ವಿಸ್ಕಿ ಫ್ಲೇವರ್ ಯಾವುದರ ಮೇಲೆ ಅವಲಂಬನೆ ಆಗಿರುತ್ತದೆ ಗೊತ್ತಾ?

Whiskey: ವಿಸ್ಕಿಯಲ್ಲಿನ ಫ್ಲೇವರ್ ಬಾರ್ಲಿ ಬೆಳೆಯುವ ಪರಿಸರದಿಂದಲೇ ಪ್ರಭಾವ ಬೀರುತ್ತದೆ ಎನ್ನುವುದನ್ನು ತಿಳಿಯೋಕೆ ಈ ತಂಡ ಕೆಲವೊಂದಿಷ್ಟು ಅಧ್ಯಯನ ಹಾಗೂ ಪ್ರಯೋಗಗಳನ್ನು ನಡೆಸಿತು. ಈ ಅಧ್ಯಯನವನ್ನು ಅವರು 'ಜರ್ನಲ್ ಫುಡ್' ನಲ್ಲಿ ಪ್ರಕಟಣೆ ಮಾಡಿದ್ದಾರೆ. ಅಷ್ಟಕ್ಕೂ ಇವರು ಮಾಡಿದ ಪ್ರಯೋಗ ಹೇಗಿತ್ತು ಗೊತ್ತಾ?

ವಿಸ್ಕಿ

ವಿಸ್ಕಿ

 • Share this:
  ಮದ್ಯಪ್ರಿಯರ ಇಷ್ಟದ ಪಾನೀಯಗಳಲ್ಲಿ ವಿಸ್ಕಿಗೆ ಮಹತ್ವದ ಸ್ಥಾನವಿದೆ. ಈ ವಿಸ್ಕಿ ಮೊದಲು ತಯಾರಾಗಿದ್ದು ಸ್ಕಾಟ್​ಲ್ಯಾಂಡ್​ನಲ್ಲಿ. 1824ರಲ್ಲಿ ಸ್ಮಿತ್ ಎಂಬಾತ ಮೊದಲ ಬಾರಿಗೆ ವಿಸ್ಕಿಯನ್ನು ಡಿಸ್ಟಿಲ್ ಮಾಡುವ ಪರವಾನಿಗೆ ಪಡೆದುಕೊಂಡ. ಆವತ್ತಿನಿಂದ ಸ್ಕಾಟ್​ಲ್ಯಾಂಡ್​​ನಿಂದ ತಯಾರಾಗಿ ಬರುವ ವಿಸ್ಕಿಗೆ ಜಗತ್ತಿನಾದ್ಯಂತ ಭಾರೀ ಬೇಡಿಕೆ ಇದೆ. ಇಂತಹ ವಿಸ್ಕಿಯ ಫ್ಲೇವರ್ ಯಾವುದರ ಮೇಲೆ ಅವಲಂಬನೆ ಆಗಿರುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ಸಂಶೋಧನೆಯೊಂದು ನಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

  ಐರ್​ಲ್ಯಾಂಡ್ ಸ್ಕಾಟ್​ಲ್ಯಾಂಡ್​​ ವಿಸ್ಕಿ ತಯಾರಿಸುವುದಕ್ಕೆ ತುಂಬಾ ಫೇಮಸ್. ಈ ವಿಸ್ಕಿಗೆ ಎಲ್ಲಿಲ್ಲದ ಬೇಡಿಕೆ. ಆದರೆ ವಿಸ್ಕಿಯಲ್ಲಿ ಬೇರೆ ಬೇರೆ ಫ್ಲೇವರ್ ಇರುತ್ತದೆ. ಹೀಗೆ ವಿಸ್ಕಿಯ ಫ್ಲೇವರ್ ಬೇರೆ ಬೇರೆ ಆಗಿರಲು ಕಾರಣವೇನು ಗೊತ್ತಾ? ವಿಸ್ಕಿ ತಯಾರಿಸಲು ಬಳಸುವ ಬಾರ್ಲಿ ಹಾಗೂ ಈ ಬಾರ್ಲಿಯನ್ನು ಬೆಳೆಸುವ ಪರಿಸರದ ಆಧಾರದ ಮೇಲೆ ವಿಸ್ಕಿ ಫ್ಲೇವರ್ ಬೇರೆ ಬೇರೆ ಆಗಿರುತ್ತದೆ ಎಂದು ಈ ಹೊಸ ಸಂಶೋಧನೆ ಹೇಳುತ್ತಿದೆ.

  ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕ ಡಸ್ಟಿನ್ ಹರ್ಬ್ ಈ ಕುರಿತು ಹೆಚ್ಚಿನ ಸಂಶೋಧನೆಯನ್ನು ಮಾಡಿದ್ದಾರೆ. ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡ ಒಳನೋಟಗಳನ್ನು ಅವರು ನೀಡಿದ್ದಾರೆ. ಅವರ ಪ್ರಕಾರ, "ವಿಸ್ಕಿ ಫ್ಲೇವರ್ ಬಾರ್ಲಿಯನ್ನು ಬೆಳೆದ ಪರಿಸರ ಮೇಲೆ ಅವಲಂಬನೆ ಆಗಿರುತ್ತದೆ," ಎನ್ನುತ್ತಾರೆ. ವಿಸ್ಕಿಯ ಫ್ಲೇವರ್ ಕುರಿತು ಮಾಡಿದ ಮೊದಲ ವೈಜ್ಞಾನಿಕ ಪ್ರಯೋಗದ ಅಧ್ಯಯನವಿದೆ ಎನ್ನುತ್ತಾರೆ.

  "ಬಾರ್ಲಿ ಬೆಳೆಯುವ ಪ್ರದೇಶವನ್ನು ಅರ್ಥ ಮಾಡಿಕೊಳ್ಳಲು ಬಹಳಷ್ಟು ಸಮಯ ಮತ್ತು ಅಧ್ಯಯನ ಬೇಕಾಗುತ್ತದೆ. ಇದೆಲ್ಲವನ್ನೂ ಅರ್ಥೈಸಿಕೊಂಡ ಮೇಲೆ ಬಾರ್ಲಿ ಬೆಳೆಯುವ ಪರಿಸರವು ವಿಸ್ಕಿಯ ಫ್ಲೇವರ್ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ನಾವು ಪ್ರಾಯೋಗಿಕವಾಗಿಯೇ ಕಂಡುಕೊಂಡೆವು," ಎನ್ನುತ್ತಾರೆ ಡಸ್ಟಿನ್ ಹರ್ಬ್.

  ಎಲ್ಲ ಅಧ್ಯಯನ ಹಾಗೂ ಪ್ರಯೋಗದಿಂದ ಕಂಡುಕೊಂಡ ಪ್ರಮುಖ ಅಂಶವೆಂದರೆ, ಬಾರ್ಲಿಯನ್ನು ಬೆಳೆಯುವ ಪರಿಸರ ಹಾಗೂ ಅದನ್ನು ಡಿಸ್ಟಿಲ್ ಮಾಡುವ ರೀತಿ ವಿಸ್ಕಿಯ ಫ್ಲೇವರ್ ಮೇಲೆ ಗಮನಾರ್ಹವಾದ ಪರಿಣಾಮ ಬೀರುತ್ತದೆಯಂತೆ. ಈ ತಂಡದವರು ಸಂಶೋಧನೆಯ ಆರಂಭದಲ್ಲಿ ಬಿಯರ್ ಫ್ಲೇವರ್​ಗೆ ಬಾರ್ಲಿಯು ಹೇಗೆ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆಯೂ ಅಧ್ಯಯನ ಮಾಡಿದರು. ಬೇರೆ ಬೇರೆ ರುಚಿಯ ಬಿಯರ್ ತಯಾರಿಸಲು ಬೇರೆ ಬೇರೆ ಬಾರ್ಲಿ ಬಳಸುತ್ತಾರೆ. ಇದರಿಂದ ಪ್ಲೇವರ್ ವ್ಯತ್ಯಾಸವಾಗುತ್ತದೆ. ಇದು ವಿಸ್ಕಿಗೂ ಅನ್ವಯ ಎನ್ನತ್ತಿದೆ ಈ ಸಂಶೋಧನಾ ತಂಡ.

  ವಿಸ್ಕಿಯಲ್ಲಿನ ಫ್ಲೇವರ್ ಬಾರ್ಲಿ ಬೆಳೆಯುವ ಪರಿಸರದಿಂದಲೇ ಪ್ರಭಾವ ಬೀರುತ್ತದೆ ಎನ್ನುವುದನ್ನು ತಿಳಿಯೋಕೆ ಈ ತಂಡ ಕೆಲವೊಂದಿಷ್ಟು ಅಧ್ಯಯನ ಹಾಗೂ ಪ್ರಯೋಗಗಳನ್ನು ನಡೆಸಿತು. ಈ ಅಧ್ಯಯನವನ್ನು ಅವರು 'ಜರ್ನಲ್ ಫುಡ್' ನಲ್ಲಿ ಪ್ರಕಟಣೆ ಮಾಡಿದ್ದಾರೆ. ಅಷ್ಟಕ್ಕೂ ಇವರು ಮಾಡಿದ ಪ್ರಯೋಗ ಹೇಗಿತ್ತು ಗೊತ್ತಾ?

  ಈ ತಂಡ ಮೊದಲಿಗೆ ಐರ್​ಲ್ಯಾಂಡ್​​ನಲ್ಲಿನ ಎರಡು ವಿವಿಧ ರೀತಿಯ ವಾಣಿಜ್ಯ ಬಾರ್ಲಿಗಳನ್ನು ಆಯ್ಕೆ ಮಾಡಿಕೊಂಡಿತು. ಈ ಎರಡು ವಾಣಿಜ್ಯ ಬಾರ್ಲಿಗಳನ್ನು ಬೆಳೆಯಲು ಎರಡು ವಿಭಿನ್ನ ಪರಿಸರವನ್ನು ಗುರುತಿಸಲಾಯಿತು. ಅಲ್ಲದೇ ಎರಡು ಬೇರೆ ಬೇರೆ ವರ್ಷಗಳಲ್ಲಿ ಇವುಗಳನ್ನು ಬೆಳೆಸಲಾಯಿತು. ಒಂದನ್ನು 2017ರಲ್ಲಿ ಬೆಳೆಸಿದರೆ, ಮತ್ತೊಂದನ್ನು 2018ರಲ್ಲಿ ಬೆಳೆಸಲಾಯಿತು.

  ಹೀಗೆ ಆಯ್ಕೆ ಮಾಡಿಕೊಂಡ ಪ್ರದೇಶದಲ್ಲಿ ಒಂದು ಪ್ರದೇಶದ ಹೆಸರು ಆಥಿ (Athy), ಐರ್​ಲ್ಯಾಂಡ್​​ನ ಒಳನಾಡಿನ ತಾಣ. ಮತ್ತೊಂದು ಪ್ರದೇಶದ ಹೆಸರು ಬಂಕ್ಲೌಡಿ (Buncloudy) ಇದು ಕರಾವಳಿ ತಾಣವಾಗಿದೆ. ಈ ಪ್ರದೇಶಗಳಲ್ಲಿ ತಾಪಮಾನ ಬೇರೆ, ಮಣ್ಣು ಬೇರೆ ಹಾಗೂ ಮಳೆಯ ಪ್ರಮಾಣವೂ ಬೇರೆ ಬೇರೆ ಇದೆ. ಹೀಗಾಗಿ ಈ ಎರಡು ಪ್ರದೇಶಗಳನ್ನು ಪ್ರಯೋಗಕ್ಕೆ ಆಯ್ಕೆ ಮಾಡಲಾಯಿತು.

  ಈ ಎರಡು ಪರಿಸರಗಳಲ್ಲಿ ಬೆಳೆದ ಎರಡು ರೀತಿಯ ಬಾರ್ಲಿಗಳನ್ನು ಕಟಾವು ಮಾಡಿ, ಸಂಗ್ರಹಿಸಿ ಕೊನೆಗೆ ಭಟ್ಟಿ ಇಳಿಸಲಾಯಿತು. ಭಟ್ಟಿ ಇಳಿಸಿದ ನಂತರ ಈ ಉತ್ಪನ್ನವನ್ನು ' 'ನ್ಯೂ ಮೇಕ್ ಸ್ಪಿರಿಟ್' ಎಂದು ಕರೆಯಲಾಯಿತು. ಆಗಲೇ ಅದು ವಿಸ್ಕಿ ಆಗುವುದಿಲ್ಲ. ಮೂರು ವರ್ಷಗಳ ನಂತರ ಅದು ವಿಸ್ಕಿಯಾಗಿ ಪರಿವರ್ತನೆ ಆಗುತ್ತದೆ. ಹೀಗೆ ಕೊನೆಗೆ ಎರಡು ವಿಸ್ಕಿಗಳ ಫ್ಲೇವರ್ ಪರೀಕ್ಷೆ ಮಾಡಿದಾಗ ಭಿನ್ನತೆ ಈ ತಂಡಕ್ಕೆ ತಿಳಿಯಿತು.

  ಒಟ್ಟಾರೆಯಾಗಿ, ಯಾವ ಪರಿಸರದಲ್ಲಿ ಬಾರ್ಲಿ ಬೆಳೆಯುತ್ತದೆ ಎನ್ನುವುದರ ಮೇಲೆ ವಿಸ್ಕಿಯ ಫ್ಲೇವರ್ ಅವಲಂಬನೆ ಆಗಿರುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
  Published by:Harshith AS
  First published: