Viral News: ಹೀಗೂ ಉಂಟೇ..? ಹಾವು ಓಡಿಸೋಕೆ ಹೋಗಿ 13 ಕೋಟಿ ಮೌಲ್ಯದ ಮನೆಗೆ ಬೆಂಕಿ ಹಚ್ಚಿದ ಭೂಪ

Snake: ಮಾಲೀಕನ ದುರದೃಷ್ಟವೋ ಏನೋ ಇದ್ದಿಲನ್ನು ಬೇಗ ಬೆಂಕಿ ಹತ್ತಿಕೊಳ್ಳುವ ವಸ್ತುವಿನ ಪಕ್ಕ ಇರಿಸಿದ್ದ ಕಾರಣ ಬಹುಬೇಗ ಬೆಂಕಿ ಮನೆ ತುಂಬಾ ವ್ಯಾಪಿಸಿ ಹೊತ್ತಿ ಉರಿಯಲು ಆರಂಭಿಸಿದೆ.

ಹಾವು

ಹಾವು

  • Share this:
    ಮನೆಯಲ್ಲಿ(Home) ಹಾವು(Snake),ಬೆಕ್ಕು(Cat), ಜಿರಳೆ(Cockroach) ನೋಣ ಸೇರಿಕೊಂಡಿದ್ದರೆ ಅದನ್ನು ಓಡಿಸೋದಕ್ಕೆ ನೀವು ಏನು ಮಾಡ್ತೀರಾ.. ಜಿರಳೆ, ನೊಣ ಆಗುವ ಸೊಳ್ಳೆಗಳನ್ನು(mosquito) ಓಡಿಸುವುದಕ್ಕೆ ಅಂಗಡಿಯಿಂದ(Shop) ಔಷಧಿಗಳನ್ನು(Medicine) ತಂದು ಅಥವಾ ಮನೆಯಲ್ಲಿ ಏನಾದರೂ ಔಷಧಿಗಳನ್ನು ಮಾಡಿ ಓಡಿಸೋದಕ್ಕೆ ಪ್ರಯತ್ನ ಪಡುತ್ತಾರೆ.. ಹಾಗೆ ಹಾವು ಸೇರಿಕೊಂಡಿದ್ರೆ ಉರುಗ ತಜ್ಞರನ್ನು ಕರೆಸಿ ಹಾವುಗಳ ರಕ್ಷಣೆ ಮಾಡಲಾಗುತ್ತದೆ.. ಆದ್ರೆ ಕೆಲವೊಮ್ಮೆ ವಿಚಿತ್ರ ಎನ್ನುವಂತೆ ಹಾವು,ಬೆಕ್ಕು, ಜಿರಳೆ ನೋಣ ಹಿಡಿಯಲು ಹೋಗಿ ದೊಡ್ಡ ಅವಾಂತರಗಳನ್ನು ಮಾಡಿಕೊಳ್ಳುವ ಕೆಲವರು ಇದ್ದಾರೆ..

    ಹಾವು ಓಡಿಸಲು ಹೋಗಿ ಮನೆಯನ್ನೇ ಸುಟ್ಟ ವ್ಯಕ್ತಿ..!

    ಅಮೇರಿಕದ ಮಾಂಟ್ಗೊಮೆರಿ ಕೌಂಟಿಯ ಮೇರಿಲ್ಯಾಂಡ್ ನಲ್ಲಿ ಪ್ರತಿನಿತ್ಯ ಹಾವುಗಳ ಕಾಟದಿಂದ ಬೇಸತ್ತು ಹೋಗಿದ್ದ ಮನೆಯ ಮಾಲಿಕ ಹಾವುಗಳನ್ನು ಓಡಿಸಲು ನಾನಾ ಪ್ರಯತ್ನ ಮಾಡುತ್ತಿದ್ದ..ಆದ್ರೆ ಮಾಲಿಕ ಮಾಡಿದ ಯಾವುದೇ ಪ್ರಯತ್ನಗಳಿಂದ ಹಾವು ಕಾಟ ಕೊಡುವುದು ಬಿಟ್ಟಿರಲಿಲ್ಲ..ಹೀಗಾಗಿ ಇದ್ದಿಲಿಗೆ ಬೆಂಕಿ ಹಚ್ಚಿ ಹೊಗೆ ಹಾಕುವ ಮೂಲಕ ಹಾವನ್ನು ಓಡಿಸುವ ಪ್ರಯತ್ನವನ್ನು ಮನೆ ಮಾಲೀಕ ಮಾಡಿದ್ದಾನೆ..

    ಇದನ್ನೂ ಓದಿ: ಎರಡಂತಸ್ತಿನ ಮನೆಗೆ 4 ಲಕ್ಷ ವೆಚ್ಚ; 700 ವರ್ಷದ ಹಳೆಯ ತಂತ್ರಜ್ಞಾನ, ಇದು ಮಿಟ್ಟಿ ಮಹಲ್

    ಮಾಲೀಕನ ದುರದೃಷ್ಟವೋ ಏನೋ ಇದ್ದಿಲನ್ನು ಬೇಗ ಬೆಂಕಿ ಹತ್ತಿಕೊಳ್ಳುವ ವಸ್ತುವಿನ ಪಕ್ಕ ಇರಿಸಿದ್ದ ಕಾರಣ ಬಹುಬೇಗ ಬೆಂಕಿ ಮನೆ ತುಂಬಾ ವ್ಯಾಪಿಸಿ ಹೊತ್ತಿ ಉರಿಯಲು ಆರಂಭಿಸಿದೆ.. ಕೊಡಲೇ ಎಚ್ಚೆತ್ತ ಮಾಲೀಕ ತಕ್ಷಣ ಮಾಂಟ್ಗೊಮೆರಿ ಕೌಂಟಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾನೆ. ಆದ್ರೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಯತ್ನ ಮಾಡುವ ವೇಳೆಗಾಗಲೇ 13 ಕೋಟಿಗೂ ಅಧಿಕ ಮೌಲ್ಯದ ಮನೆ ಸುಟ್ಟು ಭಸ್ಮವಾಗಿದೆ. ಸದ್ಯ ಹಾವು ಓಡಿಸಲು ಹೋಗಿ ಮನೆ ಸುಟ್ಟುಹೋದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.



    ಇನ್ನು ಈ ರೀತಿಯ ಘಟನೆ ಇದೇ ಮೊದಲೇನಲ್ಲ ಈ ಹಿಂದೆ ಹಲವು ಕಡೆ ಈ ರೀತಿಯ ಅವಾಂತರಗಳು ಆಗಿ ಮನೆಯನ್ನು ಸುಟ್ಟಿರುವ ಹಲವು ಘಟನೆಗಳು ಇವೆ

    ನೊಣ ಓಡಿಸಲು ಹೋಗಿ ಮನೆ ಸುಟ್ಟಿದ್ದ ವೃದ್ಧ

    ಫ್ರಾನ್ಸ್‌ನ ಡೋರ್ಡೋಗ್ನೆನಲ್ಲಿರುವ 80 ವರ್ಷದ ವೃದ್ಧ ತಮ್ಮ ಮನೆಯಲ್ಲಿ ಊಟಕ್ಕೆ ಸಿದ್ಧ ಮಾಡುತ್ತಿದ್ದರು. ಈ ವೇಳೆ, ನೊಣವೊಂದು ಇವರನ್ನು ಕಾಡುತ್ತಿತ್ತು. ಹೀಗಾಗಿ, ಈ ನೊಣವನ್ನು ಓಡಿಸುವ ಸಲುವಾಗಿ ಪಾಪದ ಈ ವೃದ್ಧ ಎಲೆಕ್ಟ್ರಿಕ್ ಬ್ಯಾಟನ್ನು ಬಳಸಿದ್ದರು.ಇತ್ತ ವೃದ್ಧ ನೋಣ ಓಡಿಸಲು ಬ್ಯಾಟ್ ಬಿಸ್ತ ಇದ್ರೆ, ಅಡುಗೆ ಗ್ಯಾಸ್ ಸಿಲಿಂಡರ್ ಲೀಕ್ ಆಗುತ್ತಿತ್ತು. ಇದು ಇವರಿಗೆ ಗೊತ್ತಿರಲಿಲ್ಲ. ಇವರು ಬ್ಯಾಟ್ ಬೀಸುತ್ತಾ ಮುಂದೆ ಸಾಗುತ್ತಿದ್ದಂತೆಯೇ ಗ್ಯಾಸ್‌ನಿಂದಾಗಿ ಎಲೆಕ್ಟ್ರಿಕ್ ಬ್ಯಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಅಡುಗೆ ಮನೆಗೇ ಬೆಂಕಿ ಹೊತ್ತಿಕೊಂಡಿತ್ತು.. ಹೀಗಾಗಿ ವೃದ್ಧನ ಮನೆ ಸಂಪೂರ್ಣ ಸುಟ್ಟು ಬಸ್ಮವಾಗಿತ್ತು.

    ಇದನ್ನೂ ಓದಿ: Viral News : ಕೊರಿಯರ್​ ಬಾಕ್ಸ್​ನಲ್ಲಿತ್ತು ಬುಸ್​.. ಬುಸ್​.. ನಾಗಪ್ಪ: ಬೆಂಗಳೂರು ಟು ನಾಗಪುರಕ್ಕೆ ಹೋಗಿತ್ತು ಹಾವು!

    ಪ್ರೇಮನಿವೇದನೆ ಮಾಡಲು ಹೋಗಿ ಮನೆ ಸುಟ್ಟಿದ್ದ ಯುವಕ

    ತನ್ನ ಯುವತಿಗೆ ವಿಶೇಷ ರೀತಿಯಲ್ಲಿ ಪ್ರೀತಿ ನಿವೇದನೆ ಮಾಡಬೇಕೆಂದು ಹೋಗಿ ಲಂಡನ್ ನ ಯಾರ್ಕ್ ಶೈರ್ ನಲ್ಲಿ ಯುವಕನೊಬ್ಬ ಮನೆಯನ್ನು ಸುಟ್ಟು ಹಾಕಿದ್ದ.. ಕನ್ನಡ ಗೆಳತಿಗಾಗಿ ಪ್ರೇಮನಿವೇದನೆ ಮಾಡಲು ಕ್ಯಾಂಡಲ್ ಗಳಿಂದ ಯುವಕ ಅಲಂಕಾರ ಮಾಡಿದ್ದ. ಆದರೆ ಯುವಕನ ದುರಾದೃಷ್ಟವೋ ಏನು ಪ್ರೇಮ ನಿವೇದನೆ ಮಾಡುವ ಮುಂಚೆ ಯುವಕನ ಮನೆ ಸುಟ್ಟು ಬಸ್ಮವಾಗಿತ್ತು.

    ಇನ್ನು ಲಂಡನ್ ನಲ್ಲಿ ತನ್ನ ಮನೆಯನ್ನು ಆತನ ಮಾಜಿ ಹೆಂಡತಿಗೆ ನೀಡಬೇಕು ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಇಡೀ ಮನೆಗೆ ತಾನಾಗಿಯೇ ಬೆಂಕಿ ಹಚ್ಚಿ ಮನೆಯನ್ನು ಸುಟ್ಟುಹಾಕಿದ ವಿಲಕ್ಷಣ ಘಟನೆ ಕೂಡ ಈ ಹಿಂದೆ ನಡೆದಿತ್ತು.
    Published by:ranjumbkgowda1 ranjumbkgowda1
    First published: