ನಾಣ್ಯಗಳನ್ನು ಬಳಸಿ ಅಡುಗೆಮನೆಯನ್ನು ತಾನೇ ಅಲಂಕರಿಸಿಕೊಂಡಿದ್ದಾಳೆ ಈ ಮಹಿಳೆ, ಏನ್ ಸಖತ್ತಾಗಿದೆ ನೋಡಿ!

Renovated Kitchen: ಬ್ರಿಟನ್‍ನ ಬರ್ನೇಲಿಯ ಲಾಂಚೈಸರ್‌ನಲ್ಲಿನ ಮಹಿಳೆಯೊಬ್ಬರು ತಮ್ಮ ಅಡುಗೆ ಮನೆಯನ್ನು ವಿನೂತನ ಶೈಲಿಯಲ್ಲಿ ನವೀಕರಿಸಿದ್ದಾರೆ. ತಮ್ಮ ಹಳೆಯ ಅಡುಗೆ ಮನೆಯನ್ನು ಆಧುನಿಕ ಶೈಲಿಯ ಅಡುಗೆ ಮನೆಯಾಗಿ ಪರಿವರ್ತಿಸಿದ್ದಾರೆ.

Credits: Facebook/Billie Jo Welsby

Credits: Facebook/Billie Jo Welsby

  • Share this:

ಮಹಿಳೆಯರಿಗೆ ಅಡುಗೆ ಮನೆ ಯಾವಾಗಲೂ ಸುಂದರವಾಗಿ ಕಾಣಬೇಕು ಎಂಬ ಅಭಿಲಾಷೆ ಇರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಕೌಶಲ್ಯಭರಿತ ಅಡುಗೆ ಮನೆಗೆ ಪ್ರತಿಯೊಬ್ಬ ಮಹಿಳೆಯರು ಮೊರೆ ಹೋಗುತ್ತಿದ್ದಾರೆ. ಹೌದು. ಇದೇ ರೀತಿಯಲ್ಲಿ ನಾಣ್ಯಗಳಿಂದ ಅಡುಗೆ ಮನೆಯೊಂದು ನಿರ್ಮಾಣವಾಗಿದೆ. ಅದು ಯಾವಾಗ?, ಹೇಗೆ?, ಎಲ್ಲಿ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.


ಕೊರೋನಾ ಎರಡನೇ ಅಲೆಯ ಕಾರಣ ಇಡೀ ದೇಶವೇ ಸ್ತಬ್ಧಗೊಂಡಿತು. ಕೆಲವರು ವರ್ಕ್ ಫ್ರಮ್ ಹೋಂ ಎಂದು ಕುಳಿತರೆ ಇನ್ನು ಕೆಲವರು, ತಮ್ಮ ಉಳಿದ ಸಮಯವನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಅಂದರೆ ಗಿಡ ಬೆಳೆಸುವಿಕೆ, ವಿಭಿನ್ನ ರೀತಿಯ ಪೇಂಟಿಂಗ್ ಹೀಗೆ..ಆದರೆ ಇಲ್ಲೊಬ್ಬ ಮಹಿಳೆ ಅಡುಗೆ ಮನೆಯನ್ನು ಚಂದವಾಗಿಸಿದ್ದಾರೆ.


ಹೌದು. ಬ್ರಿಟನ್‍ನ ಬರ್ನೇಲಿಯ ಲಾಂಚೈಸರ್‌ನಲ್ಲಿನ ಮಹಿಳೆಯೊಬ್ಬರು ತಮ್ಮ ಅಡುಗೆ ಮನೆಯನ್ನು ವಿನೂತನ ಶೈಲಿಯಲ್ಲಿ ನವೀಕರಿಸಿದ್ದಾರೆ. ತಮ್ಮ ಹಳೆಯ ಅಡುಗೆ ಮನೆಯನ್ನು ಆಧುನಿಕ ಶೈಲಿಯ ಅಡುಗೆ ಮನೆಯಾಗಿ ಪರಿವರ್ತಿಸಿದ್ದಾರೆ. ಇವರು ಡೆಕೊರೇಟರ್ಸ್‍ಗಳನ್ನು ಬಳಸಿಕೊಳ್ಳದೇ ಸ್ವಲ್ಪವೂ ಹಣ ಖರ್ಚು ಮಾಡದೇ ತಮ್ಮದೇ ಶ್ರಮ ಹಾಕಿ ನವೀಕರಿಸಿದ್ದು, ಇದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.


ಬಿಲ್ಲಿ ಜೋ ವೆಲ್ಸ್‌ಬಿ ಇವರೇ ವಿನೂತನ ಶೈಲಿಯ ಅಡುಗೆ ಮನೆಯನ್ನು ನವೀಕರಿಸಿದವರು. ಮೂಲತಃ ಬ್ಯೂಟಿಷಿಯನ್ ಆದ ಇವರು ಸಾವಿರಾರು 1 ಪೆನ್ಸ್ ನಾಣ್ಯಗಳನ್ನು ಬಳಸಿ ಅಡುಗೆ ಮನೆ ಗೋಡೆಯನ್ನು ಸುಂದರಗೊಳಿಸಿದ್ದಾರೆ. ನಿಜ ತಾಮ್ರದ ನಾಣ್ಯಗಳನ್ನು ತನ್ನ ಅಡುಗೆಮನೆಯ ಗೋಡೆಗಳ ಮೇಲೆ ಅಂಟಿಸಿ ತನ್ನ ಅಡುಗೆ ಮನೆಯ ಜಾಗವನ್ನು ಹೊಚ್ಚ ಹೊಸ ಒಳಾಂಗಣವನ್ನಾಗಿ ಪರಿವರ್ತಿಸಿದ್ದಾರೆ. ಒಟ್ಟು 75 ಪೌಂಡ್‍ಗಳನ್ನು ಖರ್ಚು ಮಾಡಿ 7500 ಕ್ಕೂ ಹೆಚ್ಚು ನಾಣ್ಯಗಳನ್ನು ಬಳಸಿ, ಬಿಲ್ಲಿ ತನ್ನ ಹಳೆಯ ಅಡುಗೆ ಮನೆಯನ್ನು ಕೇವಲ ಒಂಬತ್ತು ಗಂಟೆಗಳಲ್ಲಿ ಆಧುನಿಕ ಶೈಲಿಯ ಸ್ಪರ್ಶ ನೀಡಿದ್ದಾರೆ.


ತನ್ನ ನೂತನ ಅಡುಗೆ ಮನೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳನ್ನು ಹಂಚಿಕೊಂಡಿದ್ದಾರೆ. ಇವರ ಈ ಕೌಶಲ್ಯತೆಯನ್ನು ಮೂರು ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದು, ಸಾಕಷ್ಟು ಮಂದಿ ಬೆರಗಾಗಿದ್ದಾರೆ. ನಾನು ಪೆನ್ನಿ ಫ್ಲೋರ್ ನೋಡಿದ್ದೆ. ಆದರೆ ಗೋಡೆಗಳ ಮೇಲೆ ಪೆನ್ನಿಯ ಕೌಶಲ್ಯತೆ ನೋಡಿರಲಿಲ್ಲ. ನಿಜವಾಗಿಯೂ ಅದ್ಭುತವಾದ ಕಲೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ ನಿಮಗೆ ಸಾಧು ಸಂತರ ತಾಳ್ಮೆಯಿದೆ. ನಿಜವಾಗಿಯೂ ಆಶ್ಚರ್ಯ ಎನಿಸುತ್ತಿದೆ ಎಂದು ಹೇಳಿದ್ದಾರೆ.ದಿ ಸನ್ನಲ್ಲಿನ ವರದಿಯ ಪ್ರಕಾರ, ಬಿಲ್ಲಿ ಅವರು ಅಡುಗೆ ಮನೆಯ ವಿನ್ಯಾಸಕ್ಕೆ ಸ್ಪಷ್ಟವಾದ ತೆಳುವಾದ ಸಿಲಿಕಾನ್ ಪದರವನ್ನು ಬಳಸಿದರು ಮತ್ತು ನಾಣ್ಯಗಳನ್ನು ಒಂದೊಂದಾಗಿ ಗೋಡೆಗಳ ಮೇಲೆ ಅಂಟಿಸಿದನು. "ನಾನು ಈ ಹಿಂದೆ ಇದೇ ರೀತಿಯ ಗೋಡೆಯನ್ನು ನೋಡಿಲ್ಲ ಮತ್ತು ನನ್ನ ಅಡುಗೆ ಮನೆಗೆ ಆಧುನಿಕ ನೋಟ ನೀಡಲು ಬಯಸಿದೆ. ಆದ್ದರಿಂದ ಇದು ಪರಿಪೂರ್ಣವೆಂದು ಅನಿಸುತ್ತಿದೆ ಎಂದು ಅವರು ಹೇಳಿದರು.


ನಾನು ಈ ಗೋಡೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ಏಕೆಂದರೆ ಗ್ರಾಹಕರು ಟಿಪ್ ಜಾರ್‌ನಲ್ಲಿ ಹಾಕುತ್ತಿದ್ದ ನಾಣ್ಯಗಳಿಂದ ಈ ಸುಂದರತೆ ಸಾಧ್ಯವಾಗಿದೆ. ನನ್ನೆಲ್ಲಾ ನೆನಪುಗಳನ್ನು ಈ ಮೂಲಕ ಕಾಯ್ದಿರಿಸಿಕೊಳ್ಳುವ ಪರಿಯನ್ನು ವ್ಯಕ್ತಪಡಿಸಿದಳು. ಮುಂದುವರೆದು ತನ್ನ ಕೆಲಸದ ಬಗ್ಗೆ ಮಾತನಾಡುವ ಅವಳು, ತಮ್ಮ ಅಡುಗೆ ನಾವೀನ್ಯತೆ ಬಗ್ಗೆ ಅಷ್ಟೊಂದು ಸಂತೃಪ್ತಿ ಇಲ್ಲ. ಆದರೆ ಆ ಕಾರ್ಯವನ್ನು ನಾನು ನಿಜವಾಗಿಯೂ ಪ್ರೀತಿಸುತ್ತೇನೆ. ಲಾಕ್‍ಡೌನ್ ಸಮಯದಲ್ಲಿ ಇದರ ಅಲಂಕಕಾರ ನಿಜವಾಗಿಯೂ ಪ್ರಯಾಸಕರವಾಗಿತ್ತು. ಆದರೂ ಅಂದುಕೊಂಡಂತೆ ಮಾಡಿ ಮುಗಿಸಿದೆ ಎಂದು ನುಡಿಯುತ್ತಾರೆ 49 ವರ್ಷದ ಬಿಲ್ಲಿ ಜೋ ವೆಲ್ಸ್‌ಬಿ.

First published: