Fruits: ದೀರ್ಘಕಾಲದವರೆಗೆ ಹಣ್ಣು ಕೊಳೆಯದಂತೆ ಸಂಗ್ರಹಿಸಿಡಲು ಈ ಟಿಪ್ಸ್ ಫಾಲೋ ಮಾಡಿ

Rotting of Fruits : ಚೆರ್ರಿಗಳು ಹಣ್ಣುಗಳಲ್ಲಿ  ಆ್ಯಂಟಿ ಆಕ್ಸಿಡೆಂಟ್​ಗಳು ಸಮೃದ್ಧವಾಗಿದ್ರೆ ದ್ರಾಕ್ಷಿ ಹಣ್ಣಿನಿಂದ ಸಿ ವಿಟಮಿನ್ ಹೇರಳವಾಗಿ ದೊರೆಯಲಿದೆ..ಹೀಗಾಗಿ ಬೆರ್ರಿ, ಚೆರ‍್ರಿ ಹಾಗೂ ದ್ರಾಕ್ಷಿಹಣ್ಣುಗಳನ್ನು ಕವರ್‌ನಲ್ಲಿ ಸುತ್ತಿ ಅಥವಾ ಕಂಟೇನರ್‌ಗಳಲ್ಲಿ ಶೇಖರಿಸಿ ಇಡುವುದರಿಂದ ಹೆಚ್ಚು ಕಾಲ ಬಾಳಿಕೆ ಬರುತ್ತವೆ.

 ಹಣ್ಣು

ಹಣ್ಣು

 • Share this:
  ಪ್ರತಿನಿತ್ಯ ಹಣ್ಣುಗಳ(Fruits) ಸೇವನೆ ಮಾಡುವುದರಿಂದ ದೇಹಕ್ಕೆ(Body) ಹಲವು ಆರೋಗ್ಯಕಾರಿ ಅಂಶಗಳು ಇವೆ. ಹೀಗಾಗಿ ಮನೆಯಲ್ಲಿಯೇ(Home) ಸದಾಕಾಲ ಹಣ್ಣುಗಳ ಸಂಗ್ರಹ ಮಾಡಿಕೊಳ್ಳುವುದು ಉತ್ತಮ.. ಆದರೆ ಹೀಗೆ ಮನೆಯಲ್ಲಿ ತಂದಿಟ್ಟ ಹಣ್ಣುಗಳು ಕೆಡದಂತೆ ಇರಲು ಸಾಧ್ಯವೇ ಇಲ್ಲ. ಹೀಗಾಗಿ ದಿನಕ್ಕೆ(Daily) ಎಷ್ಟು ಬೇಕೋ ಅಷ್ಟು ಹಣ್ಣುಗಳನ್ನು ತಂದು ಮತ್ತೆ ಮರುದಿನ ಮಾರುಕಟ್ಟೆಗೆ ಹೋಗಿ ಹೊಸ ಹಣ್ಣುಗಳನ್ನು ತರಲು ಸಾಧ್ಯವಿಲ್ಲ.. ಹೀಗಾಗಿ ಒಮ್ಮೆ ಹಣ್ಣುಗಳನ್ನು ತಂದು ಅದನ್ನು ವಾರದವರೆಗೂ ಹೇಗೆ ಕೆಡದಂತೆ ಸಂಗ್ರಹಿಸಿ ಇಡಬೇಕು ಎನ್ನುವುದು ಹೆಚ್ಚಿನ ಜನಕ್ಕೆ ಗೊತ್ತಿರುವುದಿಲ್ಲ. ಯಾವ ಹಣ್ಣುಗಳು ಸದಾಕಾಲ ತಾಜಾವಾಗಿ ಇರುತ್ತವೆ. ಹಾಗೂ ಹಣ್ಣುಗಳನ್ನು ಹೇಗೆ ಕೆಡದಂತೆ ಸಂಗ್ರಹಿಸಿಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

  1)ಸೇಬು

  ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎನ್ನುವ ಹಳೆಯ ನಾಣ್ನುಡಿ ಇದೆ. ಹೀಗಾಗಿ ದಿನಕ್ಕೊಂದು ಸೇಬು ಸೇವನೆ ಮಾಡುವುದರಿಂದ ಆರೋಗ್ಯವಾಗಿ ಇರಬಹುದು.. ಸೇಬು ನಾರಿನಾಂಶ ಮತ್ತು ಪೆಕ್ಟಿನ್ ಎನ್ನುವ ಅಂಶದಿಂದ ಸಮೃದ್ಧವಾಗಿದೆ. ಇದರೊಂದಿಗೆ ಸೇಬಿನಲ್ಲಿ ವಿವಿಧ ರೀತಿಯ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳಾಗಿರುವಂತಹ ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಪೊಟಾಶಿಯಂ ಇದೆ. ಹೀಗಾಗಿ ಸೇಬಿನ ಸಂಗ್ರಹ ಮಾಡುವಾಗ ಪ್ರಮುಖವಾಗಿ ಹಲವಾರು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

  ಸಾಧ್ಯವಾದಷ್ಟು ಸೇಬು ಹಣ್ಣುಗಳನ್ನು ಇತರ ಹಣ್ಣುಗಳಿಂದ ದೂರವಿರಿಸಬೇಕು. ಅದರಲ್ಲೂ ಬಾಳೆಹಣ್ಣು ಹಾಗೂ ಸಿಟ್ರಸ್‌ ಅಂಶ ಇರುವ ಹಣ್ಣುಗಳಿಂದ ದೂರವೇ ಇಡಬೇಕು. ಕೋಣೆಯ ಸಾಧಾರಣ ಉಷ್ಣಾಂಶದಲ್ಲಿ ಇರಿಸಿದರೂ ಹಣ್ಣುಗಳು ತಾಜಾ ಆಗಿರುತ್ತವೆ. ಹಣ್ಣಿನ ಮೂಲ ಪ್ಯಾಕ್‌ನಲ್ಲೇ ಇರಿಸಿ ಫ್ರಿಜ್‌ನಲ್ಲಿ ಇಡುವುದರಿಂದ ನಾಲ್ಕು ವಾರಗಳ ಕಾಲ ಕೆಡದಂತೆ ಇಡಬಹುದು.

  ಇದನ್ನೂ ಓದಿ :ವಿಶ್ವದ ಅತ್ಯಂತ ದುಬಾರಿ ಹಣ್ಣುಗಳಿವು- ಬೆಲೆ ಗೊತ್ತಾದ್ರೆ ಶಾಕ್ ಆಗ್ತೀರ

  2) ಬೆರ್ರಿ, ಚೆರ‍್ರಿ ಹಾಗೂ ದ್ರಾಕ್ಷಿಹಣ್ಣುಗಳು

  ಬೆರ‍್ರಿ ಹಣ್ಣುಗಳನ್ನು ಕವರ್‌ನಲ್ಲಿ ಸುತ್ತಿ ಅಥವಾ ಕಂಟೇನರ್‌ಗಳಲ್ಲಿ ಶೇಖರಿಸಿ ಇಡುವುದರಿಂದ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಆದರೆ ಇದನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆದು ತಿನ್ನಬೇಕು. ಜೊತೆಗೆ ತಿನ್ನಲು ಬೇಕಾದಷ್ಟನ್ನೇ ತೊಳೆಯಬೇಕು. ಇದು ದ್ರಾಕ್ಷಿ ಹಾಗೂ ಚೆರ‍್ರಿಗೂ ಅನ್ವಯಿಸುತ್ತದೆ.

  ಚೆರ್ರಿಗಳು ಹಣ್ಣುಗಳಲ್ಲಿ  ಆ್ಯಂಟಿ ಆಕ್ಸಿಡೆಂಟ್​ಗಳು ಸಮೃದ್ಧವಾಗಿದ್ರೆ ದ್ರಾಕ್ಷಿ ಹಣ್ಣಿನಿಂದ ಸಿ ವಿಟಮಿನ್ ಹೇರಳವಾಗಿ ದೊರೆಯಲಿದೆ..ಹೀಗಾಗಿ ಬೆರ್ರಿ, ಚೆರ‍್ರಿ ಹಾಗೂ ದ್ರಾಕ್ಷಿಹಣ್ಣುಗಳನ್ನು ಕವರ್‌ನಲ್ಲಿ ಸುತ್ತಿ ಅಥವಾ ಕಂಟೇನರ್‌ಗಳಲ್ಲಿ ಶೇಖರಿಸಿ ಇಡುವುದರಿಂದ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಆದರೆ ಇದನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆದು ತಿನ್ನಬೇಕು.

  3) ಟೊಮೆಟೊ

  ಟೊಮೆಟೊ ಹಣ್ಣನ್ನು ಗಾಳಿಯಾಡುವ ತೇವಾಂಶವಿರುವ ಜಾಗದಲ್ಲಿ ಇರಿಸಬೇಕು. ಇದನ್ನು ಬಳಸಲು ಸ್ವಲ್ಪ ಹೊತ್ತಿಗೆ ಮುಂಚೆ ತೊಳೆಯಬೇಕು. ಹಾಗೇ ಇಟ್ಟ ಟೊಮೆಟೊ ಒಂದು ವಾರದವರೆಗೆ ಕೆಡದಂತೆ ಇರುತ್ತದೆ. ಆದರೆ ಶೈತ್ಯೀಕರಿಸಿದ ಟೊಮೆಟೊಗಳನ್ನು ಹೆಚ್ಚು ಕಾಲ ಶೇಖರಿಸಿ ಇಡಬಹುದು.

  4)ಬಾಳೆಹಣ್ಣು

  ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಪೋಸ್ಪರಸ್, ಕಾರ್ಬೋಹೈಡ್ರೇಟ್ಸ್ ಮತ್ತು ಕಬ್ಬಿನಾಂಶವು ಅಧಿಕವಾಗಿದೆ.. ಮನೆಯಲ್ಲಿ ಬಾಳೆಹಣ್ಣನ್ನು ದೀರ್ಘಕಾಲದವರೆಗೆ ತಾಜಾತನದಿಂದ ಇರಿಸಿಕೊಳ್ಳಲು ಸೇಬುಹಣ್ಣಿನಂತೆ ಬಾಳೆಹಣ್ಣನ್ನು ಬೇರೆಯಾಗಿಯೇ ಇರಿಸಬೇಕು.

  ಬಾಳೆಹಣ್ಣು ತಾಜಾತನದಿಂದ ಇರಲು ಅದನ್ನ ತೂಗು ಹಾಕುವುದು ಉತ್ತಮ ಉಪಾಯ. ಬಾಳೆಹಣ್ಣನ್ನು ಫ್ರಿಜ್‌ನಲ್ಲಿ ಇರಿಸಬಹುದು, ಆದರೆ ಸಂಪೂರ್ಣವಾಗಿ ಹಣ್ಣಾದ ಬಳಿಕವಷ್ಟೇ ಪ್ರಿಜ್‌ನಲ್ಲಿಡುವುದು ಸೂಕ್ತ.

  ಇದನ್ನೂ ಓದಿ : ಡೆಂಗ್ಯೂ ಮಹಾಮಾರಿ ನಿಯಂತ್ರಣಕ್ಕೆ ರಾಮಬಾಣ ಪಪ್ಪಾಯಿ ಎಲೆಗಳು

  5)ಬೆಣ್ಣೆ ಹಣ್ಣು

  ಹೆಸರಿಗೆ ತಕ್ಕಂತೆ ನೋಡಲು ಬೆಣ್ಣೆಯಂತೆ ಇರುವ ಬೆಣ್ಣೆ ಹಣ್ಣು ಅವಕಾಡೊವು ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿದ್ದು, ನೈಸರ್ಗಿಕ ಕೊಬ್ಬಿನಾಂಶವು ಇದರಲ್ಲಿ ಇದೆ. ಇದು ದೀರ್ಘಕಾಲ ಹೊಟ್ಟೆ ತುಂಬಿರುವಂತೆ ಮಾಡುವುದು ಹಾಗೂ ಹಸಿವನ್ನು ದೂರವಿಡುವುದು.ಬೆಣ್ಣೆಹಣ್ಣು ಅಥವಾ ಅವಕಾಡೊ ಕಾಯಿ ಇರುವಾಗ ಹಾಗೂ ಹಣ್ಣಾದಾಗ ಎರಡೂ ಸಮಯದಲ್ಲಿ ಹಸಿರಾಗಿಯೇ ಇರುತ್ತದೆ. ಕೆಲವೊಮ್ಮೆ ಇದರ ಸಿಪ್ಪೆ ತಿಳಿನೇರಳೆ ಬಣ್ಣಕ್ಕೆ ತಿರುಗುವುದೂ ಉಂಟು. ಹಾಗಾಗಿದ್ದರೆ ನೀವು ಬೆಣ್ಣೆಹಣ್ಣನ್ನು ಸರಿಯಾಗಿ ಶೇಖರಣೆ ಮಾಡಿದ್ದೀರಿ ಎಂದು ಅರ್ಥ.

  ಇದನ್ನು ಚೆನ್ನಾಗಿ ಹಣ್ಣಾದ ನಂತರವಷ್ಟೇ ಫ್ರಿಜ್‌ನಲ್ಲಿ ಇರಿಸಬೇಕು. ಇದು ಹಣ್ಣಾದ ಮೇಲೂ ಮೂರು ದಿನಗಳವರೆಗೆ ತಾಜಾ ಆಗಿಯೇ ಇರುತ್ತದೆ. ತಿನ್ನಲು ಎರಡು ದಿನ ಇರುವಾಗ ಅವನ್ನು ಹೊರಗೆ ತೆಗೆಯಬೇಕು, ಆಗ ಚೆನ್ನಾಗಿ ಮಾಗುತ್ತದೆ. ಒಮ್ಮೆ ಕತ್ತರಿಸಿದ ಮೇಲೆ ಹಾಗೇ ಇರಬೇಕು ಎಂದರೆ ನಿಂಬೆರಸವನ್ನು ಸಿಂಪಡಿಸಬೇಕು.

  6)ಅನಾನಸ್‌

  ಅನಾನಸ್‌ ಹಣ್ಣು ಬುಡದಲ್ಲಿ ಸಿಹಿ ಇದ್ದು ತಲೆಯ ಭಾಗದಲ್ಲಿ ಹುಳಿ ಇರುತ್ತದೆ. ಈ ಹಣ್ಣಿನ ಪೂರ್ಣ ಭಾಗ ಸಿಹಿ ಇರಬೇಕು ಎಂದರೆ ಹಣ್ಣನ್ನು ತಲೆಕೆಳಗಾಗಿ ಇರಿಸಬೇಕು. ಇದನ್ನು ಎರಡು ದಿನಗಳ ಕಾಲ ಹಾಗೇ ಇರಿಸಬೇಕು. ಅನಾನಸ್ ಹಣ್ಣು ಕೊಳೆಯದಂತೆ ಕಾಪಾಡಲು ಹಣ್ಣನ್ನು ಫ್ರಿಜ್‌ನಲ್ಲಿ ಇಡುವ ಮೊದಲು ಕೋಣೆಯ ಉಷ್ಣಾಂಶದಲ್ಲಿ ಇರಿಸಬೇಕು.
  Published by:ranjumbkgowda1 ranjumbkgowda1
  First published: