• Home
 • »
 • News
 • »
 • trend
 • »
 • Honda Bonus: ಉದ್ಯೋಗಿಗಳಿಗೆ ಹೆಚ್ಚಾಗಿ ಪಾವತಿಯಾದ ಬೋನಸ್,ಅದನ್ನೇ ಮರಳಿಸುವಂತೆ ಸೂಚಿಸಿದ ಹೋಂಡಾ ಸಂಸ್ಥೆ

Honda Bonus: ಉದ್ಯೋಗಿಗಳಿಗೆ ಹೆಚ್ಚಾಗಿ ಪಾವತಿಯಾದ ಬೋನಸ್,ಅದನ್ನೇ ಮರಳಿಸುವಂತೆ ಸೂಚಿಸಿದ ಹೋಂಡಾ ಸಂಸ್ಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Now it wants the money back: “ಹೆಚ್ಚು ಬೋನಸ್‌ ಕೊಟ್ಟುಬಿಟ್ಟಿದ್ದೇವೆ, ಈಗ ಅದನ್ನು ವಾಪಸು ಕೊಟ್ಟುಬಿಡಿ’ ಎಂದು ಹೋಂಡಾ ಸಂಸ್ಥೆ ಸಿಬ್ಬಂದಿಯನ್ನು ಕೇಳಿರುವ ವಿಚಿತ್ರ ಘಟನೆ ಅಮೆರಿಕದಲ್ಲಿ ನಡೆದಿದೆ. ಜಪಾನ್‌ ಮೂಲದ ಹೋಂಡಾ ಸಂಸ್ಥೆ ಇತ್ತೀಚೆಗೆ ಅಮೆರಿಕ ಓಹಿಯೋ ಮತ್ತು ಮರಿಸಿಲ್ವೆ ರಾಜ್ಯಗಳಲ್ಲಿನ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಬೋನಸ್‌ ಕೊಟ್ಟಿದೆ. ಆ ಖುಷಿಯಲ್ಲಿದ್ದ ಸಿಬ್ಬಂದಿಗೆ ಪ್ರಕಟಣೆ ಮೂಲಕ ಶಾಕ್‌ ಅನ್ನೂ ಕೊಟ್ಟಿದೆ. “ಬೋನಸ್‌ ಹಣವನ್ನು ವಾಪಸು ಕೊಡಿ. ಒಂದು ವೇಳೆ ನೀವು ಇದಕ್ಕೆ ಪ್ರತಿಕ್ರಿಯಿಸದೇ ಹೋದರೆ ನಿಮ್ಮ ಸಂಬಳದಲ್ಲಿ ಆ ಹಣವನ್ನು ಕಡಿತ ಮಾಡಿಕೊಳ್ಳುತ್ತೇವೆ’ ಎಂದು ಸಂಸ್ಥೆ ಹೇಳಿದೆ. ಈ ವಿಚಾರ ಎಲ್ಲೆಡೆ ಹರಿದಾಡಿದ್ದು, ನೆಟ್ಟಿಗರು ಹೋಂಡಾ ವಿರುದ್ಧ ಕಿಡಿ ಕಾರಲಾರಂಭಿಸಿದ್ದಾರೆ.

ಮುಂದೆ ಓದಿ ...
 • Share this:

  ವರ್ಕ್​ ಪ್ಲೇಸ್​ನಲ್ಲಿ (Work Place) ಸಂಬಳವನ್ನು ಹೇಗೆ ನೀಡುತ್ತಾರೋ  ಅದರ ಜೊತೆಗೆ ಬೋನಸ್ ಕೂಡ   ಉದ್ಯೋಗಿಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವರ್ಷಕ್ಕೊಮ್ಮೆ ಅಥವಾ ಯಾವುದಾದರೂ ಹಬ್ಬ ಹರಿದಿನಗಳಲ್ಲಿ ಬೋನಸ್​ನ್ನು (Bonus) ನೀಡುತ್ತಾರೆ. ಅದು ಕೆಲಸ ಮಾಡಲು ಉದ್ಯೋಗಿಗಳಿಗೆ ಇನ್ನಷ್ಟು ಉತ್ತೇಜಿಸುವ ಹಾಗೆ ಆಗುತ್ತದೆ.  ಯಾವುದಾದರೂ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಬೋನಸ್ ನೀಡುವುದು ಉದ್ಯೋಗಿಗಳ ಕಠಿಣ ಪ್ರಯತ್ನ, ಅವಿರತ ಪರಿಶ್ರಮ, ನಿಸ್ವಾರ್ಥ ಸೇವೆಗೆ ಸಂದ ಗೌರವ ಎಂದೆನಿಸುತ್ತದೆ. ನೀಡಿರುವ ಬೋನಸ್‌ನಲ್ಲಿ ಸ್ವಲ್ಪ ಭಾಗವನ್ನು ಮರಳಿ ನೀಡಬೇಕೆಂದು ಅದೇ ಸಂಸ್ಥೆ (Organisation)  ತನ್ನ ಉದ್ಯೋಗಿಗಳ ಬಳಿ ಕೇಳಿದರೆ ಇದಕ್ಕೆ ಏನನ್ನಬೇಡ. ಕೊಟ್ಟ ಬೋನಸ್ ಜಾಸ್ತಿ ಆಗಿದೆ ಇದನ್ನು ವಾಪಾಸ್ಸು ನೀಡಿ ಎಂದು ಇಲ್ಲೊಂದು  ಹಾಸ್ಯಾಸ್ಪದ ಘಟನೆ ನಡೆದಿದೆ. 


  ಬೋನಸ್‌ನ ಭಾಗವನ್ನು ಕೇಳಿದ ಹೋಂಡಾ ಸಂಸ್ಥೆ


  ಓಹಿಯೋದ ಹೋಂಡಾ ಸಂಸ್ಥೆಯೇ ತನ್ನ ಉದ್ಯೋಗಿಗಳ ಬಳಿ ಬೋನಸ್‌ನ ಅರ್ಧಭಾಗವನ್ನು ಮರಳಿ ಪಾವತಿಸಬೇಕೆಂದು ಹೇಳಿದ್ದು, ಪಾವತಿಸದೇ ಇದ್ದರೆ ಸಂಬಳದಿಂದ ಅದನ್ನು ಕಡಿತಗೊಳಿಸಲಾಗುತ್ತದೆ ಎಂಬುದಾಗಿ ಸೂಚಿಸಿದೆ. ಈ ಘಟನೆಯ ವಿವರವೇನು? ಇದಕ್ಕೆ ಉದ್ಯೋಗಿಗಳು ಏನು ಹೇಳುತ್ತಾರೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.


  ಇದನ್ನೂ ಓದಿ: ಕಾರ್ಪೊರೇಟ್​​ ಕೆಲ್ಸ ಬಿಟ್ಟು, ಲಕ್ಷ ಲಕ್ಷ ದುಡಿಯುತ್ತಿದ್ದಾರೆ ಬೆಂಗಳೂರು ಹುಡುಗಿ!


  ಓಹಿಯೋದಲ್ಲಿರುವ ಹೋಂಡಾ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಬೋನಸ್ ಅನ್ನು ಪಾವತಿಸಿದ್ದು ಇದೀಗ ಅದೇ ಬೋನಸ್‌ನ ಅರ್ಧ ಹಣವನ್ನು ಮರಳಿ ನೀಡುವಂತೆ ವಿನಂತಿಸಿದೆ. ಸಂಸ್ಥೆಯು ಬೋನಸ್ ರೂಪದಲ್ಲಿ ಬಿಡುಗಡೆ ಮಾಡಿರುವ ಹಣವು ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ್ದಾಗಿದೆ ಎಂಬುದು ನಂತರ ತಿಳಿದು ಬಂದಿದ್ದರಿಂದ ಹೋಂಡಾ ಸಂಸ್ಥೆ ಉದ್ಯೋಗಿಗಳ ಹೀಗೆ ಕೇಳಿಕೊಂಡಿದೆ ಎಂಬುದು ವರದಿಯಾಗಿದೆ.


  ಒಂಬತ್ತು ದಿನಗಳ ಗಡುವು


  ಜಪಾನ್‌ನ ಕಾರು ತಯಾರಕ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಬೋನಸ್ ಹಣವನ್ನು ಹಿಂತಿರುಗಿಸಲು ಒಂಭತ್ತು ದಿನಗಳ ಕಾಲಾವಕಾಶವನ್ನು ಕೂಡ ನೀಡಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.  ಮೇರಿಸ್ವಿಲ್ಲೆ ಕಾರ್ಖಾನೆಯ ಉದ್ಯೋಗಿಗಳಿಗೆ ಸಂಸ್ಥೆ ಕಳುಹಿಸುವ ಮೆಮೊದಲ್ಲಿ ಸಂಸ್ಥೆಯು ಬೋನಸ್ ಅನ್ನು ಹೆಚ್ಚಾಗಿ ಪಾವತಿಸಿದೆ ಎಂದು ಉಲ್ಲೇಖಿಸಿದೆ.


  ಸಂಬಳದಿಂದ ಹಣ ಕಡಿತ


  ಇದೇ ಸಮಯದಲ್ಲಿ ಸಂಸ್ಥೆಯು ಉದ್ಯೋಗಿಗಳಿಗೆ ಎರಡು ಆಯ್ಕೆಗಳನ್ನು ನೀಡಿದ್ದು, ಹೆಚ್ಚುವರಿ ಹಣವನ್ನು ಮುಂಗಡವಾಗಿ ನೀಡಬಹುದು ಇಲ್ಲದಿದ್ದರೆ ಮುಂದಿನ ಪಾವತಿಗಳಿಂದ ಅದನ್ನು ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಿದೆ. ಇನ್ನು ಪ್ರತಿಕ್ರಿಯಿಸಲು ವಿಫಲರಾದ ಉದ್ಯೋಗಿಗಳ ಹಣವನ್ನು ಅವರ ಸಂಬಳದಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ ಎಂಬ ಸೂಚನೆಯನ್ನು ಕೂಡ ಸಂಸ್ಥೆ ರವಾನಿಸಿದೆ.


  ಉದ್ಯೋಗಿಗಳ ಅಳಲೇನು?


  ಈ ರೀತಿಯ ಸಮಸ್ಯೆಯನ್ನು ನಿಭಾಯಿಸುವುದು ಹೆಚ್ಚಿನವರಿಗೆ ಸಾಧ್ಯವಿಲ್ಲದ ಮಾತಾಗಿದೆ ಎಂಬುದು ಹೋಂಡಾ ಉದ್ಯೋಗಿಯೊಬ್ಬರ ಪತ್ನಿಯ ಮಾತಾಗಿದೆ. ಇದೊಂದು ರೀತಿಯ ಇಕ್ಕಟ್ಟಿನ ಪರಿಸ್ಥಿತಿಯಾಗಿದ್ದು, ತನ್ನ ಪತಿಗೆ ಬೋನಸ್‌ನ 8% ವನ್ನು ಹಿಂತಿರುಗಿಸಲು ಕೇಳಿದ್ದು ಇದು ಸುಮಾರು ನೂರಾರು ಡಾಲರ್‌ಗಳ ಮೌಲ್ಯದ್ದಾಗಿದೆ ಎಂದು ಉಲ್ಲೇಖಿಸಿದ್ದಾರೆ.


  ಕಾರು ಪಾವತಿ ಎಂದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಅಡಮಾನದ ಅರ್ಧದಷ್ಟಾಗಿದೆ. ಈ ಪ್ರಮಾಣ ಎರಡು ಮೂರು ವಾರಗಳ ದಿನಸಿಗಳ ಹಣವಾಗಿದೆ. ಇದು ನಮಗೆ ಸಾಕಷ್ಟು ಹಣ ಎಂಬುದು ಉದ್ಯೋಗಿಯ ಪತ್ನಿಯ ಭಾವುಕ ಮಾತಾಗಿದೆ.


  ಕಂಪನಿ ಬೋನಸ್ ಹಣ ಪಡೆಯಬಹುದು


  ಉದ್ಯೋಗಿಗಳ ಬಳಿ ಬೋನಸ್‌ನ ಭಾಗವನ್ನು ಕೇಳುವ ಹಕ್ಕನ್ನು ಹೋಂಡಾ ಹೊಂದಿದೆ ಎಂದು ಹೇಳಿಕೊಂಡಿದೆ. ಅಮೆರಿಕಾದಲ್ಲಿನ ಎಲ್ಲಾ ಉದ್ಯೋಗದಾತರಿಗೆ ಅನ್ವಯಿಸುವ ನ್ಯಾಯಯುತ ಕಾರ್ಮಿಕ ಪ್ರಮಾಣಿತ ಹಕ್ಕುಗಳಡಿಯಲ್ಲಿ ಬೋನಸ್ ಇಲ್ಲವೇ ವೇತನದ ಹೆಚ್ಚುವರಿ ಪಾವತಿಗಳನ್ನು ಉದ್ಯೋಗದಾತರು ಮರಳಿ ಪಡೆಯಬಹುದು ಎಂಬುದು ಸ್ಪಷ್ಟವಾಗಿದೆ ಎಂದು ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಕಾನೂನು ಪ್ರಾಧ್ಯಾಪಕ ಸಾರಾ ಕೋಲ್ ತಿಳಿಸಿದ್ದಾರೆ.


  ಇದನ್ನೂ ಓದಿ: ವಯಸ್ಸು 63, ಆದ್ರೆ ಇವರ ಟೆರೇಸ್ ಮೇಲಿನ ಕೈತೋಟ ಹೇಗಿದೆ ನೋಡಿ


  ಹೆಚ್ಚುವರಿ ಬೋನಸ್ ಪಾವತಿ


  ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಹೆಚ್ಚುವರಿ ವೇತನ ನೀಡಿರುವುದನ್ನು ಸ್ಪಷ್ಟಪಡಿಸಿದೆ, ಆದರೆ ಈ ಹೆಚ್ಚುವರಿ ಎಷ್ಟು ಮೊತ್ತ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಈ ತಿಂಗಳ ಆರಂಭದಲ್ಲಿ ಹೋಂಡಾ ತನ್ನ ಉದ್ಯೋಗಿಗಳಿಗೆ ಬೋನಸ್ ಪಾವತಿಗಳನ್ನು ಬಿಡುಗಡೆ ಮಾಡಿದ್ದು ಅವರಲ್ಲಿ ಕೆಲವರು ಹೆಚ್ಚುವರಿ ಪಾವತಿಗಳನ್ನು ಸ್ವೀಕರಿಸಿದ್ದಾರೆ.


  ಪರಿಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಬೇಕಾದ ವಿಷಯಗಳಾಗಿದ್ದು ಈ ಕುರಿತು ಸಂಬಂಧಿತ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.


  ನಮ್ಮ ಸಹವರ್ತಿಗಳಿಗೆ ಯಾವುದೇ ಸಂಭಾವ್ಯ ಪರಿಣಾಮವನ್ನು ತಗ್ಗಿಸಲು ನಾವು ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೋಂಡಾ ಹೇಳಿಕೊಂಡಿದೆ. ಸಿಬ್ಬಂದಿಗೆ ಸಂಬಂಧಿಸಿರುವ ಸಮಸ್ಯೆಯಾಗಿರುವುದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನಾವು ಬಹಿರಂಗಪಡಿಸುವುದಿಲ್ಲವೆಂದು ಕಂಪೆನಿ ತಿಳಿಸಿದೆ.

  First published: