ಮಕ್ಕಳ ಆಧಾರ್​ ಕಾರ್ಡ್‌ಗೆ ಮನೆಯಿಂದಲೇ ಅರ್ಜಿ ಸಲ್ಲಿಸುವುದು ಹೇಗೆ?

ಆಧಾರ್​ ಕಾರ್ಡ್.

ಆಧಾರ್​ ಕಾರ್ಡ್.

ಮಕ್ಕಳ ದಾಖಲಾತಿ ಪ್ರಕ್ರಿಯೆಯು ವಯಸ್ಕರಂತೆಯೇ ಇರಲಿದೆಯಂತೆ. ಯುಐಡಿಎಐ ತಂದ ಹೊಸ ಬದಲಾವಣೆ ಪ್ರಕಾರ ಈ ದಾಖಲಾತಿಯನ್ನು ಈಗ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿಯೂ ಸಹ ನೀವು ಮನೆಯಿಂದಲೇ ಮಾಡಬಹುದಾಗಿದೆ.

  • Share this:

ನಿಮ್ಮ ಮಗುವಿನ ಆಧಾರ್ ಕಾರ್ಡ್ ಮಾಡಿಸಬೇಕು ಎಂದು ಅನೇಕ ಬಾರಿ ಮಗುವನ್ನು ಕರೆದುಕೊಂಡು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಓಡಾಡುತ್ತಿದ್ದರೆ, ಇಲ್ಲೊಂದು ಸಿಹಿ ಸುದ್ದಿ ಇದೆ. ಇನ್ಮುಂದೆ ನಿಮ್ಮ ಐದು ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್‌ ಅನ್ನು ಮಾಡಿಸಲು ತುಂಬಾ ಸಲ ನಿಮ್ಮ ಹತ್ತಿರದ ಆಧಾರ್ ಕೇಂದ್ರಗಳಿಗೆ ಕರೆದೊಯ್ಯುವ ಅವಶ್ಯಕತೆ ಇಲ್ಲ. ಏಕೆಂದರೆ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಶುಕ್ರವಾರ ಒಂದು ಮಹತ್ವದ ಬದಲಾವಣೆಯ ಬಗ್ಗೆ ಟ್ವೀಟ್ ಬಿಡುಗಡೆ ಮಾಡಿದ್ದು, ಇದರಲ್ಲಿ ಹೊಸ ಬದಲಾವಣೆಗಳನ್ನು ಘೋಷಿಸಲಾಗಿದೆ. ಏನಪ್ಪಾ ಈ ಹೊಸ ಬದಲಾವಣೆ ಅಂತೀರಾ..? ಐದು ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣದ ಬಾಲ್ ಆಧಾರ್ ಕಾರ್ಡ್ ಅನ್ನು ಪರಿಚಯಿಸುತ್ತದೆ. ಆ ವಯಸ್ಸಿನ ಮಕ್ಕಳಿಗೂ ಬಯೋಮೆಟ್ರಿಕ್ ಮಾಡುವುದು ಕಡ್ಡಾಯವಾಗಿದೆ ಎಂದು ಯುಐಡಿಎಐ ಹೇಳಿದೆ. ಕಾರ್ಡ್‌ನಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನು ಸಂಗ್ರಹಿಸಲು ಮಕ್ಕಳಿಗೆ ಉಚಿತವಾಗಿ ಈ ನೀಲಿ ಬಣ್ಣದ ಬಾಲ ಆಧಾರ್ ಕಾರ್ಡ್ ಅನ್ನು ನೀಡಲಾಗುತ್ತದೆ.


ಮಕ್ಕಳ ದಾಖಲಾತಿ ಪ್ರಕ್ರಿಯೆಯು ವಯಸ್ಕರಂತೆಯೇ ಇರಲಿದೆಯಂತೆ. ಯುಐಡಿಎಐ ತಂದ ಹೊಸ ಬದಲಾವಣೆ ಪ್ರಕಾರ ಈ ದಾಖಲಾತಿಯನ್ನು ಈಗ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿಯೂ ಸಹ ನೀವು ಮನೆಯಿಂದಲೇ ಮಾಡಬಹುದಾಗಿದೆ.



 Aadhar card, Child Aadhar card, Bala Aadhar card, Child Aadhar number, ಮಗು ಆಧಾರ್ ಕಾರ್ಡ್, ಆಧಾರ್ ಕಾರ್ಡ್, ಮಕ್ಕಳ ಆಧಾರ್ ಕಾರ್ಡ್‌,ಯುಐಡಿಎಐ,ಬಾಲ್ ಆಧಾರ್ ಕಾರ್ಡ್
ಆಧಾರ್ ಕಾರ್ಡ್





ನಿಮ್ಮ ಮಗುವಿನ ಆಧಾರ್ ಕಾರ್ಡ್‌ ಗಾಗಿ ನೀವು ಹೇಗೆ ಅರ್ಜಿ ಸಲ್ಲಿಸುತ್ತೀರಿ?

ಆನ್‌ಲೈನ್ ಪ್ರಕ್ರಿಯೆಗಾಗಿ....


ಹಂತ 1: ಅಧಿಕೃತ ಯುಐಡಿಎಐ ವೆಬ್‌ಸೈಟ್‌ಗೆ ಹೋಗಿ ಆಧಾರ್ ಕಾರ್ಡ್ ನೋಂದಣಿ ಎಂಬ ಆಯ್ಕೆಯನ್ನು ಒತ್ತಿರಿ.



ಹಂತ 2: ನೀವು ನಿಮ್ಮ ಮಗುವಿನ ಹೆಸರು, ನಿಮ್ಮ ದೂರವಾಣಿ ಸಂಖ್ಯೆ ಮತ್ತು ನಿಮ್ಮ ಮಗುವಿಗೆ ಮತ್ತು ನಿಮಗಾಗಿ ಸಂಬಂಧಿಸಿದ ಬಯೋಮೆಟ್ರಿಕ್ ಅಂತಹ ಅಗತ್ಯ ಮಾಹಿತಿಯನ್ನು ನೀವು ಅಲ್ಲಿ ಭರ್ತಿ ಮಾಡಬೇಕಾಗುತ್ತದೆ.




ಹಂತ 3: ನೀವು ನಿಮ್ಮ ಮನೆಯ ವಿಳಾಸ, ವಾಸಿಸುವ ಸ್ಥಳ, ರಾಜ್ಯ ಮತ್ತು ಮುಂತಾದ ವಿವರಗಳನ್ನು ಭರ್ತಿ ಮಾಡಿ ಅದನ್ನು ಸಲ್ಲಿಸಿ ಮತ್ತು ಮುಂದುವರಿಯಿರಿ.


ಹಂತ 4: ಸಮಯವನ್ನು ನಿಗದಿಪಡಿಸಿ (ಅಪಾಯಿಂಟ್ಮೆಂಟ್), ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದರಿಂದ ನೀವು ಆಧಾರ್ ಕಾರ್ಡ್‌ಗೆ ನೋಂದಣಿಯನ್ನು ಮಾಡಿಸುವ ಸಮಯವನ್ನು ನಿಗದಿಪಡಿಸಬಹುದು.


ಹಂತ 5: ಹತ್ತಿರದ ದಾಖಲಾತಿ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸಮಯವನ್ನು ನಿಗದಿಪಡಿಸಿಕೊಂಡು, ನೀವು ನಿಗದಿಪಡಿಸಿದ ದಿನಾಂಕದಂದು ಅಲ್ಲಿಗೆ ಹೋಗಿ. ನಿಮ್ಮ ಸ್ವಂತ ಗುರುತಿನ ಚೀಟಿ, ವಿಳಾಸದ ಪುರಾವೆ, ಸಂಬಂಧದ ಪುರಾವೆ ಮತ್ತು ಹುಟ್ಟಿದ ದಿನಾಂಕ ದಾಖಲೆಗಳನ್ನು ತೆಗೆದುಕೊಂಡು ಹೋಗಿ. ನಿಮ್ಮ ಉಲ್ಲೇಖ ಸಂಖ್ಯೆಯನ್ನು ಸಹ ನಿಮ್ಮೊಂದಿಗೆ ತೆಗೆದುಕೊಳ್ಳಬೇಕಾಗುತ್ತದೆ.


ಹಂತ 6: ಸಂಬಂಧಪಟ್ಟ ಆಧಾರ್ ಕೇಂದ್ರದಲ್ಲಿ ಒಮ್ಮೆ ಅಲ್ಲಿನ ಆಧಾರ್ ಅಧಿಕಾರಿಯೊಂದಿಗೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ. ಮಗುವಿಗೆ ಐದು ವರ್ಷವಾಗಿದ್ದರೆ ಬಯೋಮೆಟ್ರಿಕ್ ಡೇಟಾವನ್ನು ತೆಗೆದುಕೊಳ್ಳಲಾಗುತ್ತದೆ. ಐದು ವರ್ಷದೊಳಗಿನ ಮಕ್ಕಳಿಗೆ, ಯಾವುದೇ ಬಯೋಮೆಟ್ರಿಕ್ ಮಾಹಿತಿ ಅಗತ್ಯವಿಲ್ಲ, ಮನೆಯ ವಿಳಾಸ, ಇರುವ ಸ್ಥಳ ಮತ್ತು ಮಗುವಿನ ಭಾವಚಿತ್ರವನ್ನು ತೆಗೆದುಕೊಳ್ಳಲಾಗುತ್ತದೆ.


ಹಂತ 7:ಪ್ರಕ್ರಿಯೆಯು ಪೂರ್ಣಗೊಂಡ ನಂತರ ತಮ್ಮ ಅರ್ಜಿಯ ಪ್ರಗತಿಯನ್ನು ಗಮನಿಸಲು ಸ್ವೀಕೃತಿ ಸಂಖ್ಯೆಯನ್ನು ಅರ್ಜಿದಾರರು ಪಡೆಯುತ್ತಾರೆ. ನೀವು ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ 60 ದಿನಗಳಲ್ಲಿ ಸಂದೇಶ ಸಹ ಸ್ವೀಕರಿಸುತ್ತೀರಿ ಮತ್ತು ನೀವು ನೋಂದಾಯಿಸಿದ ಬಾಲ ಆಧಾರ್ ಕಾರ್ಡ್ 90 ದಿನಗಳಲ್ಲಿ ನಿಮ್ಮ ವಿಳಾಸಕ್ಕೆ ಬಂದು ತಲುಪುತ್ತದೆ.








ಆಫ್‌ಲೈನ್ ದಾಖಲಾತಿ ಪ್ರಕ್ರಿಯೆ


ಆಫ್‌ಲೈನ್ ಪ್ರಕ್ರಿಯೆಯು ಆನ್‌ಲೈನ್​ ದಾಖಲಾತಿ ಪ್ರಕ್ರಿಯೆಯನ್ನು ಸಾಕಷ್ಟು ಹೋಲುತ್ತದೆ. ಇಲ್ಲಿರುವ ಏಕೈಕ ವ್ಯತ್ಯಾಸವೆಂದರೆ ನೀವು ಕೆಲವು ಹೆಚ್ಚುವರಿ ಆನ್‌ಲೈನ್ ಹಂತಗಳನ್ನು ಇಲ್ಲಿ ಮಾಡಬೇಕಾಗಿಲ್ಲ ಮತ್ತು ನೇರವಾಗಿ ಆಧಾರ್ ದಾಖಲಾತಿ ಕೇಂದ್ರಕ್ಕೆ ಹೋಗುತ್ತೀರಿ.




ಹಂತ 1: ಆಧಾರ್ ಕೇಂದ್ರಕ್ಕೆ ಹೋಗಿ ಎಲ್ಲಾ ದಾಖಲೆಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ ಪರಿಶೀಲನೆ ಮಾಡಿಕೊಳ್ಳಿ. ಈ ದಾಖಲೆಗಳು ಗುರುತಿನ ಪುರಾವೆ, ವಿಳಾಸದ ಪುರಾವೆ, ಸಂಬಂಧದ ಪುರಾವೆ ಮತ್ತು ಹುಟ್ಟಿದ ದಿನಾಂಕ ದಾಖಲೆಗಳನ್ನು ಒಳಗೊಂಡಿರುತ್ತದೆ.


ಹಂತ 2:ಅಲ್ಲಿನ ಆಧಾರ್ ಅಧಿಕಾರಿಗೆ ತಿಳಿಸಿ ಮತ್ತು ಅವರು ನಿಮಗೆ ಒಂದು ಫಾರ್ಮ್ ಅನ್ನು ಭರ್ತಿ ಮಾಡಲು ಮತ್ತು ಸಲ್ಲಿಸಲು ಹೇಳುತ್ತಾರೆ. ಮೇಲೆ ತಿಳಿಸಿದಂತೆ ಪರಿಶೀಲನೆ ಮಾಡಿದ ನಂತರ, ಅನುಮೋದನೆಯ 90 ದಿನಗಳಲ್ಲಿ ನಿಮ್ಮ ಮಗುವಿನ ಬಾಲ ಆಧಾರ್ ಕಾರ್ಡ್ ನೀವು ಸ್ವೀಕರಿಸುತ್ತೀರಿ.







Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು