• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Angelina Jolie: ಮೈ ಮೇಲೆ ಜೇನು ಹುಳುಗಳನ್ನು ಬಿಟ್ಟುಕೊಂಡು 18 ನಿಮಿಷಗಳ ಕಾಲ ಫೋಟೋಶೂಟ್​ಗೆ ಪೋಸ್​​ ಕೊಟ್ಟ ಹಾಲಿವುಡ್​ ನಟಿ ಏಂಜಲೀನಾ ಜೋಲಿ..!

Angelina Jolie: ಮೈ ಮೇಲೆ ಜೇನು ಹುಳುಗಳನ್ನು ಬಿಟ್ಟುಕೊಂಡು 18 ನಿಮಿಷಗಳ ಕಾಲ ಫೋಟೋಶೂಟ್​ಗೆ ಪೋಸ್​​ ಕೊಟ್ಟ ಹಾಲಿವುಡ್​ ನಟಿ ಏಂಜಲೀನಾ ಜೋಲಿ..!

ಹಾಲಿವುಡ್​ ನಟಿ ಏಂಜಲೀನಾ ಜೋಲಿ

ಹಾಲಿವುಡ್​ ನಟಿ ಏಂಜಲೀನಾ ಜೋಲಿ

ಹಾಲಿವುಡ್​ ನಟಿ ಏಂಜಲೀನಾ ಜೋಲಿ ಅವರು ಮೈ ಮೇಲೆ 18 ನಿಮಿಷಗಳ ಕಾಲ ನಿಜವಾದ ಜೇನು ಹುಳುಗಳನ್ನು ಬಿಟ್ಟುಕೊಂಡು ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ. ಏಂಜಲೀನಾ ಹೀಗೆ ಮಾಡಿದರ ಹಿಂದೆ ಒಂದು ಒಳ್ಳೆಯ ಕಾರಣವಿದೆ.

  • Share this:

ತಂತ್ರಜ್ಞಾನ ಮತ್ತು ಫೋಟೋ ಎಡಿಟಿಂಗ್ ಸಾಫ್ಟ್‌ವೇರ್​​ನಿಂದ ಇವತ್ತು ಅದ್ಭುತಗಳನ್ನು ಸೃಷ್ಟಿಸಬಹುದು. ಆದರೆ ಹಾಲಿವುಡ್​​ ನಟಿ ಏಂಜೆಲಿನಾ ಜೋಲಿ (Angelina Jolie) ಮಾತ್ರ ಇದೆಲ್ಲವನ್ನು ಪಕ್ಕಕ್ಕೆ ಸರಿಸಿ, ನೈಜವಾದ ಅನುಭವಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಅದರಲ್ಲೂ ಒಂದು ಒಳ್ಳೆಯ ಕಾರಣಕ್ಕೆ ಏಂಜಲೀನಾ ಜೋಲಿ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ.ಹಾಲಿವುಡ್​​ನ ಸೂಪರ್​ ಸ್ಟಾರ್​ ನಟಿ 100ಕ್ಕೂ ಹೆಚ್ಚು ನಿಜವಾದ ಜೇನುಗಳು ತಮ್ಮ ದೇಹದ ಮೇಲಿದ್ದರೂ, ಲೆಕ್ಕಿಸದೇ 18 ನಿಮಿಷ ಪೋಸ್​ ಕೊಟ್ಟು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಅಲ್ಲದೆ ಶಹಬ್ಭಾಸ್​ ಎನಿಸಿಕೊಂಡಿದ್ದಾರೆ. ಇತ್ತೀಚಿನ ಫೋಟೋಶೂಟ್‌ನಲ್ಲಿ 1981 ರ ಅಪ್ರತಿಮ ರಿಚರ್ಡ್ ಅವೆಡಾನ್ ಭಾವಚಿತ್ರ, ದಿ ಬೀ ಕೀಪರ್ ಅನ್ನು ಮರುಸೃಷ್ಟಿಸುವ ಪ್ರಯತ್ನದಲ್ಲಿ ಹಾಲಿವುಡ್ ನಟಿ ನೂರಾರು ಸಜೀವ ಜೇನು ನೊಣಗಳಿಂದ ಆವೃತ್ತವಾಗಿದ್ದರು. ದಿ ಅಮೆರಿಕನ್ ವೆಸ್ಟ್ ಎಂಬ ಪುಸ್ತಕದಲ್ಲಿ ಜೇನು ಸಾಕಣೆದಾರ ರೊನಾಲ್ಡ್ ಫಿಶರ್ ಚಿತ್ರ ಕಂಡು ಬಂದಿತ್ತು.


ಅದೇ ಚಿತ್ರದಿಂದ ಸ್ಫೂರ್ತಿ ಪಡೆದ ಈ ಚಿತ್ರವನ್ನು ಛಾಯಾಗ್ರಾಹಕ ಡಾನ್ ವಿಂಟರ್ಸ್ ಅವರು ಬೀ ಡೇ ಪ್ರಯುಕ್ತ ಜೋಲಿಯವರ ಇತ್ತೀಚಿನ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ನಟಿ ಏಂಜಲೀನಾ ಜೋಲಿಯುನೈಟೆಡ್ ನೇಷನ್ಸ್ ಎಜುಕೇಷನಲ್, ಸೈಂಟಿಫಿಕ್ ಆ್ಯಂಡ್ ಕಲ್ಚರಲ್ ಆರ್ಗನೈಸೇಶನ್ (ಯುನೆಸ್ಕೋ) ಮತ್ತು ಫ್ರೆಂಚ್ ಬ್ಯೂಟಿ ಬ್ರ್ಯಾಂಡ್, ಗೆರ್ಲೈನ್ ​​ಫಾರ್ ವುಮೆನ್ ಫಾರ್ ಬೀಸ್​ ಈ ಎಲ್ಲ ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ 2025 ರ ವೇಳೆಗೆ 2500 ಜೇನು ಗೂಡುಗಳನ್ನು 125 ದಶಲಕ್ಷ ಜೇನುನೊಣಗಳೊಂದಿಗೆ ನಿರ್ಮಿಸಲಾಗುವುದು. ಜೊತೆಗೆ 50 ಮಹಿಳಾ ಜೇನು ಸಾಕಣೆದಾರರಿಗೆ ತರಬೇತಿ ನೀಡಲಾಗುವುದು ಹಾಗೂ ತಮ್ಮದೇ ಆದ ಕಾರ್ಯಾಚರಣೆಯಲ್ಲಿ ಬೆಂಬಲ ನೀಡಲಾಗುವುದು. ಈ ಕೆಲಸವನ್ನು ಪ್ರೋತ್ಸಾಹಿಸಲು ಡಾನ್ ತಮ್ಮ ಇನ್​ಸ್ಟಾಗ್ರಾಂ ಶೀರ್ಷಿಕೆಯಲ್ಲಿ ಏಂಜಲೀನಾ ಅವರು ಜೇನು ನೊಣಗಳೊಟ್ಟಿಗೆ ಒಂದು ಕಲಾಕೃತಿ ಮಾಡಲು ಬಯಸಿದ್ದರು ಎಂದಿದ್ದಾರೆ.


ಇದನ್ನೂ ಓದಿ: ಸನ್ನಿ ಲಿಯೋನ್​ಗೆ ಬಟ್ಟೆ ತೊಡಿಸಲು ಹೋದವರ ಪರದಾಟ: ವಿಡಿಯೋ ವೈರಲ್​..!


ಡಾನ್​ ಅವರು ಸ್ವಯಂ ತಾವೇ ಜೇನುಸಾಕಣೆದಾರನಾಗಿದ್ದಾರೆ. ಇನ್ನು ಈ ಫೋಟೋ ಶೂಟ್​ ಸಾಕಷ್ಟು ಸುರಕ್ಷತೆಯಿಂದ ನಡೆಯಬೇಕಿತ್ತು. ಸಾಂಕ್ರಾಮಿಕದ ಸಮಸ್ಯೆಯ ಜೊತೆಗೆ ನಿಜವಾದ ಜೇನುನೊಣಗಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಬೇಕಿತ್ತು. ಈ ಫೋಟೋವನ್ನು ಪರಿಣಾಮಕಾರಿಯಾಗಿ ಸಾಧಿಸಬೇಕಿತ್ತು. ಅದಕ್ಕೆ 40 ವರ್ಷಗಳ ಹಿಂದೆ ಅವೆಡಾನ್ ತನ್ನ ಅಪ್ರತಿಮ ಭಾವಚಿತ್ರವನ್ನು ರಚಿಸಲು ಬಳಸಿದ ತಂತ್ರವನ್ನೇ ತಾವು ಬಳಸುವುದು ಎಂದು ನಿರ್ಧರಿಸಲಾಗಿತ್ತು' ಎಂದು ಡಾನ್​ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.


ANGELINA JOLIE , THE BEEKEEPER, UNESCO, WORLD BEE DAY , HOLLYWOOD, ಏಂಜೆಲೀನಾ ಜೋಲಿ , ಜೇನುನೋಣ,ಹಾಲಿವುಡ್, ಫೋಟೋಶೂಟ್, ನ್ಯಾಷನಲ್ ಜಿಯಾಗ್ರಫಿಕ್, Hollywood actress Angelina Jolies shocking photoshoot with bees for 18 mins
ಹಾಲಿವುಡ್​ ನಟಿ ಏಂಜಲೀನಾ ಜೋಲಿ


ಮಾಸ್ಟರ್ ಜೇನುಸಾಕಣೆದಾರರಾದ ಕೊನ್ರಾಡ್ ಬೌಫರ್ಡ್‌ನನ್ನು ಡಾನ್ ನೇಮಿಸಿಕೊಂಡರು. ಕೀಟಶಾಸ್ತ್ರಜ್ಞರನ್ನು ಸಂಪರ್ಕಿಸಿ ನಿರ್ದಿಷ್ಟ ಫೆರೋಮೋನ್ ಕಾರ್ಯತಂತ್ರ ರೂಪಿಸಿದರು. ಇದನ್ನು ರಾಣಿ ಮಾಂಡಿಬ್ಯುಲರ್ ಫೆರೋಮೋನ್ ಅಥವಾ ಕ್ಯೂಎಂಪಿ ಎಂದೂ ಕರೆಯುತ್ತಾರೆ. ಆಕರ್ಷಣ ಶಕ್ತಿಯನ್ನು ಹೊಂದಿರುವಂತಹ ಕೆಮಿಕಲ್ ಇದು.


ಇದನ್ನೂ ಓದಿ: Suhana Khan: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳು ಸುಹಾನಾರ ಬಾಲ್ಯದ ಚಿತ್ರಗಳು..!


ನ್ಯಾಷನಲ್ ಜಿಯೋಗ್ರಫಿಕ್ ಹಂಚಿಕೊಂಡ ವಿಡಿಯೋದಲ್ಲಿ, ಜೇನುನೊಣಗಳು ಯಾವುದೇ ರೀತಿಯ ಭಯಕ್ಕೆ ಒಳಗಾಗಲಿಲ್ಲ. ಅಲ್ಲದೇ ಡಾನ್,​ ಏಂಜಲೀನಾ ಜೋಲಿ ಅವರ ತ್ವಚೆಯ ಮೇಲೆ ಫೇರೋಮೋನ್​ ಅನ್ನು ಸಿಂಚನ ಮಾಡಿದ್ದರು. ಈ ಕಾರಣಕ್ಕೆ ಜೇನು ನೋಣಗಳು ವಿಚಲಿತವಾಗಲಿಲ್ಲ. ಇಟಲಿಯ ಜೇನುಗಳು ಶಾಂತವಾಗಿ ನಟಿಯ ಮೇಲೆ ಕುಳಿತಿದ್ದು, ಈ ಫೆರೋಮೋನ್​ಗಳನ್ನೇ ಶೂಟಿಂಗ್​ನಲ್ಲಿ ಬಳಸಲಾಗಿತ್ತು.


ಮಾನವನಿಗೆ ನಾನಾ ರೀತಿಯಲ್ಲಿ ನೆರವಾಗುವ ಜೇನು, ಕೃಷಿಕನಿಗೆ ತುಂಬಾ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಇಂತಹ ಜೇನು ಹುಳುಗಳನ್ನು ಮೈ ಮೇಲೆ ಬಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ಹೀಗಿದ್ದರೂ ಒಂದೊಳ್ಳೆ ಕಾರಣಕ್ಕಾಗಿ ನಟಿ ಏಂಜಲೀನಾ ಈ ಸಾಹಸಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.

Published by:Anitha E
First published: