• Home
  • »
  • News
  • »
  • trend
  • »
  • PM Jan Dhan Account: ಜನಧನ್ ಖಾತೆಯ ಬ್ಯಾಲೆನ್ಸ್, ಸ್ಟೇಟಸ್ ನೋಡುವುದು ಹೇಗೆ..?

PM Jan Dhan Account: ಜನಧನ್ ಖಾತೆಯ ಬ್ಯಾಲೆನ್ಸ್, ಸ್ಟೇಟಸ್ ನೋಡುವುದು ಹೇಗೆ..?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಗ್ರಾಹಕರು ತಮ್ಮ ಖಾತೆಯ ಸ್ಟೇಟಸ್, ಬ್ಯಾಲೆನ್ಸ್ ಮಾಹಿತಿ ತಿಳಿಯಲು ಭಾರತದ ನ್ಯಾಷನಲ್ ಪೇಮೆಂಟ್‍ ಕಾರ್ಪರೇಷನ್ ಸ್ಥಾಪಿಸಿರುವ ಫೋನ್ ಸೇವೆಯ *99# ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು

  • Share this:

ಬ್ಯಾಂಕಿಂಗ್ ‍ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿರುವ ಪ್ರಧಾನ್ ಮಂತ್ರಿ ಜನಧನ್ ಯೋಜನೆಗೆ ಇನ್ನೇನು ಇದೇ ಬರುವ ಆಗಸ್ಟ್ 28 ಕ್ಕೆ ಏಳು ವರ್ಷ ತುಂಬಲಿದೆ. 2014 ರ ಆಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಸ್ವಾತಂತ್ರ್ಯದಿನದ ಭಾಷಣದಲ್ಲಿ ಈ ಯೋಜನೆಯನ್ನು ಘೋಷಿಸಿದ್ದರೂ, 13 ದಿನಗಳ ನಂತರ ಈ ಯೋಜನೆಗೆ ಪ್ರಧಾನಿ ಚಾಲನೆ ನೀಡಿದ್ದರು. 2021ರ ಜನವರಿ 14ರವರೆಗೆ 41.65 ಕೋಟಿ ಮಂದಿ ಜನಧನ್ ಯೋಜನೆಯಡಿ ಖಾತೆ ತೆರೆದಿದ್ದಾರೆ.


ಪ್ರಧಾನ ಮಂತ್ರಿ ಜನಧನ್ ಯೋಜನೆಯು (ಪಿಎಂಜೆಡಿವೈ) ದೇಶದ ಎಲ್ಲ ಭಾಗಗಳಲ್ಲಿ ಅನಕ್ಷರಸ್ಥ, ಬಡ ಜನರೂ ತಮ್ಮ ಸ್ವಂತ ಬ್ಯಾಂಕ್ ಖಾತೆ ಹೊಂದಿರುವ ಉದ್ದೇಶದಿಂದ ಅನುಷ್ಠಾನಕ್ಕೆ ಬಂದಿತ್ತು. ಅರ್ಹ ವ್ಯಕ್ತಿಗಳು ಬ್ಯಾಂಕುಗಳ ಅಥವಾ ಬ್ಯಾಂಕ್ ಮಿತ್ರದಂತಹ ನೆಟ್ವರ್ಕ್ನಲ್ಲಿ ಖಾತೆ ತೆರೆಯಬಹುದು. ಶೂನ್ಯ ಉಳಿತಾಯಕ್ಕೂ ಅವಕಾಶವಿದ್ದು, ಖಾತೆದಾರರು ಚೆಕ್ ಬುಕ್ ಇತ್ಯಾದಿ ಸೇವೆಗಳನ್ನು ಬಯಸಿದರೆ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಇಡಬೇಕಾಗುತ್ತದೆ.


ಆರಂಭದ ವರ್ಷಗಳಲ್ಲಿ ಶೂನ್ಯ ಮೊತ್ತವಿದ್ದ ಬ್ಯಾಂಕ್ ಖಾತೆಗಳ ಪ್ರಮಾಣ ದೊಡ್ಡ ಮಟ್ಟದಲ್ಲಿತ್ತು. ವರ್ಷಗಳು ಕಳೆದಂತೆ ಈ ಜನಧನ್ ಖಾತೆಗಳಲ್ಲಿ ಉಳಿತಾಯ ಮಾಡುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. 2015ರಲ್ಲಿ ಶೂನ್ಯ ಉಳಿತಾಯ ಖಾತೆಗಳ ಪ್ರಮಾಣ ಶೇ.58 ರಷ್ಟಿತ್ತು. ಆದರೆ 2021ರ ಜನವರಿಯಲ್ಲಿ ಈ ಪ್ರಮಾಣ ಶೇ.7.5ಕ್ಕೆ ಕುಸಿದಿದೆ.


ಇದನ್ನೂ ಓದಿ:Meghan and Harry: ಪ್ರಿನ್ಸ್​​ ಹ್ಯಾರಿ-ಮೇಘನ್ ಮಾರ್ಕೆಲ್​​ಗೆ ಮಗಳು ಹುಟ್ಟಿದ್ದಾಳೆ.. ಹೆಸರೇನು ಗೊತ್ತಾ?

ಜನಧನ್ ಖಾತೆ ಮಾಡಿದರೆ ಲಾಭವೇನು..?


ಯಾವುದೇ ಬ್ಯಾಂಕ್ ಗಳಲ್ಲಿ ಖಾತೆ ತೆರೆಯಲು ನಿರ್ದಿಷ್ಟ ಶುಲ್ಕ ಕೊಡಬೇಕು. ಜತೆಗೆ ಮಿನಿಮಂ ಬ್ಯಾಲೆನ್ಸ್ ಅಂದರೆ ಕನಿಷ್ಠ ಮೊತ್ತ ಖಾತೆಯಲ್ಲಿ ಇಟ್ಟುಕೊಳ್ಳಲು ಷರತ್ತು ವಿಧಿಸಲಾಗುತ್ತದೆ. ಆದರೆ ಜನಧನ್ ಖಾತೆಯಲ್ಲಿ ಹಾಗಿಲ್ಲ. ಖಾತೆ ತೆರೆಯುವುದೂ ಉಚಿತವಾಗಿ, ಖಾತೆಯಲ್ಲಿ ಒಂದು ರೂಪಾಯಿ ಇಲ್ಲದಿದ್ದರೂ ತೊಂದರೆ ಇಲ್ಲ.


ಜನಧನ್ ಖಾತೆ ಇರುವವರಿಗೆ ರುಪೇ ಡೆಬಿಟ್ ಕಾರ್ಡ್ ಕೊಡಲಾಗುತ್ತದೆ. ಇದನ್ನು ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಲು, ಆನ್ಲೈನ್ ಇಲ್ಲವೇ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಿದ ಬಳಿಕ ಈ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದು.


ಜನಧನ್ ಖಾತೆ ಇರುವವರಿಗೆ ಓವರ್ ಡ್ರಾಫ್ಟ್ ಸೌಲಭ್ಯ ಲಭ್ಯವಿದೆ. ಗರಿಷ್ಠ 10 ಸಾವಿರ ರೂ.ವರೆಗೂ ಓವರ್ ಡ್ರಾಫ್ಟ್ ಪಡೆಯಬಹುದು. ಇದಕ್ಕೆ ಷರತ್ತುಗಳಿವೆ. ಷರತ್ತು ಇಲ್ಲದೆ 2 ಸಾವಿರ ರೂ. ಓವರ್ ಡ್ರಾಫ್ಟ್ ಸಿಗುತ್ತದೆ. ಖಾತೆಯ ಹಣವನ್ನು ಸುಲಭವಾಗಿ ದೇಶದ ಯಾವುದೇ ಭಾಗಕ್ಕೂ ವರ್ಗಾಯಿಸಬಹುದು.


2018ರ ಆಗಸ್ಟ್ 28ರ ನಂತರ ಖಾತೆ ತೆರೆದವರಿಗೆ ಆಕಸ್ಮಿಕ ವಿಮೆ ಸೌಲಭ್ಯ ನೀಡಲಾಗಿದೆ. 2 ಲಕ್ಷ ರೂ.ವರೆಗೆ ಅಪಘಾತ ವಿಮೆ ಕವರೇಜ್ ಸಿಗುತ್ತದೆ. ಖಾತೆದಾರನ ಸಾವು ಸಂಭವಿಸಿದರೆ 30 ಸಾವಿರ ರೂ. ಜೀವ ವಿಮೆ ಸಿಗುತ್ತದೆ.


ಇದನ್ನೂ ಓದಿ:PM Narendra Modi: ಇಂದು ಸಂಜೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

ಸರಕಾರಿ ಯೋಜನೆಗಳ ಫಲಾನುಭವಿಗಳಾಗಿದ್ದರೆ, ಈ ಖಾತೆಗೆ ನೇರವಾಗಿ ಹಣವನ್ನು ಸರಕಾರ ಸಂದಾಯ ಮಾಡುತ್ತದೆ. ಕಚೇರಿಗಳಿಗೆ ಹಣಕ್ಕಾಗಿ ಓಡಾಡುವುದು, ಲಂಚ ನೀಡುವುದು ಇಂಥ ತಾಪತ್ರಯಗಳಿಂದ ಜನಧನ್ ಖಾತೆದಾರರಿಗೆ ಮುಕ್ತಿ ಸಿಕ್ಕಿದೆ.


ಉಳಿದಂತೆ ಎಲ್ಲ ಬ್ಯಾಂಕ್ ಗಳ ಖಾತೆಗಳ ರೀತಿಯಲ್ಲೇ ಉಳಿತಾಯಕ್ಕೆ ಬಡ್ಡಿ, ಮೊಬೈಲ್ ಇಲ್ಲವೇ ನೆಟ್ ಬ್ಯಾಂಕಿಂಗ್, ವಿಮೆ, ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.


ಸ್ಟೇಟಸ್, ಬ್ಯಾಲೆನ್ಸ್ ನೋಡುವುದು ಹೇಗೆ?


ದೇಶದೊಳಗೆ ಗ್ರಾಹಕರು ತಮ್ಮ ಖಾತೆಯ ಸ್ಟೇಟಸ್, ಬ್ಯಾಲೆನ್ಸ್ ಮಾಹಿತಿ ತಿಳಿಯಲು ಭಾರತದ ನ್ಯಾಷನಲ್ ಪೇಮೆಂಟ್‍ ಕಾರ್ಪರೇಷನ್ ಸ್ಥಾಪಿಸಿರುವ ಫೋನ್ ಸೇವೆಯ *99# ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಆದರೆ ತಮ್ಮ ಬ್ಯಾಂಕ್ ಖಾತೆಗೆ ಸಂಪರ್ಕಿಸಲು ನೋಂದಾಯಿಸಿದ ಸಂಖ್ಯೆಯಿಂದಲೇ ಕರೆ ಮಾಡಬೇಕು. ಷರತ್ತು ಏನೆಂದರೆ, ನಿಮ್ಮ ಬ್ಯಾಂಕ್ ‍ಖಾತೆ ಸಕ್ರಿಯವಾಗಿರಬೇಕು. ಹಾಗೂ ಜಿಎಸ್ಎಂ ಮೊಬೈಲ್ನಿಂದ ಮಾತ್ರ ಕರೆ ಮಾಡಬೇಕು. ಸಿಡಿಎಂಎ ಮೊಬೈಲ್ಗೆ ಈ ಸೇವೆ ಲಭ್ಯವಿಲ್ಲ.


ಕರೆ ಮಾಡಿದಾಗ ಸ್ವಾಗತ ಸಂದೇಶ ಬರುತ್ತದೆ. ಈಗ ನೀವು ನಿಮ್ಮ ಹೆಸರಿನ ಮೊದಲ ಮೂರು ಅಕ್ಷರ (ಬ್ಯಾಂಕ್ ಖಾತೆಯಲ್ಲಿ ಇರುವಂತೆ) ಅಥವಾ ನಿಮ್ಮ ಖಾತೆ ಇರುವ ಬ್ಯಾಂಕ್ನ ಐಎಫ್‍ಎಸ್‍ಸಿ ಕೋಡ್ ನ ಮೊದಲ ನಾಲ್ಕು ಅಕ್ಷರಗಳನ್ನು ಹೇಳಬೇಕು. ಕೇಳಿದ ವಿವರ ನೀಡಿದ ಬಳಿಕ ‘ಓಕೆ’ ಅನ್ನು ಒತ್ತಬೇಕು. ನಿಮಗೆ ಏನೇನು ಸೇವೆಗಳು ಲಭ್ಯವಿರುವುದೋ ಅದರ ಪಟ್ಟಿ ನಿಮಗೆ ಸಿಗುತ್ತದೆ. ಅದರಲ್ಲಿ 1 ಅನ್ನು ಒತ್ತಿದರೆ ನಿಮ್ಮ ಖಾತೆಯಲ್ಲಿ ಎಷ್ಟು ಮೊತ್ತ ಇದೆ ಎಂದು ವಿಚಾರಿಸಬಹುದು. 1 ಅನ್ನು ಒತ್ತಿದ ಬಳಿಕ “ಸಬ್ಮಿಟ್” ಅನ್ನು ಒತ್ತಿ. ಈಗ ನಿಮ್ಮ ಮೊಬೈಲ್ ತೆರೆಯಲ್ಲಿ ನಿಮ್ಮ ಖಾತೆಯ ಬ್ಯಾಲೆನ್ಸ್ ಎಷ್ಟಿದೆ ಎಂಬ ವಿವರ ಪ್ರತ್ಯಕ್ಷವಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜನಧನ ಖಾತೆಯನ್ನು ಹೊಂದಿರುವ ಗ್ರಾಹಕರು ತಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ಪರಿಶೀಲಿಸಲು ಸುಮ್ಮನೆ 18004253800 ಅಥವಾ 1800112211 ಸಂಖ್ಯೆಗೆ ಕರೆ ಮಾಡಿದರೆ ಸಾಕು. ಆದರೆ ತಮ್ಮ ಬ್ಯಾಂಕ್ ಖಾತೆಗೆ ಸಂಪರ್ಕಿಸಲು ನೋಂದಾಯಿಸಿದ ಸಂಖ್ಯೆಯಿಂದಲೇ ಕರೆ ಮಾಡುವುದು ಮುಖ್ಯ. ನೀವು ಕರೆ ಮಾಡಿದ ಬಳಿಕ ನಿಮಗೆ ನೀವು ಮಾಡಿರುವ ಕೊನೆಯ ಐದು ವ್ಯವಹಾರಗಳು, ನಿಮ್ಮ ಖಾತೆಯಲ್ಲಿರುವ ಉಳಿಕೆ ಹಣದ ಮಾಹಿತಿ ಲಭ್ಯವಾಗುತ್ತದೆ. ಈ ಎಲ್ಲ ಮಾಹಿತಿಗಳನ್ನು ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9223766666 ಗೆ ಕರೆ ಮಾಡಿಯೂ ಪಡೆದುಕೊಳ್ಳಬಹುದು.

Published by:Latha CG
First published: