Magnetic Hill: ಲಡಾಖ್‌ನಲ್ಲಿದೆ ಮ್ಯಾಗ್ನೆಟಿಕ್ ಹಿಲ್! ಇಲ್ಲಿಗೆ ಭೇಟಿ ನೀಡುವ ಮುನ್ನ ವಿಶೇಷತೆ ತಿಳ್ಕೊಳ್ಳಿ

ಲೇಹ್ ನಗರದಿಂದ 30 ಕಿ.ಮೀ ದೂರದಲ್ಲಿರುವ ಸಣ್ಣದಾದ ರಸ್ತೆಯು ಗುರುತ್ವಾಕರ್ಷಣೆಯ ಸಾಮರ್ಥ್ಯದ ಕಾರಣದಿಂದ ಅತ್ಯಂತ ವಿಶಿಷ್ಟವಾದುದು ಎಂದೆನಿಸಿದೆ. ಲೇಹ್-ಕಾರ್ಗಿಲ್ ಹೆದ್ದಾರಿಯ ಭಾಗವಾಗಿರುವ ಈ ರಸ್ತೆಯ ವಿಶೇಷತೆ ಎಂದರೆ ಇದು ನಿಂತ ವಾಹನಗಳನ್ನು ಮೇಲ್ಮುಖವಾಗಿ ಆಕರ್ಷಿಸುತ್ತದೆ. ವಾಹನದ ಇಂಜಿನ್ ಆಫ್ ಮಾಡಿಬಿಟ್ಟರೆ ಈ ಬೆಟ್ಟವು ವಾಹನವನ್ನು ಗಂಟೆಗೆ 20 ಕಿಮೀ ವೇಗದಲ್ಲಿ ಎಳೆಯುತ್ತದೆ.

ಲಡಾಖ್‌ನಲ್ಲಿರುವ ಮ್ಯಾಗ್ನೆಟಿಕ್ ಹಿಲ್

ಲಡಾಖ್‌ನಲ್ಲಿರುವ ಮ್ಯಾಗ್ನೆಟಿಕ್ ಹಿಲ್

  • Share this:
ಬೆಟ್ಟದಿಂದ (Hill) ಕೆಳಕ್ಕೆ ಉರುಳುವುದು ಸರ್ವೇ ಸಾಮಾನ್ಯವಾದ ವಿಷಯವೇ ಆಗಿದೆ. ಬೆಟ್ಟದಿಂದ ಯಾರಾದರೂ ಜಾರಿದರೆ ಅವರು ಕೆಳಕ್ಕೆ ಉರುಳುತ್ತಾರೆ. ಆದರೆ ನಮ್ಮ ದೇಶದಲ್ಲಿರುವ ಗ್ರಾವಿಟಿ ಬೆಟ್ಟ ಇದಕ್ಕೆ ತದ್ವಿರುದ್ಧವಾಗಿದೆ. ಈ ಗುರುತ್ವಾಕರ್ಷಣೆಯ (Gravity) ಬೆಟ್ಟದಲ್ಲಿ ವಸ್ತುಗಳು ಕೆಳಕ್ಕೆ ಉರುಳುವ ಬದಲಿಗೆ ಮೇಲಕ್ಕೆ ಹೋಗುತ್ತವೆ. ಲೇಹ್ (Leh) ನಗರದಿಂದ 30 ಕಿ.ಮೀ ದೂರದಲ್ಲಿರುವ ಸಣ್ಣದಾದ ರಸ್ತೆಯು ಗುರುತ್ವಾಕರ್ಷಣೆಯ ಸಾಮರ್ಥ್ಯದ ಕಾರಣದಿಂದ ಅತ್ಯಂತ ವಿಶಿಷ್ಟವಾದುದು ಎಂದೆನಿಸಿದೆ. ಲೇಹ್-ಕಾರ್ಗಿಲ್ ಹೆದ್ದಾರಿಯ (Leh-Kargil Highway) ಭಾಗವಾಗಿರುವ ಈ ರಸ್ತೆಯ ವಿಶೇಷತೆ ಎಂದರೆ ಇದು ನಿಂತ ವಾಹನಗಳನ್ನು (Vehicle) ಮೇಲ್ಮುಖವಾಗಿ ಆಕರ್ಷಿಸುತ್ತದೆ. ವಾಹನದ ಇಂಜಿನ್ ಆಫ್ ಮಾಡಿಬಿಟ್ಟರೆ ಈ ಬೆಟ್ಟವು ವಾಹನವನ್ನು ಗಂಟೆಗೆ 20 ಕಿಮೀ ವೇಗದಲ್ಲಿ ಎಳೆಯುತ್ತದೆ.

ಅಸಾಧಾರಣವಾಗಿರುವ ವಿದ್ಯಮಾನದಿಂದಾಗಿ ಇಲ್ಲಿಗೆ ಮಿಸ್ಟರಿ ಹಿಲ್ ಹಾಗೂ ಗ್ರಾವಿಟಿ ಹಿಲ್ ಎಂಬ ಹೆಸರಿದೆ. 14,000 ಅಡಿ ಎತ್ತರದಲ್ಲಿರುವ ಬೆಟ್ಟದ ಪೂರ್ವಭಾಗದಲ್ಲಿ ಸಿಂಧು ನದಿ ಹರಿಯುತ್ತದೆ.

ಕಟ್ಟುಕತೆ
ಈ ಕುತೂಹಲಕಾರಿಯಾದ ವಿದ್ಯಮಾನಕ್ಕೆ ವೈಜ್ಞಾನಿಕ ಕಾರಣಗಳಿದ್ದರೂ ಇಲ್ಲಿನ ಸ್ಥಳೀಯರು ಅನೇಕ ಕಟ್ಟುಕತೆಗಳನ್ನು ಹೇಳಿ ಬೆಟ್ಟದ ಬಗೆಗೆ ಕುತೂಹಲವನ್ನು ಹೆಚ್ಚಿಸುತ್ತಾರೆ. ಲಡಾಖ್‌ನ ಹಳ್ಳಿಗರ ಪ್ರಕಾರ ಒಂದೊಮ್ಮೆ ಈ ರಸ್ತೆಯು ಸ್ವರ್ಗದ ಹಾದಿಯಾಗಿತ್ತು ಎಂದು ನಂಬುತ್ತಾರೆ. ಸ್ವರ್ಗಕ್ಕೆ ಅರ್ಹರಾದವರನ್ನು ಈ ಬೆಟ್ಟ ತಾನೇ ಎಳೆದುಕೊಳ್ಳುತ್ತದೆ ಆದರೆ ಅನರ್ಹ ವ್ಯಕ್ತಿಗಳು ಸ್ವರ್ಗದ ದಾರಿಯನ್ನು ಕಂಡುಕೊಳ್ಳುವುದೇ ಇಲ್ಲ ಎಂಬುದು ಇಲ್ಲಿನ ನಿವಾಸಿಗಳ ಅಭಿಪ್ರಾಯವಾಗಿದೆ.

ವಿಜ್ಞಾನ ಏನು ಹೇಳುತ್ತದೆ
ಮೇಲಕ್ಕೆ ಹೋಗುವ ವಿದ್ಯಮಾನದ ಕುರಿತಾಗಿ ವಿಜ್ಞಾನವು ವಿವರಿಸುವ ಎರಡು ಸಿದ್ಧಾಂತಗಳಿವೆ. ಒಂದು ಸಾಮಾನ್ಯವಾದ ಸಿದ್ಧಾಂತವೆಂದರೆ ಬೆಟ್ಟವು ಬಲವಾದ ಕಾಂತೀಯ ಶಕ್ತಿಯನ್ನು ಹೊಂದಿರುವುದರಿಂದ ಸುತ್ತಮುತ್ತಲಿನ ವಾಹನಗಳನ್ನು ತನ್ನತ್ತ ಎಳೆದುಕೊಳ್ಳುತ್ತದೆ. ನಿಜವಾಗಿ ಹೇಳಬೇಕೆಂದರೆ ಈ ಭಾಗದಲ್ಲಿರುವ ಕಾಂತೀಯ ಬಲ ಎಷ್ಟು ಪ್ರಬಲವಾಗಿದೆ ಎಂದರೆ ಭಾರತೀಯ ವಾಯುಪಡೆಯ ವಿಮಾನಗಳು ಈ ರಸ್ತೆಯನ್ನು ತಪ್ಪಿಸಿಕೊಂಡು ಪ್ರಯಾಣಿಸುತ್ತವೆ ಇದರಿಂದ ತಮ್ಮ ಡಿವೈಸ್‌ಗಳಲ್ಲಿ ಕಾಂತೀಯ ಹಸ್ತಕ್ಷೇಪಗಳನ್ನು ವಿಮಾನಗಳು ಎದುರಿಸುವುದಿಲ್ಲ.

ಇದನ್ನೂ ಓದಿ: Coconut Husk: ತೆಂಗಿನ ಸಿಪ್ಪೆಗೂ ಡಿಮ್ಯಾಂಡ್! ರೈತರಿಗೆ ಮತ್ತು ಉದ್ಯಮಗಳಿಗೆ ಹೊಸ ದಾರಿ

ಇನ್ನೊಂದು ಸಿದ್ಧಾಂತ ಆಪ್ಟಿಕಲ್ ಇಲ್ಯೂಶನ್ ಅನ್ನು ತಿಳಿಸುತ್ತದೆ. ಅಂದರೆ ದೃಷ್ಟಿಯ ಭ್ರಮೆ ಇದರ ಪ್ರಕಾರ ಬೆಟ್ಟವು ನಿಜವಾಗಿಯೂ ಆಯಸ್ಕಾಂತೀಯ ಶಕ್ತಿಯನ್ನು ಹೊಂದಿಲ್ಲ ಆದರೆ ಒಂದು ರೀತಿಯ ದೃಷ್ಟಿ ಭ್ರಮೆಯನ್ನು ಸೃಷ್ಟಿಸುತ್ತದೆ ಹೀಗಾಗಿ ಕೆಳಮುಖವಾಗಿ ಹೋಗುವುದು ಮೇಲ್ಮುಖವಾಗಿ ಹೋದಂತೆ ಭಾಸವಾಗುತ್ತದೆ. ಹಾಗಾಗಿ ವಾಹನವು ಮೇಲ್ಮುಖವಾಗಿ ಚಲಿಸುವುದನ್ನು ನೀವು ನೋಡಿದಾಗ, ನಿಜವಾಗಿ ಇದು ವಿರುದ್ಧವಾಗಿರುತ್ತದೆ ಹಾಗೂ ಪೃಕೃತಿಯ ನಿಯಮಗಳನ್ನು ವಿರೋಧಿಸುವುದಿಲ್ಲ.

ಗಮ್ಯಸ್ಥಾನ
ಈ ವಿದ್ಯಮಾನ ಗಮನಕ್ಕೆ ಬರುವಂತಹ ಸ್ಥಳದಲ್ಲಿಯೇ ಅಧಿಕಾರಿಗಳು ಜಾಹೀರಾತು ಫಲಕವನ್ನು ಇರಿಸಿದ್ದಾರೆ. ರಸ್ತೆಯ ಮೇಲೆ ಗುರುತಿಸಲಾದ ಹಳದಿ ಬಣ್ಣದ ಪೆಟ್ಟಿಗೆಯು ವಾಹನವನ್ನು ತಟಸ್ಥವಾಗಿ ನಿಲ್ಲಿಸಬೇಕಾದ ನಿಖರ ಬಿಂದುವನ್ನು ಸೂಚಿಸುತ್ತದೆ. ಅಲ್ಲಿಂದ ವಾಹನವು ನಿಧಾನವಾಗಿ ಬೆಟ್ಟವನ್ನು ಹತ್ತುವುದನ್ನು ಕಾಣಬಹುದು.

ಯಾವಾಗ ಭೇಟಿ ನೀಡಬೇಕು
ಈ ರಸ್ತೆಯು ವರ್ಷವಿಡೀ ತೆರೆದಿರುತ್ತದೆ ಅದಾಗ್ಯೂ ಮ್ಯಾಗ್ನೆಟಿಕ್ ಹಿಲ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಜುಲೈ ಹಾಗೂ ಅಕ್ಟೋಬರ್ ತಿಂಗಳ ಮಧ್ಯಭಾಗವಾಗಿದೆ. ಈ ಸಮಯದಲ್ಲಿ ರಸ್ತೆಗಳು ಕಣ್ಣಿಗೆ ಕಾಣುವಂತಿರುತ್ತದೆ ಮತ್ತು ವಾಹನ ಚಾಲನೆಗೆ ಯಾವುದೇ ತೊಡಕುಂಟಾಗುವುದಿಲ್ಲ.

ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು
ಲೇಹ್‌ನಿಂದ 30 ಕಿ.ಮೀ ದೂರದಲ್ಲಿರುವ ಮ್ಯಾಗ್ನೆಟಿಕ್ ಹಿಲ್ ಬಂಜರು ಪ್ರದೇಶದ ಭಾಗವಾಗಿದೆ. ಹಾಗಾಗಿ ಪ್ರವಾಸಿಗರನ್ನು ಹೊರತುಪಡಿಸಿ ಇದು ಹೆಚ್ಚು ಕಡಿಮೆ ಏಕಾಂತ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಒಂದೆರಡು ಹೋಮ್‌ಸ್ಟೇಗಳು ಲಭ್ಯವಿದ್ದರೂ ಲೇಹ್ ನಗರದಲ್ಲಿರುವ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿ ನಂತರ ಬೆಟ್ಟಕ್ಕೆ ಹೋಗುವುದು ಉತ್ತಮ. ಅಂತೆಯೇ ಈ ಪ್ರದೇಶದಲ್ಲಿ ಸಾಕಷ್ಟು ಆಹಾರ ಮಳಿಗೆಗಳು, ರೆಸ್ಟೋರೆಂಟ್‌ಗಳು ಇಲ್ಲದೇ ಇರುವುದರಿಂದ ಪ್ರಯಾಣಿಸುವ ಮುನ್ನ ಸಾಕಷ್ಟು ಆಹಾರಗಳನ್ನು, ಪಾನೀಯಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಲು ಮರೆಯದಿರಿ.

ಇದನ್ನೂ ಓದಿ:  India's Capital: ದೆಹಲಿಯಲ್ಲ, ನಿಜವಾಗಿಯೂ ಇದು ಭಾರತದ ರಾಜಧಾನಿ ಆಗಬೇಕಿತ್ತು!

ಲಡಾಖ್‌ನಲ್ಲಿರುವ ಮ್ಯಾಗ್ನೆಟಿಕ್ ಹಿಲ್‌ನಂತೆಯೇ ಅರ್ಮೇನಿಯಾದಲ್ಲಿ ಕೂಡ ಇದೇ ಮಾದರಿಯ ಬೆಟ್ಟವೊಂದಿದೆ. ಈ ಬೆಟ್ಟಕ್ಕೆ ಮೌಂಟ್ ಆರಗಟ್ ಎಂಬ ಹೆಸರಿದೆ. ಈ ಬೆಟ್ಟದಲ್ಲಿ ಇಳಿಜಾರಿಗೆ ಹೋದಂತೆ ಮೇಲಕ್ಕೆ ಹೋದಂತೆ ಭಾಸವಾಗುತ್ತದೆ.
Published by:Ashwini Prabhu
First published: