• Home
  • »
  • News
  • »
  • trend
  • »
  • Home Loan: ಮನೆ ಕೊಳ್ಳುವುದಕ್ಕಿದು ಸಕಾಲ.. ಹೇಗೆ ಅಂತೀರಾ.. ಇಲ್ನೋಡಿ..!

Home Loan: ಮನೆ ಕೊಳ್ಳುವುದಕ್ಕಿದು ಸಕಾಲ.. ಹೇಗೆ ಅಂತೀರಾ.. ಇಲ್ನೋಡಿ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋವಿಡ್ ಮಹಾ ಮಾರಿಯಿಂದಾಗಿ, ಪ್ರಮುಖ ನಗರಗಳಲ್ಲಿ ವಸತಿ ಕಟ್ಟಡಗಳ ಬೆಲೆಗಳು ಸ್ವಲ್ಪಮಟ್ಟಿಗೆ ಕುಸಿದಿವೆ

  • Share this:

ಹಣಕಾಸಿನ ಯೋಜನೆ, ಸಂತೋಷ ಮತ್ತು ಆರಾಮದಾಯಕ ಜೀವನಕ್ಕೆ ಇಂದು ಕೀಲಿಕೈ ಇದ್ದಂತೆ ಎಂಬುದರಲ್ಲಿ ಎರಡು ಮಾತಿಲ್ಲ. ಒಬ್ಬ ವ್ಯಕ್ತಿ ಜೀವನದ ವಿವಿಧ ಹಂತಗಳಲ್ಲಿ ತನ್ನ ಗುರಿಯನ್ನ ಸಾಧಿಸಲು ಇದು ಅತ್ಯಗತ್ಯ. ಹಾಗೆಯೇ ಹೂಡಿಕೆ ಕೂಡ ಅತ್ಯಂತ ಮುಖ್ಯವಾದದ್ದು, ಏಕೆಂದರೆ ಅದು ನಿಮ್ಮ ಹಣವನ್ನು ರಕ್ಷಿಸುತ್ತದೆ. ಮಾತ್ರವಲ್ಲ, ಬೆಳೆಯಲು ಕೂಡ ಸಹಾಯ ಮಾಡುತ್ತದೆ.ಕೋವಿಡ್, ತುರ್ತು ಪರಿಸ್ಥಿತಿಗೆ ಆಕಸ್ಮಿಕ ಯೋಜನೆ ಹೊಂದಿರುವುದು ಅತ್ಯಗತ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದೆ. ಮಾತ್ರವಲ್ಲ, ಈ ಹಣದ ಆಟದ ನಿಯಮಗಳನ್ನೇ ಬದಲಾಯಿಸಿಬಿಟ್ಟಿದೆ.


ಸ್ವಂತ ಮನೆ ಹೊಂದುವುದು  ಸದ್ಯದ ಅಗತ್ಯ ಮಾತ್ರ ಅಲ್ಲ, ಅದು ಕಾಲಾನಂತರ ಮೆಚ್ಚುಗೆ ಪಡೆಯುವ ಒಂದು ಅತ್ಯುತ್ತಮ ಹೂಡಿಕೆ ಕೂಡ ಆಗಿದೆ. ಕೋವಿಡ್ 19 ಪರಿಸ್ಥಿತಿಯನ್ನು ನಮ್ಮ ಜೀವನ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಆರ್ಥಿಕ ಯೋಜನೆಗಳಿಗೆ ಇದು ತಡೆಯೊಡ್ಡಿದ್ದರೂ ಕೆಲವು ಅನುಕೂಲಗಳಿಗೂ ಕಾರಣವಾಗಿದೆ.  ಈ ಸಂದರ್ಭದಲ್ಲಿ ಮನೆ ಕೊಳ್ಳುವುದಕ್ಕೆ ಸಾಧ್ಯವಾ ಎಂಬ ಅನುಮಾನ ಹಲವರಲ್ಲಿದೆ. ಕುತೂಹಲಕಾರಿ ಸಂಗತಿ ಎಂದರೆ, ಕೋವಿಡ್​ 19ನಿಂದ ರಿಯಲ್ ಎಸ್ಟೇಟ್ ಕೂಡ ರೂಪಾಂತರಗೊಂಡಿದೆ ಮತ್ತು ಖರೀದಿದಾರರ ಮಾರುಕಟ್ಟೆಯಾಗಿದೆ. ಕೋವಿಡ್ ಮಹಾ ಮಾರಿಯಿಂದಾಗಿ, ಪ್ರಮುಖ ನಗರಗಳಲ್ಲಿ ವಸತಿ ಕಟ್ಟಡಗಳ ಬೆಲೆಗಳು ಸ್ವಲ್ಪಮಟ್ಟಿಗೆ ಕುಸಿದಿವೆ. ಸರಕಾರದ ಕ್ರಮಗಳು “ಕೈಗೆಟುಕುವ ಮನೆಗಳನ್ನು“ ಕೊಳ್ಳಲು ಆರ್ಥಿಕ ಪ್ರೋತ್ಸಾಹ ನೀಡುತ್ತಿವೆ.


ಕೇಂದ್ರ ಸರಕಾರವು ಇತ್ತೀಚೆಗೆ, ಬಿಲ್ಡರ್‌ಗಳಿಗೆ ವ್ಯತ್ಯಾಸಗಳ ಮೇಲೆ ತೆರಿಗೆ ಪಾವತಿಸದೇ ಇರುವ ದರಕ್ಕಿಂತ (ವಲಯ) 20% (ಹಿಂದಿನ 10%ಗೆ ವಿರುದ್ಧ) ಕಡಿಮೆ ಆಸ್ತಿಯನ್ನು ಮಾರಲು ಅವಕಾಶ ಮಾಡಿಕೊಟ್ಟಿದೆ. ಅಷ್ಟು ಮಾತ್ರವಲ್ಲ, ಕಡಿಮೆ ಬಡ್ಡಿದರಗಳು, ಸದ್ಯಕ್ಕೆ 10 ವರ್ಷಗಳ ಕನಿಷ್ಟ ಮಟ್ಟದಲ್ಲಿ ಇವೆ. ಭಾರತದಲ್ಲಿ ಮನೆ ಕೊಳ್ಳಲು ಬಯಸುವವರಿಗೆ ಇದು ಅನುಕೂಲಕಾರಿ ಸಂಗತಿ. ಅಲ್ಲದೇ, ಮುಂಬೈನಂತಹ ಮಹಾ ನಗರಗಳಲ್ಲಿ, ಸ್ಟ್ಯಾಂಪ್ ಡ್ಯೂಟಿ ಕಡಿಮೆ ಮಾಡಿರುವುದರಿಂದ, ಅಲ್ಲಿ ಮನೆ ಖರೀದಿ ಅಗ್ಗವಾಗಿದೆ. ಹಾಗಾಗಿ ಮನೆ ಖರೀದಿಸಲು ಇದು ಸಕಾಲ.


ನಿಜವಾದ ಖರೀದಿ ಹೇಗೆ?
ನಿಮ್ಮ ಕನಸಿನ ಮನೆಯನ್ನು ಖರೀದಿಸಲು ಅನೇಕ ಅಡ್ಡಿಗಳನ್ನು ಎದುರಿಸಬೇಕಾಗುತ್ತದೆ. ಸರಿಯಾದ ಗೃಹ ಸಾಲವನ್ನು ಆಯ್ಕೆ ಮಾಡಿಕೊಳ್ಳುವುದು ಮೊದಲ ಮತ್ತು ಅತ್ಯಂತ ಕಠಿಣ ಸವಾಲು. ಹಲವಾರು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ನಿಮಗೆ ಸಾಲ ನೀಡಲು ಸಿದ್ಧವಿದ್ದರೂ, ನೀವು ಸರಿಯಾದ ವಿಶ್ಲೇಷಣೆ ಮಾಡಿ, ನಿಮ್ಮ ಷರತ್ತುಗಳಿಗೆ ಹಾಗೂ ಬಜೆಟ್‍ಗೆ ಅನುಗುಣವಾದ ಆಯ್ಕೆಯನ್ನು ಮಾಡುವುದು ಸೂಕ್ತ.


ಈ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡಲು ಇಲ್ಲಿವೆ ಒಂದಷ್ಟು ಸಲಹೆಗಳು:


ಕಡಿಮೆ ಬಡ್ಡಿದರ- ಸಾಲ ತೀರಿಸಲು ಕಷ್ಟವೇ ಅಥವಾ ಸುಲಭವೇ ಎಂಬುದನ್ನು ನಿರ್ಧರಿಸುವ ಪ್ರಮುಖ ಅಂಶ ಬಡ್ಡಿದರ. ಹೆಚ್ಚು ಬಡ್ಡಿದರ ನಿಮ್ಮನ್ನು ಅಧಿಕ ಮೊತ್ತದ ಸಾಲ ಪಡೆಯದಂತೆ ತಡೆಯಬಹುದು ಅಥವಾ ದೀರ್ಘ ಪಾವತಿ ಅವಧಿಯನ್ನು ಅಯ್ಕೆ ಮಾಡುವಂತೆ ಮಾಡಬಹುದು. ಇನ್ನೊಂದೆಡೆ ಕಡಿಮೆ ಬಡ್ಡಿದರ ನೀವು ದೊಡ್ಡ ಮೊತ್ತದ ಸಾಲ ಪಡೆಯಲು ಪ್ರೇರೇಪಿಸಬಹುದು, ಅದರಿಂದ ಸಾಲದ ಶೀಘ್ರ ಮರುಪಾವತಿ ಸಾಧ್ಯವಾಗಬಹುದು. ಹಣಕಾಸು ಸಂಸ್ಥೆಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪೆನಿಗಳು ಒದಗಿಸುವ ಬಡ್ಡಿದರ ಕಾಲಕಾಲಕ್ಕೆ ಬದಲಾಗಬಹುದು. ಟಾಟಾ ಕ್ಯಾಪಿಟಲ್ ಗೃಹಸಾಲಗಳು ಕೇವಲ 5 ಲಕ್ಷ ರೂ.ಗಳಿಂದ 5 ಕೋಟಿ ರೂ. ಗಳವರೆಗೆ ವಿಸ್ತರಿಸಿದ್ದು, ಕೇವಲ 6.80% ಕೈಗೆಟುಕುವ ಬಡ್ಡಿದರದಿಂದ ಪ್ರಾರಂಭವಾಗುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲದ ಮೊತ್ತ, ಪಾವತಿ ಅವಧಿ ಮತ್ತು ಇಎಂಐ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು.


ಇದನ್ನು ಓದಿ: ಕಲಾಪದ ವೇಳೆ ಜೂಹಿ ಚಾವ್ಲಾ ಸಿನಿಮಾ ಹಾಡು ಹೇಳಿ ಅಡ್ಡಿಪಡಿಸಿದ ವ್ಯಕ್ತಿ

ಅನುಕೂಲಕರ ಅರ್ಹತಾ ಮಾನದಂಡಗಳು- ಸಾಲಗಾರನಿಗೆ ಗೃಹಸಾಲ ನೀಡಲು ಬ್ಯಾಂಕುಗಳು ಹಲವಾರು ಮಾನದಂಡಗಳನ್ನು ವಿಧಿಸಿದೆ. ಅದು ಸಾಲಗಾರನಿಂದ ಸಾಲಗಾರನಿಗೆ ಬದಲಾಗುತ್ತದೆ. ಟಾಟಾ ಕ್ಯಾಪಿಟಲ್‍ನ ಸುಲಭವಾಗಿ ಬಳಸಬಲ್ಲ ಗೃಹಸಾಲ ಕ್ಯಾಲ್ಕ್ಯುಲೇಟರ್‌ನಲ್ಲಿ ನಿಮ್ಮ ಸಾಲ ಪಡೆಯುವ ಅರ್ಹತೆಯನ್ನು ಪರಿಶೀಲಿಸಿಕೊಳ್ಳಬಹುದು.


ತೆರಿಗೆ ಪ್ರಯೋಜನಗಳು– ವಾರ್ಷಿಕ ಆದಾಯ ತೆರಿಗೆ ರಿಟರ್ನ್ಸ್‌ ಫಾರಂ ಸಲ್ಲಿಸುವಾಗ ಗೃಹಸಾಲದಿಂದಾಗಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಆದಾಯ ತೆರಿಗೆ ಕಾಯ್ದೆ , 1961ರ ಸೆಕ್ಷನ್ 80ಸಿ ಪ್ರಕಾರ ಗೃಹ ಸಾಲದ ಮರು ಪಾವತಿಯ ಮೇಲೆ ಆದಾಯದಿಂದ 1.5 ಲಕ್ಷ ರೂ ಕಡಿತವಾಗುತ್ತದೆ. ಇದಲ್ಲದೆ, ಗೃಹ ಸಾಲದ ಮೇಲಿನ ಸಂಚಯ ಮತ್ತು ಬಡ್ಡಿಯನ್ನು ಪಾವತಿಸಲು, ನೀವು 2 ಲಕ್ಷ ರೂ, ಕಡಿತಕ್ಕೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24ಬಿ ಅಡಿಯಲ್ಲಿ ಅರ್ಹತೆ ಪಡೆಯಬಹುದು.


ಸೀಮಿತ ಪ್ರೋತ್ಸಾಹ ಮತ್ತು ಯೋಜನೆಗಳು- ಸರಕಾರದ ಆತ್ಮನಿರ್ಭರ್ ಭಾರತ್ 3.0 ಪ್ಯಾಕೇಜ್ 2 ಕೋಟಿ ಮೌಲ್ಯದ ಮನೆ ಖರೀದಿಗೆ ಶೇ 20ರಷ್ಟು ಪ್ರೋತ್ಸಾಹ 30 ಜೂನ್ 2021 ವರೆಗೆ ಮಾನ್ಯವಾಗಿದೆ ಎಂದು ಸೂಚಿಸಿದೆ. ಈ ಗಡುವನ್ನು ವಿಸ್ತರಿಸಲಾಗುವುದಿಲ್ಲ.


ಮರುಪಾವತಿ ಅವಧಿ– ಗೃಹ ಸಾಲದಲ್ಲಿ ಸುಮಾರು 30 ವರ್ಷಗಳವರೆಗಿನ ಮರುಪಾವತಿ ಅವಧಿ ಇರುತ್ತದೆ. ಹಾಗಾಗಿ ಅವಧಿ ವಿಸ್ತರಣೆಯಿಂದ ನೀವು ನಿಮ್ಮ ಇಎಂಐ ಪಾವತಿ ಭಾರವನ್ನು ಕಡಿಮೆ ಮಾಡಿಕೊಳ್ಳಬಹುದು.


Published by:Seema R
First published: