ಮನೆ ಕಟ್ಟಿನೋಡು ಮದುವೆ ಆಗಿ ನೋಡು ಅನ್ನುತ್ತಾರೆ ದೊಡ್ಡವರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮದುವೆಯೇನೋ ಕಡಿಮೆ ಖರ್ಚಿನಲ್ಲಿ ಆಗಬಹುದು ಆದರೆ ಮನೆಕಟ್ಟಲು ಸಾಧ್ಯವೇ ಇಲ್ಲ. ಏಕೆಂದರೆ ಮನೆ ಕಟ್ಟುವುದು ಒಂದು ಕನಸು ಆದರೆ ಕೊರೊನಾ ಸಮಯದಲ್ಲಿ ಅದನ್ನು ನನಸಾಗಿಸುವ ತುಂಬಾನೇ ಕಷ್ಟ. ಹೀಗಿರುವಾಗ ಅದೊಂದು ಊರಿನಲ್ಲಿ 12 ರೂ.ಗೆ ನಿರ್ಮಿಸಿದ ಮನೆಯೇ ಸಿಗುತ್ತಂತೆ!.
ಹೌದು. ಪೂರ್ಣ ನಿರ್ಮಿಸಿದ ಮನೆ ಸಿಕ್ಕರೆ ಹೇಗಿರುತ್ತೆ. ಅದರಲ್ಲೂ ಕೇವಲ 12ರೂ.ಗೆ ಮನೆ ಖರೀದಿಗೆ ಸಿಕ್ಕರೆ!. ಅಂತಹದೊಂದು ಅವಕಾಶ ಕ್ರೊವೇಷಿಯಾದಲ್ಲಿದೆ.
ಕ್ರೊವೇಷಿಯಾದ ಉತ್ತರ ಭಾಗವಾಗಿರುವ ಲೆಗ್ರಾಡ್ ನಗರದಲ್ಲಿ 12 ರೂ.ಗೆ ನಿರ್ಮಿಸಿದ ಮನೆಯನ್ನೇ ಖರೀದಿಸಬಹುದಾಗಿದೆ. ಇಂತಹದೊಂದು ಆಫರ್ ಅಲ್ಲಿನ ಸರ್ಕಾರವೇ ಪ್ರಕಡಿಸಿದೆ. ಕ್ರುವೇಷಿಯಾದ ಕರೆನ್ಸಿ ಕುನಾ. ಒಂದು ಕೂನಾಗೆ ಮನೆ ಮಾರಾಟ ಮಾಡುತ್ತಿದೆ. ಭಾರತದ ಕರೆನ್ಸಿಗೆ ಹೋಲಿಸಿದರೆ 12 ರೂ.ಗೆ ಮನೆ ಮಾರುತ್ತಿದೆ.
ಅಂದಹಾಗೆಯೇ, ಇಷ್ಟೊಂದು ಕಡಿಮೆಗೆ ನಿರ್ಮಿಸಿದ ಮನೆಯನ್ನೇ ಏಕೆ ಮಾರಾಟ ಮಾಡುತ್ತಿದೆ ಅಲ್ಲಿನ ಸರ್ಕಾರ?. ಅದಕ್ಕೂ ಕಾರಣವಿದೆ. ಒಂದು ಶತಮಾನದ ಹಿಂದೆ ಆಸ್ಟ್ರೋ- ಹಂಗೇರಿಯನ್ ಸಾಮ್ರಾಜ್ಯ ಇಲ್ಲಿ ಆಡಳಿತ ನಡೆಸುತ್ತಿತ್ತು. ಅದು ನಶಿಸಿದ ಬಳಿಕ ಅಲ್ಲಿನ ಜನಸಂಖ್ಯೆ ಕಡಿಮೆಯಾಗುತ್ತಾ ಬಂತು.
ಬಹುತೇಕರು ಆ ಸ್ಥಳವನ್ನು ಬಿಟ್ಟು ಬೇರೆಯೆಡೆ ತೆರಳಿದರು. ಹಾಗಾಗಿ ಅಲ್ಲಿ ಖಾಲಿ ಮನೆಗಳು ಉಳಿಯಿತು. ಸದ್ಯ ಆ ಮನೆಗಳನ್ನು ಮಾರಾಟ ಮಾಡಲು ಅಲ್ಲಿನ ನಗರಾಡಳಿತ ನಿರ್ಧರಿಸಿದೆ. ಹೊಸ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಕೇವಲ 12 ರೂ.ಗೆ ಮನೆ ಮಾರಾಟ ಮಾಡುತ್ತಿದೆ.
ಹಂಗೇರಿ ಗಡಿಗೆ ಸಮೀಪವಿರುವ ಈ ಲೆಗ್ರಾಡ್ ಪಟ್ಟಣದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ವಾಸಿಸುತ್ತಾರೆ. ಆದರೆ ಖಾಲಿ ಇರುವ ಮನೆಯನ್ನು ಮಾರಲು ಕೆಲವು ಷರತ್ತು ವಿಧಿಸಲಾಗಿದೆ. 45 ವರ್ಷದೊಳಗಿನವರು ಮನೆ ಕೊಂಡುಕೊಳ್ಳಬಹುದಾಗಿದೆ. ಆದರೆ ಆರ್ಥಿಕವಾಗಿ ಸಬಲತರಾಗಿದ್ದವರು ಮತ್ತು 15 ವರ್ಷಗಳ ಕಾಲ ವಾಸ ಮಾಡುವವರು ಮಾತ್ರ ಈ ಮನೆಯಲ್ಲಿ ನಿಲ್ಲುವ ಒಪ್ಪಂದ ಮಾಡಬೇಕು.
ಸದ್ಯ ಅಲ್ಲಿನ ಸರ್ಕಾರ ಹೊರಡಿಸಿದ ಆಫರ್ಗೆ ವಿದೇಶದಿಂದ ಮನೆಕೊಳ್ಳಲು ಜನ ಬರುತ್ತಿದ್ದಾರೆ. ರಷ್ಯಾ, ಉಕ್ರೇನ್, ಟರ್ಕಿ, ಅರ್ಜೆಂಟೆನಾ ದೇಶದಿಂದ ಜನ ಬರುತ್ತಿದ್ದಾರಂತೆ. ಈಗಾಗಲೇ 19 ಮನೆಗಳು ಸೇಲ್ ಆಗಿವೆಯಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ