ವಿಮಾನದಲ್ಲಿ ಪ್ರಯಾಣಿಸುವವರಿಗೆ ದೊಡ್ಡ ತಲೆನೋವೆಂದರೆ ಲಗೇಜ್ಗೆ ಕಾಯುವುದು. ಅದರಲ್ಲೂ ಕೆಲವೊಮ್ಮೆ ದೂರ ಪ್ರಯಾಣ ಮಾಡುವ ವೇಳೆ ಲಗೇಜ್ (baggage) ಕಾಯಬೇಕಾದ ಪರಿಸ್ಥಿತಿ ನಿಮಾರ್ಣವಾಗುತ್ತದೆ. ಈ ವರ್ಷದ ಆರಂಭದಲ್ಲಿ, ಚೆನ್ನೈ (Chennai) ವಿಮಾನ ನಿಲ್ದಾಣಕ್ಕೆ ಆಗಮಿಸುವ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ತಮ್ಮ ಲಗೇಜ್ ಪಡೆಯಲು ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು. ಆದರೆ ಪ್ರಯಾಣಿಕರ ಸಂಕಷ್ಟವನ್ನು ಅರಿತುಕೊಂಡು ಬೆಂಗಳೂರು ಮೂಳದ ಸ್ಟಾರ್ಟ್ಅಪ್ ಕಾರ್ಟರ್ಎಕ್ಸ್ (CarterX) ಇದರ ನಿರ್ವಾಹಣೆಯನ್ನು ಮಾಡಲು ಮುಂದಾಗಿದೆ.
2030 ರ ವೇಳೆಗೆ ಭಾರತವು ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ವಿಮಾನ ಪ್ರಯಾಣಿಕರ ಮಾರುಕಟ್ಟೆಯಾಗಿ ಹೊರಹೊಮ್ಮುವ ನಿರೀಕ್ಷೆಯನ್ನು ಹೊಂದಿದೆ. ಆದರೆ ಲಗೇಜ್ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ. ಆದರೆ ಬೆಂಗಳೂರು ಮೂಲದ ಕಾರ್ಟರ್ಎಕ್ಸ್ ಈ ಸಮಸ್ಯೆಯನ್ನು ಹೋಗಲಾಡಿಸಲಿದೆ.
ಕಾರ್ಟರ್ಎಕ್ಸ್ ಸಹ-ಸಂಸ್ಥಾಪಕ ಮತ್ತು ಸಿಇಒ ಹರ್ಷ ವರ್ಧನ್ ಅವರು ಮಾತನಾಡಿ “ವಿಮಾನ ನಿಲ್ದಾಣದ ಲಗೇಜ್ ವರ್ಗಾವಣೆ ನೆರವು ಭಾರತದಲ್ಲಿ ಗಮನಾರ್ಹವಾದ ಹೊಸ ಮಾರುಕಟ್ಟೆಯಾಗಿದೆ. ಸಾಕಷ್ಟು ಸಾಮರ್ಥ್ಯ ಮತ್ತು ವ್ಯಾಪ್ತಿ ಇದೆ’’ ಎಂದು ಹೇಳುತ್ತಾರೆ.
ಹರ್ಷ ವರ್ಧನ್ ಅವರೊಂದಿಗೆ ಸಾಫ್ಟ್ವೇರ್, ನಿರ್ಮಾಣ ಮತ್ತು ಹೂಡಿಕೆಯಲ್ಲಿ 14 ವರ್ಷಗಳ ಅನುಭವದೊಂದಿಗೆ ಬರುವ ರಮ್ಯಾ ರೆಡ್ಡಿ ಕೈಜೋಡಿಸಿಕೊಂಡು ಈ ಸಂಸ್ತೇಯನ್ನು ಮುನ್ನಡೆಸುತ್ತಿದ್ದಾರೆ.
ಏನಿದು ಕಾರ್ಟರ್ಎಕ್ಸ್?
ಅಂದಹಾಗೆಯೇ, ಕಾರ್ಟರ್ಎಕ್ಸ್ ಭಾರತದಾದ್ಯಂತ ವಿಮಾನ ಪ್ರಯಾಣಿಕರಿಗೆ ನಿರ್ಮಾಣವಾದ ಬ್ಯಾಗೇಜ್ ಅಸಿಸ್ಟೆಂಟ್ ಸ್ಟಾರ್ಟ್ಅಪ್ ಆಗಿದೆ. ಇದು ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಸಹಾಯ ಮತ್ತು ಬಾಗಿಲಿನಿಂದ ವಿಮಾನ ನಿಲ್ದಾಣಕ್ಕೆ ಪಿಕ್ ಮತ್ತು ಡ್ರಾಪ್ ಬ್ಯಾಗೇಜ್ ಸೇವೆಗಳಂತಹ ಸೇವೆಯನ್ನು ನೀಡುತ್ತದೆ.
ಇದನ್ನೂ ಓದಿ: WhatsApp avatar feature: ವಾಟ್ಸ್ಆ್ಯಪ್ನಲ್ಲಿ ನಿಮ್ಮ ಅವತಾರವನ್ನೇ ಬದಲಾಯಿಸಬಹುದು! ಅದು ಹೇಗೆ?
ಕಾರ್ಟರ್ಎಕ್ಸ್ ವಿಮಾನ ಪ್ರಯಾಣಿಕರ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ವಿಮಾನ ನಿಲ್ದಾಣವನ್ನು ಪ್ರವೇಶಿಸಲು/ನಿರ್ಗಮಿಸಲು ದೀರ್ಘ ನಡಿಗೆಗಳು, ಕೌಂಟರ್ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
ಪ್ರಸ್ತುತ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ನ ಎಲ್ಲಾ ಟರ್ಮಿನಲ್ಗಳಲ್ಲಿ ಸಂಪೂರ್ಣ ಡಿಜಿಟಲ್ ಸೇವೆಯನ್ನು ನಿರ್ವಹಿಸುತ್ತಿದೆ. ಶೀಘ್ರದಲ್ಲೇ ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಸೇವೆಗಳನ್ನು ಪ್ರಾರಂಭಿಸಲು ಮುಂದಾಗಿದೆ.
ಇನ್ನು ಕಾರ್ಟರ್ಎಕ್ಸ್ ಬ್ಯಾಗೇಜ್ ಅನ್ನು ತ್ವರಿತವಾಗಿ ಎತ್ತಿಕೊಂಡು ಮೊದಲ ಮೈಲಿನಿಂದ ಕೊನೆಯ ಮೈಲಿವರೆಗೆ ಸುರಕ್ಷಿತವಾಗಿ ಸಾಗಿಸಲಾಗುತ್ತದೆ. ಅಧಿಸೂಚನೆ ಮತ್ತು ಟ್ರ್ಯಾಕಿಂಗ್ ಸೇವೆಯ ಮೂಲಕ ಸಾಗಿಸಲಾಗುತ್ತದೆ.
ಅಂದಹಾಗೆಯೇ ಈ ಸ್ಟಾರ್ಟ್ಅಪ್ ಪಿಕ್ ಅಪ್ ಮತ್ತು ಡೆಲಿವರಿಗಾಗಿ 24x7 ಸ್ಲಾಟ್ ಆಧಾರಿತ ಸೇವೆಯನ್ನು ನೀಡುತ್ತದೆ. ಅದರ ಇತರ ಸೇವೆಗಳಲ್ಲಿ ಟ್ಯಾಂಪರ್-ಸ್ಪಷ್ಟ ಪ್ಯಾಕಿಂಗ್, ಪೂರಕ ವಿಮೆ, 24x7 ಬೆಂಬಲ ಮತ್ತು ಉಚಿತ ಕ್ಯಾನ್ಸಲ್ ಮಾಡುವ ಆಯ್ಕೆಯನ್ನು ಒಳಗೊಂಡಿದೆ.
ಪ್ರಸ್ತುತ ಕಾರ್ಟರ್ಎಕ್ಸ್ನಲ್ಲಿ 34 ಜನರ ತಂಡವು ನಾಲ್ಕು ವಿಮಾನ ನಿಲ್ದಾಣಗಳಲ್ಲಿ 24x7 ಸೇವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ವಿಮಾನ ಪ್ರಯಾಣಿಕರಿಗೆ ಮತ್ತು ಲಗೇಶ್ ಕೊಂಡೊಯ್ಯುವ ತಲೆನೋವು ಇರುವವರಿಗೆ ಈ ಸೇವೆಯು ಸಹಾಯಕ್ಕೆ ಬರುತ್ತದೆ. ಅದರಲ್ಲೂ ಪ್ರಸ್ತುತತೆಗೆ ಇದು ತುಂಬಾ ಸಹಕಾರಿಯಾಗಿದೆ. ಬಹುತೇಕರು ಲಗೇಜ್ ಕೊಂಡೊಯ್ಯಲು ಮತ್ತು ಪ್ರಯಾಣಿಸುವ ಸಮಯದಲ್ಲಿ ಇಂತಹ ತಲೆನೋವಿನಿಂದ ಬಳಲುತ್ತಿರುತ್ತಾರೆ. ಅದರೆ ಕಾರ್ಟರ್ಎಕ್ಸ್ ಇದನೆಲ್ಲಾ ಮೀರಿ ಕೆಲಸ ಮಾಡುತ್ತಿದೆ. ಪ್ರಯಾಣಿಕರಿಗೆ ಸಹಾಯ ಮಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ