HOME » NEWS » Trend » HOME LOAN CHECK THE LOWEST HOME LOAN INTEREST RATES OFFERED BY 15 BANKS SBI HOUSING LOAN SCT

Home Loan: ಮನೆ ಕಟ್ಟಿಸಬೇಕಾ?; ಕಡಿಮೆ ಬಡ್ಡಿಗೆ ಗೃಹ ಸಾಲ ನೀಡುವ ಬ್ಯಾಂಕ್​ಗಳ ಪಟ್ಟಿ ಇಲ್ಲಿದೆ

Home Loan: ನೀವೇನಾದರೂ ಗೃಹ ಸಾಲವನ್ನು ಪಡೆಯಲು ಯೋಚಿಸುತ್ತಿದ್ದರೆ, ಶೇ. 7ಕ್ಕೂ ಕಡಿಮೆ ವಾರ್ಷಿಕ ಬಡ್ಡಿ ದರದಲ್ಲಿ ಗೃಹ ಸಾಲ ನೀಡುವ ಬ್ಯಾಂಕ್​ಗಳಿವೆ. ಆ 15 ಬ್ಯಾಂಕುಗಳ ಬಗ್ಗೆ ಇಲ್ಲಿದೆ ಮಾಹಿತಿ.

Sushma Chakre | news18-kannada
Updated:January 18, 2021, 3:42 PM IST
Home Loan: ಮನೆ ಕಟ್ಟಿಸಬೇಕಾ?; ಕಡಿಮೆ ಬಡ್ಡಿಗೆ ಗೃಹ ಸಾಲ ನೀಡುವ ಬ್ಯಾಂಕ್​ಗಳ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
  • Share this:
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಮಾತೇ ಇದೆ. ಸ್ವಂತದ್ದೊಂದು ಮನೆಯಿರಬೇಕು, ಸಾಲ ಮಾಡಿಯಾದರೂ ಮನೆ ಕಟ್ಟಬೇಕೆಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ? ಇಂದಿನ ದುಬಾರಿ ಖರ್ಚಿನಲ್ಲಿ ಮನೆ ಕಟ್ಟುವುದೆಂದರೆ ಸುಲಭದ ಮಾತಲ್ಲ. ಇದಕ್ಕೆಂದೇ ಮನೆ ಕಟ್ಟಲೆಂದೇ ಬ್ಯಾಂಕ್​ನಲ್ಲಿ ಸಾಲ ನೀಡಲಾಗುತ್ತದೆ. ಆದರೆ, ಸ್ವಲ್ಪ ಯಾಮಾರಿದರೂ ಬ್ಯಾಂಕ್​ನ ಬಡ್ಡಿ, ಅಸಲನ್ನು ಕಟ್ಟುವುದರಲ್ಲೇ ಜೀವನ ಮುಗಿಯುತ್ತದೆ. ಹೀಗಾಗಿ, ಕಡಿಮೆ ಬಡ್ಡಿದರದಲ್ಲಿ Home Loan ನೀಡುವ 15 ಬ್ಯಾಂಕ್​ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕಳೆದ ವರ್ಷ ಮಾರ್ಚ್​ನಲ್ಲಿ ಹೆಚ್ಚಾದ ಕೊರೋನಾ ಅಟ್ಟಹಾಸದಿಂದ ಲಾಕ್​ಡೌನ್ ಘೋಷಣೆ ಮಾಡಲಾಗಿತ್ತು. ಇದರಿಂದ ಭಾರತದ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿತ್ತು. ಲಾಕ್​ಡೌನ್ ತೆರವಾದ ಬಳಿಕವೂ ಭಾರತದ ಆರ್ಥಿಕತೆ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಆರ್ಥಿಕತೆಯನ್ನು ಉತ್ತೇಜಿಸಲು ಬ್ಯಾಂಕ್​ಗಳ ರೆಪೊ ದರವನ್ನು ಶೇ.4ರಷ್ಟು ಕಡಿಮೆಗೊಳಿಸಿದೆ. ಇದರಿಂದ ಬ್ಯಾಂಕ್​ಗಳು ತಮ್ಮ ಹೋಂ ಲೋನ್ ಮೇಲಿನ ಬಡ್ಡಿ ದರವನ್ನು ಇಳಿಸಿದೆ. ಹಾಗಾಗಿ, ಈಗ ಗೃಹ ಸಾಲ ಪಡೆಯುವುದು ಮೊದಲಿನಷ್ಟ ಕಷ್ಟವೇನಲ್ಲ!

ನೀವೇನಾದರೂ ಸ್ಥಿರವಾದ ಆದಾಯ, ಉತ್ತಮವಾದ ಕ್ರೆಡಿಟ್ ಸ್ಕೋರ್- ರಿಪೋರ್ಟ್ ಹೊಂದಿದ್ದರೆ ಸುಲಭವಾಗಿ ಗೃಹಸಾಲ ಪಡೆಯಬಹುದು. ಮರುಪಾವತಿಯ ಅವಧಿ ಇತ್ಯಾದಿ ವಿಚಾರಗಳನ್ನು ಆಯಾ ಬ್ಯಾಂಕ್ ಗಳಲ್ಲೇ ವಿಚಾರಿಸುವುದು ಒಳ್ಳೆಯದು. ಆದರೆ, ನೀವೇನಾದರೂ ಗೃಹ ಸಾಲವನ್ನು ಪಡೆಯಲು ಯೋಚಿಸುತ್ತಿದ್ದರೆ, ಶೇ. 7ಕ್ಕೂ ಕಡಿಮೆ ವಾರ್ಷಿಕ ಬಡ್ಡಿ ದರದಲ್ಲಿ ಗೃಹ ಸಾಲ ನೀಡುವ ಬ್ಯಾಂಕ್​ಗಳಿವೆ. ಆ 15 ಬ್ಯಾಂಕುಗಳ ಬಗ್ಗೆ ಇಲ್ಲಿದೆ ಮಾಹಿತಿ.

1. ಕೋಟಕ್ ಮಹೀಂದ್ರಾ ಬ್ಯಾಂಕ್ (6.75%- 8.45%)
2. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (6.80%- 7.40%)
3. ಪಂಜಾಬ್ ನ್ಯಾಷನಲ್ ಬ್ಯಾಂಕ್ (6.80%- 7.75%)
4. HDFC ಬ್ಯಾಂಕ್ (6.80%- 7.85%)5. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (6.80%)
6. ಸೆಂಟ್ರಲ್ ಬ್ಯಾಂಕ್ (6.85%- 7.30%)
7. ಬ್ಯಾಂಕ್ ಆಫ್ ಬರೋಡ (6.85% - 8.20%)
8. UCO ಬ್ಯಾಂಕ್ (6.90%- 7.25%)
9. ಪಂಜಾಬ್ ಆ್ಯಂಡ್ ಸಿಂದ್ ಬ್ಯಾಂಕ್ (6.90%- 7.60%)
10. ICICI ಬ್ಯಾಂಕ್ (6.90%- 8.05%)
11. ಬ್ಯಾಂಕ್ ಆಫ್ ಮಹಾರಾಷ್ಟ್ರ (6.90%- 8.40%)
12. ಆಕ್ಸಿಸ್ ಬ್ಯಾಂಕ್ (6.90%- 8.55%)
13. ಕೆನರಾ ಬ್ಯಾಂಕ್ (6.90%- 8.90%)
14. IDBI ಬ್ಯಾಂಕ್ (6.90%- 9.90%)
15. ಬ್ಯಾಂಕ್ ಆಫ್ ಇಂಡಿಯಾ (6.95%- 8.35%)

ಗೃಹ ಸಾಲ ಪಡೆಯುವ ಮೊದಲು ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಅಗತ್ಯ. ಯಾವ ಬ್ಯಾಂಕ್​ನಲ್ಲಿ ಹೋಂ ಲೋನ್ ಪಡೆಯಬೇಕೆಂದು ನಿರ್ಧರಿಸುವ ಮೊದಲು ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಉತ್ತಮ.

ಹೋಂ ಲೋನ್ ಪಡೆಯುವ ಮೊದಲು ಸಾಲ ತೀರಿಸುವ ಅವಧಿ ಹಾಗೂ ಬಡ್ಡಿಯ ದರವನ್ನು ಗಮನಿಸಿ. ವ್ಯಕ್ತಿಯ ಆದಾಯ, ಮಾಸಿಕ ಖರ್ಚು-ವೆಚ್ಚಗಳನ್ನು ಆಧರಿಸಿ ಬ್ಯಾಂಕ್​ಗಳು ಎಷ್ಟು ಹೋಂ ಲೋನ್ ನೀಡಬೇಕೆಂಬುದನ್ನು ನಿರ್ಧರಿಸುತ್ತವೆ. ಹೋಂ ಲೋನ್ ಪಡೆಯುವವರು ಇಎಂಐ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆಯಬೇಕು. ಇಎಂಐ ಮೂಲಕ ಸಾಲ ಮರುಪಾವತಿ ಮಾಡುವಾಗ ಎಷ್ಟು ಅಸಲಿಗೆ ಎಷ್ಟು ಬಡ್ಡಿ ಇರುತ್ತದೆ ಎಂಬುದನ್ನು ತಿಳಿದುಕೊಂಡು ನಂತರ ನಿರ್ಧಾರ ಮಾಡಿ.

ಮನೆಗೆ ಸಂಬಂಧಿಸಿದ ಎಲ್ಲ ಕಾನೂನುಬದ್ಧವಾದ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಆಧಾರ್​ ಕಾರ್ಡ್​, ಐಡೆಂಟಿಟಿ ಆರ್ಡ್​, ಮನೆಯಲ್ಲಿ ವಾಸವಾಗಿರುವ ದಾಖಲೆಗಳು, ಉದ್ಯೋಸ್ಥರಾದರೆ ಇತ್ತೀಚಿನ ನಿಮ್ಮ ಸ್ಯಾಲರಿ ಸ್ಲಿಪ್ (ಪೇ ಸ್ಲಿಪ್), ಫಾರ್ಮ್​ 16ಎ, ಜಿಎಸ್​ಟಿ ರಿಟರ್ನ್ಸ್​, 6 ತಿಂಗಳ ಬ್ಯಾಂಕ್ ಸ್ಟೇಟ್​ಮೆಂಟ್​ ಹೀಗೆ ಎಲ್ಲ ದಾಖಲೆಗಳನ್ನೂ ಸರಿಯಾಗಿ ಇಟ್ಟುಕೊಳ್ಳಬೇಕು. ಹೋಂ ಲೋನ್ ಪಡೆಯುವಾಗ ಎಷ್ಟು ಡೌನ್ ಪೇಮೆಂಟ್ ಕಟ್ಟಬೇಕೆಂಬುದನ್ನು ಲೆಕ್ಕಾಚಾರ ಹಾಕಿ. ಬ್ಯಾಂಕ್​ಗಳು ನೀವು ಸಾಲ ಪಡೆಯುವ ಮೊತ್ತದ ಶೇ. 20ರಿಂದ 30ರಷ್ಟು ಹಣವನ್ನು ಡೌನ್ ಪೇಮೆಂಟ್ ನೀಡಬೇಕೆಂದು ಕೇಳುವ ಸಾಧ್ಯತೆಗಳು ಹೆಚ್ಚು. ಹಾಗೇ, ನೀವು ಸಾಲ ಪಡೆಯುವ ಬ್ಯಾಂಕ್​ನ ಸೇವೆಯ ಬಗ್ಗೆ ಸರಿಯಾದ ಮಾಹಿತಿ ಪಡೆಯಿರಿ.

ಗೃಹ ಸಾಲ ಅರ್ಹತೆ ಸಾಲ ಪಡೆಯುವ ಗ್ರಾಹಕರ ಆದಾಯ, ಮರುಪಾವತಿ ಸಾಮರ್ಥ್ಯ, ಹೆಚ್ಚುವರಿ ಆದಾಯ, ವೆಚ್ಚಗಳು ಇತ್ಯಾದಿ ಮಾನದಂಡಗಳನ್ನು ಆಧರಿಸಿ ಬ್ಯಾಂಕುಗಳು ಸಾಲ ನೀಡುವ ಬಗ್ಗೆ ನಿರ್ಧರಿಸುತ್ತವೆ. ಕೆಲ ಬ್ಯಾಂಕುಗಳು ಶೇ. 55-60ರಷ್ಟು ಸಾಲ ಮಾಸಿಕ ಆದಾಯದಲ್ಲಿ ವ್ಯಕ್ತಿ ಮರುಪಾವತಿಸುವ ಸಾಮರ್ಥ್ಯ ಹೊಂದಿದ್ದಾನೆಯೇ ಎಂಬುದನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಇನ್ನೂ ಕೆಲ ಬ್ಯಾಂಕುಗಳು ವ್ಯಕ್ತಿಯ ಆದಾಯಕ್ಕೆ ಅನುಗುಣವಾಗಿ ಇಎಂಐ ಪಾವತಿಯ ಆಧಾರದಲ್ಲಿ ಸಾಲ ಕಟ್ಟುವ ಸಾಮರ್ಥ್ಯವನ್ನು ಗಮನಿಸಿ, ಸಾಲ ನೀಡುತ್ತದೆ.
Published by: Sushma Chakre
First published: January 18, 2021, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories