How much Workout: ಒಬ್ಬ ವ್ಯಕ್ತಿ ಎಷ್ಟು ವ್ಯಾಯಾಮ ಮಾಡ್ಬೇಕು? ವರ್ಕೌಟ್​ಗೂ ಹೃದಯಕ್ಕೂ ಏನು ಲಿಂಕ್?

High Intensity Workout: ಎಲ್ಲರೂ ಮಾಡುತ್ತಿದ್ದಾರೆ ಎಂದೋ ಹೈ ಇಂಟೆನ್ಸಿಟಿ ವ್ಯಾಯಾಮಗಳನ್ನು ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು. ಯಾಕೆಂದರೆ ನಮ್ಮ ದೇಹದ ಶಕ್ತಿ ಮೀರಿ ವ್ಯಾಯಾಮಗಳನ್ನು ನಿರಂತರವಾಗಿ ಮಾಡಿದಾಗ ನಮ್ಮ ಹೃದಯ ಹಿಗ್ಗುತ್ತದೆ. ಹೀಗೆ ಹಿಗ್ಗಿದ ಹೃದಯ ಮತ್ತೆ ಸಾಮಾನ್ಯ ಸ್ಥಿತಿಗೆ ಬರಲು ಬರೋಬ್ಬರಿ 1 ವರ್ಷ ಬೇಕಾಗುತ್ತದಂತೆ. ಅದಕ್ಕೆ ವಿಶೇಷ ಚಿಕಿತ್ಸೆಯನ್ನೇ ಪಡೆಯಬೇಕಾಗುತ್ತದೆ.

ವರ್ಕೌಟ್ ಮಾಡುತ್ತಿರುವ ಅಪ್ಪು

ವರ್ಕೌಟ್ ಮಾಡುತ್ತಿರುವ ಅಪ್ಪು

  • Share this:
Workout Regime Calculation: ವ್ಯಾಯಾಮ ಒಳ್ಳೆಯದು (Exercise) ಅಂತ ವೈದ್ಯರೇ ಹೇಳ್ತಾರೆ. ಆದ್ರೆ ಎಷ್ಟು ವ್ಯಾಯಾಮ ಒಳ್ಳೆಯದು? ಯಾವ ಬಗೆಯ ವ್ಯಾಯಾಮ ಯಾರಿಗೆ ಸೂಟ್ ಆಗುತ್ತೆ? ವಿಪರೀತ ವ್ಯಾಯಾಮ ಮಾಡೋದ್ರಿಂದ ಏನೆಲ್ಲಾ ಅಪಾಯ? ಈ ಪ್ರಶ್ನೆಗಳು ಕಳೆದ ಕೆಲವು ದಿನಗಳಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗಂತೂ ಸಣ್ಣ ವಯಸ್ಸಿನ ಅನೇಕರ ಸಾವು ಈ ಚರ್ಚೆಗೆ ಮತ್ತಷ್ಟು ಪುಷ್ಟಿ ಕೊಟ್ಟಿದೆ. ಅದರಲ್ಲೂ ಬಹುತೇಕರು ವರ್ಕೌಟ್ ಮಾಡಲು ಜಿಮ್​ಗೆ (Workout in Gym) ತೆರಳಿ, ವರ್ಕೌಟ್ ಮುಗಿಸಿ ಹೊರ ಬರುವಾಗಲೇ ಹೃದಯಾಘಾತವಾದದ್ದು (Heart Attack), ಇವೆಲ್ಲಾ ಒಂದಷ್ಟು ಗಾಬರಿ, ಅನುಮಾನ, ಗೊಂದಲ ಹುಟ್ಟುಹಾಕಿದೆ. ವಿವಿಧ ವೈದ್ಯರು ಈ ಕುರಿತು ವಿವರವಾಗಿ ಮಾತನಾಡಿದ್ದಾರೆ. ಒಬ್ಬ ವ್ಯಕ್ತಿ ಯಾವಾಗ, ಎಷ್ಟು ವ್ಯಾಯಾಮ ಮಾಡಬೇಕು? ವ್ಯಾಯಾಮ ಹೆಚ್ಚಾಯ್ತು ಎಂದು ತಿಳಿಯುವುದು ಹೇಗೆ? ಅಪಾಯದ ಮಟ್ಟ (Danger Level) ಯಾವುದು? ಮಿತಿ ಮೀರದಂತೆ ವರ್ಕೌಟ್ ಮಾಡುವುದು ಅಂದ್ರೆ ಎಷ್ಟು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ವಯಸ್ಸಿಗೆ ತಕ್ಕಂತೆ ಇರಲಿ ವ್ಯಾಯಾಮ

ನಿಮ್ಮ ದೇಹ ಎಷ್ಟು ಬಲವನ್ನು ತಡೆದುಕೊಳ್ಳಬಹುದು ಅಷ್ಟಿರಬೇಕು ವ್ಯಾಯಾಮ ಎನ್ನುತ್ತಾರೆ ತಜ್ಞರು. ಅಂದರೆ ವರ್ಕೌಟ್ ಮಾಡುವಾಗ ಹೃದಯದ ಬಡಿತ ಸಹಜವಾಗಿಯೇ ಹೆಚ್ಚಾಗುತ್ತದೆ. ಆದ್ರೆ ಇದು ಎಷ್ಟು ಹೆಚ್ಚಾಗಬೇಕು ಎನ್ನುವುದು ನಮ್ಮ ವಯಸ್ಸಿಗೆ ತಕ್ಕಂತೆ ಇರಬೇಕು. ಉಳಿದಂತೆ ಹೃಯದ ಬಡಿತ ನಿಮಿಷಕ್ಕೆ 60ರಿಂದ 80ರಷ್ಟಿದ್ದರೆ ಹೆಚ್ಚು ವರ್ಕೌಟ್ ಮಾಡಿದಾಗ ಅದು ಎರಡರಷ್ಟು ಜಾಸ್ತಿ ಆಗಿಬಿಡುತ್ತದೆ. ಕೆಲವರು ವರ್ಕೌಟ್ ಮುಗಿಸಿದ ನಂತರ ಕೆಲ ನಿಮಿಷ ಬಹಳ ವೇಗವಾಗಿ ಉಸಿರಾಡುವುದನ್ನು ನೋಡಿರುತ್ತೇವೆ. ಇದು ಅದೇ ಕಾರಣದಿಂದ. ಒಂದೇ ಸಲ ಹೃದಯ ದಬಲ್ ಕೆಲಸ ಮಾಡುವಂತಹ ವೇಗದ ವರ್ಕೌಟ್ ಗಳು ಅಥವಾ ಹೈ ಇಂಟೆನ್ಸಿಟಿ ವರ್ಕೌಟ್​ಗಳು ಈಗ ಬಹಳ ಚಾಲ್ತಿಯಲ್ಲಿದೆ. ಇದು ಜಾಸ್ತಿ ಮಾಡುವುದು ಬಹಳ ಅಪಾಯ ಎನ್ನುತ್ತಾರೆ ವೈದ್ಯರು.

ಜಾಸ್ತಿ ವರ್ಕೌಟ್ ಮಾಡಿದ್ರೆ ಹೃದಯ ಹಿಗ್ಗುತ್ತದೆ

ಅಪಾಯ ಇರೋದು ಇಲ್ಲಿ. ಒಬ್ಬ ಸಾಮಾನ್ಯ ವ್ಯಕ್ತಿ ತನಗೆ ಇರುವ ಆರೋಗ್ಯವನ್ನು ಇದ್ದಂತೆ ಕಾಪಾಡಿಕೊಳ್ಳೋಕೆ ಪ್ರತಿದಿನ ಮಾಡುವ ವಾಕಿಂಗ್ ಸಾಕಾಗುತ್ತದೆ. ಕನಿಷ್ಟ 30 ರಿಂದ 50 ನಿಮಿಷ ನಡೆದರೆ ಅಷ್ಟರಮಟ್ಟಿಗೆ ಅದು ಆರೋಗ್ಯಕರ. ಆದರೆ ನಿಮಗೆ ಈಗಾಗಲೇ ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ಅದಕ್ಕೆ ಹೊಂದುವಂಥಾ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ. ಉದಾಹರಣೆಗೆ ರಕ್ತದೊತ್ತಡದ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ, ಸ್ಟ್ರೋಕ್ ಹೀಗೆ. ಇವೆಲ್ಲದಕ್ಕೂ ಅದರದ್ದೇ ಆದ ವ್ಯಾಯಾಮದ ರುಟೀನ್ ಇದೆ.

ಇದನ್ನೂ ಓದಿ: Puneeth Rajkumar: ಎರಡು ವಾರದ ಹಿಂದಷ್ಟೇ ಸಣ್ಣದೊಂದು ಚಿಕಿತ್ಸೆ ಪಡೆದಿದ್ದ ಅಪ್ಪು, ಅದೊಂದು ತಪ್ಪು ಮಾಡಬಾರದಿತ್ತು ಎನ್ನುತ್ತಾರೆ ವೈದ್ಯರು

ಆದರೆ ಯಾವುದೇ ಸಮಸ್ಯೆ ಇಲ್ಲದೆಯೂ ಅದು ಫ್ಯಾಷನ್​ನಲ್ಲಿ ಇದೆ ಎಂದೋ, ಎಲ್ಲರೂ ಮಾಡುತ್ತಿದ್ದಾರೆ ಎಂದೋ ಹೈ ಇಂಟೆನ್ಸಿಟಿ ವ್ಯಾಯಾಮಗಳನ್ನು ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು. ಯಾಕೆಂದರೆ ನಮ್ಮ ದೇಹದ ಶಕ್ತಿ ಮೀರಿ ವ್ಯಾಯಾಮಗಳನ್ನು ನಿರಂತರವಾಗಿ ಮಾಡಿದಾಗ ನಮ್ಮ ಹೃದಯ ಹಿಗ್ಗುತ್ತದೆ (Heart Expands). ಹೀಗೆ ಹಿಗ್ಗಿದ ಹೃದಯ ಮತ್ತೆ ಸಾಮಾನ್ಯ ಸ್ಥಿತಿಗೆ ಬರಲು ಬರೋಬ್ಬರಿ 1 ವರ್ಷ ಬೇಕಾಗುತ್ತದಂತೆ. ಅದಕ್ಕೆ ವಿಶೇಷ ಚಿಕಿತ್ಸೆಯನ್ನೇ ಪಡೆಯಬೇಕಾಗುತ್ತದೆ.

ಈ ಎಲ್ಲವನ್ನೂ ಲೆಕ್ಕ ಮಾಡಿ ವ್ಯಾಯಾಮ ಮಾಡಿ

ನಮ್ಮ ವಯಸ್ಸು, ಎತ್ತರ, ಆರೋಗ್ಯ ಮಟ್ಟ ಇವೆಲ್ಲವನ್ನೂ ನೋಡಿಕೊಂಡು ವ್ಯಾಯಾಮ ಮಾಡಬೇಕು. ಆದರೆ ಲಾಕ್​ಡೌನ್ ಸಂದರ್ಭದಲ್ಲಿ ಜಿಮ್​ಗಳೆಲ್ಲಾ ಮುಚ್ಚಿ ಹೋಗಿದ್ದವು. ಆದ್ದರಿಂದ ಅನೇಕರು ಆನ್​ಲೈನ್ ಮೂಲಕ ಅನೇಕ ವರ್ಕೌಟ್​ ತರಗತಿಗಳನ್ನು ತೆಗೆದುಕೊಂಡು ತಾವೇ ವ್ಯಾಯಾಮ ಮಾಡುತ್ತಿದ್ರು. ಕೆಲವರು ಮನೆಯಲ್ಲೇ ಜಿಮ್ ಇದ್ದವರು ಅದನ್ನು ಸಂಪೂರ್ಣವಾಗಿ ಬಳಸಿಕೊಂಡರು.

ಇದನ್ನೂ ಓದಿ: Fitness: 40ನೇ ವಯಸ್ಸಿನಲ್ಲಿ ವರ್ಕೌಟ್ ಆರಂಭಿಸುವವರಿಗೆ ಇಲ್ಲಿವೆ ಕೆಲವು ಟಿಪ್ಸ್​..!

ಆದರೆ ಸರಿಯಾದ ತರಬೇತಿ ಪಡೆದ ಇನ್ಸ್​ಟ್ರಕ್ಟರ್ ಇಲ್ಲದೆ ಯರ್ರಾಬಿರ್ರಿ ವರ್ಕೌ್ಟ್ ಮಾಡಬಾರದು. ತೂಕ ಇಳಿಸಿಕೊಳ್ಳಲು, ಬಾಡಿ ಬಿಲ್ಡ್ ಮಾಡಲು ಅಥವಾ ಬೇರೆ ಯಾವುದೇ ಕಾರಣಕ್ಕಾದರೂ ಅವರಿವರು ಹೇಳಿದರು ಎಂದು ಸಿಕ್ಕ ಸಿಕ್ಕ ವರ್ಕೌಟ್ ಮಾಡಿ ದೇಹ ದಂಡಿಸಲು ಹೋದರೆ ಕೊನೆಗೆ ಹೃದಯಕ್ಕೇ ಕಂಟಕವಾಗಿಬಿಡುತ್ತದೆ. ಹಾಗಾಗಿ ನಮಗೆ ಎಷ್ಟು ವ್ಯಾಯಾಮ ಬೇಕು ಎನ್ನುವುದನ್ನು ತಿಳಿದುಕೊಂಡು, ವೈದ್ಯರ ಸಲಹೆ ಪಡೆದು ಮಾಡಿದರಷ್ಟೇ ಆರೋಗ್ಯಕ್ಕೆ ಪ್ರಯೋಜನಕಾರಿ.
Published by:Soumya KN
First published: