Birthday: ಈ ವೃದ್ಧನ 95ನೇ ವರ್ಷದ ಹುಟ್ಟುಹಬ್ಬ ವಿಮಾನದಲ್ಲಿ ಆಚರಣೆ! ಹೇಗಿತ್ತು ನೋಡಿ

ಅಪರಿಚಿತರು ಸೇರಿಕೊಂಡು ನಿಮ್ಮ ಹುಟ್ಟುಹಬ್ಬವನ್ನು ಆಚರಿಸಿದರೆ, ಅದರ ಆನಂದವೇ ಬೇರೆ ಮತ್ತು ಅದು ಹೆಚ್ಚು ವಿಶೇಷವಾಗುತ್ತದೆ. ಅಂತಹ ಒಂದು ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಈ ವೀಡಿಯೋದಲ್ಲಿ ಒಂದು ವಿಮಾನದಲ್ಲಿ ತನ್ನ 95ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಸಹ ಪ್ರಯಾಣಿಕರಿಂದ ಆಶ್ಚರ್ಯಚಕಿತರಾಗಿರುವುದನ್ನು ನಾವು ನೋಡಬಹುದಾಗಿದೆ.

ವೃದ್ಧನ 95ನೇ ವರ್ಷದ ಹುಟ್ಟುಹಬ್ಬ ಆಚರಣೆ

ವೃದ್ಧನ 95ನೇ ವರ್ಷದ ಹುಟ್ಟುಹಬ್ಬ ಆಚರಣೆ

  • Share this:
ಒಮ್ಮೊಮ್ಮೆ ಈ ವಿಮಾನ (Flight) ಪ್ರಯಾಣದ ಸಂದರ್ಭದಲ್ಲಿ ಚಿತ್ರ-ವಿಚಿತ್ರವಾದ ಪ್ರಸಂಗಗಳು ನಡೆಯುತ್ತವೆ ಎಂದರೆ ತಪ್ಪಾಗಲಾರದು. ಕೆಲವೊಮ್ಮೆ ವಿಮಾನದಲ್ಲಿ ಪ್ರಯಾಣಿಕರು ಕುಡಿದು ಧಾಂದಲೆ ಮಾಡುವುದು ಹಾಗೂ ಕೆಲ ಸಂದರ್ಭಗಳಲ್ಲಿ ಜನರು ವಿಮಾನದಲ್ಲೇ ಅನಾರೋಗ್ಯಕ್ಕೆ (Illness) ತುತ್ತಾಗುವಂತಹ ಘಟನೆಗಳ ಬಗ್ಗೆ ಕೇಳಿದ್ದೇವೆ. ಅಲ್ಲದೆ ಹಲವು ಬಾರಿ ವಿಮಾನ ಅಪಘಾತಗಳ ಬಗ್ಗೆಯೂ ಕೇಳಿರುತ್ತೇವೆ. ಆದರೆ ಅಪರೂಪಕ್ಕೆ ಎಂಬಂತೆ ಕೆಲವು ಒಳ್ಳೆಯ ಘಟನೆಗಳು ಸಹ ಈ ವಿಮಾನ ಪ್ರಯಾಣದಲ್ಲಿ ನಡೆಯುತ್ತವೆ ಎಂಬುದಕ್ಕೆ ಕೆಲವು ಇತ್ತೀಚಿನ ವೀಡಿಯೋಗಳು ಸಾಕ್ಷಿಯಾಗಿವೆ. ಈ ಹುಟ್ಟುಹಬ್ಬದ ದಿನ (Birthday) ಎಂದರೇ ಯಾರಿಗೆ ತಾನೇ ವಿಶೇಷವಾಗಿರುವುದಿಲ್ಲ ಹೇಳಿ? ಅದರಲ್ಲೂ ನಮ್ಮ ಸ್ನೇಹಿತರ ಮತ್ತು ಕುಟುಂಬದ ಸದಸ್ಯರ ಹುಟ್ಟುಹಬ್ಬ ಇತ್ತೆಂದರೆ ಕೇಳುವುದೇ ಬೇಡ. ಅದು ನಮಗೆ ಒಂದು ಹಬ್ಬವಿದ್ದಂತೆ ಎಂದು ಹೇಳಬಹುದು.

ಆದರೆ ಅಪರಿಚಿತರು ಸೇರಿಕೊಂಡು ನಿಮ್ಮ ಹುಟ್ಟುಹಬ್ಬವನ್ನು ಆಚರಿಸಿದರೆ, ಅದರ ಆನಂದವೇ ಬೇರೆ ಮತ್ತು ಅದು ಹೆಚ್ಚು ವಿಶೇಷವಾಗುತ್ತದೆ. ಅಂತಹ ಒಂದು ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಈ ವೀಡಿಯೋದಲ್ಲಿ ಒಂದು ವಿಮಾನದಲ್ಲಿ ತನ್ನ 95ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಸಹ ಪ್ರಯಾಣಿಕರಿಂದ ಆಶ್ಚರ್ಯಚಕಿತರಾಗಿರುವುದನ್ನು ನಾವು ನೋಡಬಹುದಾಗಿದೆ.

95ನೇ ವರ್ಷದ ಹುಟ್ಟುಹಬ್ಬ ಆಚರಣೆ
ವೀಡಿಯೋದಲ್ಲಿ, ಫ್ಲೈಟ್ ಅಟೆಂಡೆಂಟ್ ಒಬ್ಬ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿ ಪ್ರಕಟಣೆ ಹೊರಡಿಸುತ್ತಾರೆ. ಹುಟ್ಟುಹಬ್ಬದ ದಿನ ಮೇಣದ ಬತ್ತಿಗಳಂತೆ ಅನುಭವ ನೀಡಲು ಪ್ರತಿಯೊಬ್ಬ ಪ್ರಯಾಣಿಕರು ಕಿಟಕಿಯ ಪರದೆಗಳನ್ನು ಎಳೆದು ತಮ್ಮ ಓದುವ ದೀಪಗಳನ್ನು ಆನ್ ಮಾಡುತ್ತಾರೆ. ಅವರೆಲ್ಲರೂ ಆ ಹಿರಿಯ ವ್ಯಕ್ತಿಗೆ ಹುಟ್ಟುಹಬ್ಬದ ಹಾಡನ್ನು ಹಾಡಲು ಶುರು ಮಾಡುತ್ತಾರೆ.

ಫ್ಲೈಟ್ ಅಟೆಂಡೆಂಟ್ ಅವರು "ಮಿಸ್ಟರ್ ಜ್ಯಾಕ್ ಮೆಕಾರ್ಥಿ ಅವರಿಗೆ 95 ವರ್ಷ ವಯಸ್ಸಾಗಿದೆ. ಇಂದು ನೀವು ನಮ್ಮ ವಿಮಾನದಲ್ಲಿರುವುದು ನಮಗೆ ತುಂಬಾ ಸಂತೋಷವಾಗಿದೆ ಮತ್ತು ನಾವೆಲ್ಲರೂ ನಿಮಗೆ ಜನ್ಮದಿನದ ಶುಭಾಶಯಗಳನ್ನು ಹಾಡಿನ ಮೂಲಕ ಹೇಳಲು ಬಯಸುತ್ತೇವೆ" ಎಂದು ಹೇಳುತ್ತಾರೆ.

ಇದನ್ನೂ ಓದಿ: Viral Photo: ಆಗಷ್ಟೇ ಪದವಿ ಪಡೆದ ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ

ಶೀಘ್ರದಲ್ಲಿಯೇ ಇಡೀ ವಿಮಾನದಲ್ಲಿರುವ ಎಲ್ಲಾ ಸಹ ಪ್ರಯಾಣಿಕರು ಆ ಹಿರಿಯ ವ್ಯಕ್ತಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಚಪ್ಪಾಳೆ ಹೊಡೆಯಲು ಶುರು ಮಾಡುತ್ತಾರೆ ಮತ್ತು ಮೂರರ ಎಣಿಕೆಯಲ್ಲಿ ಪ್ರತಿಯೊಬ್ಬರೂ ಹುಟ್ಟುಹಬ್ಬದ ಶುಭಾಶಯಗಳನ್ನು ಹಾಡುತ್ತಾರೆ.

ಟ್ವಿಟ್ಟರ್ ನಲ್ಲಿ ಭಾರಿ ವೈರಲ್ ಆಯಿತು ಈ ವಿಡಿಯೋ
ಯುಎಸ್ ಮೂಲದ ಸೌತ್‌ವೆಸ್ಟ್ ಏರ್‌ಲೈನ್ಸ್ ನಲ್ಲಿ ಸೆರೆ ಹಿಡಿಯಲಾದ ಈ ಸಂತೋಷಕರವಾದ ವೀಡಿಯೋವನ್ನು ಗುಡ್‌ನ್ಯೂಸ್‌ಕರಸ್1 ಎಂಬ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ನಿಂದ ಹಂಚಿಕೊಳ್ಳಲಾಗಿದೆ. ದಿನಾಂಕವಿಲ್ಲದ ಈ ವೀಡಿಯೋವನ್ನು ಇದುವರೆಗೂ 53,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 2,000ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಈ ವೀಡಿಯೋ ಗಳಿಸಿದೆ.ಈ ವೀಡಿಯೋಗೆ ಪ್ರತಿಕ್ರಿಯಿಸಿರುವ ಟ್ವಿಟ್ಟರ್ ಬಳಕೆದಾರರೊಬ್ಬರು "ಜನರು ಈ ರೀತಿಯ ವಿಷಯಗಳಿಗೆ ಒಟ್ಟಿಗೆ ಸೇರಿರುವುದು ಒಳ್ಳೆಯದು.. ಒಳ್ಳೆಯ ಜನರು " ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿಯು "ಜನರು ಹೀಗೆ ಬೇರೆಯವರ ಹುಟ್ಟುಹಬ್ಬವನ್ನು ಆಚರಿಸಿದಾಗ, ಪ್ರಪಂಚಕ್ಕೆ ಅದಕ್ಕಿಂತ ಹೆಚ್ಚಿನದು ಏನು ಬೇಕು. ಇದು ತುಂಬಾ ಸುಂದರವಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.

ಸೌತ್‌ವೆಸ್ಟ್ ಏರ್‌ಲೈನ್ಸ್ ಪ್ರಯಾಣಿಕರಿಗಾಗಿ ಆಯೋಜಿಸಿದ ಮೊದಲ ಹುಟ್ಟುಹಬ್ಬ
ಸೌತ್‌ವೆಸ್ಟ್ ಏರ್‌ಲೈನ್ಸ್ ತನ್ನ ಪ್ರಯಾಣಿಕರಿಗಾಗಿ ಆಯೋಜಿಸಿದ ಮೊದಲ ಹುಟ್ಟುಹಬ್ಬದ ಆಚರಣೆ ಇದಲ್ಲ. ಕಳೆದ ವರ್ಷ ಅಕ್ಟೋಬರ್ ನಲ್ಲಿ ವಿಮಾನದಲ್ಲಿ ಆರು ವರ್ಷ ತುಂಬಿದ ಅವಳಿ ಹುಡುಗಿಯರಿಗಾಗಿ ವಿಮಾನಯಾನ ಸಂಸ್ಥೆ ಇದೇ ರೀತಿಯ ಹುಟ್ಟುಹಬ್ಬದ ಆಚರಣೆಯನ್ನು ಆಯೋಜಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ:  Baby Formula: ಪುಟ್ಟ ಮಕ್ಕಳಿಗಾಗಿ ಎದೆ ಹಾಲು ಮಾರುವ ಮಹಿಳೆ! ಎಷ್ಟು ಕಂದಮ್ಮಗಳ ಹೊಟ್ಟೆ ತುಂಬಿಸಿದ್ದಾಳೆ ನೋಡಿ

ಈ ವರ್ಷದ ಆರಂಭದಲ್ಲಿ, ಜನಪ್ರಿಯ ವಿಮಾನಯಾನ ಸಂಸ್ಥೆಯು ತಮ್ಮ ಪ್ರಯಾಣಿಕರಾದ ಪ್ಯಾಟರ್ಸನ್ ಮತ್ತು ಜೆರೆಮಿ ಸಾಲ್ಡಾ ಅವರಿಗಾಗಿ ವಿವಾಹ ಸಮಾರಂಭವನ್ನು ಸಹ ನಡೆಸಿತು. ಈ ಜೋಡಿ ಲಾಸ್ ವೇಗಾಸ್ ಗೆ ಹೋಗಬೇಕಿದ್ದ ಅವರ ವಿಮಾನವು ರದ್ದಾದಾಗ ಕೊನೆಯ ಕ್ಷಣದಲ್ಲಿ ಅವರ ವಿವಾಹ ಯೋಜನೆಗಳನ್ನು ಬದಲಾಯಿಸಿದ್ದರು ಎಂದು ಹೇಳಲಾಗುತ್ತಿದೆ.
Published by:Ashwini Prabhu
First published: