

  • Share this:
ಹೆಲ್ಮೆಟ್ ಧರಿಸಿದ್ದರೆ, ರಾಷ್ಟ್ರೀಯ ಪ್ರಶಸ್ತಿ ವಿಜೇತ, ನಟ ಸಂಚಾರಿ ವಿಜಯ್ ಪ್ರಾಣ ಉಳಿಯುತ್ತಿತ್ತು ಎನ್ನುವ ಮಾತುಗಳು ಈಗ ಎಲ್ಲೆಡೆ ಮಾರ್ಧನಿಸುತ್ತಿದೆ. ಆದರೆ, ಸಾಕಷ್ಟು ಜನರು ಹೆಲ್ಮೆಟ್ ಕೇವಲ ಪೊಲೀಸರಿಗಾಗಿ ಎನ್ನುವ ಮನೋಭಾವವನ್ನು ಹೊಂದಿದ್ದಾರೆ. ಅದಕ್ಕಾಗಿ ಯಾವುದೋ ರೀತಿಯ ಹೆಲ್ಮೆಟ್ ಧರಿಸುತ್ತಾರೆ. ಕೇವಲ ದಂಡದಿಂದ ಬಚಾವ್ ಆಗಲು ಖರೀದಿ ಮಾಡಲಾಗುವ ಅಗ್ಗದ ಬೆಲೆಯ ಹೆಲ್ಮೆಟ್ ಬಳಕೆಗೂ ಮುನ್ನ ಎಚ್ಚರವಹಿಸಿ. ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಹೆಲ್ಮೆಟ್‌ಗಳು ಲಭ್ಯವಿರುತ್ತದೆ. ಆದರೆ ಹೆಲ್ಮೆಟ್ ಖರೀದಿ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ಗುಣಮಟ್ಟದ ಉತ್ಪನ್ನ ಖರೀದಿಸಿದರೆ ಒಳಿತು. ಬೈಕ್ ಆಯ್ಕೆ ಮಾಡುವುದಕ್ಕಿಂತ ಸರಿಯಾದ ಹಾಗೂ ಸುರಕ್ಷಿತವಾದ ಹೆಲ್ಮೆಟ್ ಆಯ್ಕೆ ಬಹಳ ಮುಖ್ಯ. ಒಂದು ವೇಳೆ ನಾವು ಹೆಲ್ಮೆಟ್ ಆಯ್ಕೆಯಲ್ಲಿ ಎಡವಿದರೆ, ನಮ್ಮ ಪ್ರಾಣಕ್ಕೆ ಕುತ್ತು.

ಹೆಲ್ಮೆಟ್ ಆಯ್ಕೆಯ ವೇಳೆ ಈ ಮೂರು ಅಂಶಗಳ ಬಗ್ಗೆ ಗಮನಹರಿಸಿ
-ಸುರಕ್ಷತಾ ರೇಟಿಂಗ್‌ಗಳು ಮತ್ತು ಪ್ರಮಾಣೀಕರಣ
-ತಲೆಗೆ ಸರಿಹೊಂದುವ ಹೆಲ್ಮೆಟ್
- ಹೆಲ್ಮೆಟ್ ವಿಧಗಳು

1. ಸುರಕ್ಷತಾ ರೇಟಿಂಗ್‌ಗಳು ಮತ್ತು ಪ್ರಮಾಣೀಕರಣ

ಸುರಕ್ಷತೆ ರೇಟಿಂಗ್ ಮತ್ತು ಪ್ರಮಾಣೀಕರಣದಲ್ಲಿ ಎರಡು ಪ್ರಮುಖ ವಿಧಗಳಿವೆ. ಒಂದು ಅಮೆರಿಕದಲ್ಲಿ ಅನುಸರಿಸುವ ಡಾಟ್ (DOT) ಪ್ರಮಾಣೀಕೃತ. ಮತ್ತೊಂದು ಯುರೋಪಿನ್‌ನ ECE22,05 ಗುಣಮಟ್ಟ ಆಧರಿಸಿದ ನಮ್ಮದೇ ಆದ ISI:4151 ಪ್ರಮಾಣೀಕೃತವಾಗಿದೆ.

ಇದನ್ನೂ ಓದಿ:Covid Vaccine Registration: ಕೊರೋನಾ ಲಸಿಕೆ ಪಡೆಯುವುದು ಈಗ ಇನ್ನೂ ಸುಲಭ; ಆನ್​ಲೈನ್​ನಲ್ಲಿ​ ರಿಜಿಸ್ಟ್ರೇಷನ್ ಕಡ್ಡಾಯವಲ್ಲ

ಸಾಮಾನ್ಯವಾಗಿ ಡಾಟ್ ಮತ್ತು ECE22,05 ಎರಡೂ ಪ್ರಮಾಣೀಕರಣವನ್ನು ಹೊಂದಿರುವ ಹೆಲ್ಮೆಟ್‌ಗಳು, ಒಂದು ಪ್ರಮಾಣೀಕರಣವನ್ನು ಹೊಂದಿರುವ ಹೆಲ್ಮೆಟ್‌ಗಿಂತ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಹೆಲ್ಮೆಟ್‌ ತಯಾರಿಸುವ ಕಂಪನಿಗಳು ಸ್ವಯಂಕೃತವಾಗಿ ಪ್ರಮಾಣೀಕರಣವನ್ನು ಬಳಸುವುದರಿಂದ ಇಲ್ಲಿ ನಾವು ಪ್ರಮುಖವಾಗಿ ತಯಾರಿಕ ಕಂಪನಿಗಳ ಪ್ರಖ್ಯಾತಿಯನ್ನು ಗಮನಿಸಬೇಕಾಗುತ್ತದೆ.

ಎರಡನೇ ವಿಧದ ರೇಟಿಂಗ್ ಅನ್ನು ಎಲ್ಲಾ ರೀತಿಯ ಪರೀಕ್ಷೆ ನಡೆಸಿದ ನಂತರ ಥರ್ಡ್ ಪಾರ್ಟಿ ಸಂಸ್ಥೆಗಳು ನೀಡುವಂತಹದ್ದು. ಯುಎಸ್‌ಎಯ SNELL ಮತ್ತು ಬ್ರಿಟನ್‌ನ SHARP ಸಂಸ್ಥೆಗಳು ಇಂತಹ ರೇಟಿಂಗ್ ಅನ್ನು ನೀಡುತ್ತವೆ. ಈ ಎರಡೂ ಸಂಸ್ಥೆಗಳು ಹೆಲ್ಮೆಟ್‌ಗಳ ದತ್ತಾಂಶ ಹಾಗೂ ಪರೀಕ್ಷೆಗಳಿಂದ ಬಂದಂತಹ ರೇಟಿಂಗ್ ಅನ್ನು ನಿರ್ವಹಿಸುತ್ತವೆ. ನಂತರ ಉತ್ಪಾದಕ ಕಂಪನಿಗಳು ಈ ಸಂಸ್ಥೆಗಳಿಗೆ ಗೌರವಧನವನ್ನು ನೀಡಿ ಪ್ರಮಾಣೀಕರಣವನ್ನು ಬಳಸಿಕೊಳ್ಳುತ್ತವೆ. ಇದಕ್ಕೆ ಪ್ರಖ್ಯಾತಿ ಹೊಂದಿರುವ ಹೆಲ್ಮೆಟ್‌ಗಳೇ ಉದಾಹರಣೆಯಾಗಿದೆ. ಇದು ಡಾಟ್ ಮತ್ತು ಇಸಿಇ ಪ್ರಮಾಣೀಕರಣ ಮತ್ತು SNELL 2010 M ಪ್ರಮಾಣೀಕರಣವನ್ನು ಹೊಂದಿರುತ್ತದೆ.

2. ತಲೆಗೆ ಸರಿಹೊಂದುವ ಹೆಲ್ಮೆಟ್
ಮೋಟಾರ್‌ ಸೈಕಲ್ ಸುರಕ್ಷತೆಗೆ ತಕ್ಕ ಹೆಲ್ಮೆಟ್‌ಗಳ ತಯಾರಿಕೆಯಲ್ಲಿ ಒಂದಾದ ಯುರೋಪ್‌ನ ಬೆಲ್ ಹೆಲ್ಮಟ್ ಕಂಪನಿಯ ಪ್ರಕಾರ, ಫಿಟ್ ಎನಿಸುವ ಹೆಲ್ಮೆಟ್ ನಿರ್ಧರಿಸುವಲ್ಲಿ ಐದು ಪ್ರಮುಖ ಹಂತಗಳಿವೆ. ಅವುಗಳೆಂದರೆ,

- ಸುತ್ತಳತೆ: ಹೆಲ್ಮೆಟ್ ಖರೀದಿಸುವಾಗ ನೀವು ಯಾವತ್ತೂ ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಅಂಶ ಅಂದರೆ ಗಾತ್ರ ಮತ್ತು ಅದು ನಿಮ್ಮ ತಲೆಗೆ ಫಿಟ್ ಆಗುತ್ತದೆಯಾ? ಅನ್ನುವುದು. ನಿಮ್ಮ ತಲೆಯ ಗಾತ್ರಕ್ಕಿಂತ ದೊಡ್ಡದಾದ ಅಥವಾ ತೀರಾ ಕಷ್ಟದಲ್ಲಿ ತಲೆ ತುರುಕಿಸಬಹುದಾದ ಗಾತ್ರದ ಹೆಲ್ಮೆಟ್ ಬೇಡ. ಆದಷ್ಟು ಹೆಲ್ಮೆಟ್‌ಗಳು ಆರಾಮದಾಯಕವಾಗಿರಲಿ.

ಇದನ್ನೂ ಓದಿ:Morning Digest: ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆ; ಚಿನ್ನದ ಬೆಲೆಯಲ್ಲಿ ಕುಸಿತ; ಇಂದಿನ ಪ್ರಮುಖ ಸುದ್ದಿಗಳಿವು

- ಧರಿಸಿ ನೋಡುವುದು: ಅಳತೆ ನಿರ್ಧರಿಸಿದ ನಂತರ, ಹೆಲ್ಮೆಟ್ ಅನ್ನು ಒಮ್ಮೆ ಧರಿಸಿ ನೋಡಿ ನಿಮಗೆ ಸರಿಹೊಂದುತ್ತದೆಯೇ ಎಂದು ಪರೀಕ್ಷಿಸಿಕೊಳ್ಳಿ. ನಿಮ್ಮ ತಲೆಗೆ ತಾಕದೆಯೇ ಸುಲಭವಾಗಿ ಹಾಕಿಕೊಳ್ಳಲು ಸಾಧ್ಯವಾಗುತ್ತಿದ್ದರೆ, ಅದು ನಿಮ್ಮ ತಲೆಗೆ ದೊಡ್ಡದಾಗುತ್ತದೆ. ತಲೆಯ ಬಳಿ ಹಿಡಿದು ಹೆಲ್ಮೆಟ್ ಕೆಳಗಿಳಿದರೆ ಅದು ನಿಮಗೆ ಸರಿಯಾದ ಆಯ್ಕೆಯಾಗಿರುತ್ತದೆ.

- ಮೇಲೆ-ಕೆಳಗೆ ಹಾಗೂ ಪಕ್ಕ ಚಲನೆಯ ಪರೀಕ್ಷೆ : ಹೆಲ್ಮೆಟ್ ಧರಿಸಿದ ನಂತರ ಮೇಲೆ-ಕೆಳಕೆ, ಅಕ್ಕ-ಪಕ್ಕ ತಲೆಯನ್ನು ತಿರುಗಿಸಿ ಚಲನೆಯ ಪರೀಕ್ಷೆಯನ್ನು ಮಾಡಿ. ಹೀಗೆ ತಿರುಗಿದಾಗ ಹೆಲ್ಮೆಟ್ ಒಳಗಿನ ಕೆನ್ನೆಯ ಪ್ಯಾಡ್ ನಿಮ್ಮ ಕೆನ್ನೆಗೆ ತಗುಲುತ್ತಿದೆಯೇ, ಒತ್ತುತ್ತಿದೆಯೇ ಎನ್ನುವುದನ್ನು ತಿಳಿಯಿರಿ. ಜೊತೆಗೆ ಕುತ್ತಿಗೆ ಸುತ್ತಲು ಅದು ಸರಿಯಾಗಿ ಕೂರುತ್ತಿದೆಯೇ ಎನ್ನುವುನ್ನು ಗಮನಿಸಿ.

- ಧಾರಣ ಪರೀಕ್ಷೆ: ಹೆಲ್ಮೆಟ್‌ನ ಕುತ್ತಿಗೆ ಪಟ್ಟಿಯನ್ನು ಬಿಗಿಯಾಗಿ ಹಾಕಿಕೊಂಡು ಹೆಲ್ಮೆಟ್ ತೆಗೆಯಲು ಪ್ರಯತ್ನಿಸಿ, ಅದು ಸುಲಭವಾಗಿ ಹೊರಬಂದರೆ, ಖಂಡಿತ ಆ ಹೆಲ್ಮೆಟ್ ದೊಡ್ಡದಾಗಿರುತ್ತದೆ.

- ಒತ್ತಡ ಬಿಂದುಗಳ ಪರೀಕ್ಷೆ : ಹೆಲ್ಮೆಟ್ ತೆಗೆದ ತಕ್ಷಣ, ಹಣೆಯ ಮತ್ತು ಕೆನ್ನೆಗಳ ಚರ್ಮದ ಬಣ್ಣವನ್ನು ಗಮನಿಸಿ. ಚರ್ಮ ಕೆಂಪಾಗಿದ್ದರೆ ಅದು ಒತ್ತಡ ಬಿಂದುವನ್ನು ಸೂಚಿಸುತ್ತದೆ. ಇವುಗಳನ್ನು ಸರಿಯಾಗಿ ಗಮನಿಸಲಿಲ್ಲದ್ದರೆ ಹೆಲ್ಮೆಟ್ ಧರಿಸಿದ ನಂತರ ಇವುಗಳು ತಲೆನೋವು ಉಂಟುಮಾಡುತ್ತದೆ.

3.ಹೆಲ್ಮೆಟ್ ವಿಧಗಳು
ಹೆಲ್ಮೆಟ್‌ಗಳನ್ನು ವರ್ಗೀಕರಿಸುವ ಅತ್ಯಂತ ಮೂಲ ವಿಧಾನವೆಂದರೆ ಆಕಾರ - ತೆರೆದ ಮುಖದ ಹೆಲ್ಮೆಟ್ ನಲ್ಲಿ ಎರಡು ಪ್ರಕಾರಗಳು - ಅರ್ಧ ಹೆಲ್ಮೆಟ್ ಮತ್ತು ¾ ಹೆಲ್ಮೆಟ್. ಮಾಡ್ಯುಲರ್ ಹೆಲ್ಮೆಟ್, ಇದರಲ್ಲಿ ಗಲ್ಲದ ಕಾವಲು ಪ್ರದೇಶವು ಸಾಮಾನ್ಯವಾಗಿ ತಿರುಗುತ್ತದೆ ಮತ್ತು ಪೂರ್ಣ ಮುಖದ ಹೆಲ್ಮೆಟ್ .
Published by:Latha CG
First published: