• Home
  • »
  • News
  • »
  • trend
  • »
  • Artificial Intelligence: ತಿಮಿಂಗಿಲಗಳನ್ನು ಸಂರಕ್ಷಿಸುವಲ್ಲಿ ಕೃತಕ ಬುದ್ಧಿಮತ್ತೆ ಹೇಗೆ ಸಹಕಾರಿಯಾಗಿದೆ?

Artificial Intelligence: ತಿಮಿಂಗಿಲಗಳನ್ನು ಸಂರಕ್ಷಿಸುವಲ್ಲಿ ಕೃತಕ ಬುದ್ಧಿಮತ್ತೆ ಹೇಗೆ ಸಹಕಾರಿಯಾಗಿದೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹಡಗುಗಳು ಹವಾಮಾನ ಹಾಗೂ ಕಡಲಿನ ಸುಸ್ಥಿರತೆಯನ್ನು ಕಾಪಾಡುವ ಅಳಿವಿನಂಚಿನಲ್ಲಿರುವ ತಿಮಿಂಗಿಲಗಳ ಸಾವಿಗೆ ಕಾರಣವಾಗಿವೆ. ಇದನ್ನು ತಡೆಗಟ್ಟಲು ವೇಲ್ ಸೇಫ್ ಎಂಬ ಹೈಟೆಕ್ ಯೋಜನೆ ಸ್ಯಾನ್ ಫ್ರಾನ್ಸಿಸ್ಕೋದ ಕರಾವಳಿಯಲ್ಲಿ ಸಸ್ತನಿಗಳನ್ನು ಪತ್ತೆಹಚ್ಚಿ ಹಡುಗುಗಳಿಂದ ಅವುಗಳಿಗುಂಟಾಗುವ ಮಾರಣಾಂತಿಕ ಘರ್ಷಣೆಯನ್ನು ತಪ್ಪಿಸಲು ಹಡಗು ಕ್ಯಾಪ್ಟನ್‌ಗೆ ಸಂಕೇತವನ್ನು ನೀಡುತ್ತವೆ. 

ಮುಂದೆ ಓದಿ ...
  • Share this:

ಸ್ಮಾರ್ಟ್‌ಫೋನ್‌ಗಳು ಹಾಗೂ ಹೆಚ್ಚಿನ ಗ್ರಾಹಕ ಉತ್ಪನ್ನಗಳು ದೈತ್ಯ ಕಂಟೇನರ್ ಹಡಗುಗಳ (Ships) ಮೂಲಕ ಯುಎಸ್‌ಗೆ ಆಗಮಿಸುತ್ತವೆ ಆದರೆ ಇದೇ ಹಡಗುಗಳು ಹವಾಮಾನ ಹಾಗೂ ಕಡಲಿನ ಸುಸ್ಥಿರತೆಯನ್ನು ಕಾಪಾಡುವ ಅಳಿವಿನಂಚಿನಲ್ಲಿರುವ ತಿಮಿಂಗಿಲಗಳ (Whale) ಸಾವಿಗೆ ಕಾರಣವಾಗಿವೆ. ಇದನ್ನು ತಡೆಗಟ್ಟಲು ವೇಲ್ ಸೇಫ್ ಎಂಬ ಹೈಟೆಕ್ ಯೋಜನೆ ಸ್ಯಾನ್ ಫ್ರಾನ್ಸಿಸ್ಕೋದ ಕರಾವಳಿಯಲ್ಲಿ ಸಸ್ತನಿಗಳನ್ನು ಪತ್ತೆಹಚ್ಚಿ ಹಡುಗುಗಳಿಂದ ಅವುಗಳಿಗುಂಟಾಗುವ ಮಾರಣಾಂತಿಕ ಘರ್ಷಣೆಯನ್ನು ತಪ್ಪಿಸಲು ಹಡಗು ಕ್ಯಾಪ್ಟನ್‌ಗೆ (Captain) ಸಂಕೇತವನ್ನು ನೀಡುತ್ತವೆ. ಸಾಂಟಾ ಬಾರ್ಬರಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬೆನಿಯೋಫ್ ಓಷನ್ ಸೈನ್ಸ್ ಲ್ಯಾಬೊರೇಟರಿಯಲ್ಲಿನ ಯೋಜನೆಯ ನಿರ್ವಾಹಕರು ತಿಳಿಸಿರುವಂತೆ ವೇಲ್ ಸೇಫ್ ಉಪಕರಣವು (Whale Safe Equipment) ದುರ್ಬಲ ನೀಲಿ ತಿಮಿಂಗಿಲ, ರೆಕ್ಕೆ ತಿಮಿಂಗಿಲಗಳು ಹಾಗೂ ಹಂಪ್‌ಬ್ಯಾಕ್ ತಿಮಿಂಗಿಲ ಹೀಗೆ ಬೇರೆ ಬೇರೆ ತಿಮಿಂಗಿಲಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.


ವೇಲ್ ಸೇಫ್ ಉಪಕರಣದ ಯೋಜನೆ
ಸ್ಯಾಟಲೈಟ್ ಕಣ್ಗಾವಲಿನ ಮೂಲಕ ತಿಮಿಂಗಿಲಗಳನ್ನು ಪತ್ತೆಹಚ್ಚಲಾಗುತ್ತದೆ ಹಾಗೂ ಆನ್‌ಲೈನ್‌ನಲ್ಲಿ ಅದನ್ನು ಉಲ್ಲೇಖಿಸಲಾಗುತ್ತದೆ. 160 ಟನ್ ತೂಕವಿರುವ ನೀಲಿ ತಿಮಿಂಗಿಲಗಳು ಇದುವರೆಗೆ ಜೀವಿಸಿರುವ ಅತಿದೊಡ್ಡ ಸಸ್ತನಿಗಳು ಎಂದೆನಿಸಿವೆ. ಕ್ಯಾಲಿಫೋರ್ನಿಯಾವು ರಾಷ್ಟ್ರದ ಮೂರು ಬಂದರುಗಳಿಗೆ ನೆಲೆಯಾಗಿದ್ದು, ಹಡಗು ಸಂಬಂಧಿತ ತಿಮಿಂಗಿಲಗಳ ಸಾವಿಗೆ ಕಾರಣವಾಗಿವೆ.


ತಿಮಿಂಗಿಲಗಳ ಸಾವು ಹವಾಮಾನ ಬದಲಾವಣೆಯ ಮೇಲೆ ಪರಿಣಾಮ ಬೀರುತ್ತವೆ
ವಿಜ್ಞಾನಿಗಳು ಅಂದಾಜಿಸಿರುವಂತೆ 80 ಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ತಿಮಿಂಗಿಲಗಳು ಪಶ್ಚಿಮ ಕರಾವಳಿಯ ಹಡಗುಗಳ ದಾಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ. ಇವುಗಳ ಮರಣವು ಹವಾಮಾನ ಬದಲಾವಣೆಯ ಮೇಲೆ ಪರಿಣಾಮವನ್ನು ಬೀರುತ್ತವೆ.


ಇದನ್ನೂ ಓದಿ: Viral News: ಲೇಡಿ ರೂಮ್‌ಮೇಟ್‌ ಬೇಕಾಗಿದ್ದಾರೆ; ನೋಡಲು ಸುಂದರವಾಗಿರಬೇಕು, ವಯಸ್ಸು 18-25ರ ಒಳಗಿರಬೇಕು!


ಏಕೆಂದರೆ, ಇವುಗಳು ಮರಣ ಹೊಂದಿದಾಗ ಸಾಗರ ತಳವನ್ನು ಸೇರುತ್ತವೆ ಹಾಗೂ ಅವುಗಳು ದೊಡ್ಡ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಬೇರ್ಪಡಿಸುತ್ತವೆ ಎಂಬುದನ್ನು ಕಂಡುಹಿಡಿಯಲಾಗಿದೆ.


ಆದರೆ ಅವುಗಳು ವಿಸರ್ಜಿಸುವ ಮಲವು ಪ್ರಪಂಚದ ಅರ್ಧದಷ್ಟು ಆಮ್ಲಜನಕವನ್ನು ಉತ್ಪಾದಿಸುವ ಮತ್ತು ಸಮುದ್ರ ಆಹಾರ ಜಾಲದ ಅಡಿಪಾಯವಾಗಿರುವ ಫೈಟೊಪ್ಲಾಂಕ್ಟನ್‌ನ ಹೂವುಗಳ ಸೃಷ್ಟಿಗೆ ಕಾರಣವಾಗಿದೆ.


ವೇಲ್ ಸೇಫ್ ಹೇಗೆ ಕೆಲಸ ಮಾಡುತ್ತದೆ
ಬೆಚ್ಚಗಾಗುತ್ತಿರುವ ಸಾಗರವು ತಿಮಿಂಗಿಲಗಳ ಬೇಟೆಯ ಸಂಖ್ಯೆಯನ್ನು ಇಳಿಮುಖಗೊಳಿಸುತ್ತವೆ ಹಾಗೂ ಅವುಗಳ ವಲಸೆಯ ಮಾರ್ಗಗಳನ್ನು ಬದಲಾಯಿಸುತ್ತದೆ. ಅಂತೆಯೇ ಹಡಗುಗಳು ದಾಳಿಗೈಯ್ಯದಂತೆ ತಿಮಿಂಗಿಲಗಳನ್ನು ರಕ್ಷಿಸುವುದು ಅವುಗಳ ಉಳಿವಿಗೆ ನಿರ್ಣಾಯಕ ತೀರ್ಮಾನ ಎಂದೆನಿಸಿದೆ.


2018 ಮತ್ತು 2019 ರಲ್ಲಿ ಕ್ಯಾಲಿಫೋರ್ನಿಯಾ ನೀರಿನಲ್ಲಿ ಹಡಗು ಘರ್ಷಣೆಯಿಂದ ದಾಖಲೆ ಸಂಖ್ಯೆಯ ತಿಮಿಂಗಿಲಗಳು ಸಾವನ್ನಪ್ಪಿದ ನಂತರ ಬೆನಿಯೋಫ್ ಓಷನ್ ಸೈನ್ಸ್ ಲ್ಯಾಬೊರೇಟರಿ ಸಾಂಟಾ ಬಾರ್ಬರಾ ಚಾನೆಲ್‌ನಲ್ಲಿ ವೇಲ್ ಸೇಫ್ ಪೈಲಟ್ ಯೋಜನೆಯನ್ನು ಜಾರಿಗೆ ತರುವ ಪ್ರಯತ್ನಗಳನ್ನು ನಡೆಸಿತು.


ತಂತ್ರಜ್ಞಾನ ಆಧಾರಿತ ಹೈಡ್ರೋಫೋನ್ ಹೆಸರಿನ ಮೈಕ್ರೋಫೋನ್
2020 ರಲ್ಲಿ, ವಿಜ್ಞಾನಿಗಳು ವುಡ್ಸ್ ಹೋಲ್ ಓಷಿಯಾನೋಗ್ರಾಫಿಕ್ ಇನ್ಸ್ಟಿಟ್ಯೂಷನ್ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಆಧಾರಿತ ಹೈಡ್ರೋಫೋನ್ ಹೆಸರಿನ ಮೈಕ್ರೋಫೋನ್ ಸಾಗರ ತಳದಲ್ಲಿ ತಿಮಿಂಗಿಲಗಳ ಧ್ವನಿಯನ್ನು ಆಲಿಸುತ್ತದೆ.


ಹೈಡ್ರೋಫೋನ್ ತಿಮಿಂಗಿಲಗಳ ಧ್ವನಿಯನ್ನು ಕಂಪ್ಯೂಟರ್‌ಗೆ ಡೇಟಾ ರೂಪದಲ್ಲಿ ಕಳುಹಿಸುತ್ತದೆ. ಇದೊಂದು ಕೃತಕ ಬುದ್ಧಿಮತ್ತೆ ಪ್ರೋಗ್ರಾಂ ಆಗಿದ್ದು ವೇಲ್ ಫೀಡ್‌ಗೆ ಸಬ್‌ಸ್ಕ್ರೈಬ್ ಆಗಿರುವ ಶಿಪ್ಪಿಂಗ್ ಕಂಪನಿಗಳಿಗೆ ಸ್ವಯಂಚಾಲಿತವಾಗಿ ಕಳುಹಿಸುವ ಮೊದಲು ಸಂಶೋಧನೆಯನ್ನು ದೃಢೀಕರಿಸುವ ವಿಜ್ಞಾನಿಗಳ ಉಪಗ್ರಹದಿಂದ ಪತ್ತೆ ಹಚ್ಚಲಾಗುತ್ತದೆ.


ನೈಜ-ಸಮಯದ ಡೇಟಾವನ್ನು ವಿಶ್ಲೇಷಿಸುತ್ತದೆ
ಈ ಅಲರ್ಟ್ ಸಿಸ್ಟಮ್ ಸಮುದ್ರ ಸಸ್ತನಿಗಳ ಭೌತಿಕ ದೃಶ್ಯಗಳನ್ನು ಮತ್ತು ಮೆಕಾಲೆ ತಿಮಿಂಗಿಲ ಹವಾಮಾನ ಮುನ್ಸೂಚನೆಗೆ ಹೋಲಿಸುವ ವೈಶಿಷ್ಟ್ಯವನ್ನು ಒಳಗೊಂಡಿದೆ.


ಇದನ್ನೂ ಓದಿ:  Mom and Son: ತಾಯಿ ತನ್ನ ಮಗುವಿಗೆ ಈ ವಿಷಯಗಳನ್ನು ಕಲಿಸಲು ಏನು ಮಾಡಿದ್ದಾರೆ ನೋಡಿ


ಒಂದು ಅಲ್ಗಾರಿದಮ್ ಸಮುದ್ರದ ಪರಿಸ್ಥಿತಿಗಳ ನೈಜ-ಸಮಯದ ಡೇಟಾವನ್ನು ವಿಶ್ಲೇಷಿಸುತ್ತದೆ ಮತ್ತು 104 ಉಪಗ್ರಹ-ಟ್ಯಾಗ್ ಮಾಡಲಾದ ನೀಲಿ ತಿಮಿಂಗಿಲಗಳ ಮಾಹಿತಿಯನ್ನು ಅವುಗಳ ಉಪಸ್ಥಿತಿಯನ್ನು ಊಹಿಸುತ್ತದೆ.

Published by:Ashwini Prabhu
First published: