Online Education: ಕೋವಿಡ್ ನಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಬಾಲಕಿಯರು

Save Children: ಕೋವಿಡ್ ಸಂದರ್ಭದಲ್ಲಿ ಕೊಳಚೆ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಬಾಲಕರಿಗಿಂತ ಬಾಲಕಿಯರ ಹೆಚ್ಚು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಲ್ಲದೇ ಶೇಕಡ 67ರಷ್ಟು ಬಾಲಕಿಯರು ಆನ್ಲೈನ್ ತರಗತಿಗಳನ್ನು ಹಾಜರಾಗಲು ಸಾಧ್ಯವಾಗದೇ ಶಾಲೆಯನ್ನು ತೊರೆದಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊರೋನಾ (Corona)ಎಂಬ ಮಹಾಮಾರಿ ವಕ್ಕರಿಸಿದೆ ವಕ್ಕರಿಸಿದ್ದು ಕಳೆದ ಎರಡು ವರ್ಷಗಳಿಂದ ಹಲವಾರು ಬದಲಾವಣೆಗಳು (Changes) ಬಂದಿದೆ.. ಪ್ರತಿನಿತ್ಯ ಶಾಲೆಗೆ(School) ಹೋಗುತ್ತಿದ್ದ ಮಕ್ಕಳ ವಿದ್ಯಾಭ್ಯಾಸದಲ್ಲಿ(Education) ಮಹತ್ವದ ಬದಲಾವಣೆಯಾಗಿದೆ. ಮನುಷ್ಯನ ಜೀವನಶೈಲಿ(Lifestyle) ಕೂಡ ಬದಲಾಗಿದೆ. ಮನೆಯಿಂದ(Home) ಹೊರಗೆ ಹೋದರೆ ಯಾವ ಸಾಂಕ್ರಮಿಕ ರೋಗ ವಕ್ಕರಿಸಿ ಕೊಳ್ಳುತ್ತದೋ ಎಂಬ ಆತಂಕ ಕೂಡ ಪ್ರತಿಯೊಬ್ಬರನ್ನು ಕಾಡುತ್ತಿದೆ.. ಅದರಲ್ಲೂ ಜಗತ್ತು ಆನ್ಲೈನ್ ಎಂಬ ಪ್ರಪಂಚಕ್ಕೆ ಹೇಗೆ ಅಂಟಿಕೊಂಡಿದೆ ಎಂಬುದು ಕೊರೋನಾ ಕಾಲದಲ್ಲಿ ಜಗಜ್ಜಾಹೀರಾಗಿದೆ. ಮನೆಯಲ್ಲಿ ತಿನ್ನುವ ಆಹಾರದಿಂದ ಹಿಡಿದು ತರಕಾರಿಯಿಂದ ಹಿಡಿದು ಮಕ್ಕಳ ವಿದ್ಯಾಭ್ಯಾಸ ಕೂಡ ನಡೆಯಲು ಎಲ್ಲದಕ್ಕೂ ಆನ್ಲೈನ್ ಬೇಕಾಗಿದೆ..

  ಇಷ್ಟರ ಮಟ್ಟಿಗೆ ಮನುಷ್ಯನ ಜೀವನವನ್ನು ಕೊರೋನಾ ಕಾಲದಲ್ಲಿ ಆನ್ಲೈನ್ ಬದಲಾವಣೆ ಮಾಡಿದೆ. ಅದ್ರಲ್ಲೂ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕೊರೋನಾ ಕಾಲದಲ್ಲಿ ಆನ್ಲೈನ್ ಎಜುಕೇಶನ್ ಸಾಕಷ್ಟು ಪರಿಣಾಮ ಬೀರಿದೆ. ಶಾಲೆಗಳಿಗೆ ಪ್ರತಿನಿತ್ಯ ತಪ್ಪದೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳು ಇಂದಿಗೂ ಸಹ ಆನ್ಲೈನ್ ಮೂಲಕ ಪಾಠ ಕೇಳುತ್ತಿದ್ದಾರೆ.. ಆದರೆ ಹೀಗೆ ಮಕ್ಕಳ ವಿದ್ಯಾಭ್ಯಾಸದ ಮೇಲೆ ಸಾಕಷ್ಟು ಪರಿಣಾಮ ನೀರಿರುವ ಆನ್ಲೈನ್ ಶಿಕ್ಷಣದಿಂದ ಅದೆಷ್ಟೋ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

  ಕೋವಿಡ್ ಸಂದರ್ಭದಲ್ಲಿ ಶೇ.67% ಬಾಲಕಿಯರು ವಿದ್ಯಾಭ್ಯಾಸದಿಂದ ವಂಚಿತರು

  ಸೇವ್ ದಿ ಚಿಲ್ಡ್ರನ್ ಸಂಸ್ಥೆ ಮಾಡಿರುವ ವರದಿಯೊಂದರ ಪ್ರಕಾರ ಕೋವಿಡ್ ಸಂದರ್ಭದಲ್ಲಿ ನಡೆದ ಆನ್ಲೈನ್ ತರಗತಿ ಇಂದಾಗಿ ಸಾಕಷ್ಟು ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ.. ಅದ್ರಲ್ಲೂ ಕೊಳಗೇರಿ ಪ್ರದೇಶದ ಶೇಕಡ 67ರಷ್ಟು ಬಾಲಕಿಯರು ಆನ್ಲೈನ್ ತರಗತಿಯಿಂದ ವಂಚಿತರಾಗಿದ್ದಾರೆ ಎಂದು ಕೋವಿಡ್ ಸಂದರ್ಭದಲ್ಲಿ ಕೊಳಗೇರಿ ಪ್ರದೇಶದ ಹೆಣ್ಣು ಮಕ್ಕಳ ಕುರಿತು ಸೇವ್ ದಿ ಚಿಲ್ಡ್ರನ್ ನಡೆಸಿದ ಅಧ್ಯಯನದಲ್ಲಿ ಬಹಿರಂಗ ಆಗಿದೆ.

  ವರ್ಚುವಲ್ ವೇದಿಕೆಯ ಮೂಲಕ ಸೇವ್ ಚಿಲ್ಡ್ರನ್ ನಡೆಸಿದ ಅಧ್ಯಯನದ ವರದಿಯನ್ನು ದಿ ವರ್ಲ್ಡ್ ಆಫ್ ಇಂಡಿಯನ್ ಗರ್ಲ್ಸ್-ವಿಂಗ್ಸ್ 2022” ಶೀರ್ಷಿಕೆ ನೀಡಿ ಬಿಡುಗಡೆ ಮಾಡಲಾಗಿದ್ದು, ಈ ವರದಿಯಲ್ಲಿ ಬಾಲಕಿಯರು ಹೇಗೆ ಕೋವಿಡ್ ಸಂದರ್ಭದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬುದನ್ನು ತಿಳಿಸಲಾಗಿದೆ.

  ಇದನ್ನೂ ಓದಿ: ಅಳಿವಿನಂಚಿನಲ್ಲಿರುವ ಪ್ರಾಣಿ ಹಾಗೂ ಸಸ್ಯ ಸಂಕುಲದ ಉಳಿವಿಗೆ ಕೈಜೋಡಿಸಿ!

  ಬಾಲಕರಿಗಿಂತ ಬಾಲಕಿಯರೆ ಶಿಕ್ಷಣದಿಂದ ವಂಚಿತರು

  ಕೋವಿಡ್ ಸಂದರ್ಭದಲ್ಲಿ ಕೊಳಚೆ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಬಾಲಕರಿಗಿಂತ ಬಾಲಕಿಯರ ಹೆಚ್ಚು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಲ್ಲದೇ ಶೇಕಡ 67ರಷ್ಟು ಬಾಲಕಿಯರು ಆನ್ಲೈನ್ ತರಗತಿಗಳನ್ನು ಹಾಜರಾಗಲು ಸಾಧ್ಯವಾಗದೇ ಶಾಲೆಯನ್ನು ತೊರೆದಿದ್ದಾರೆ.ಇನ್ನು ಬಾಲಕಿಯರ ಶಾಲೆ ತೊರೆಯಲು ಕಾರಣ ಕೋವಿಡ್ ಸಂದರ್ಭದಲ್ಲಿ ಆನ್ಲೈನ್ ತರಗತಿಗೆ ಹಾಜರಾಗಲು ಬೇಕಾದ ಮೊಬೈಲ್ ಇಂಟರ್ನೆಟ್ ಹಾಗೂ ಇನ್ನಿತರ ಮೂಲಸೌಕರ್ಯಗಳ ಕೊರತೆ ಕೂಡ ಆತ್ಮ ಎಂಬುದು ಈ ವರದಿಯಲ್ಲಿ ಬಹಿರಂಗ ಆಗಿದೆ. ಇನ್ನು . ಕೋವಿಡ್ ಮೊದಲು ಹಾಗೂ ಎರಡನೇ ಅಲೆಯಲ್ಲಿ ಎರಡು ವರ್ಷ ಬಾಲಕಿಯರು ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

  ಕೋವಿಡ್ ಸಂದರ್ಭದಲ್ಲಿ ಹೆಚ್ಚಿದ ಬಾಲ್ಯ ವಿವಾಹ

  ಇನ್ನು ಸೇವ್ ಚಿಲ್ಡ್ರನ್ ನಡೆಸಿದ ಅಧ್ಯಯನದಲ್ಲಿ ಮತ್ತೊಂದು ಆಘಾತಕಾರಿ ಅಂಶ ಬಹಿರಂಗವಾಗಿದೆ.. ವಿದ್ಯಾರ್ಥಿನಿಯರು ಕೇವಲ ಶಾಲೆ ತೊರೆದಿರುವುದು ಮಾತ್ರವಲ್ಲದೇ, ಕೋವಿಡ್ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಬಾಲ್ಯವಿವಾಹದ ಸಂಖ್ಯೆ ಹೆಚ್ಚಳ ಆಗಿದೆ. ಹೌದು ಆನ್ಲೈನ್ ಕಾರಣದಿಂದ ಶಿಕ್ಷಣದಿಂದ ವಂಚಿತರಾದ ಬಹುತೇಕ ಬಾಲಕಿಯರಿಗೆ 18 ವರ್ಷ ತುಂಬುವ ಮೊದಲೇ ಮದುವೆ ಮಾಡಿರುವ ಪ್ರಕರಣಗಳು ಅಧಿಕವಾಗಿವೆ. ಕರ್ನಾಟಕ, ಬಿಹಾರ, ಮಹಾರಾಷ್ಟ್ರ, ತೆಲಂಗಾಣ, ದೆಹಲಿ ಭಾಗದಲ್ಲಿ ಬಾಲಕಿಯರ ಕುರಿತು ಸಮೀಕ್ಷೆ ಹಾಗೂ ಅಧ್ಯಯನ ನಡೆಸಿದ್ದು, ಈ ಭಾಗದಲ್ಲಿ 18 ವರ್ಷ ತುಂಬುವ ಮೊದಲೇ ಬಾಲಕಿಯರಿಗೆ ಮದುವೆ ಮಾಡಿ ಬಾಲ್ಯವಿವಾಹ ನಡೆಸಿರುವ ಘಟನೆಗಳೂ ನಡೆದಿವೆ.

  ಅಪೌಷ್ಟಿಕತೆಯಿಂದ ಬಳಲುತ್ತಿರುವ ಹೆಣ್ಣುಮಕ್ಕಳು

  ಇನ್ನು ಬಾಲ್ಯ ವಿವಾಹ ಹಾಗೂ ಶಿಕ್ಷಣದಿಂದ ವಂಚಿತರಾಗಿರುವುದನ್ನು ಹೊರತುಪಡಿಸಿದರೆ ಬಹುತೇಕ ಹೆಣ್ಣುಮಕ್ಕಳು ಕೋವಿಡ್ ಸಂದರ್ಭದಲ್ಲಿ ಅಪೌಷ್ಟಿಕತೆಗೆ ತುತ್ತಾಗಿದ್ದಾರೆ., ಶೇ.68ರಷ್ಟು ಬಾಲಕಿಯರು ಆರೋಗ್ಯ ಹಾಗೂ ಪೌಷ್ಠಿಕ ಆಹಾರ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ, ಶೇ.56ರಷ್ಟು ಮಕ್ಕಳು ಕೋವಿಡ್ ಸಂದರ್ಭದಲ್ಲಿ ಕ್ರೀಡೆ ಹಾಗೂ ಮನರಂಜನೆಯಿಂದ ವಂಚಿತರಾಗಿದ್ದಾರೆ. ಒಟ್ಟಾರೆ, ಕೋವಿಡ್ ಸಂದರ್ಭದಲ್ಲಿ ಬಡ ಹಾಗೂ ಕೊಳಗೇರಿ ಪ್ರದೇಶದಲ್ಲಿ ವಾಸವಿರುವ ಮಕ್ಕಳ ಮೇಲೆ ಅತಿ ಹೆಚ್ಚು ಪರಿಣಾಮ ಬೀರಿದೆ.

  ಇದನ್ನೂ ಓದಿ: ನಾಣ್ಯಗಳನ್ನು ಸಂಗ್ರಹಿಸಿ ಕನಸನ್ನು ನನಸು ಮಾಡಿಕೊಂಡ ತರಕಾರಿ ವ್ಯಾಪಾರಿ

  ವರದಿ ಬಿಡುಗಡೆ ಮಾಡಿ ಮಾತನಾಡಿದ ಸೇವ್ ದಿ ಚಿಲ್ಡ್ರನ್ ಸಿಇಒ ಸುದರ್ಶನ್ ಸುಚಿ, ಕೊಳಗೇರಿ ಹಾಗೂ ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಒಂದು ಹಂತಕ್ಕೆ ತಲುಪುವ ಸಂದರ್ಭದಲ್ಲಿ ಕೋವಿಡ್‌ನಿಂದಾಗಿ ಈ ಕನಸು ಭಗ್ನವಾಗಿದೆ. ನಮ್ಮ ಸಂಸ್ಥೆ ನಡೆಸಿದ ಅಧ್ಯಯನದ ಮೂಲಕ ತೆರೆಮರೆಯ ಸಮಸ್ಯೆಗಳಿಗೆ ಬೆಳಕು ಚೆಲ್ಲಿದೆ. ಈ ವರದಿಯನ್ನು ಆಯಾ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಹೆಣ್ಣು ಮಕ್ಕಳಿಗೆ ಮೂಲಸೌಕರ್ಯ ಪಡೆದುಕೊಳ್ಳಲಲು ನೆರವಾಗಬೇಕು. ಹೆಣ್ಣು ಮಕ್ಕಳ ಅಪೌಷ್ಠಿಕತೆ ನೀಗಿಸುವುದು, ಶಿಕ್ಷಣಕ್ಕೆ ಆದ್ಯತೆ ನೀಡುವುದು, ಖಾಸಗಿ ವಲಯಗಳನ್ನು ಒಳಗೇರಿ ಪ್ರದೇಶದಲ್ಲಿನ ಈ ಮಕ್ಕಳ ಆರೈಕೆಗೆ ಒತ್ತು ನೀಡಲು ಪ್ರೇರೇಪಿಸುವುದು, ಬಾಲಕಿಯ ದನಿ ಎತ್ತಿ ಹಿಡಿಯುವುದು, ಬಾಲಕಿಯರಿಗಾಗಿಯೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದು ಸೇರಿದಂತೆ ಹಲವು ಕಾರ್ಯಕ್ರಮ ಘೋಷಣೆ ಮಾಡಲು ಸಲಹೆ ನೀಡಿದ್ದೇವೆ ಎಂದು ವಿವರಿಸಿದರು.
  Published by:ranjumbkgowda1 ranjumbkgowda1
  First published: