Aadhaar Card: ಆಧಾರ್ ಕಾರ್ಡ್​ನಲ್ಲಿ ಇರುವ ನಿಮ್ಮ ಫೋಟೋ ಬದಲಿಸಬೇಕಾ? ಬಹಳ ಸುಲಭ, ಹೀಗೆ ಮಾಡಿ

Change your Photo on Aadhaar Card: ಐಡಿ ಪ್ರೂಫ್​ಗಳಲ್ಲಿ ಇದ್ದಿದ್ದರಲ್ಲಿ ಒಳ್ಳೆ ಫೋಟೋ ಕಾಣೋದು ಅಂದ್ರೆ ಅದು ಪಾಸ್​ಪೋರ್ಟ್ ಮಾತ್ರ ಅನ್ಸುತ್ತೆ. ಉಳಿದಂತೆ ಓಟರ್ ಐಡಿಯಲ್ಲಂತೂ ನಮ್ಮ ಮುಖ ಕಳ್ಳರ ಥರಾ ಕಾಣುತ್ತೆ ಅಂತ ಅನೇಕರು ಹೇಳ್ತಾರೆ. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅದಕ್ಕಿಂತ ಉತ್ತಮ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಆಧಾರ್ ಕಾರ್ಡ್ (Aadhaar Card) ಈಗಿನ ಭಾರತದಲ್ಲಿ ಅತ್ಯಗತ್ಯ ದಾಖಲೆ (document). ಫೋನ್ ರೀಚಾರ್ಜ್ ಇಂದ ಹಿಡಿದು ಬ್ಯಾಂಕ್ ಸಾಲದವರಗೆ, ಬಸ್ ಟಿಕೆಟ್ ಇಂದ ಕೋವಿಡ್ ಲಸಿಕೆ (Covid Vaccine) ತನಕ ಎಲ್ಲದಕ್ಕೂ ಆಧಾರ್ ಆಧಾರ ಬೇಕೇ ಬೇಕು. ಆದ್ರೆ ಅನೇಕ ಸರ್ಕಾರಿ ದಾಖಲೆಗಳ ರೀತಿಯಲ್ಲಿ ಆಧಾರ್ ಕಾರ್ಡುಗಳಲ್ಲೂ ನಾನಾ ತಪ್ಪುಗಳು (Mistakes in Aadhaar) ನಮೂದಾಗಿರುತ್ತವೆ. ಆ ತಪ್ಪುಗಳನ್ನು ಸರಿಪಡಿಸೋಕೆ ಜನ ಹತ್ತಾರು ಬಾರಿ ಸಂಬಂಧಪಟ್ಟ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗುತ್ತಾರೆ. ಆದ್ರೆ ಬೇರೆ ಕಾರಣಗಳಿಗಿಂತ ಯುವಜನರಿಗೆ ಸಮಸ್ಯೆ ಎನಿಸುವುದು ಐಡಿ ಕಾರ್ಡ್​ಗಳ (ID Card) ಮೇಲಿನ ಫೋಟೋ (Picture) ಚೆನ್ನಾಗಿ ಇಲ್ಲದಾಗ. ಅನೇಕರ ಆಧಾರ್ ಕಾರ್ಡ್ ಗಳಲ್ಲಿ ಇರೋ ಫೋಟೋ (Photo) ನೋಡಿದ್ರೆ ಅದು ಅವರೇನಾ ಅಂತ ಅನುಮಾನ ಬರುವಷ್ಟು ಬೇರೆಯಾಗಿ ಕಾಣುತ್ತದೆ. ಛೆ..ಇದೊಂದು ಫೋಟೋ ಚೆನ್ನಾಗಿದ್ರೆ ಒಳ್ಳೆಯದಿತ್ತು ಎನಿಸುವವರಿಗೆ ಪರಿಹಾರ ಇಲ್ಲಿದೆ.

  ಐಡಿ ಪ್ರೂಫ್​ಗಳಲ್ಲಿ ಇದ್ದಿದ್ದರಲ್ಲಿ ಒಳ್ಳೆ ಫೋಟೋ ಕಾಣೋದು ಅಂದ್ರೆ ಅದು ಪಾಸ್​ಪೋರ್ಟ್ ಮಾತ್ರ ಅನ್ಸುತ್ತೆ. ಉಳಿದಂತೆ ಓಟರ್ ಐಡಿಯಲ್ಲಂತೂ ನಮ್ಮ ಮುಖ ಕಳ್ಳರ ಥರಾ ಕಾಣುತ್ತೆ ಅಂತ ಅನೇಕರು ಹೇಳ್ತಾರೆ. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇದ್ದಿದ್ದರಲ್ಲಿ ಉತ್ತಮ. ಆದ್ರೂ ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರೆದು, ಅಷ್ಟೆಲ್ಲಾ ಉತ್ತಮ ಫೋನ್​ ಕ್ಯಾಮೆರಾಗಳು ಬಂದಿರುವಾಗ ಅತ್ಯಗತ್ಯವಾಗಿ ಬೇಕಾದ ಸರ್ಕಾರಿ ದಾಖಲೆಗಳಲ್ಲಿ ಯಾಕೆ ಸರಿಯಾದ ಚಿತ್ರ ಇರುವುದಿಲ್ಲ ಎನ್ನುವ ಪ್ರಶ್ನೆಗೆ ಇನ್ನೂ ಸೂಕ್ತ ಉತ್ತರ ಸಿಕ್ಕಿಲ್ಲ ಬಿಡಿ.

  ಆಧಾರ್ ಕಾರ್ಡಿನಲ್ಲಿರುವ ವಿವರ ಬದಲಿಸುವುದು ಕಷ್ಟವಿಲ್ಲ

  ಬೇರೆ ದಾಖಲೆಗಳು ಹಾಗಿರಲಿ. ಈ ಆಧಾರ್ ಕಾರ್ಡ್ ಎನ್ನುವ ಜೀವನದ ಆಧಾರವೇ ಆದಂತೆ ಕಾಣುವ ಐಡಿ ಪ್ರೂಫ್​ನಲ್ಲಿ ಹೆಸರು, ವಿಳಾಸ ಎಲ್ಲಾ ಬದಲಿಸೋದಕ್ಕೆ ಅವಕಾಶ ಇದೆ. ಆದ್ರೆ ಫೋಟೋಗೆ ಮಾತ್ರ ಇಲ್ಲ ಅಂತ ಅನೇಕರು ಬೇಸರ ಮಾಡಿಕೊಂಡಿದ್ದಾರಂತೆ. ಇದು ತಪ್ಪು. ಆಧಾರ್ ಕಾರ್ಡಿನಲ್ಲಿ ನಿಮ್ಮ ಚಿತ್ರವನ್ನೂ ಬದಲಿಸಲು ಅವಕಾಶ ಇದೆ. ಈ ಸರಳ ವಿಧಾನದ ಮೂಲಕ ನೀವು ಆನ್​ಲೈನ್​ನಲ್ಲೇ ಆಧಾರ್ ಕಾರ್ಡಿನಲ್ಲಿ ನಿಮ್ಮ ಚಿತ್ರ ಬದಲಿಸಿಕೊಳ್ಳಬಹುದು ನೋಡಿ.

  ಇದನ್ನೂ ಓದಿ: Blue Adhar Card: ಏನಿದು ಬ್ಲೂ ಆಧಾರ್​ ಕಾರ್ಡ್? ಇದನ್ನ ನೀವು ಪಡೆಯುವುದು ಹೇಗೆ? ಇಲ್ಲಿದೆ ಡಿಟೇಲ್ಸ್​..

  ಈ ಸರಳ ಹಂತಗಳಲ್ಲಿ ಆಧಾರ್ ಕಾರ್ಡಿನಲ್ಲಿ ನಿಮ್ಮ ಚಿತ್ರ ಬದಲಿಸಿಕೊಳ್ಳಿ:

  ಮೊದಲು UIDAI ವೆಬ್​ಸೈಟಿಗೆ ಭೇಟಿ ಕೊಡಿ

  ಅದರಲ್ಲಿ Aadhaar Enrolment Form ಡೌನ್ಲೋಡ್ ಮಾಡಿಕೊಳ್ಳಿ

  ಅಲ್ಲಿ ಕೇಳಿರುವ ಮಾಹಿತಿಗಳನ್ನು ಫಾರ್ಮ್​ನಲ್ಲಿ ಭರ್ತಿ ಮಾಡಿ. ಎಲ್ಲಾ ಸ್ಥಳಗಳನ್ನು ಭರ್ತಿ ಮಾಡಬೇಕಿಲ್ಲ. ಫೋಟೋ ಬದಲಿಸಲು ಬೇಕಾದವುಗಳನ್ನು ಮಾತ್ರ ತುಂಬಿದರೆ ಸಾಕು.

  ನಿಮ್ಮ ಹತ್ತಿರದ ಆಧಾರ್ ಎನ್​ರೋಲ್​ಮೆಂಟ್ ಸೆಂಟರ್ ಗೆ ತೆರಳಿ ಇದನ್ನು ಸಲ್ಲಿಸಿ

  ಬಯೋಮೆಟ್ರಿಕ್ ವೆರಿಫಿಕೇಶನ್ ಮೂಲಕ ಅಲ್ಲಿನ ಸಿಬ್ಬಂದಿ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ

  ನಂತರ ಸಿಬ್ಬಂದಿ ನಿಮ್ಮ ಹೊಸಾ ಚಿತ್ರವನ್ನು ಕ್ಲಿಕ್ಕಿಸುತ್ತಾರೆ

  ಇದಕ್ಕಾಗಿ ನೀವು 25 ರೂಪಾಯಿ ಮತ್ತು ಜಿಎಸ್​ಟಿ ಸಲ್ಲಿಸಬೇಕಾಗುತ್ತದೆ

  ಈ ಸೇವೆ ಪಡೆದಿದ್ದಕ್ಕಾಗಿ ನಿಮಗೆ ಅಕ್ನಾಲೆಜ್ಮೆಂಟ್ ಕೂಡಾ ನೀಡಲಾಗುತ್ತದೆ

  ಅದರೊಂದಿಗೆ ನೀಡಿದ URN ಸಂಖ್ಯೆಯ ಮೂಲಕ ನಿಮ್ಮ ಹೊಸಾ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.

  ಇದನ್ನೂ ಓದಿ: Aadhaar Card| 8 ವರ್ಷದ ಬಳಿಕ ಮನೆ ಸೇರಿದ ಯುವಕ... ಅದಕ್ಕೆ ಕಾರಣ ಆಧಾರ್​ ಕಾರ್ಡ್​!

  ಇದಿಷ್ಟು ಮಾಡಿದರೆ ಕನಿಷ್ಟ ಆಧಾರ್ ಕಾರ್ಡಿನಲ್ಲಾದರೂ ನಿಮ್ಮ ಚಿತ್ರ ನಿಮಗೇ ಸಮಾಧಾನ ತರುವಷ್ಟು ಸ್ಪಷ್ಟವಾಗಿ ಕಾಣಬಹುದು.
  Published by:Soumya KN
  First published: