Viral Photo: ಮುಖಕ್ಕೆ ಮಾತ್ರವಲ್ಲ ಖಾಸಗಿ ಭಾಗಕ್ಕೂ ಚುಚ್ಚಿಸಿಕೊಂಡು ವಿಶ್ವ ದಾಖಲೆ ಬರೆದಿದ್ದಾನೆ ಈ ವ್ಯಕ್ತಿ!

Rolf Buchholz: 61 ವರ್ಷದ ರೋಲ್ಫ್ ತನ್ನ ದೇಹಕ್ಕೆ ಚುಚ್ಚುಸಿಕೊಂಡಿರುವುದು ಮಾತ್ರವಲ್ಲದೆ, ಇತರ ಹಲವು ರೀತಿಯಲ್ಲಿ ಮಾರ್ಪಡಿಸಿಕೊಂಡಿದ್ದಾನೆ. ಆತನ ದೇಹದ ಮೇಲ್ಭಾಗದಲ್ಲಿ ಹಲವು ಟ್ಯಾಟೂಗಳಿವೆ. ಇದಲ್ಲದೇ ಅತನ ತಲೆಯ ಮೇಲೆ ಎರಡು ಕೊಂಬುಗಳನ್ನು ಅಳವಡಿಸಿಕೊಂಡಿದ್ದಾನೆ.

ರೋಲ್ಫ್ ಬುಚೋಲ್ಜ್ / Rolf Buchholz

ರೋಲ್ಫ್ ಬುಚೋಲ್ಜ್ / Rolf Buchholz

  • Share this:
    ಪ್ರತಿಯೊಬ್ಬನಿಗೂ ಒಂದೊಂದು ಆಸೆಯಿರುತ್ತದೆ. ಕೆಲವರಿಗೆ ಟ್ಯಾಟೂ ಹಾಕಿಕೊಳ್ಳಬೇಕು ಎಂದು ಮೈ ಮೇಲೆಲ್ಲಾ ಚಿತ್ರ ವಿಚಿತ್ರವಾದ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಬಂಗಾರದ ಒಡವೆಗಳನ್ನು ಧರಿಸುವ ಆಸೆಯಿರುತ್ತದೆ. ಅದರಂತೆ ಇಲ್ಲೊಬ್ಬ ವ್ಯಕ್ತಿಗೆ ಚುಚ್ಚಿಸಿಕೊಳ್ಳುವ ಆಸೆ. ಆತನ ಮುಖದ ತುಂಬೆಲ್ಲಾ ಚುಚ್ಚಿಸಿಕೊಂಡಿದ್ದಾನೆ. ನೋಡಲು ಭಯಾನಕವಾಗಿ ಕಾಣಿಸುವ ವ್ಯಕ್ತಿಯೂ ಚುಚ್ಚಿಸಿಕೊಳ್ಳುವ ಮೂಲಕ ಗಿನ್ನೇಸ್​ ದಾಖಲೆಯನ್ನು (Guinness World Records) ಪಡೆದುಕೊಂಡಿದ್ದಾನೆ. ಅಂದಹಾಗೆಯೇ ಈ ವ್ಯಕ್ತಿ ಯಾರು? ಇಲ್ಲಿಯವರು? ಈ ಬಗ್ಗೆ ತಿಳಿಯೋಣ.

    ಜರ್ಮನಿಯಲ್ಲಿ (Germany) ನೆಲೆಸಿರುವ ಈ ವ್ಯಕ್ತಿಯ ಹೆಸರು ರೋಲ್ಫ್ ಬುಚೋಲ್ಜ್ (Rolf Buchholz). ಈತ ಮುಖದ ಭಾಗಗಳಿಗೆ ಚುಚ್ಚಿಸಿಕೊಳ್ಳುವ ಮೂಲಕ ವಿಚಿತ್ರವಾಗಿ ಕಾಣಿಸುತ್ತಿದ್ದಾನೆ. ಈತನ ವಿಚಿತ್ರ ಹವ್ಯಾಸದಿಂದಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದಿದ್ದಾನೆ. ಒಟ್ಟಿನಲ್ಲಿ ರೋಲ್ಫ್ ಬುಚೋಲ್ಜ್ ತನ್ನ ದೇಹದ ಮೇಲೆ 453 ಲೋಹವನ್ನು ಚುಚ್ಚುಸಿಕೊಂಡಿದ್ದಾನೆ.

    ರೋಲ್ಫ್ ಬುಚೋಲ್ಜ್ ತನ್ನ ದೇಹದ ಬಹುತೇಕ ಭಾಗಗಳಿಗೆ ಚುಚ್ಚುಸಿಕೊಂಡಿದ್ದಾನೆ. ಅತನ ಖಾಸಗಿ ಭಾಗದಲ್ಲೂ 278 ಭಾರಿ ಚುಚ್ಚಿಸಿಕೊಂಡಿದ್ದಾನೆ.

    ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾನೆ

    61 ವರ್ಷದ ರೋಲ್ಫ್ ತನ್ನ ದೇಹಕ್ಕೆ ಚುಚ್ಚುಸಿಕೊಂಡಿರುವುದು ಮಾತ್ರವಲ್ಲದೆ, ಇತರ ಹಲವು ರೀತಿಯಲ್ಲಿ ಮಾರ್ಪಡಿಸಿಕೊಂಡಿದ್ದಾನೆ. ಆತನ ದೇಹದ ಮೇಲ್ಭಾಗದಲ್ಲಿ ಹಲವು ಟ್ಯಾಟೂಗಳಿವೆ. ಇದಲ್ಲದೇ ಅತನ ತಲೆಯ ಮೇಲೆ ಎರಡು ಕೊಂಬುಗಳನ್ನು ಅಳವಡಿಸಿಕೊಂಡಿದ್ದಾನೆ. ರೋಲ್ಫ್ 40 ವರ್ಷ ವಯಸ್ಸಿನವನಾಗಿದ್ದಾಗ, ದೇಹವನ್ನು ಮಾರ್ಪಾಡಿಸುವುದರ ಬಗ್ಗೆ ಒಲವು ಹೊಂದಿದ್ದನು. ನಂತರ ಅದು ಶೀಘ್ರದಲ್ಲೇ ಉತ್ಸಾಹಕ್ಕೆ ತಿರುಗಿತು. 40 ನೇ ವಯಸ್ಸಿನಲ್ಲಿ ತಮ್ಮ ಮೊದಲ ಟ್ಯಾಟೂ ಜೊತೆಗೆ ದೇಹದ ಭಾಗಗಳಿಗೆ ಚುಚ್ಚಿಸಿಕೊಳ್ಳುತ್ತಾನೆ.



    ತುಟಿಯ ಸುತ್ತಲೂ ಚುಚ್ಚಿಸಿಕೊಂಡಿದ್ದಾನೆ

    ವಿಶ್ವ ದಾಖಲೆ ಹೊಂದಿರುವ ರೋಲ್ಫ್ ಮಾತನಾಡಿ, 'ಲೋಹವನ್ನು ಚುಚ್ಚುವುದು ಎಂದಿಗೂ ನನಗೆ ಸಮಸ್ಯೆಯಾಗಿರಲಿಲ್ಲ. ನನ್ನ ಲೈಂಗಿಕ ಜೀವನವು ಮೊದಲಿನಂತೆಯೇ ಇದೆ, ಅದು ಪರವಾಗಿಲ್ಲ' ಎಂದಿದ್ದಾನೆ. ಜರ್ಮನ್ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರೋಲ್ಫ್ ಅವರ ತುಟಿಗಳ ಸುತ್ತಲೂ 94 ಬಾರಿ ಚುಚ್ಚಿಸಿಕೊಂಡಿದ್ದಾನೆ. ದೇಹದ 90 ಪ್ರತಿಶತದಷ್ಟು ಟ್ಯಾಟೂ ಕೂಡ ಇದೆ.



    ಇದನ್ನು ಓದಿ: Xiaomi Christmas Sale: ಸ್ಮಾರ್ಟ್​ಫೋನ್, ಟಿವಿ, ಲ್ಯಾಪ್​ಟಾಪ್​ಗಳ ಮೇಲೆ ಆಕರ್ಷಕ ರಿಯಾಯಿತಿ

    ವಿಮಾನ ನಿಲ್ದಾಣದಲ್ಲಿ ತೊಂದರೆ ಅನುಭವಿಸಿದ ರೋಲ್ಫ್ ಬುಚೋಲ್ಜ್

    ಲೋಹದ ಚುಚ್ಚುವಿಕೆಗೆ ಸಂಬಂಧಿಸಿದಂತೆ ರೋಲ್ಫ್ ಬುಚೋಲ್ಜ್ ಗೆ ಮಲಗುವ ಕೋಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲದಿರಬಹುದು, ಆದರೆ ವಿಮಾನ ನಿಲ್ದಾಣದಲ್ಲಿ ಆತನ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾನೆ. ಇದಕ್ಕೆ ಎರಡು ಕಾರಣಗಳಿವೆ, ಮೊದಲನೆಯದಾಗಿ ಹೆಚ್ಚಿನ ದೇಶಗಳು ಅಂತಹ ದೇಹ ಮಾರ್ಪಾಡುಗಳನ್ನು ಹೊಂದಿರಿವ ವ್ಯಕ್ತಿಗಳನ್ನು ಪ್ರವೇಶ ಒದಗಿಸುವುದಿಲ್ಲ. ಎರಡನೆಯದಾಗಿ, ವಿಮಾನ ನಿಲ್ದಾಣದ ಮೆಟಲ್ ಡಿಟೆಕ್ಟರ್ಗಳು ತಮ್ಮೊಂದಿಗೆ ಆಯುಧವನ್ನು ಹೊತ್ತೊಯ್ಯುತ್ತಿದ್ದಂತೆ ಅವರು ಹಾದುಹೋದ ತಕ್ಷಣ ರಿಂಗಣಿಸಲು ಪ್ರಾರಂಭಿಸುತ್ತದೆ. ಇದರಿಂದ ಆತನಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

    ಇದನ್ನು ಓದಿ: Flipkart​ ಬಿಗ್​ ಸೇವಿಂಗ್​ ಡೇಸ್​ ಸೇಲ್​ ಆಫರ್​ ಮಿಸ್​ ಮಾಡ್ಬೇಡಿ.. ಇಂದು ಕೊನೆಯ ದಿನ

    ಹಿಂದೊಮ್ಮೆ ರೋಲ್ಫ್ ಬುಚೋಲ್ಜ್ ನನ್ನು ದುಬೈ ವಿಮಾನ ನಿಲ್ದಾಣದಲ್ಲಿ  ತಡೆದು ನಿಲ್ಲಿಸಲಾಯಿತು. ಮಾಟ ಮಂತ್ರ ಮಾಡುವ ವ್ಯಕ್ತಿಯೆಂದು ಭಾವಿಸಿ ತಡೆದಿದ್ದರು ಎಂದು ರೋಲ್ಫ್ ಹೇಳಿದ್ದಾನೆ.
    Published by:Harshith AS
    First published: