• Home
 • »
 • News
 • »
 • trend
 • »
 • Honeymoon Secret: ಹನಿಮೂನ್​ನಲ್ಲಿ ಬಯಲಾಯ್ತು ಗಂಡನ ಅಕ್ರಮ ಸಂಬಂಧ; ಮುಂದೆ...

Honeymoon Secret: ಹನಿಮೂನ್​ನಲ್ಲಿ ಬಯಲಾಯ್ತು ಗಂಡನ ಅಕ್ರಮ ಸಂಬಂಧ; ಮುಂದೆ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಿಳೆಯ ಹೆಸರಲ್ಲಿ ಮೇಲ್ ಬಂದಿತ್ತು. ಆಕೆ ಇವರಿಗೆ ರೊಮ್ಯಾಂಟಿಕ್ ಪದ್ಯ ಕಳಿಸಿದ್ದಳು. ಅವನನ್ನು ಮಿಸ್ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಇಮೇಲ್ ಇನ್ಬಾಕ್ಸ್ ನಲ್ಲಿ ಇಂತಹ ಸಾಕಷ್ಟು ಮೇಲ್ ಬಂದಿತ್ತು.

 • Share this:

  ನಂಬಿಕೆ (Trust) ಮತ್ತು ಪ್ರೀತಿ (Love) ಒಂದು ಗಟ್ಟಿ ಸಂಬಂಧದ (Relationship) ಅಡಿಪಾಯ. ಪ್ರೀತಿಸುವ ಇದ್ದರೂ ಒಟ್ಟಿಗೆ ಸತ್ತರೂ (Death) ಒಟ್ಟಿಗೆ ಎಂದು ಅಂದುಕೊಳ್ಳುತ್ತಾರೆ. ಪರಸ್ಪರ ಬದುಕುವ ಮತ್ತು ಸಾಯುವ ಪ್ರತಿಜ್ಞೆ ಮಾಡುತ್ತಾರೆ. ನೀವು ಪ್ರೀತಿಸುತ್ತಿರುವ ವ್ಯಕ್ತಿ ನಿಮ್ಮ ಪ್ರೀತಿಯನ್ನು ಅರ್ಥಮಾಡಿಕೊಳ್ಳದೆ ನಿಮಗೆ ಮೋಸ ಮಾಡುವ ಸಂದರ್ಭಗಳೇ ಹೆಚ್ಚು. ಗೆಳತಿ-ಗೆಳೆಯನೇ ಆಗಿರಲಿ ಅಥವಾ ಪತಿ-ಪತ್ನಿಯಾಗಿರಲಿ (Husband and wife), ಒಂದು ಕಾಲದಲ್ಲಿ ಇಬ್ಬರ ನಡುವೆ ಸಾಕಷ್ಟು ಪ್ರೀತಿ ಇತ್ತು. ಆದರೆ ಕಾಲಾನಂತರದಲ್ಲಿ ಬೇರೆಯವರ ಆಕರ್ಷಣೆಗೆ ಒಳಗಾಗಿ, ಪ್ರೀತಿಯಲ್ಲಿ ಮೊದಲಿನವಳಿಗೆ ಮೋಸ (Cheating) ಮಾಡಿದಾಗ, ಎದುರಿಗಿರುವ ನಿಮ್ಮನ್ನು ಹೆಚ್ಚು ಪ್ರೀತಿಸುವ ಆ ವ್ಯಕ್ತಿಯ ಮನಸ್ಸು ಒಡೆಯುತ್ತದೆ. ನೀವು ಅತಿಯಾಗಿ ಹಚ್ಚಿಕೊಂಡಿರುವ ವ್ಯಕ್ತಿ ನಿಮಗೆ ನಿಮಗೆ ಮೋಸ ಮಾಡಿದಾಗ, ಮೋಸ ಹೋದ ವ್ಯಕ್ತಿಯ ಆಲೋಚನೆ ಮತ್ತು ತಿಳುವಳಿಕೆಯ ಶಕ್ತಿ ಕೊನೆಗೊಳ್ಳುತ್ತದೆ.


  ಪ್ರೀತಿಯಲ್ಲಿ ಮೋಸ ಹೋಗಿರುವ ಮಹಿಳೆಯ ಕಥೆ


  ಹೀಗೆ ಪ್ರೀತಿಯಲ್ಲಿ ಮೋಸ ಹೋಗಿರುವ ಮಹಿಳೆಯೊಬ್ಬರು ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. ಐದು ವರ್ಷಗಳ ಕಾಲ ಪರಸ್ಪರ ಪ್ರೇಮಿಸಿ, ಲಿವಿಂಗ್ ರಿಲೇಶನ್ ನಲ್ಲಿದ್ದು, ವಿವಾಹವಾಗಲು ನಿಶ್ಚಯಿಸಿದ್ದರು. ಆದರೆ  ಹನಿಮೂನ್‌ನಲ್ಲಿ ತನ್ನ ಸಂಗಾತಿ ತನಗೆ ಮೋಸ ಮಾಡುತ್ತಿರುವುದು ತಿಳಿದು ಬಂದಿದೆ ಎಂದು ಮಹಿಳೆ ಹೇಳಿದ್ದಾರೆ.


  ನಾನು ಮತ್ತು ನನ್ನ ಸಂಗಾತಿ 5 ವರ್ಷಗಳ ಕಾಲ ಒಬ್ಬರಿಗೊಬ್ಬರು ಜೊತೆಯಾಗಿ ಇದ್ದೇವೆ. ನಂತರ ನಾವು ಮದುವೆಯಾಗಲು ನಿರ್ಧರಿಸಿದ್ದೆವು.  ಇದಕ್ಕಿಂತ ಸಂತೋಷ ನನಗೆ ಬೇರೊಂದಿರಲಿಲ್ಲ. ಮೊದಮೊದಲು ಮದುವೆಯ ಹೆಸರಲ್ಲಿ ಎಲ್ಲರೂ ಹೆದರುತ್ತಾರೆ. ಮದುವೆಗೆ ಮುಂಚೆ ತುಂಬಾ ನರ್ವಸ್ ಆಗಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನನ್ನ ಸಂಗಾತಿಯೂ ತುಂಬಾ ನರ್ವಸ್ ಆಗಿದ್ದರು. ಇದಕ್ಕೆ ಕಾರಣ ಮದುವೆ ಮತ್ತು ಅವರ ಹೊಸ ಕೆಲಸ.


  ಇದನ್ನೂ ಓದಿ: ಈ ಗುಣಗಳಿರುವ ಹುಡುಗರು ಅಂದ್ರೆ ಹುಡುಗಿಯರಿಗೆ ಇಷ್ಟವಂತೆ


  'ನಮ್ಮಿಬ್ಬರ ಬ್ರೇಕ್ ಅಪ್ ಶುರುವಾಯಿತು'


  ನಮ್ಮ ಮದುವೆಗೆ ನಾಲ್ಕು ತಿಂಗಳ ಮೊದಲು ಅವರು ಹೊಸ ಕಾನೂನು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದರು. ಹೊಸ ಕೆಲಸ ಸಿಕ್ಕಿದ ಖುಷಿಯಲ್ಲಿ ಪಾರ್ಟಿ ಮಾಡಿದ್ದೆ. ಆದರೆ ಪಾರ್ಟಿಯಲ್ಲೂ ಅವನ ಗಮನ ಬೇರೆ ಕಡೆ ಇತ್ತು. ಅಲ್ಲಿಂದ ನಮ್ಮಿಬ್ಬರ ಬ್ರೇಕ್ ಅಪ್ ಶುರುವಾಯಿತು.


  ತನ್ನ ಸಂಗಾತಿ ಕೆಲಸದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು. ಅವರು ತುಂಬಾ ಕೆಲಸದಲ್ಲೇ ಮುಳುಗಿರುತ್ತಿದ್ದರು. ನಾನಂತೂ ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿದ್ದ ಕಾರಣ ಅದರತ್ತ ಹೆಚ್ಚು ಗಮನ ಹರಿಸಲಿಲ್ಲ. ಹಗಲು ರಾತ್ರಿ ಕಛೇರಿ ಕೆಲಸ ಮಾಡುತ್ತಿದ್ದ ಅವರು ವಾರಾಂತ್ಯದಲ್ಲಿ ನನ್ನ ಜೊತೆ ಶಾಪಿಂಗ್ ಬರುತ್ತಿದ್ದರು. ಎಲ್ಲವೂ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ಅಂತಿಮವಾಗಿ, ನಮ್ಮ ಮದುವೆಯ ದಿನ ಬಂದಿತು. ನಾನು ತುಂಬಾ ಖುಷಿಯಾಗಿದ್ದೆ. ಆದರೆ ನನ್ನ ಸಂಗಾತಿಯು ಮದುವೆಯ ದಿನ ತುಂಬಾ ಅಸಮಾಧಾನಗೊಂಡಿದ್ದರು.


  'ಹನಿಮೂನ್‌ಗಾಗಿ ಬಾಲಿಗೆ ಹೋಗಿದ್ದೆವು'


  ಈ ಬಗ್ಗೆ ಅವರ ಜತೆ ನಾನು ಮಾತನಾಡಿದಾಗ ಕೆಲಸದ ಒತ್ತಡ ಮತ್ತು ಮದುವೆಯ ಆತಂಕದಿಂದ ಅಸಮಾಧಾನಗೊಂಡಿದ್ದಾಗಿ ತಿಳಿಸಿದ್ದರು. ಅವರ ಮಾತಿನಲ್ಲಿ ನನಗೂ ನಂಬಿಕೆ ಇತ್ತು. ಎಲ್ಲಾ ಅಸಮಾಧಾನ ನಾವು ಹನಿಮೂನ್‌ಗೆ ಹೋದ ನಂತರ ಸರಿ ಹೋಗುತ್ತದೆ ಎಂದುಕೊಂಡಿದ್ದೆ. ನಾವು ಹನಿಮೂನ್‌ಗಾಗಿ ಬಾಲಿಗೆ ಹೋಗಿದ್ದೆವು. ಆದರೆ ಹನಿಮೂನ್‌ಗೆ ಹೋದರೂ ಪರಿಸ್ಥಿತಿ ಬದಲಾಗಲಿಲ್ಲ. ಈ ಹಿಂದೆ ನಾನು ಅಲಂಕಾರ ಮಾಡಿಕೊಂಡಾಗ ಅವರು ತುಂಬಾ ಖುಷಿ ಪಡುತ್ತಿದ್ದರು.


  ಆದರೆ ಈಗ ನಾನು ತಯಾರಾಗಿದ್ದು, ಅಲಂಕಾರ ಮಾಡಿಕೊಂಡಿದ್ದು, ಯಾವುದೂ ಖುಷಿ ಕೊಡುತ್ತಿರಲಿಲ್ಲ. ತುಂಬಾ ಸೈಲೆಂಟ್ ಆಗಿ ಬಿಟ್ಟಿದ್ದರು. ತನ್ನ ಹೊಸ ಕೆಲಸದ ಒತ್ತಡ ಹೀಗಾಗಿ ಎಲ್ಲ ಸರಿ ಹೋಗುತ್ತದೆ ಎಂದು ಸಮಾಧಾನ ಮಾಡಿಕೊಂಡೆ. ಆದರೆ ಅಂತಹದ್ದೇನೂ ಸಂಭವಿಸಲಿಲ್ಲ. ಇದಲ್ಲದೇ ಇಡೀ ಹನಿಮೂನ್‌ನಲ್ಲಿ ಯಾವುದೇ ಆಸಕ್ತಿ ಅವರಿಗೆ ಇರಲಿಲ್ಲ. ಹೊರಗೆ ಸುತ್ತಾಡಲು ಹೋಗಲಿಲ್ಲ.


  'ಮಹಿಳೆಯ ಹೆಸರಲ್ಲಿ ಇಮೇಲ್ ಬಂದಿತ್ತು'


  ಹೋಟೆಲ್ ಕೋಣೆಯಲ್ಲಿ ಉಳಿದುಕೊಂಡಿದ್ದೆವು. ನಮ್ಮಿಬ್ಬರ ನಡುವೆ ಯಾವುದೇ ದೈಹಿಕ ಸಂಬಂಧ ಇರಲಿಲ್ಲ. ಇದರಿಂದ ನನಗೆ ಅವಮಾನ ಎನ್ನಿಸುತ್ತಿತ್ತು. ನನ್ನ ಮನಸ್ಸಿನಲ್ಲಿ ಅನೇಕ ರೀತಿಯ ಆಲೋಚನೆಗಳು ಬರಲಾರಂಭಿಸಿದವು. ನಾನು ನನ್ನ ಪ್ರಶ್ನೆಗಳಿಗೆ ಉತ್ತರ ಹುಡುಕಲಾರಂಭಿಸಿದೆ. ಒಮ್ಮೆ ಅವರ ಫೋನ್ ಪರಿಶೀಲಿಸಿದೆ. ಫೋನ್‌ನಲ್ಲಿ ಏನೂ ಸಿಗಲಿಲ್ಲ. ಸ್ನೇಹಿತರಿಂದ ಬಂದಿದ್ದ ಕರೆಗಳ ಸಂಖ್ಯೆ ಹೆಚ್ಚಿತ್ತು. ಆದರೆ ಮಹಿಳೆಯ ಹೆಸರಲ್ಲಿ ಮೇಲ್ ಬಂದಿತ್ತು. ಆಕೆ ಇವರಿಗೆ ರೊಮ್ಯಾಂಟಿಕ್ ಪದ್ಯ ಕಳಿಸಿದ್ದಳು.


  ಇದನ್ನೂ ಓದಿ: ಯಾವಾಗ್ಲೂ ಟೆನ್ಶನ್, ಮೂಡ್​ ಆಫ್; ಮಾನಸಿಕ ಆರೋಗ್ಯ ಕೆಡಿಸೋ ಡೇಂಜರಸ್ ಅಭ್ಯಾಸಗಳಿವು


  ಅವನನ್ನು ಮಿಸ್ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಅವರ ಇಮೇಲ್ ಇನ್ಬಾಕ್ಸ್ ನಲ್ಲಿ ಇಂತಹ ಸಾಕಷ್ಟು ಮೇಲ್ ಬಂದಿತ್ತು. ಆಗಲೇ ನನಗೆ ಇವನು ಮೋಸ ಮಾಡುತ್ತಿದ್ದಾನೆ ಎಂದು ಗೊತ್ತಾಯಿತು. ಸಾಕಷ್ಟು ನೋವಾಯಿತು. ಮನಸ್ಸು ಒಡೆದು ಹೋಯಿತು. ನಾನು ದಿಗ್ಭ್ರಾಂತಳಾಗಿದ್ದೆ. ತಕ್ಷಣ ಮುಂಬೈಗೆ ವಿಮಾನವನ್ನು ಬುಕ್ ಮಾಡಿದೆ. ಅವನ ಅಕ್ರಮ ಸಂಬಂಧದ ಬಗ್ಗೆ ಅವನಿಗೆ ಹೇಳಿದೆ. ಅವರು ಕ್ಷಮೆ ಕೇಳಿದರು. ಆದರೆ ನಾನು ಅವನನ್ನು ನಂಬಲು ಸಾಧ್ಯವಿಲ್ಲ. ಹಾಗಾಗಿ ಮದುವೆಯನ್ನೇ ಮುರಿದು, ಡಿವೋರ್ಸ್ ಮಾಡಿಕೊಳ್ಳುವ ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ.

  Published by:renukadariyannavar
  First published: