• Home
 • »
 • News
 • »
 • trend
 • »
 • Horoscope Today: ಗುರು- ಶನಿ ಗ್ರಹಗಳ ಕಾಟದಿಂದ ಇನ್ನೂ 1 ವರ್ಷ ಕೊರೋನಾ ಕಾಟ ತಪ್ಪದು!

Horoscope Today: ಗುರು- ಶನಿ ಗ್ರಹಗಳ ಕಾಟದಿಂದ ಇನ್ನೂ 1 ವರ್ಷ ಕೊರೋನಾ ಕಾಟ ತಪ್ಪದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Astrology: ಶನಿಯಿಂದಾಗಿ 30 ತಿಂಗಳು ಕೊರೋನಾ ರೋಗ ನಮ್ಮನ್ನು ಬಾಧಿಸಲ್ಪಡಬಹುದು. ಅಂದರೆ 2022 ಜುಲೈ ತಿಂಗಳ ಸಂದರ್ಭದಲ್ಲಿ ಹಂತ ಹಂತವಾಗಿ ಕೊರೋನಾ ಸಾಂಕ್ರಾಮಿಕತೆ ಕಡಿಮೆಯಾಗಬಹುದು.

 • Share this:

  ಭವಿಷ್ಯದ ಬಗ್ಗೆ ಇರುವ ಕುತೂಹಲ ಮಾನವನ ಸಹಜ ಧರ್ಮವಾಗಿದೆ. ನಾಳೆ ಏನಾಗಬಹುದು ಎಂಬ ಪ್ರಶ್ನೆಗೆ ಜ್ಯೋತಿಷ್ಯ ಶಾಸ್ತ್ರದ ಅಧ್ಯಯನವು ಉತ್ತರವನ್ನು ನೀಡುತ್ತದೆ. ಬಹುದೂರದಲ್ಲಿರುವ ಗ್ರಹಗಳ ಚಲನೆಯಿಂದ ಸಕಲ ಚರಾಚರ ಜೀವಿಯಲ್ಲೂ ಬದಲಾವಣೆಯನ್ನು ನೋಡಬಹುದಾಗಿದೆ. ಚಂದ್ರನ ಚಲನೆಯಿಂದ ಸಮುದ್ರದಲ್ಲಾಗುವ ಅಲೆಗಳ ಏರಿಳಿತವು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಈ ರೀತಿಯ ಚಲನೆಯಲ್ಲಿ ಮುಖ್ಯವಾಗಿ ಗುರು ಮತ್ತು ಶನಿಯ ನೀಚ ಸ್ಥಿತಿ ಚಲನೆಯು ಪ್ರಪಂಚದಲ್ಲಿನ ಹಲವು ತೊಂದರೆಗಳಿಗೆ ಕಾರಣವಾಗಿದೆ.


  ಗುರು ಗ್ರಹಕ್ಕೆ ಮಕರ ರಾಶಿಯು ನೀಚ ಸ್ಥಾನವಾಗಿದ್ದು 1914ರ ಮೊದಲನೇ ಮಹಾಯುದ್ಧದ ಸಮಯದಲ್ಲಿ ಗುರು ನೀಚ ಸ್ಥಾನದಲ್ಲಿದ್ದನು. ಶನಿಗೆ ಮೇಷ ರಾಶಿಯು ನೀಚ ಸ್ಥಾನವಾಗಿದ್ದು, 1939ರ ಎರಡನೇ ಮಹಾಯುದ್ಧದ ಸಮಯದಲ್ಲಿ ಶನಿ ನೀಚನಾಗಿದ್ದನು. 1940ರ ಫ್ರಾನ್ಸ್ ಕದನದ ಸಮಯದಲ್ಲಿ ನೀಚ ಶನಿಯೊಡನೆ ಗುರುಗ್ರಹವು ಸೇರಿಕೊಂಡಿದ್ದನು.


  ಐಂದ್ರ್ಯಾಂ ಮೇಷವೃಷಾವಗ್ನಿ ಕೋಣೇ ಮಿಥುನಭಂ ಸ್ಥಿತಂ |


  ಯಾಮ್ಯಾಂ ಕರ್ಕಟಸಿಂಹೌ ಸ್ತೋ ನೈಋತ್ಯಾಂ ದಿಶಿ ಕನ್ಯಕಾ ||


  ಶ್ರೀಃ


  11-02-1962


  ಭಾನುವಾರ


  ಅಷ್ಟಗ್ರಹಯೋಗ


  ರಾಹು ರವಿ ಚಂದ್ರ ಕುಜ ಬುಧ ಗುರು ಶುಕ್ರ ಶನಿ  ಕೇತು


  ಎಂಬ ಶ್ಲೋಕದ ಅಡಿಯಲ್ಲಿ ಪ್ರಪಂಚದ ಭೂಪಟದ ಆಗ್ನೇಯ ದಿಕ್ಕಿನಲ್ಲಿರುವ ನಮ್ಮ ಭಾರತ ದೇಶವನ್ನು ರಾಶಿ ಚಕ್ರಕ್ಕೆ ಹೋಲಿಸಿದಾಗ ಜಂಬೂ ದ್ವೀಪ, ಭರತ ಖಂಡವು ಮಿಥುನ ರಾಶಿಗೆ ಸೇರುತ್ತದೆ. ಮಿಥುನ ರಾಶಿಯ ಅಷ್ಟಮ ಭಾವವಾದ ಮಕರದಲ್ಲಿ 04-02-1962ರ ಭಾನುವಾರ ನವಗ್ರಹರಲ್ಲಿ ಅಷ್ಟ ಗ್ರಹಗಳು ಸಂಚರಿಸಿದರು. ಅದರ ಪರಿಣಾಮವಾಗಿ,


  ಪಾಪಬುದ್ಧಿರತಾಲೋಕಾ ಹಾಹಾಭೂತಾಚ ಮೇದಿನೀ |


  ಕ್ಷತ್ರಿಯಾಣಾಂ ಛತ್ರಭಂಗೋ ಮ್ಲೇಂಛಾನಾಂಚ ತತಃ ಕ್ಷಯಃ ||


  ಮಹಾಜನಾನಾಂ ಪೀಡಾಪಿ ಛತ್ರಭಂಗೋ ಮಹಾಭಯಂ |


  ದೇವಗ್ರಾಮ ಪುರಾದೀನಾಂ ಲುಂಠನಂ ಯುದ್ಧ ಸಂಭವಃ ||


  ಎನ್ನುವ ಆಧಾರದಂತೆ ಜನರಲ್ಲಿ ದುರ್ಬುದ್ಧಿ, ಅಪನಂಬಿಕೆಯ ಮನೋಭಾವ, ಸಜ್ಜನರು ಹಿಂಸೆಗೆ ಒಳಗಾಗುವ ಸನ್ನಿವೇಶ, ದೇಶದ ಅಭಿವೃದ್ಧಿಕಾರ್ಯಗಳು ಕುಂಠಿತವಾಗುತ್ತದೆ ಎನ್ನುವುದು   20-10-1962 ರಿಂದ 21-11-1962 ರವರೆಗೆ ನಡೆದ ಚೀನಾ ಯುದ್ಧದಂತಹ ಕಹಿ ಘಟನೆಯಿಂದ ಗಮನಕ್ಕೆ ಬಂದಿದೆ.


  ಇದನ್ನೂ ಓದಿ: Karnataka Weather Today: ರಾಜ್ಯದಲ್ಲಿ ತಗ್ಗಿದ ಮಳೆಯ ಅಬ್ಬರ; ಮಲೆನಾಡು, ಕರಾವಳಿಯಲ್ಲಿಂದು ಹಳದಿ ಅಲರ್ಟ್​ ಘೋಷಣೆ


  ಇದೇ ರೀತಿಯಾಗಿ ನೀಚ ಸ್ಥಿತಿಯಲ್ಲಿ ಗುರುವಿದ್ದಾಗ 1973ರ ಇಸ್ರೇಲ್ ಯುದ್ಧ, 1985 ರಲ್ಲಿ ಕೊಲಂಬಿಯನ್ ಭಯೋತ್ಪಾದಕರಿಂದ ವಿಮಾನ ಮತ್ತು ನ್ಯಾಯಾಧೀಶರ ಅಪಹರಣವು  2009ರಲ್ಲಿ ಎದುರಾದ ಆರ್ಥಿಕ ಬಿಕ್ಕಟ್ಟು, H1N1  ಅನ್ನುವ ಮಾರಕ ರೋಗ ಬಾಧಿಸಿರುವುದನ್ನು ಗಮನಿಸಬಹುದು.


  ನೀಚಸ್ಥಿತಿಯಲ್ಲಿನ ಶನಿಯ ಜೊತೆ ಗುರುವಿದ್ದಾಗ (1999) ಭಾರತದಲ್ಲಿ ಸಂಭವಿಸಿದ ಕಾರ್ಗಿಲ್ ಯುದ್ಧವನ್ನು ಸ್ಮರಿಸಬಹುದು. ಹೀಗೆಯೇ ಗ್ರಹಗಳು ದುರ್ಬಲರಾದಾಗ ಹಲವು ದುರ್ಘಟನೆಯ ಉದಾಹರಣೆಗಳು ನಮ್ಮ ಮುಂದಿವೆ. ವಿಕಾರಿ ನಾಮ ಸಂವತ್ಸರದಲ್ಲಿ ಶನಿಯು ರಾಜನ ಪಟ್ಟ ವಹಿಸಿದ್ದನು.


  ಶನೈಶ್ಚರೇ ಭೂಮಿಪತೌ ಸಕೃಜ್ಜಲಂ ಪ್ರಭೂತರೋಗಃ ಪರಿಪೀಡ್ಯತೇ ಜನಃ |


  ಯುದ್ಧಂ ನೃಪಾಣಂ ಗದತಸ್ಕರಾದ್ಯೈ ಭ್ರಮಂತಿಲೋಕಾಃ ಕ್ಷುಧತಾಶ್ಚದೇಶಾನ್ ||


  ಮೇಲಿನ ಆಧಾರದಂತೆ ಶನಿಯು ರಾಜನಾದಾಗ ಪ್ರಪಂಚದ ಕೆಲವು ಭಾಗಗಳಲ್ಲಿ ಜಲಭಯ, ಯುದ್ಧ ಭೀತಿ, ಆಹಾರಕ್ಕಾಗಿ ಹಾಹಾಕಾರ ಹಾಕುವ ಸ್ಥಿತಿಯೂ ಸೃಷ್ಟಿಯಾಗುತ್ತದೆ ಎನ್ನುವುದು ಶಾಸ್ತ್ರದ ಅಭಿಮತ. ಶನಿಯು ವಾಯು ತತ್ವಹೊಂದಿದವನಾದ್ದರಿಂದ ಉಸಿರಾಟಕ್ಕೆ ಸಂಬಂಧಿಸಿದ ವ್ಯಾಧಿಯು (ಶಿಖಿಭೂಖಪಯೋ ಮರುದ್ಗಣಾನಾಂ ವಶಿನೋಭೂಮಿಸುತಾದಯಃ ಕ್ರಮೇಣ ) ಮತ್ತು ಕಫ ಕಾರಕತ್ವ ಹೊಂದಿರುವ ಗುರುವು ( ಬೃಹತ್ತನುಃ ಪಿಂಗಳಮೂರ್ಧಜೇಕ್ಷಣೋ ಬೃಹಸ್ಪತಿಃ ಶ್ರೇಷ್ಠಮತಿಃ ಕಫಾತ್ಮತಃ ) ಶಾರ್ವರಿ ನಾಮ ಸಂವತ್ಸರದ ಆರಂಭದಲ್ಲಿ ನೀಚಸ್ಥಿತಿಗೆ ಬರುವ ಫಲವಾಗಿ ಕಫಕ್ಕೆ ಸಂಬಂಧಿಸಿದ ಅನಾರೋಗ್ಯವು ವ್ಯಾಪಕವಾಗಿ ಬರುವಂತಾಯಿತು.


  ಇದನ್ನೂ ಓದಿ: Astrology: ಧನುರಾಶಿಯವರು ಆರೋಗ್ಯದ ಬಗ್ಗೆ ಜಾಗ್ರತೆವಹಿಸುವುದು ಅವಶ್ಯ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ


  ಹೀಗೆ ನೀಚಗಾಮಿಯಾಗಿರುವ ಗುರುವಿನ ಮತ್ತು  ಸಂವತ್ಸರದ ಸಾರ್ವಭೌಮತ್ವ ಪಡೆದ ಶನಿಯ ಮಿಶ್ರಫಲವಾಗಿ “ಕೋವಿಡ್-19”  ಎಂಬ ಬಾಧೆಯು ಪ್ರಪಂಚಕ್ಕೆ ಎದುರಾಯಿತು.• 2020 ಮಾರ್ಚ್ ತಿಂಗಳ ಅಂತ್ಯದಲ್ಲಿ ಗುರು ಮಕರ ರಾಶಿ ಪ್ರವೇಶಿಸಿ (ಬಲಹೀನನಾಗಿ) ಶನಿ ಮತ್ತು ಕುಜರ ಜೊತೆಗೂಡಿ ದುಷ್ಫಲವನ್ನು ಅದರಲ್ಲೂ ಭಾರತ ದೇಶಕ್ಕೆ ಅಷ್ಟಮ ಭಾವದಲ್ಲಿದ್ದೂ ತತ್ಫಲ ನೀಡಿರುವುದರಿಂದ ಸುಧಾರಿಸಿಕೊಳ್ಳಲು ಸಾಧ್ಯವಾಗದಂತಾಯಿತು.


  (ಮಕರೇ ಚ ಗುರೌ ಚೈವ ದುರ್ಭಿಕ್ಷಂ ಘೋರದಾರುಣಮ್) (ಮಕರದ ಗುರುವಿನ ಫಲ)(ಮಕರೇ ಚ ಯದಾ ಸೌರಿಃ ದುರ್ಭಿಕ್ಷಂ ತತ್ರ ದಾರುಣಮ್) (ಮಕರದ ಶನಿಯ ಫಲ) ನಂತರದ ಶಾರ್ವರಿ ನಾಮ ಸಂವತ್ಸರದ ರಸಾಧಿಪತಿಯಾದ ಶನಿಯ ಫಲದಿಂದಾಗಿ ಜನಪದರಲ್ಲಿ ರೋಗವು ಅತೀವವಾಗಿ ವ್ಯಾಪಿಸಿತು.


  ರವಿಸುತೇರಸಪೇ ರಸಸಂಕ್ಷಯೋನ ಜಲದಾಗದಾಶ್ಚ ಪಯೋಧರಾಃ |


  11-02-2021 ಗುರುವಾರ ಪೌಷ ಕೃಷ್ಣ ಅಮಾವಾಸ್ಯೆಯಂದು ಮಕರ ರಾಶಿಯಲ್ಲಿ ಷಡ್‍ಗ್ರಹಯೋಗವಾಗಿರುವುದು ಭಾರತ ದೇಶಕ್ಕೆ ಆಪತ್ತನ್ನು ತಂದೊಡ್ಡಿದೆ ಮತ್ತು ಈ ದಿನಗಳಲ್ಲಿ ಕೋವಿಡ್-19 ಎಂಬುವ ಮಹಾಮಾರಿಯು “ ಸರ್ವಪ್ರಣಾಶೋ ವಿಷದೋಪವಾದೋ ಹೇತುಪ್ರದೇಶೌ ಮರಣಸ್ಯ ದಾಸಃ” ಎಂಬ ಅಷ್ಟಮ ಭಾವದ ಫಲದಿಂದ ಮುಖ್ಯವಾಗಿ ಭಾರತ ದೇಶದಲ್ಲಿರುವ ಮನೆಮನೆಯಲ್ಲೂ ಸರ್ವವ್ಯಾಪಿಯಾಗಿ ಹರಡಲಾರಂಭಿಸಿ ಪರಿಸ್ಥಿತಿಯು ಕೈಮೀರಿ ಬೆಳೆಯಿತು. ದಿನಗಳು ಕಳೆದಂತೆ ಮರಣಪ್ರಮಾಣ ಗಗನಕ್ಕೇರಿತು.


  ಕುಜ ರಾಹು


  ಶ್ರೀಃ
  11-02-2021


  ಗುರುವಾರ


  ಷಡ್‍ಗ್ರಹಯೋಗ
  ರವಿ ಚಂದ್ರ ಬುಧ ಗುರು ಶುಕ್ರ ಶನಿ    ಕೇತು


  ದೇಶದಲ್ಲಿ ಈ ರೋಗವು ಜೂನ್ ಮತ್ತು ಜುಲೈ ತಿಂಗಳ ಪೂರ್ವಾರ್ಧದಲ್ಲಿ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದು ನಂತರದ ದಿನದಲ್ಲಿ ಅಂದರೆ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಪುನಃ ಉಲ್ಬಣವಾಗುವ ಲಕ್ಷಣವು ಗುರುವಿನ ವಕ್ರಗತಿಯಿಂದ ಕಾಣುವುದು.  ಪ್ರಪಂಚದಲ್ಲಿ ಶ್ರೇಷ್ಠವಾದ ವ್ಯಕ್ತಿಗಳು ಅದರಲ್ಲೂ ಮುಖ್ಯವಾಗಿ ವಿದ್ಯಾವಂತನು ನೀಚ ಕೃತ್ಯವನ್ನು ಮಾಡುವುದು,  ನವಗ್ರಹರಲ್ಲಿ ಶ್ರೇಷ್ಠವಾದ ಗುರುಗ್ರಹವು ನೀಚಸ್ಥಾನದಲ್ಲಿ ಸಂಚರಿಸುವುದರ ಪರಿಣಾಮಕ್ಕೆ ಉದಾಹರಣೆಯಾಗಿದೆ. ಭಾರತ ದೇಶದ ಮಹಾಭಿವೃದ್ಧಿಯ ಕನಸಿಗೆ ಕೋವಿಡ್ ಎಂಬುವುದು ಗ್ರಹಣ ಬಂದಂತಾಗಿದೆ.


  ಪ್ರಾಣಾಯಾಮ, ಸ್ನಾನಾದಿ ಶುದ್ಧಿ, ಒಗರು ರಸತ್ವ ಹೊಂದಿರುವ ಆಹಾರ ಪದಾರ್ಥದ ಬಳಕೆಯಿಂದ, ಬಜೆ, ಅಮೃತ ಬಳ್ಳಿ, ಹಿಪ್ಪಲಿ, ನೆಲನಲ್ಲಿಯಂತಹ ಒಗರು ಗುಣಪ್ರಕೃತಿಯ ಔಷದೀಯ ವಸ್ತುಗಳಿಂದ ತಯಾರಿಸಿದ ಕಷಾಯ ಸೇವನೆಯಿಂದ,  ( “ಕಟುಕಲವಣತಿಕ್ತ ಮಿಶ್ರಿತಾಮಧುರಾಮ್ಲೌ ಚ ಕಷಾಯ ಇತ್ಯಪಿ”  ಎಂಬ ಗುಣವಿಭಾಗದ ರೀತಿಯಲ್ಲಿ ಶನಿಗೆ ಒಗರು ) ವಾತಾವರಣದ ಶುದ್ಧತೆಯನ್ನು ಕಾಪಾಡಿಕೊಳ್ಳುವುದರಿಂದ, ಪರಿಸರದಲ್ಲಿ ಮಾಲಿನ್ಯವನ್ನು ತಡೆಗಟ್ಟುವುದರಿಂದ ಕೊರೋನಾ ಸೋಂಕನ್ನು ನಿಯಂತ್ರಿಸಬಹುದಾಗಿದೆ.


  ಶನಿಯಿಂದಾಗಿ 30 ತಿಂಗಳುಗಳ ಕಾಲ ಈ ಕೊರೋನಾ ರೋಗವು ನಮ್ಮನ್ನು ಬಾಧಿಸಲ್ಪಡಬಹುದು ಅಂದರೆ 2022 ಜುಲೈ ತಿಂಗಳ ಸಂದರ್ಭದಲ್ಲಿ ಹಂತ ಹಂತವಾಗಿ ಸಾಂಕ್ರಾಮಿಕತೆ ಕಡಿಮೆಯಾಗಬಹುದು.


  (ಲೇಖನ: ಕೆ.ಎಲ್. ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ)

  Published by:Sushma Chakre
  First published: