ನೂಡಲ್ಸ್ (Noodles) ಅಂದ್ರೆ ಯಾರಿಗೆ ಇಷ್ಟ ಇಲ್ಲ ಅಂತ ಕೇಳಿದ್ರೆ ಎಲ್ಲೋ ಬೆರಳೆಣಿಕೆಯಷ್ಟು ಜನರಿಗೆ ಇಷ್ಟ ಇಲ್ಲ ಎಂದು ಹೇಳಬಹುದೇನೊ. ಆದ್ರೆ, ಭಾಗಶಃ ಜನರಿಗೆ ಈ ನೂಡಲ್ಸ್ ಅಂದ್ರೆ ಪಂಚ ಪ್ರಾಣ. ನೂಡಲ್ಸ್ ಫಾಸ್ಟ್ ಫುಡ್ (Fast Food) ಗ್ರೂಪ್ಗೆ ಸೇರುವ ಈ ನೂಡಲ್ಸ್ಗಳನ್ನು ನಾನಾ ರೀತಿಯ ಶೈಲಿಯಲ್ಲಿ ಮಾಡಲಾಗುತ್ತದೆ. ತವಾ ನೂಡಲ್ಸ್, ಖಾರ ನೂಡಲ್ಸ್, ಮೈನೀಸ್ , ಚೀಸ್ ಹೀಗೆ ನಾನಾರೀತಿಯ ಶೈಲಿಗಳಲ್ಲಿ ತಯಾರು ಮಾಡಲಾಗುತ್ತದೆ. ಇನ್ನು ಕೊರಿಯನ್ ನೂಡಲ್ಸ್ ಗೊತ್ತಾ? ಹಲವಾರು ಭಾರತದ ಸೆಲೆಬ್ರಿಟಿಗಳು (Celebrity) ಕೊರಿಯನ್ ನೂಡಲ್ಸ್ ತಿಂದು ಅದರ ರಿವ್ಯೂ ಕೊಟ್ಟಿದ್ದಾರೆ. ಶೇಕಡ 80ರಷ್ಟು ಜನರಿಗೆ ಕೊರಿಯನ್ ನೂಡಲ್ಸ್ ಇಷ್ಟ ಆಗಿಲ್ಲ.
ಇನ್ನು ಶಾವಿಗೆ ಕೇಳಿರ್ತೀರ ಅಲ್ವಾ? ಇದರಿಂದ ಶಾವಿಗೆ ಪಾಯಸ, ಶಾವಿಗೆ ಬಾತ್ ಹೀಗೆ ಇನ್ನೂ ಹಲವಾರು ತಿಂಡಿ ತಿನುಸುಗಳನ್ನು ಮಾಡುತ್ತಾರೆ ಅಲ್ವಾ? ಇದ್ರಲ್ಲಿ ನಿಮಗೆ ಯಾವುದು ಇಷ್ಟ ಹೇಳಿ? ಶಾವಿಗೆ ಪಾಯಸದಲ್ಲಿ ಗೋಡಂಬಿ, ದ್ರಾಕ್ಷಿ ಎಲ್ಲಾ ಹಾಕಿದ್ರೆ ಆಹಾ! ಅದರ ರುಚಿನೇ ಬೇರೆ ಅಲ್ವಾ? ಬಿಸಿ ಬಿಸಿ ಶಾವಿಗೆ ಪಾಯಸ ತಿಂತಾ ಇದ್ರೆ ಅದರ ಖುಷಿನೇ ಬೇರೆ.
ಇದೀಗ ಈ ಶಾವಿಗೆ, ನೂಡಲ್ಸ್ ಬಗ್ಗೆ ಯಾಕೆ ಇಷ್ಟು ಪೀಠಿಕೆ ಹಾಕ್ತಾ ಇರೋದು ಅಂದ್ರೆ ಇಲ್ಲಿ ಆ ನೂಡಲ್ಸ್ಗಳನ್ನು ಯಾವ ರೀತಿಯಾಗಿ ತಯಾರು ಮಾಡ್ತಾರೆ ಅಂತ ಒಂದು ವಿಡಿಯೋ ವೈರಲ್ ಆಗಿದೆ. ಇದನ್ನೂ ನೋಡ್ತಾ ಇದ್ರೆ ನಿಮಗೆ ಏನು ಅನ್ಸುತ್ತೆ ಅಂತ ಹೇಳಿ.
ಈ ವಿಡಿಯೋ ನೋಡಿದ್ರೆ ನೀವು ಇನ್ನು ಜನ್ಮದಲ್ಲೇ ನೂಡಲ್ಸ್ ತಿನ್ನೋಲ್ಲ. ಯಾಕಂದ್ರೆ ಹಾಗೆ ತಯಾರು ಮಾಡ್ತಾ ಇದ್ದಾರೆ ಇಲ್ಲಿ. ಈ ಹಿಂದೆ ರಸ್ತೆ ಪಕ್ಕದಲ್ಲಿ ತಯಾರಾಗೋ ಗೋಲ್ಗಪ್ಪದ ವಿಡಿಯೋ ವೈರಲ್ ಆಗಿತ್ತು. ಇದಾದ ನಂತರ ಬೆಣ್ಣೆ ಮಸಾಲೆ, ಬೆಣ್ಣೆ ಬಿಸ್ಕತ್ತು ವಿಡಿಯೋ ಕೂಡ ವೈರಲ್ ಆಗಿತ್ತು. ಇದೀಗ ಒಂದು ವಿಡಿಯೋ ಇಂಟರ್ನೆಟ್ನಲ್ಲಿ ಭಾರೀ ಹರಿದಾಡುತ್ತಾ ಇದೆ.
ಇದನ್ನೂ ಓದಿ: ಆಡುವ ವಯಸ್ಸಲ್ಲಿ ಸನ್ಯಾಸತ್ವ ಸ್ವೀಕರಿಸಿದ ಪುಟ್ಟ ಬಾಲಕಿ!
ಹೌದು, ನೂಡಲ್ಸ್ಗಳ ಪ್ಯಾಕ್ಗಳನ್ನು ನೋಡಿ, ಆಕರ್ಷಿತರಾಗಿ ಬೇಗನೆ ಅದನ್ನು ಕೊಂಡುಕೊಳ್ಳುತ್ತೇವೆ. ಆದರೆ ಅದರ ಹಿಂದೆ ಅದೆಷ್ಟೋ ಜನರ ಪರಿಶ್ರಮ ಇರುತ್ತದೆ. ಒಂದೊಂದು ಕಾರ್ಖಾನೆಗಳಲ್ಲಿ ಒಂದೊಂದು ರೀತಿಯಾಗಿ ಈ ಆಹಾರಗಳನ್ನು ತಯಾರಿಸುತ್ತಾರೆ. ಒಂದೊಂದು ಕಡೆಯಲ್ಲಿ ಸ್ವಚ್ಛತೆಗೆ ತುಂಬಾ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಅದನ್ನು ತಯಾರಿಸುವ ಮೊದಲನೆಯ ಹಂತದಿಂದ ಹಿಡಿದು ಪ್ಯಾಕ್ ಮಾಡುವ ತನಕವೂ ಸ್ವಚ್ಚವಾಗಿ ಇಡುತ್ತಾರೆ.
When was the last time you had road side chinese hakka noodles with schezwan sauce? pic.twitter.com/wGYFfXO3L7
— Chirag Barjatya (@chiragbarjatyaa) January 18, 2023
ಇಲ್ಲಿ ಒಂದು ಖಾಸಗಿ ಕಾರ್ಖಾನೆ ನೂಡಲ್ಸ್ ಅನ್ನು ತಯಾರು ಮಾಡುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿಹಾಕಲಾಗಿದೆ. ಇದೀಗ ಸಖತ್ ವೈರಲ್ ಆಗ್ತಾ ಇದೆ. ನೀವು ಒಂದು ಬಾರಿ ಈ ವಿಡಿಯೋ ನೋಡಿ.
ನೋಡಿದ್ರಲ್ವಾ, ಏನ್ ಅನಿಸ್ತು. ಇನ್ನೊಬ್ಬರನ್ನು ಟೀಕೆ ಮಾಡುವುದು ಅಂತ ಅಲ್ಲ. ಹಲವಾರು ಜನರು ಈ ನೂಡಲ್ಸ್ ತಿನ್ನುವವರು ಇರುತ್ತಾರೆ. ಆಹಾರ ಪದಾರ್ಥಗಳನ್ನು ತಿನ್ನುವ ಸಮಯದಲ್ಲಿ ನೀಟಾಗಿ ರೆಡಿ ಮಾಡಬೇಕು ಅಲ್ವಾ? ಇರಲಿ ಈ ವಿಡಿಯೋ ನಿಮ್ಮ ಫ್ರೆಂಡ್ಸ್ಗಳಿಗೂ ತೋರಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ