Home Loan: ಬ್ಯಾಂಕ್​ನಲ್ಲಿ ಗೃಹ ಸಾಲ ಪಡೆಯುವಾಗ ಈ ವಿಷಯಗಳನ್ನು ಮರೆಯಬೇಡಿ!

Home Loan: ಯಾವ ಬ್ಯಾಂಕ್​ನಲ್ಲಿ ಹೋಂ ಲೋನ್ ಪಡೆಯಬೇಕೆಂದು ನಿರ್ಧರಿಸುವ ಮೊದಲು ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ (ಅ. 30): ಪ್ರತಿಯೊಬ್ಬರಿಗೂ ತಮ್ಮದೇ ಆದ ಚೆಂದದ ಮನೆ ಕಟ್ಟಬೇಕೆಂಬ ಆಸೆ ಇರುತ್ತದೆ. ನೀವೇನಾದರೂ ಹೋಂ ಲೋನ್ ಪಡೆಯಲು ಯೋಚಿಸುತ್ತಿದ್ದೀರಾ? ಗೃಹ ಸಾಲ ಪಡೆಯುವ ಮೊದಲು ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಅಗತ್ಯ. ನಿಮಗೆ ಸಾಲ ನೀಡುವ ಮುನ್ನ ಬ್ಯಾಂಕ್​ಗಳು ನೀವು ಸಾಲ ಮರುಪಾವತಿ ಮಾಡಲು ಅರ್ಹರೇ ಎಂಬುದನ್ನು ಗಮನಿಸಿ ಸಾಲ ನೀಡುತ್ತವೆ. ಹೀಗಿರುವಾಗ ಒಂದು ವೇಳೆ ನಿಮಗೆ ಹೆಚ್ಚಿನ ಸಾಲ ಬೇಕಾದಲ್ಲಿ ಜಂಟಿಯಾಗಿ ಗೃಹ ಸಾಲ ಪಡೆಯುವುದು ಉತ್ತಮ. ಇದರಿಂದ ನೀವು ತೆರಿಗೆ ಪಾವತಿಯನ್ನೂ ಉಳಿತಾಯ ಕೂಡ ಮಾಡಲು ಅವಕಾಶ ಇರುತ್ತದೆ. ಇದರಿಂದ ನಿಮ್ಮ ಮೇಲಿನ ಇಎಂಐ ಹೊರೆ ಕೂಡ ಕಡಿಮೆಯಾಗುತ್ತದೆ. ಅದಕ್ಕೂ ಮೊದಲು ನೀವು ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರಬೇಕಾದ್ದು ಅಗತ್ಯ. ಆ ಬಗ್ಗೆ ಇಲ್ಲಿದೆ ಮಾಹಿತಿ...

    ಯಾವ ಬ್ಯಾಂಕ್​ನಲ್ಲಿ ಹೋಂ ಲೋನ್ ಪಡೆಯಬೇಕೆಂದು ನಿರ್ಧರಿಸುವ ಮೊದಲು ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಉತ್ತಮ.

    ಗೃಹ ಸಾಲದ ಮೊತ್ತ:
    ಹೋಂ ಲೋನ್ ಪಡೆಯುವ ಮೊದಲು ಸಾಲ ತೀರಿಸುವ ಅವಧಿ ಹಾಗೂ ಬಡ್ಡಿಯ ದರವನ್ನು ಗಮನಿಸಿ. ವ್ಯಕ್ತಿಯ ಆದಾಯ, ಮಾಸಿಕ ಖರ್ಚು-ವೆಚ್ಚಗಳನ್ನು ಆಧರಿಸಿ ಬ್ಯಾಂಕ್​ಗಳು ಎಷ್ಟು ಹೋಂ ಲೋನ್ ನೀಡಬೇಕೆಂಬುದನ್ನು ನಿರ್ಧರಿಸುತ್ತವೆ. ಸಾಮಾನ್ಯವಾಗಿ ನಿಮ್ಮ ಆಸ್ತಿಯ ಶೇ. 80ರಿಂದ 90ರಷ್ಟು ಮೊತ್ತವನ್ನು ಸಾಲವನ್ನಾಗಿ ನೀಡಲಾಗುತ್ತದೆ.

    ಬಡ್ಡಿಯ ಮೊತ್ತ:

    ಹೋಂ ಲೋನ್ ಪಡೆಯುವವರು ಇಎಂಐ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆಯಬೇಕು. ಇಎಂಐ ಮೂಲಕ ಸಾಲ ಮರುಪಾವತಿ ಮಾಡುವಾಗ ಎಷ್ಟು ಅಸಲಿಗೆ ಎಷ್ಟು ಬಡ್ಡಿ ಇರುತ್ತದೆ ಎಂಬುದನ್ನು ತಿಳಿದುಕೊಂಡು ನಂತರ ನಿರ್ಧಾರ ಮಾಡಿ. ಯಾವ ಬ್ಯಾಂಕ್​ನಲ್ಲಿ ಕಡಿಮೆ ಬಡ್ಡಿದರ ಇರುತ್ತದೋ ಅದೇ ಬ್ಯಾಂಕ್​ ಅನ್ನು ಆಯ್ಕೆ ಮಾಡಿಕೊಳ್ಳಿ.

    ಸಾಲ ಪಡೆಯುವವರ ಅರ್ಹತೆ:
    ಬ್ಯಾಂಕ್​ಗಳಲ್ಲಿ ಹೋಂ ಲೋನ್ ನೀಡಲು ಕೆಲವು ಮಾನದಂಡಗಳಿರುತ್ತವೆ. ಅವು ಒಂದು ಬ್ಯಾಂಕ್​ಗಿಂತ ಮತ್ತೊಂದು ಬ್ಯಾಂಕ್​ನಲ್ಲಿ ಭಿನ್ನವಾಗಿರುತ್ತದೆ. ಹೋಂ ಲೋನ್ ಪಡೆಯುವವರ ಆದಾಯ, ಮರುಪಾವತಿಯ ಸಾಮರ್ಥ್ಯ, ವೆಚ್ಚಗಳ ಬಗ್ಗೆ ಗಮನಿಸಿ ಬ್ಯಾಂಕ್​ಗಳು ಸಾಲ ನೀಡುತ್ತವೆ. ಹೀಗಾಗಿ, ಅವುಗಳ ಬಗ್ಗೆ ಅಧ್ಯಯನ ನಡೆಸಿ, ಎಲ್ಲ ಬ್ಯಾಂಕುಗಳಿಂದ ಮಾಹಿತಿ ಪಡೆದು, ನಿಮಗೆ ಬೇಕಾದ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ.

    ಗೃಹ ಸಾಲಕ್ಕೆ ಬೇಕಾದ ದಾಖಲೆಗಳು:

    ಕೇವಲ ಗೃಹ ಸಾಲವಲ್ಲದೆ ಬೇರಾವ ಸಾಲವನ್ನೇ ಪಡೆಯುವದಾದರೂ ಅದಕ್ಕೆ ಪೂರಕವಾದ ದಾಖಲಾತಿಗಳನ್ನು ಇಟ್ಟುಕೊಳ್ಳುವುದು ಅಗತ್ಯ. ಮನೆಗೆ ಸಂಬಂಧಿಸಿದ ಎಲ್ಲ ಕಾನೂನುಬದ್ಧವಾದ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಆಧಾರ್​ ಕಾರ್ಡ್​, ಐಡೆಂಟಿಟಿ ಆರ್ಡ್​, ಮನೆಯಲ್ಲಿ ವಾಸವಾಗಿರುವ ದಾಖಲೆಗಳು, ಉದ್ಯೋಸ್ಥರಾದರೆ ಇತ್ತೀಚಿನ ನಿಮ್ಮ ಸ್ಯಾಲರಿ ಸ್ಲಿಪ್ (ಪೇ ಸ್ಲಿಪ್), ಫಾರ್ಮ್​ 16ಎ, ಜಿಎಸ್​ಟಿ ರಿಟರ್ನ್ಸ್​, 6 ತಿಂಗಳ ಬ್ಯಾಂಕ್ ಸ್ಟೇಟ್​ಮೆಂಟ್​ ಹೀಗೆ ಎಲ್ಲ ದಾಖಲೆಗಳನ್ನೂ ಸರಿಯಾಗಿ ಇಟ್ಟುಕೊಳ್ಳಬೇಕು.

    ಡೌನ್ ಪೇಮೆಂಟ್:
    ಹೋಂ ಲೋನ್ ಪಡೆಯುವಾಗ ಎಷ್ಟು ಡೌನ್ ಪೇಮೆಂಟ್ ಕಟ್ಟಬೇಕೆಂಬುದನ್ನು ಲೆಕ್ಕಾಚಾರ ಹಾಕಿ. ಬ್ಯಾಂಕ್​ಗಳು ನೀವು ಸಾಲ ಪಡೆಯುವ ಮೊತ್ತದ ಶೇ. 20ರಿಂದ 30ರಷ್ಟು ಹಣವನ್ನು ಡೌನ್ ಪೇಮೆಂಟ್ ನೀಡಬೇಕೆಂದು ಕೇಳುವ ಸಾಧ್ಯತೆಗಳು ಹೆಚ್ಚು. ಹಾಗೇ, ನೀವು ಸಾಲ ಪಡೆಯುವ ಬ್ಯಾಂಕ್​ನ ಸೇವೆಯ ಬಗ್ಗೆ ಸರಿಯಾದ ಮಾಹಿತಿ ಪಡೆಯಿರಿ.

    ಗೃಹ ಸಾಲ ಅರ್ಹತೆ ಸಾಲ ಪಡೆಯುವ ಗ್ರಾಹಕರ ಆದಾಯ, ಮರುಪಾವತಿ ಸಾಮರ್ಥ್ಯ, ಹೆಚ್ಚುವರಿ ಆದಾಯ, ವೆಚ್ಚಗಳು ಇತ್ಯಾದಿ ಮಾನದಂಡಗಳನ್ನು ಆಧರಿಸಿ ಬ್ಯಾಂಕುಗಳು ಸಾಲ ನೀಡುವ ಬಗ್ಗೆ ನಿರ್ಧರಿಸುತ್ತವೆ. ಕೆಲ ಬ್ಯಾಂಕುಗಳು ಶೇ. 55-60ರಷ್ಟು ಸಾಲ ಮಾಸಿಕ ಆದಾಯದಲ್ಲಿ ವ್ಯಕ್ತಿ ಮರುಪಾವತಿಸುವ ಸಾಮರ್ಥ್ಯ ಹೊಂದಿದ್ದಾನೆಯೇ ಎಂಬುದನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಇನ್ನೂ ಕೆಲ ಬ್ಯಾಂಕುಗಳು ವ್ಯಕ್ತಿಯ ಆದಾಯಕ್ಕೆ ಅನುಗುಣವಾಗಿ ಇಎಂಐ ಪಾವತಿಯ ಆಧಾರದಲ್ಲಿ ಸಾಲ ಕಟ್ಟುವ ಸಾಮರ್ಥ್ಯವನ್ನು ಗಮನಿಸಿ, ಸಾಲ ನೀಡುತ್ತದೆ.
    Published by:Sushma Chakre
    First published: