• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Cancer Patient: ಕ್ಯಾನ್ಸರ್ ರೋಗಿಯ ಅಂತಿಮ ಕೋರಿಕೆಯನ್ನು ನೆರವೇರಿಸಿದ ಆಸ್ಪತ್ರೆ ಸಿಬ್ಬಂದಿ!

Cancer Patient: ಕ್ಯಾನ್ಸರ್ ರೋಗಿಯ ಅಂತಿಮ ಕೋರಿಕೆಯನ್ನು ನೆರವೇರಿಸಿದ ಆಸ್ಪತ್ರೆ ಸಿಬ್ಬಂದಿ!

ಕ್ಯಾನ್ಸರ್ ರೋಗಿಯ ಕೊನೆ ಆಸೆ ಈಡೇರಿಸಿದ ಆಸ್ಪತ್ರೆ ಸಿಬ್ಬಂದಿ

ಕ್ಯಾನ್ಸರ್ ರೋಗಿಯ ಕೊನೆ ಆಸೆ ಈಡೇರಿಸಿದ ಆಸ್ಪತ್ರೆ ಸಿಬ್ಬಂದಿ

ಪಣಜಿಯ ಕ್ಯಾನ್ಸರ್ ಆಸ್ಪತ್ರೆಯಾದ ಶಾಂತಿ ಆವೇದನ ಸದನದಲ್ಲಿ ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದ ಆಶ್ಲೇ ತಮ್ಮ ಕೊನೆಯ ಇಚ್ಛೆಯನ್ನು ವೈದ್ಯರಿಗೆ ತಿಳಿಸಿದ್ದು ಅದರಂತೆ ವೈದ್ಯರು ಹಾಗೂ ಆಶ್ಲೇಯ ಕುಟುಂಬಸ್ಥರು, ಗೆಳೆಯರು ಅವರಿಗಾಗಿ ವಿದಾಯ ಪಾರ್ಟಿಯನ್ನು ಆಯೋಜಿಸಿದ್ದಾರೆ.

  • Trending Desk
  • 3-MIN READ
  • Last Updated :
  • Share this:

ತಾನು ಯಾವಾಗ ಬೇಕಾದರೂ ಸಾಯುತ್ತೇನೆ(Died) ಎಂಬುದು ಗೊತ್ತಿದ್ದರೂ ತನ್ನ ವಿದಾಯವನ್ನು ಸಂತಸದಿಂದ ಕಳೆಯಬೇಕೆಂಬ ಕ್ಯಾನ್ಸರ್ ರೋಗಿಯೊಬ್ಬರ (Cancer Patient) ಅದಮ್ಯ ಜೀವನೋತ್ಸಾಹ ಸಾಯುವವರನ್ನು ಬದುಕಿಸುವಷ್ಟು ಪ್ರೇರಣಾದಾಯಕವಾಗಿದೆ. ಅಂತಿಮ ಕ್ಷಣಗಳನ್ನು ಸಂತೋಷದಿಂದ ಕಳೆಯಬೇಕೆಂಬ ಆಸೆಯಿಂದ 28 ರ ಹರೆಯದ ಕ್ಯಾನ್ಸರ್ ರೋಗಿ ಆಶ್ಲೇ ನೋರೊನ್ನಾ ತಮ್ಮ ಬೀಳ್ಕೊಡುಗೆ ಪಾರ್ಟಿಯನ್ನು ಆಯೋಜಿಸಬೇಕೆಂದು ತಮ್ಮ ವೈದ್ಯರಲ್ಲಿ(Doctor) ಹಾಗೂ ಸ್ನೇಹಿತರಲ್ಲಿ(Friend) ವಿನಂತಿಸಿದ್ದಾರೆ.


ಎಲ್ಲರ ಮುಖದಲ್ಲಿ ನಗು ಸಂತೋಷ ನೋಡಬೇಕೆಂಬ ಆಸೆ


ಮೈಲೋಯ್ಡ್ ಲ್ಯುಕೇಮಿಯಾದ ಅಂತಿಮ ಘಟ್ಟದಲ್ಲಿದ್ದ ಆಶ್ಲೇಗೆ ತನ್ನ ಮರಣ ಸಮೀಪದಲ್ಲಿದೆ ಎಂಬುದರ ಅರಿವಿತ್ತು ಅದಾಗ್ಯೂ ತಾನು ಸಾಯುವ ಸಮಯದಲ್ಲಿ ಎಲ್ಲರ ಮುಖದಲ್ಲಿ ನಗು ಹಾಗೂ ಉಲ್ಲಾಸವನ್ನು ನೋಡಬೇಕೆಂಬ ಅದಮ್ಯ ಬಯಕೆಯನ್ನು ಆಶ್ಲೇ ಹೊಂದಿದ್ದರು.


ಪಣಜಿಯ ಕ್ಯಾನ್ಸರ್ ಆಸ್ಪತ್ರೆಯಾದ ಶಾಂತಿ ಆವೇದನ ಸದನದಲ್ಲಿ ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದ ಆಶ್ಲೇ ತಮ್ಮ ಕೊನೆಯ ಇಚ್ಛೆಯನ್ನು ವೈದ್ಯರಿಗೆ ತಿಳಿಸಿದ್ದು ಅದರಂತೆ ವೈದ್ಯರು ಹಾಗೂ ಆಶ್ಲೇಯ ಕುಟುಂಬಸ್ಥರು, ಗೆಳೆಯರು ಅವರಿಗಾಗಿ ವಿದಾಯ ಪಾರ್ಟಿಯನ್ನು ಆಯೋಜಿಸಿದ್ದಾರೆ.


ಇದನ್ನೂ ಓದಿ: Snake Bite: ಬ್ಯಾಗ್​ನಲ್ಲಿ ಹಾವಿಟ್ಟುಕೊಂಡು ಆಸ್ಪತ್ರೆಗೆ ಓಡಿಬಂದ ಮಹಿಳೆ; ಆಕೆ ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ವೈದ್ಯರು!


ಬೇಸರದ ಮುಖಗಳನ್ನು ತನಗೆ ನೋಡಲು ಇಷ್ಟವಿಲ್ಲ ಎಂದು ತಿಳಿಸಿದ್ದ ಆಶ್ಲೇ ನನ್ನ ಜೀವನವನ್ನು ಪ್ರತಿಯೊಬ್ಬರೂ ಆಚರಿಸುವಂತಿರಬೇಕು ಎಂದು ವಿನಂತಿಸಿಕೊಂಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹಾಗೂ ಸ್ಥಾಪಕರಾದ ಲೋರ್ಡಸ್ ಸೋರಸ್ ತಿಳಿಸಿದ್ದಾರೆ.


ಜೀವನದ ಅರ್ಥವನ್ನೇ ಬದಲಾಯಿಸಿದ ಆಶ್ಲೇ


ಪ್ರತಿಯೊಬ್ಬರೂ ಜೀವನದ ಅಂತಿಮ ಕ್ಷಣದಲ್ಲಿ ತೀವ್ರವಾದ ನೋವಿನಿಂದ ಬಳಲುತ್ತಿದ್ದರೆ ಆಶ್ಲೇ ಜೀವನದ ಅರ್ಥವನ್ನೇ ಬದಲಾಯಿಸಿದ್ದಾರೆ ಹಾಗೂ ತನ್ನ ಜೀವನವನ್ನು ಹಬ್ಬದಂತೆ ಆಚರಿಸಬೇಕೆಂಬ ಬಯಕೆ ಹೊಂದಿದ್ದಾರೆ ಎಂದು ಲೋರ್ಡಸ್ ತಿಳಿಸಿದ್ದಾರೆ.


ಆದರೆ ಆಶ್ಲೇಗಿದ್ದ ಸಮಯ ತುಂಬಾ ಕಡಿಮೆ ಇತ್ತು ಹಾಗಾಗಿ ಶಾಂತಿ ಆವೇದನ ಸದನದ ತಂಡವು ಪಾರ್ಟಿಯನ್ನು ಆಯೋಜಿಸಲು ಸಕಲ ಸಿದ್ಧತೆಗಳನ್ನು ವೇಗವಾಗಿ ಮಾಡಿಕೊಂಡರು ಹಾಗೂ ಆಶ್ಲೇಯನ್ನು ತಮ್ಮ ಆನಂದದಲ್ಲಿ ತೊಡಗಿಸಿಕೊಂಡರು.


ಆಶ್ಲೇಗೆ ಆಮ್ಲಜನಕದ ಪೂರೈಕೆಯನ್ನು ಮೂಗಿನ ತೂರುನಳಿಗೆಯ ಮೂಲಕ ಮಾಡಲಾಗುತ್ತಿತ್ತು. ಅದಾಗ್ಯೂ ಆಶ್ಲೇ ಕೋರಿಕೆಯ ಮೇರೆಗೆ ಶೇವ್ ಮಾಡಿ ಕೂದಲನ್ನು ಟ್ರಿಮ್ ಮಾಡಿ ನಯವಾದ ಮೇಕಪ್ ಅನ್ನು ಮಾಡಲಾಯಿತು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಪಾರ್ಟಿಯನ್ನು ಆಯೋಜಿಸಲು ಸಹಾಯ ಮಾಡಿದ ಸಾಗರಿಕಾ ಪ್ರಭು ಗಾಂವಕರ್ ತಿಳಿಸಿದ್ದಾರೆ.


ಖುಷಿಯಾಗಿದ್ದ ಕ್ಯಾನ್ಸರ್ ರೋಗಿ


ಆಶ್ಲೇಯನ್ನು ಸಕಲ ರೀತಿಯಲ್ಲಿ ಸಿದ್ಧಪಡಿಸಿ ಕೊನೆಗೆ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಬರಲಾಯಿತು ಎಂದು ಸಾಗರಿಕಾ ತಿಳಿಸಿದ್ದಾರೆ. ಸಾವು ಬಗಲಲ್ಲಿದ್ದರೂ ಆಶ್ಲೇ ಮನಬಿಚ್ಚಿ ಮಾತನಾಡಿದರು ಹಾಗೂ ಹಾಸ್ಯಮಾಡಿ ನಗಿಸಿದರು.


ಪ್ರತಿಯೊಬ್ಬರನ್ನೂ ಖುಷಿಯಾಗಿರುವಂತೆ ನೋಡಿಕೊಂಡರೂ ಎಂದು ಸಾಗರಿಕಾ ಆ ದಿನವನ್ನು ನೆನಪಿಸಿಕೊಂಡರು. ಆತನಿಗೆ ಹೆಚ್ಚು ಸಮಯವಿಲ್ಲ ಎಂಬುದರ ಅರಿವಿತ್ತು ಹಾಗಾಗಿ ತನ್ನನ್ನು ಖುಷಿಯಾಗಿರಿಸುವ ಸಕಲ ಪ್ರಯತ್ನವನ್ನು ಆಶ್ಲೇ ಮಾಡುತ್ತಿದ್ದರು.


ಕಣ್ಣುಗಳನ್ನು ಮುಚ್ಚಲು ಆತ ಭಯಪಡುತ್ತಿದ್ದರು. ತಮ್ಮ ಮೆಚ್ಚಿನ ಮದ್ಯವನ್ನು ಆತ ಕೇಳಿದ್ದರು ಎಂದು ಸಾಗರಿಕಾ ಆ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.


ಹೊಸ ದಿರಿಸು ಧರಿಸಿ ದೇವತೆಯಂತೆ ಕಾಣುತ್ತಿದ್ದರು


ಪಾರ್ಟಿ ನಡೆಯುತ್ತಿದ್ದಂತೆಯೇ ಯಾರನ್ನೂ ಪಾರ್ಟಿಯಿಂದ ನಿರ್ಗಮಿಸಲು ಆಶ್ಲೇ ಬಿಡುತ್ತಿರಲಿಲ್ಲ ಆದರೆ ಆಶ್ಲೇ ಕೊಂಚ ಆರಾಮ ಹೊಂದಲಿ ಎಂದು ಅತಿಥಿಗಳು ಆತನನ್ನು ಸಮಾಧಾನಪಡಿಸಿ ತೆರಳುತ್ತಿದ್ದರು ಎಂದು ಆಶ್ಲೇ ಸ್ನೇಹಿತರು ತಿಳಿಸಿದ್ದಾರೆ.


ಇದನ್ನೂ ಓದಿ: Optical Illusion: ಈ ಚಿತ್ರದಲ್ಲಿ ಒಂದು ಪ್ರಾಣಿ ಇದೆ! ಬುದ್ಧಿವಂತರಾಗಿದ್ರೆ ಹತ್ತೇ ಸೆಕೆಂಡ್‌ನಲ್ಲಿ ಕಂಡು ಹಿಡಿಯಿರಿ!


ಹೀಗೆ ಪಾರ್ಟಿಯಲ್ಲಿ ಆನಂದದಿಂದ ಖುಷಿಯಿಂದ ಮೋಜು ಮಾಡಿದ ಆಶ್ಲೇ ಆ ದಿನವೇ ರಾತ್ರಿ ಮಲಗಿದವರು ಮತ್ತೆಂದೂ ಏಳಲಿಲ್ಲ ಎಂದು ಆಶ್ಲೇ ಕುಟುಂಬಸ್ಥರು ಸ್ನೇಹಿತರು ನೆನಪು ಮಾಡಿಕೊಳ್ಳುತ್ತಾರೆ.


ಇಂತಹ ವಿದಾಯ ಪಾರ್ಟಿಗಳು ನಮಗೆ ಹೊಸದಾಗಿದೆ, ಆಶ್ಲೇ ತುಂಬಾ ಸಂತೋಷದಿಂದ ಹಾಗೂ ಶಾಂತಿಯಿಂದ ಮರಣ ಹೊಂದಿದರು. ಬೆಳಗ್ಗೆ 3.45 ರ ಸುಮಾರಿಗೆ ಆಶ್ಲೇ ಮರಣ ಹೊಂದಿದ್ದು ಆಶ್ಲೇ ಕುಟುಂಬದವರು ಅವರಿಗಾಗಿಯೇ ತಂದಿದ್ದ ಹೊಸ ದಿರಿಸಿನಲ್ಲಿ ದೇವತೆಯಂತೆ ಆತ ಕಾಣುತ್ತಿದ್ದರು ಎಂದು ಶಾಂತಿ ಆವೇದನದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.ಇತರ ರೋಗಿಗಳಿಗೆ ಮಾದರಿ


ಕ್ಯಾನ್ಸರ್‌ ರೋಗಿಗಳು ಹೆಚ್ಚಾಗಿ ಮರಣಕ್ಕೆ ಭಯಪಡುತ್ತಾರೆ ಆದರೆ ಆಶ್ಲೇ ಇದೆಲ್ಲಕ್ಕಿಂತ ಭಿನ್ನವಾಗಿ ಮರಣವನ್ನು ಸ್ವಾಗತಿಸಿದ್ದಾರೆ ಹಾಗೂ ತಮಗಾಗಿ ವಿದಾಯ ಕೂಟವನ್ನು ಆಯೋಜಿಸಲು ಕೇಳಿಕೊಂಡಿದ್ದರು.


ಆಶ್ಲೇ ಧೈರ್ಯ ಹಾಗೂ ಧನಾತ್ಮಕ ಆಲೋಚನೆಯಿಂದ ತಮ್ಮ ಅಂತಿಮ ಕ್ಷಣಗಳನ್ನು ಎದುರಿಸಿದ್ದಾರೆ ಎಂದು ವೈದ್ಯರಾದ ಸಮೀರ್ ತಿಳಿಸಿದ್ದಾರೆ. 

Published by:Latha CG
First published: