Viral Video: ಲೈವ್‌ ಟೆಲಿಕ್ಯಾಸ್ಟ್‌ ವೇಳೆ ಹವಾಮಾನಶಾಸ್ತ್ರಜ್ಞರ ಕೈಯಲ್ಲಿ ಸ್ಫೋಟಗೊಂಡ ಅಗ್ನಿಶಾಮಕ ಯಂತ್ರ.

ಕೆಂಟುಕಿಯ ಲೂಯಿಸ್‌ವಿಲ್ಲೆ ನಗರದಲ್ಲಿ ಅಧಿಕ ಬಿಸಿಲು ಹಾಗೂ ಹೆಚ್ಚಿನ ತಾಪಮಾನ ಇದ್ದ ಕಾರಣ ಅವರು ತಮಾಷೆ ಮಾಡಲು ಹೋಗಿ ವರದಿ ಹವಾಮಾನ ವರದಿ ಮಾಡುತ್ತಿದ್ದ ವೇಳೆ ಬೆಂಕಿಯನ್ನು ನಂದಿಸುವ ಅಗ್ನಿಶಾಮಕ ಸಾಧನವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು.

ವೈರಲ್ ವಿಡಿಯೋದ ದೃಶ್ಯ

ವೈರಲ್ ವಿಡಿಯೋದ ದೃಶ್ಯ

  • Share this:
ಏನೋ ಮಾಡಲು ಹೋಗಿ ಇನ್ನೇನೋ ಆಯ್ತು ಎಂದು ಹಲವು ಜನರು ಆಗಾಗ್ಗೆ ಹೇಳುತ್ತಿರುತ್ತಾರೆ. ಅದೇ ರೀತಿ ಅಮೆರಿಕದ ಕೆಂಟುಕಿಯ ಲೂಯಿಸ್‌ವಿಲ್ಲೆಯಲ್ಲಿ ಹವಾಮಾನಶಾಸ್ತ್ರಜ್ಞರಿಗೆ ಆಗಿದೆ. ಅವರು ಸ್ಥಳೀಯ ಹವಾಮಾನದ ಕುರಿತು ಮಾಹಿತಿ ನೀಡುತ್ತಿದ್ದಾಗ ತಮಾಷೆ ಮಾಡಲು ಹೋಗಿ ಇನ್ನೇನೋ ಆಗುತ್ತದೆ. ಡಬ್ಲ್ಯೂಡಿಆರ್‌ಬಿ ನ್ಯೂಸ್‌ ಸ್ಟೂಡಿಯೋದಲ್ಲಿ ಅಧಿಕ ತಾಪಮಾನದ ಕುರಿತು ವರದಿ ಮಾಡುತ್ತಿದ್ದಾಗ ಈ ಘಟನೆ ನಡೆದಿದಿದೆ. ಈ ಘಟನೆಯ ವಿಡಿಯೋ ಕ್ಲಿಪ್‌ ಅನ್ನು ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ಶೇರ್‌ ಮಾಡಲಾಗಿದೆ. ಆ ಹವಾಮಾನಶಾಸ್ತ್ರಜ್ಞನ(Meteorologist ) ಹೆಸರು ಜೂಡ್ ರೆಡ್‌ಫೀಲ್ಡ್(Jude Redfield,) ಅವರು ಸ್ಟುಡಿಯೋದಲ್ಲಿ ಕಾಣಿಸಿಕೊಂಡ ಸಮಯದಲ್ಲಿ ನಗರವು ದಾಖಲೆಯ ಶಾಖದ ಅಲೆಗೆ ಸಾಕ್ಷಿಯಾಗಿತ್ತು. ಅಂದ ಹಾಗೆ ಆ ಘಟನೆ ಏನು ಅಂತೀರಾ.. ಮುಂದೆ ಓದಿ..

ಕೆಂಟುಕಿಯ ಲೂಯಿಸ್‌ವಿಲ್ಲೆ ನಗರದಲ್ಲಿ ಅಧಿಕ ಬಿಸಿಲು ಹಾಗೂ ಹೆಚ್ಚಿನ ತಾಪಮಾನ ಇದ್ದ ಕಾರಣ ಅವರು ತಮಾಷೆ ಮಾಡಲು ಹೋಗಿ ವರದಿ ಹವಾಮಾನ ವರದಿ ಮಾಡುತ್ತಿದ್ದ ವೇಳೆ ಬೆಂಕಿಯನ್ನು ನಂದಿಸುವ ಅಗ್ನಿಶಾಮಕ ಸಾಧನವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು.

ಆದರೆ, ಈ ಘಟನೆಯಲ್ಲಿ ಅವರು ಮಾಡಿದ ಜೋಕ್‌ ಅವರಿಗೆ ತಿರುಗು ಮುರುಗಾಗಿದೆ. ಅಂದರೆ ಅಗ್ನಿ ನಂದಿಸುವ ಯಂತ್ರ ಅವರ ಮುಂದೆಯೇ ಸ್ಫೋಟಗೊಂಡು ಎಲ್ಲೆಡೆ ಹೊಗೆ ತುಂಬಿಕೊಂಡಿದೆ. ರೆಡ್‌ಫೀಲ್ಡ್ ತಾಪಮಾನವನ್ನು ಟಿವಿಯಲ್ಲಿ ಬರುವ ಗ್ರಾಫಿಕ್ಸ್‌ನತ್ತ ಆ ಸಾಧನವನ್ನು ತಿರುಗಿಸಿದಾಗ ಮತ್ತು ಅದನ್ನು ಆಫ್ ಮಾಡಲು ಹೋದಾಗ, ಆ ಯಂತ್ರ ಇದ್ದಕ್ಕಿದ್ದಂತೆ 'ಪಾಪ್' ಎಂಬ ಶಬ್ದ ಮಾಡಿತು ಮತ್ತು  ಬಾಕ್ಸ್‌ ನೆಲದ ಮೇಲೆ ಬಿದ್ದಿತು.


ನಂತರ, ಅದನ್ನು ಸ್ಕ್ರೀನ್‌ನಿಂದ ಹೊರಕ್ಕೆ ಹಾರಿಸಿದಂತೆ ಹೊಗೆ ಹೊರಹೊಮ್ಮಿತು, ಮತ್ತು ಆಘಾತಕ್ಕೊಳಗಾದ ರೆಡ್‌ಫೀಲ್ಡ್ ಆ ಸಾಧನದ ನಳಿಕೆಯನ್ನು ಹಿಡಿದಿಟ್ಟುಕೊಂಡರು. ಅದೃಷ್ಟವಶಾತ್, ಜೂಡ್ಗೆ ಈ ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ. ಒಂದೆರಡು ಸೆಕೆಂಡ್‌ಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಹಲವರು ಇದನ್ನು ವೈರಲ್‌ ಮಾಡುತ್ತಿದ್ದಾರೆ. ಮತ್ತು ಇದು ಹಳೆಯ ವಿಡಿಯೋ ಆಗಿದ್ದರೂ, ಮತ್ತೆ ವೈರಲ್‌ ಆಗಿದೆ.

ಇದನ್ನೂ ಓದಿ: ಕುಸಿತ ಕಂಡ Bitcoin ಮೌಲ್ಯ: ಟಾಪ್ ಕ್ರಿಪ್ಟೋ ಕರೆನ್ಸಿಗಳ ಬೆಲೆ ಹೇಗಿದೆ?

2019ರಲ್ಲಿ ಮೊದಲ ಬಾರಿಗೆ ಈ ವಿಡಿಯೋವನ್ನು ಶೇರ್‌ ಮಾಡಲಾಗಿತ್ತು. ಆ ವೇಳೆಯೂ ಇದು ಸಾವಿರಾರು ವೀಕ್ಷಣೆಗಳನ್ನು ಪಡೆದಿತ್ತು. ಈಗಲೂ ಸಹ ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಮತ್ತೆ ಶೇರ್‌ ಮಾಡಲಾಗಿದ್ದು, ಈ ವಿಡಿಯೋ 6175 ವೀಕ್ಷಣೆಗಳನ್ನು ಪಡೆಯಿತು.

ಇನ್ನು, ರೆಡ್‌ಫೀಲ್ಡ್ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತನ್ನ 'ಪ್ರಸಾರ ಇತಿಹಾಸದ ಐದು ಪ್ರಮುಖ ಕ್ಷಣಗಳಲ್ಲಿ ಒಂದು' ಎಂದು ತಮಾಷೆ ಮಾಡಿದ್ದಾರೆ. ಟ್ವಿಟ್ಟರ್‌ ಬಳಕೆದಾರರೊಬ್ಬರು ಹಂಚಿಕೊಂಡ ಈ ವಿಡಿಯೋ ಕ್ಲಿಪ್‌ಗೆ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಹಲವು ಟ್ವೀಟಿಗರು, ಅದೃಷ್ಟವಶಾತ್‌ ಯಾವುದೇ ಅಪಾಯವಾಗದೆ ತಪ್ಪಿಸಿಕೊಂಡಿದ್ದಾರೆ ಎಂದು ಈ ವಿಡಿಯೋ ನೋಡಿ ಕಮೆಂಟ್‌ ಮಾಡಿದ್ದಾರೆ.

ಈ ರೀತಿಯ ಘಟನೆಗಳು ಇದೇ ಮೊದಲೇನಲ್ಲ. ಕೆನಡಾದ ಹವಾಮಾನಶಾಸ್ತ್ರಜ್ಞ ಆಂಥೋನಿ ಫರ್ನೆಲ್ ಟೊರಂಟೋದಲ್ಲಿನ ಸ್ಥಿತಿಗತಿಗಳ ಕುರಿತು ಅಪ್‌ಡೇಟ್ ನೀಡುತ್ತಿದ್ದಾಗ ಅವರ ಮನೆಯ ಮುದ್ದಿನ ನಾಯಿ ಆಂಥೋನಿ ಬಳಿ ಹೋಗಿ ಕ್ಯಾಮರಾದಲ್ಲಿ ಕಾಣಿಸಿಕೊಂಡಿತು. ಅದು ಆಹಾರಕ್ಕಾಗಿ ಹುಡುಕುತ್ತಿತ್ತು ಎಂದು ಫರ್ನೆಲ್‌ ಆ ವೇಳೆ ಹೇಳಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆಗಸ್ಟ್ 28ರಂದು ಕೆನಡಾದಲ್ಲಿ ಹವಾಮಾನ ಮುನ್ಸೂಚನೆಯನ್ನು ವಿವರಿಸುತ್ತಿದ್ದ ಪ್ರಸಾರದಲ್ಲಿದ್ದ ಗ್ಲೋಬಲ್ ನ್ಯೂಸ್‌ನ ಮುಖ್ಯ ಹವಾಮಾನ ತಜ್ಞ ಫರ್ನೆಲ್ ಕಡೆಗೆ ಮಿನಿ ಗೋಲ್ಡನ್‌ ಡೂಡಲ್ ನಡೆದು ಬರುವುದನ್ನು ನಾವು ನೋಡಬಹುದು.

ಇದನ್ನೂ ಓದಿ: ಮಗಳು ಹುಟ್ಟಿದ ಖುಷಿಗೆ ಈತ 40 ಸಾವಿರ ಪಾನಿಪುರಿ ಹಂಚಿ ಸಂಭ್ರಮಿಸಿದ್ದಾನೆ, ಯಾರು ಈ ಆದರ್ಶ ತಂದೆ?

"ಹೌದು, ಸ್ಟಾರ್ಮ್ ಕಟ್ಟಡದಲ್ಲಿದೆ, ಕೆಲವು ಟ್ರೀಟ್‌ಗಳನ್ನು ಪಡೆಯುತ್ತಿದೆ, ತೆಳುವಾದ ಗಾಳಿಯಲ್ಲಿ ನಡೆಯುತ್ತಿದೆ'' ಎಂದು ಫರ್ನೆಲ್ ವೈರಲ್ ಕ್ಲಿಪ್‌ನಲ್ಲಿ ಹೇಳುತ್ತಿರುವುದನ್ನು ಕೇಳಬಹುದು.
First published: