ಚಿಕನ್ ತಿನ್ನುವುದರಲ್ಲಿ World Record ಮಾಡಿದ ಯುವತಿ: 1 ನಿಮಿಷದಲ್ಲಿ ಈಕೆ ತಿಂದಿದ್ದು ಎಷ್ಟು ಗೊತ್ತೇ?

ಹಲವು ರೀತಿಯ ದಾಖಲೆಗಳು ಗಿನ್ನೆಸ್ ರೆಕಾರ್ಡ್ ಪುಸ್ತಕದಲ್ಲಿವೆ. ಇದಕ್ಕೆ ಸೇರ್ಪಡೆಯಾಗಿ ಇಲ್ಲೊಬ್ಬ ಯುವತಿ ಚಿಕನ್ ನಗ್ಗೆಟ್ಸ್ (Chicken Nuggets) ತಿನ್ನುವುದರಲ್ಲಿ ದಾಖಲೆ ಮಾಡಿದ್ದಾಳೆ.

ದಾಖಲೆ ಬರೆದ ಯುವತಿ

ದಾಖಲೆ ಬರೆದ ಯುವತಿ

 • Share this:
  ಬಾಯಿಯಲ್ಲಿ ಹಗ್ಗದ ಸಹಾಯದಿಂದ ಲಾರಿ ಎಳೆಯುವುದು, ಟ್ಯಾಟೂ ಮ್ಯಾನ್, 1 ನಿಮಿಷದಲ್ಲಿ ಹಲವು ಬಾರಿ ಪಂಚ್ ಮಾಡುವುದು, ನಾಲಿಗೆಯಿಂದ ಮೂಗನ್ನು ಮುಟ್ಟುವುದು ಹೀಗೆ ನೀವು ಹಲವಾರು ರೀತಿಯ ಗಿನ್ನೆಸ್ ವಿಶ್ವ ದಾಖಲೆಗಳನ್ನು (Guinness World Records) ಕೇಳಿರಬಹುದು. ವಿಸ್ಮಯದಿಂದ ಹಿಡಿದು ವಿನೋದದವರೆಗೆ ಹಲವು ರೀತಿಯ ದಾಖಲೆಗಳು ಗಿನ್ನೆಸ್ ರೆಕಾರ್ಡ್ ಪುಸ್ತಕದಲ್ಲಿವೆ. ಇದಕ್ಕೆ ಸೇರ್ಪಡೆಯಾಗಿ ಇಲ್ಲೊಬ್ಬ ಯುವತಿ ಚಿಕನ್ ನಗ್ಗೆಟ್ಸ್ (Chicken Nuggets) ತಿನ್ನುವುದರಲ್ಲಿ ದಾಖಲೆ ಮಾಡಿದ್ದಾಳೆ. ನೀವು ಇನ್ಸ್ಟಾಗ್ರಾಂನಲ್ಲಿ ಗಿನ್ನೆಸ್ ವಿಶ್ವ ದಾಖಲೆಗಳನ್ನು (GWR) ಅನುಸರಿಸುವವರಾಗಿದ್ದರೆ, ಅವರು ಆಗಾಗ್ಗೆ ಹಂಚಿಕೊಳ್ಳುವ ವಿವಿಧ ವೀಡಿಯೊಗಳ ಬಗ್ಗೆ ನಿಮಗೆ ತಿಳಿದಿರಬಹುದು. ಈ ವೀಡಿಯೊಗಳು ನೆಟಿಜನ್‌ಗಳಲ್ಲಿ ವಿವಿಧ ರೀತಿಯ ಭಾವನೆಗಳನ್ನು ಹುಟ್ಟುಹಾಕುತ್ತವೆ. ಅವರು ತಮ್ಮ ಖಾತೆಯಲ್ಲಿ ಇತ್ತೀಚಿನ ಆಹಾರ-ಸಂಬಂಧಿತ ರೆಕಾರ್ಡ್ ವೀಡಿಯೋ ಒಂದನ್ನು ಹರಿಬಿಟ್ಟಿದ್ದಾರೆ.

  ನಗ್ಗೆಟ್ಸ್ ತಿನ್ನುವ ದಾಖಲೆ 

  ಗಿನ್ನೆಸ್ ರೆಕಾರ್ಡ್ ಬುಕ್ ಖಾತೆಯಲ್ಲಿ ಇತ್ತೀಚೆಗೆ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಲೇಹ್ ಶಟ್‌ಕೆವರ್ ಎಂಬ ಮಹಿಳೆ 1 ನಿಮಿಷದಲ್ಲಿ ಹಲವು ಚಿಕನ್ ನಗ್ಗೆಟ್ಸ್ ಗಳನ್ನು ತಿನ್ನುವುದರಲ್ಲಿ ಗಿನ್ನೆಸ್ ದಾಖಲೆ ಬರೆದಿದ್ದಾರೆ. "ಲೇಹ್ ಶಟ್ಕೆವರ್ ಅವರ ನಗ್ಗೆಟ್ಸ್ ತಿನ್ನುವ ಹಸಿವು ಉಗ್ರವಾಗಿದೆ" ಎಂದು ಇನ್ಸ್ಟಾಗ್ರಾಂನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವಾಗ GWR ಈ ರೀತಿಯಾಗಿ ಬರೆದಿದ್ದಾರೆ. ತಮ್ಮದೇ ಪೋಸ್ಟ್‌ಗೆ ಉತ್ತರಿಸುವಾಗ, ಅವರು ದಾಖಲೆ ಮತ್ತು ದಾಖಲೆ ಹೊಂದಿರುವವರ ಬಗ್ಗೆ ಇನ್ನೂ ಕೆಲವು ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ.


  "ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅತ್ಯಂತ ಅಪೇಕ್ಷಿತ ಮತ್ತು ತೀವ್ರ ಪೈಪೋಟಿಯ ಶೀರ್ಷಿಕೆಗಳಲ್ಲಿ ಒಂದಾದ, ಒಂದು ನಿಮಿಷದ ದಾಖಲೆಯಲ್ಲಿ ಚಿಕನ್ ನಗ್ಗೆಟ್ಸ್ ತಿನ್ನುವ ಬಗ್ಗೆ ಇತ್ತೀಚೆಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇಟಾಲಿಯ ಮಿಲಾನಿನಲ್ಲಿ ನಡೆದ ಟಿವಿ ಶೋ "ಲೋ ಶೋ ಡೀ ರೆಕಾರ್ಡ್" ಚಿತ್ರೀಕರಣದಲ್ಲಿ ಲೇಹ್ ಶಟ್ಕೆವರ್ (ಯುಕೆ) ಈ ದಾಖಲೆ ಮಾಡಿದ್ದಾರೆ. @shutkeverofficial, ಈಗಾಗಲೇ ಈಕೆ ತನ್ನ ಬೆಲ್ಟ್ ಅಡಿಯಲ್ಲಿ ಹಲವಾರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿಗಳನ್ನು ಹೊಂದಿದ್ದು, ಅರವತ್ತು ಸೆಕೆಂಡುಗಳಲ್ಲಿ 352 ಗ್ರಾಂ (12.42 ಔನ್ಸ್ ಮತ್ತು 19 ನಗ್ಗೆಟ್ಸ್) ಮೆಕ್‌ಡೊನಾಲ್ಡ್ಸ್ ತಿಂಡಿಯನ್ನು ತಿಂದರು, ”ಎಂದು ವರದಿಗಳು ಈಕೆ ಬಗ್ಗೆ ಹೇಳಿವೆ.

  3 ನಿಮಿಷದಲ್ಲಿ ಎಷ್ಟು ತಿಂದಿದ್ದಾರೆ..? 

  "ಮೂರು ನಿಮಿಷಗಳಲ್ಲಿ ತಿನ್ನಲಾದ ಚಿಕನ್ ನಗ್ಗೆಟ್ಸ್ ದಾಖಲೆಯನ್ನು ಸಹ ಲೇಹ್ ಹೊಂದಿದ್ದಾರೆ - ಇದು 775.1 ಗ್ರಾಂ / 27.34 ಔನ್ಸ್" ಎಂದು ಸಹ ಹೇಳಲಾಗಿದೆ. ಲೇಹ್ ಶಟ್‌ಕೆವರ್ ತುಂಬಾ ಫುಡ್ಡಿಯಾಗಿದ್ದು, ಚಿಕನ್ ನಗ್ಗೆಟ್ಸ್ ತಿನ್ನುವುದರಲ್ಲಿ ಇವರ ದಾಖಲೆ ಆಶ್ಚರ್ಯಕರವಾಗಿಲ್ಲ. ಈಕೆಯ ಇನ್ಸ್ಟಾಗ್ರಾಮ್ ಖಾತೆಯೂ ಒಂದು ರೀತಿ ಫುಡ್ ಬ್ಲಾಗರ್ ಅಂತಯೇ ಇದೆ. ಈಕೆ 180K ಹಿಂಬಾಲಕರನ್ನು ಹೊಂದಿದ್ದಾಳೆ.

  ಇದನ್ನೂ ಓದಿ: Viral News: ಗೂಗಲ್ ನಕ್ಷೆಯಲ್ಲಿ ಕಂಡ ಅತಿ ದೊಡ್ಡ ಹಾವಿನ ಅಸ್ಥಿಪಂಜರ, ಇದು ನಿಜವೇ...?

  ಲೇಹ್ ಶಟ್‌ಕೆವರ್ ಚಿಕನ್ ನಗ್ಗೆಟ್ಸ್ ತಿನ್ನುವ ಈ ವಿಡಿಯೋವನ್ನು ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ಹಂಚಿಕೊಂಡ ನಂತರ, ಕ್ಲಿಪ್ 1.1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು ಹಲವಾರು ಲೈಕ್ಸ್ ಪಡೆದುಕೊಂಡಿದೆ.. ವಿಡಿಯೋ ಬಗ್ಗೆ ಕಾಮೆಂಟ್ ಮಾಡಿದ ನೆಟ್ಟಿಗರು ದಾಖಲೆಯನ್ನು ಕಂಡು ಬೆರಗಾದರೆ, ಇನ್ನು ಕೆಲವರು ದಾಖಲೆಯನ್ನು ಸಲೀಸಾಗಿ ಸೋಲಿಸಬಹುದು ಎಂದು ಹಂಚಿಕೊಂಡರು.
  "ಇದು ತುಂಬಾ ನಿಧಾನವಾಗಿದೆ, ನಾನು ಖಂಡಿತವಾಗಿಯೂ ಈಕೆಯನ್ನು ಸೋಲಿಸಬಲ್ಲೆ" ಎಂದು ಬಳಕೆದಾರರು ಬರೆದಿದ್ದಾರೆ. ಕೆಲವರು "ವಾವ್," ಎಂದು ಲೇಹ್ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

  ಗಿನ್ನಿಸ್ ದಾಖಲೆಗಳ ಪುಸ್ತಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ವಿಶ್ವ ದಾಖಲೆಗಳ ಸಂಗ್ರಹವಿರುವ ಪುಸ್ತಕ. ಪ್ರತಿ ವರ್ಷ ಪ್ರಕಟವಾಗುವ ಈ ಪುಸ್ತಕದಲ್ಲಿ ಮನುಷ್ಯ ಸಾಧನೆಗಳಲ್ಲದೆ, ಪ್ರಾಕೃತಿಕ ವಿಸ್ಮಯಗಳೂ, ಅತಿರೇಕಗಳೂ ಕೂಡ ದಾಖಲಾಗತ್ತದೆ.
  Published by:Kavya V
  First published: