10 ವರ್ಷದ ಬಳಿಕ ಸತ್ತ ವ್ಯಕ್ತಿಗೆ ಪುನರ್ಜನ್ಮ: ಹೇರ್​​ಸ್ಟೈಲ್​ ಬದುಕಿಸಿದ ಕುತೂಹಲಕಾರಿ ಕಥೆ!

ಜೊನೊ 10 ವರ್ಷದ ಬಳಿಕ ಬೀದಿ ಬದಿಯಲ್ಲಿ ಕಳೆದಿದ್ದರು. ಕಸವನ್ನು ಸಂಗ್ರಹಿಸುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಒಬ್ಬರು ಉದ್ಯಮಿಯಿಂದಾಗಿ ಜೊಯೊ ಇಂದು ತನ್ನ  ಕುಟುಂಬಸ್ಥರಿಗೆ ಮರಳಿ ಸಿಕ್ಕಿದ್ದಾನೆ.

ಜೊನೊ ಕೊಯೆಲ್ಹೋ ಗೈಮರೀಸ್

ಜೊನೊ ಕೊಯೆಲ್ಹೋ ಗೈಮರೀಸ್

 • Share this:
  ಇದೊಂದು ವಿಚಿತ್ರ ಘಟನೆ!. ಬ್ರೆಜಿಲ್​ನಲ್ಲಿ ನಡೆದಿದೆ. ಸತ್ತು 10 ವರ್ಷವಾಗಿದ್ದ ವ್ಯಕ್ತಿಯೊಬ್ಬ ಮತ್ತೆ ಕಾಣಿಸಿಕೊಂಡಿದ್ದಾನೆ. ಆದರೆ ಕುಟುಂಬಸ್ಥರ ಪ್ರಕಾರ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಕೊಂಡಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿದಾಡಿತ್ತಿರುವುದನ್ನು ನೋಡಿ ಆ ವ್ಯಕ್ತಿ ಬದುಕಿದ್ದಾನೆ ಎಂಬುದು ಕುಟುಂಬದವರಿಗೆ ತಿಳಿದಿದೆ. ಮಾತ್ರವಲ್ಲದೆ, ಅಚ್ಚರಿಯ ಜೊತೆಗೆ ಸಂಸತಕ್ಕೂ ಕಾರಣವಾಗಿದೆ.

  ಬ್ರೆಜಿಲ್ ಮೂಲದ ಜೊನೊ ಕೊಯೆಲ್ಹೋ ಗೈಮರೀಸ್​ ಎಂಬ 10 ವರ್ಷದಿಂದ ಕುಟುಂಬದಿದ್ದ ದೂರ ಉಳಿದಿದ್ದರು. ಆದರೆ ಆತನ ಕುಟುಂಬದವರು  ಜೊನೊ ಸಾವನ್ನಪ್ಪಿರಬೇಕು ಎಂದುಕೊಂಡಿದ್ದರು. ಆದರೀಗ ಆತನ ಕ್ಷೌರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಕುಟುಂಬಸ್ಥರಿಗೆ ಜೊನೊರ ಪರಿಚಯ ಸಿಕ್ಕಿದೆ. ಆತ ಬದುಕಿದ್ದಾನೆ ಎಂಬುದು ಗೊತ್ತಾಗಿದೆ.

  ಜೊನೊ 10 ವರ್ಷದ ಬಳಿಕ ಬೀದಿ ಬದಿಯಲ್ಲಿ ಕಳೆದಿದ್ದರು. ಕಸವನ್ನು ಸಂಗ್ರಹಿಸುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಒಬ್ಬರು ಉದ್ಯಮಿಯಿಂದಾಗಿ ಜೊಯೊ ಇಂದು ತನ್ನ  ಕುಟುಂಬಸ್ಥರಿಗೆ ಮರಳಿ ಸಿಕ್ಕಿದ್ದಾನೆ.

  ಉದ್ಯಮಿ ಲೊಬೊ ಮೂಲಕ ಜೊನೊ ತನ್ನ ಕುಟುಂಬಕ್ಕೆ ಮರಳಿ ಸೇರಿದ್ದಾನೆ. ಲೊಬೊ ಪುರುಷರ ಫ್ಯಾಶನ್​ ಸ್ಟೋರ್​ ಮತ್ತು  ಕ್ಷೌರಿಕ ಸೇವೆ ಒದಗಿಸುವ ಮಳಿಗೆಯನ್ನು ಇಟ್ಟುಕೊಂಡಿದ್ದಾನೆ. ಇತ್ತೀಚೆಗೆ ಲೊಬೊ ಹೊರಗೆ ಹೋಗಿದ್ದಾಗ ಉದ್ದದ ಕೂದಲು ಮತ್ತು ಕುರುಚಲು ಗಡ್ಡವನ್ನು ಬಿಟ್ಟಿದ್ದ ಜೊನೊ ಅವರನ್ನು ರಸ್ತೆ ಬದಿಯಲ್ಲಿ ನೋಡುತ್ತಾನೆ. ಆತನನನ್ನು ಕಂಡು ಮನಕರಗಿ ಹಸಿವಾಗಿದೆಯೇ? ಏನಾದರು ತಿನ್ನಲು ಬೇಕೆ? ಎಂದು ಕೇಳುತ್ತಾನೆ. ಆದರೆ ಜೊನೊ ಮಾತ್ರ ಏನು ಬೇಡವೆಂದು ನಿರಾಕರಿಸುತ್ತಾರೆ. ಹೀಗೆ ಮಾತನಾಡುತ್ತಾ ಲೊಬೊ ಅವರು ನಿಮ್ಮ ಗಡ್ಡವನ್ನು ಟ್ರಿಮ್​ ಮಾಡಬಹುದೆ? ಎಂದು ಜೊನೊ ಬಳಿ ಕೇಳುತ್ತಾರೆ. ಅದಕ್ಕೆ ಒಪ್ಪಿದ ಜೊನೊ ಕ್ಷೌರ ಮಾಡಿ ಎಂದು ಹೇಳುತ್ತಾರೆ.

  ನಂತರ ಗಡ್ಡ, ಕೂದಲು, ಮೀಸೆಯನ್ನು ಟ್ರಿಮ್​ ಮಾಡಿ ಜೊನೊ ಅವರಿಗೆ ಹೊಸ ಲುಕ್​ ಬರಿಸುತ್ತಾರೆ ಲೊಬೊ. ಅಷ್ಟು ಮಾತ್ರವಲ್ಲದೆ, ಮೂರು ಶರ್ಟ್​, ಒಂದು ಜೊತೆ ಪ್ಯಾಂಟ್​​, ಜಾಕೆಟ್​ ಮತ್ತು ಶೂ ಉಡುಗೊರೆಯಾಗಿ ನೀಡುತ್ತಾರೆ. ಇಷ್ಟೆಲ್ಲಾ ಆದ ಬಳಿ ಲೊಬೊ ಅವರ ಫೋಟೋವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಜೊತೆಗೆ ಇವರಿಗೆ ಸಹಾಯ ಮಾಡಿ ಎಂದು ಬರೆದು ಹಾಕುತ್ತಾರೆ.

  ಜೊನೊ ಅವರ ಉದ್ದ ಕೂದಲು, ಕುರುಚಲು ಗಡ್ಡ ಮತ್ತು ಹೊಸ ಹೇರ್​ಸ್ಟೈಲಿನಲ್ಲಿ ತೆಗೆದ ಫೋಟೋವನ್ನು ಉದ್ಯಮಿ ಲೊಬೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅದಾದ ಬಳಿಕ ಫೋಟೋ ವೈರಲ್​ ಆಗಿದೆ. ಹೀಗೆ ವೈರಲ್​ ಆಗಿದ್ದ ಫೋಟೋ ಅವರ ಕುಟುಂಬಸ್ಥರ ಕಣ್ಣಿಗು ಬಿದ್ದಿದೆ. ಇದರಿಂದಾಗಿ ಜೊನೊ ಬದುಕಿದ್ದಾರೆ ಎಂದು ಗೊತ್ತಾಗಿದೆ. ಡಿಸೆಂಬರ್​​ 17ರಂದು ಈ ವಿಚಾರ ತಿಳಿದು ಬರುತ್ತದೆ.


  ನಂತರ ಆತನ ಕುಟುಂಬಸ್ಥರು ಲೊಬೊವನ್ನು ಸಾಮಾಜಿಕ ಜಾಲತಾಣದ ಮೂಲಸ ಸಂಪರ್ಕಿಸುತ್ತಾರೆ. ಆದರೆ ಜೊನೊ ಬೀದಿ ಬದಿಯಲ್ಲಿ ಅಲೆದಾಡುತ್ತಿದ್ದರಿಂದ ಆತನನ್ನು ಹುಡುಕಲು ಮುಂದಗುತ್ತಾರೆ. ಕೊನೆಗೆ ಜೊನೊ ತನ್ನ ಫ್ಯಾಮಿಲಿಗೆ ಮತ್ತೆ ಮರಳಿ ಸಿಗುತ್ತಾರೆ.

  ಲೊಬೊ ಈ ಬಗ್ಗೆ ಮಾತನಾಡಿದ್ದು, ’ನಾನು ಅವನಿಗೆ ಬೇರೆ ರೀತಿಯಲ್ಲಿ ಸಹಾಯ ಮಾಡಿದ್ದೇನೆ. ಸೌಂದರ್ಯ ಒದಗಿಸುತ್ತೇನೆ ಎಂದು ಆತನ ಕ್ಷೌರ ಮಾಡಿದ್ದೇನೆ’ ಎಂದು ಹೇಳಿದ್ದಾರೆ

  ಒಟ್ಟಿನಲ್ಲಿ 10 ವರ್ಷಗಳ ಬಳಿಕ ಜೊನೊ ತನ್ನ ಫ್ಯಾಮಿಲಿಗೆ ಮತ್ತೆ ಸಿಕ್ಕಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆಯೂ ವೈರಲ್​ ಆಗುತ್ತಿದೆ. ಅನೇಕರು ಉದ್ಯಮಿ ಲೊಬೊ ಅವರಿಗೆ ಧನ್ಯವಾದ ತಿಳಿಸುತ್ತಿದ್ದಾರೆ.
  Published by:Harshith AS
  First published: