Holiday Plan: ಕರ್ನಾಟಕದೊಳಗೆ Wildlife Tour ಮಾಡೋಕೆ ಈ ಜಾಗಗಳು ಬೆಸ್ಟ್

Wildlife Trip in Karnataka: ಪ್ರಾಣಿ ಪಕ್ಷಿಗಳು ನೈಸರ್ಗಿಕವಾಗಿ ಇರುವ ಸ್ಥಳಗಳಿಗೇ ಹೋಗಿ ನೋಡುವ ಅನುಭವವೇ ಬೇರೆ. ಅದರಲ್ಲೂ ಮಕ್ಕಳನ್ನು ಇಂಥಾ ಸ್ಥಳಗಳಿಗೆ ಕರೆದುಕೊಂಡು ಹೋಗಲು ಬಹುತೇಕ ಎಲ್ಲಾ ಪೋಷಕರೂ ಇಷ್ಟಪಡ್ತಾರೆ. ಕರ್ನಾಟಕದ ಒಳಗೇ ಇಂಥಾ ಅನೇಕ ಒಳ್ಳೊಳ್ಳೆ ಸ್ಥಳಗಳಿವೆ. ಅವುಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕದ ಕಾಡಿನಲ್ಲಿ ಆನೆ

ಕರ್ನಾಟಕದ ಕಾಡಿನಲ್ಲಿ ಆನೆ

  • Share this:
ನೀವು ಸುಂದರವಾದ ಪ್ರಕೃತಿಯ ಮಡಿಲಲ್ಲಿ (Amidst Nature) ಕಾಲ ಕಳೆಯುವುದಕ್ಕೆ ಅಥವಾ ವನ್ಯಜೀವಿಗಳನ್ನು (Wildlife) ನೋಡಬೇಕು ಎಂದರೂ ಕರ್ನಾಟಕವು (Karnataka Tourism) ಎಲ್ಲಾ ರೀತಿಯಲ್ಲೂ ಪ್ರವಾಸಿಗರಿಗೆ ಅದ್ಭುತ ತಾಣಗಳ ಸುಂದರವಾದ ಅನುಭವ ಕಟ್ಟಿಕೊಡುವುದಕ್ಕೆ ಪ್ರಖ್ಯಾತಿ ಪಡೆದಿದೆ ಎಂದರೆ ಅತಿಶಯೋಕ್ತಿಯಲ್ಲ. ಹೀಗೆ ನೀವು ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿರುವವರಾಗಿದ್ದರೇ ಇಲ್ಲಿ ನೋಡಲು ತುಂಬಾ ಸ್ಥಳಗಳಿವೆ. ರಾಜ್ಯದ ಕೆಲವು ಪ್ರಮುಖ ರಾಷ್ಟ್ರೀಯ ಉದ್ಯಾನವನಗಳ (National Park) ವಿವರಗಳನ್ನು ನಿಮಗಾಗಿ ನೀಡಿದ್ದೇವೆ. ನೀವು ವನ್ಯಜೀವಿಗಳಿರುವ ಜಾಗಕ್ಕೆ ಹೋಗುವ ಮುನ್ನ ಇದನ್ನು ಒಮ್ಮೆ ಓದಿಕೊಂಡು ಹೋಗಿ.

ಬಂಡೀಪುರ ರಾಷ್ಟ್ರೀಯ ಉದ್ಯಾನ

ನೈಸರ್ಗಿಕ ಅದ್ಭುತಗಳಿಂದ ತುಂಬಿರುವ ಈ ರಾಷ್ಟ್ರೀಯ ಉದ್ಯಾನ, ಬಂಡೀಪುರವು ಕರ್ನಾಟಕ ರಾಜ್ಯದಲ್ಲಿಯೇ ಸಾಕಷ್ಟು ಪ್ರಸಿದ್ಧವಾದ ರಾಷ್ಟ್ರೀಯ ಉದ್ಯಾನವಾಗಿದೆ. ಈ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನವು ಹುಲಿಗಳ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ, ಆದ್ದರಿಂದ ಇದನ್ನು ನೋಡುವುದು ನೀವು ಮಿಸ್ ಮಾಡಿಕೊಳ್ಳಲೇ ಬೇಡಿ. ಬಂಡೀಪುರ ರಾಷ್ಟ್ರೀಯ ಉದ್ಯಾನವು ವಯನಾಡ್, ಮುದುಮಲೈ ಮತ್ತು ನಾಗರಹೊಳೆಗಳೊಂದಿಗೆ ಗಡಿ ಹಂಚಿಕೊಂಡಿದ್ದು ಉತ್ತಮವಾದ ಪರಿಸರ ಹೊಂದಿದೆ. ನೀವು ಈ ಹಸಿರು ಪ್ರಕೃತಿಯನ್ನು ಖಂಡಿತವಾಗಿಯೂ ಇಷ್ಟ ಪಡುತ್ತೀರಿ.

ನಾಗರಹೊಳೆ ರಾಷ್ಟ್ರೀಯ ಉದ್ಯಾನ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನವನ್ನು ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಎಂದು ಸಹ ಕರೆಯಲಾಗುತ್ತದೆ. ಹುಲಿ ಮೀಸಲು ಪ್ರದೇಶವಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವು ವನ್ಯಜೀವಿಗಳನ್ನು ವೀಕ್ಷಿಸಬೇಕೆಂದು ಕೊಂಡವರಿಗೆ ಒಂದು ಒಳ್ಳೆಯ ಆಯ್ಕೆಯಾಗಿದೆ. ಆನೆಗಳು, ಹುಲಿಗಳು, ಚಿರತೆಗಳು ಮತ್ತು ಇನ್ನಿತರೆ ಪ್ರಾಣಿಗಳನ್ನು ಇಲ್ಲಿ ಕಾಣಬಹುದು. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಈ ರಾಷ್ಟ್ರೀಯ ಉದ್ಯಾನವು ಹಿಂದೆ ರಾಜರ ಬೇಟೆಯಾಡುವ ಸ್ಥಳವಾಗಿತ್ತು ಎಂದು ಹೇಳಲಾಗುತ್ತದೆ. ರಾಷ್ಟ್ರೀಯ ಉದ್ಯಾನವನವು ಗುಲಾಬಿ ಗಿಡಗಳು, ಶ್ರೀಗಂಧ ಮತ್ತು ತೇಗದ ಮರಗಳಿಗೆ ನೆಲೆಯಾಗಿದೆ.

ಇದನ್ನೂ ಓದಿ: Photos: ಭಾರತದಲ್ಲಿ ಕಾಣಸಿಗುವ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿವು!

ಕುದುರೆಮುಖ ರಾಷ್ಟ್ರೀಯ ಉದ್ಯಾನ

ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನವು ಅದ್ಭುತಗಳ ವಿಸ್ಮಯ ಅಂತಾನೆ ಹೇಳಬಹುದು. ಈ ಸುಂದರವಾದ ರಾಷ್ಟ್ರೀಯ ಉದ್ಯಾನವು ಪ್ರವಾಸಿಗರಿಗೆ ಅದ್ಭುತ ತಾಣವಾಗಿದೆ. ಇಲ್ಲಿನ ದಾರಿಗಳು ನಿಮ್ಮನ್ನು ಈ ಪ್ರದೇಶದ ಶಿಖರಕ್ಕೆ ಕರೆದೊಯ್ಯುತ್ತವೆ. ಹಚ್ಚ ಹಸಿರಿನ ಭೂದೃಶ್ಯವು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ ಮತ್ತು ಈ ಸ್ಥಳವನ್ನು ಅನುಭವಿಸಲು ಉತ್ತಮ ಸಮಯವೆಂದರೆ ಮಳೆಗಾಲ ಅಂತಾನೆ ಹೇಳಬಹುದು. ಕುದುರೆಮುಖದಲ್ಲಿ ವಲಸೆ ಅವಧಿಯಲ್ಲಿ 200ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಇಲ್ಲಿ ಬಂದು ವಾಸಿಸುತ್ತವೆ.

ಭದ್ರಾ ವನ್ಯಜೀವಿ ಅಭಯಾರಣ್ಯ

ಭದ್ರಾ ವನ್ಯಜೀವಿ ಅಭಯಾರಣ್ಯವು ಸಂರಕ್ಷಿತ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಇದು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಈ ಹುಲಿ ಮೀಸಲು ಪ್ರದೇಶವಾದ ಭದ್ರಾ ವನ್ಯಜೀವಿ ಅಭಯಾರಣ್ಯವು ಸುಮಾರು 120 ಸಸ್ಯ ಪ್ರಭೇದಗಳಿಗೆ ನೆಲೆಯಾಗಿದೆ. ಇಲ್ಲಿ 33 ಹುಲಿಗಳಿವೆ, ಚಿರತೆಗಳು, ನರಿಗಳು, ಚುಕ್ಕೆ ಜಿಂಕೆಗಳು ಇವೆ. ಪಕ್ಷಿ ವೀಕ್ಷಕರಿಗೆ ಇದು ಉತ್ತಮ ತಾಣವಾಗಿದೆ. ಇಲ್ಲೇ ಇರುವ ಭದ್ರಾ ಅಣೆಕಟ್ಟು ತನ್ನ ದ್ವಾರಗಳ ಮೂಲಕ ನೀರನ್ನು ಬಿಡುವಾಗ ದೂರದಿಂದ ನೋಡಲು ತುಂಬಾನೇ ಚೆನ್ನಾಗಿರುತ್ತದೆ.
Published by:Soumya KN
First published: