ಜಗತ್ತಿಗೆ ಬಂದೊದಗಿರುವ ವಿಪತ್ತು ಸಾಕಷ್ಟು ಸಾವು ನೋವು ಹಾಗೂ ಆರ್ಥಿಕ ನಷ್ಟಗಳನ್ನು ಉಂಟುಮಾಡಿದೆ. ಪ್ರತಿಯೊಂದು ಕ್ಷೇತ್ರವೂ ಕೋವಿಂಡ್ನಿಂದ ತತ್ತರಿಸಿ ಹೋಗಿದೆ. ಶಿಕ್ಷಣ, ಉದ್ಯೋಗ, ಕೈಗಾರಿಕೆ, ತಂತ್ರಜ್ಞಾನ ಕ್ಷೇತ್ರ ಹೀಗೆ ಪಟ್ಟಿ ಮಾಡುತ್ತಾ ಹೋದಲ್ಲಿ ಬರಿಯ ನಷ್ಟಗಳೇ ಕಣ್ಣಿನ ಮುಂದೆ ಬರುತ್ತವೆ. ಆರ್ಥಿಕವಾಗಿ ಹೆಚ್ಚಿನ ಲಾಭವನ್ನು ತಂದುಕೊಡುತ್ತಿದ್ದ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಕೂಡ ಒಂದು. ವಿದೇಶ ಮತ್ತು ಸ್ವದೇಶ ಯಾವುದೇ ಇರಲಿ ಕೋವಿಡ್ ಬಂದ ನಂತರ ಲಾಕ್ಡೌನ್ ಹೊಡೆತದಿಂದ ತೀರಾ ಕಂಗೆಟ್ಟಿರುವುದು ಈ ಕ್ಷೇತ್ರವಾಗಿದೆ. ಕಳೆದ 2020ರಲ್ಲಿ ಬಂದ ಕೋವಿಡ್ ಮೊದಲ ಅಲೆಯಿಂದ ಘಾಸಿಗೊಂಡಿದ್ದ ಪ್ರವಾಸೋದ್ಯಮ ಇನ್ನೇನು ಚೇತರಿಸಿಕೊಳ್ಳಬೇಕು ಎನ್ನುವಾಗಲೇ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ಅಪಾರ ನಷ್ಟಕ್ಕೆ ಒಳಗಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಜನರು ಸಹ ಮನೆಗಳಿಂದ ಹೊರ ಬರುತ್ತಿಲ್ಲ. ಹೀಗಿರುವಾಗ ಜನರು ಪ್ರವಾಸ ಅಂತ ಸುತ್ತಾಡಲು ಹೇಗೆ ಸಾಧ್ಯ.
ಲಾಕ್ಡೌನ್ ನಂತರ ಸದ್ಯಕ್ಕೆ ಈ ಕ್ಷೇತ್ರವು ಪುನಃ ಅಭಿವೃದ್ಧಿಗೆ ಬರತೊಡಗಿದ್ದು, ಅನೇಕ ಯೋಜನೆಗಳನ್ನು ಪ್ರಾಯೋಜಿಸಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿದೆ. ಹೌದು, ಟ್ರಾವೆಲ್ ಏಜೆನ್ಸಿಗಳಾದ ಎಸ್ಒಟಿಸಿ ಮತ್ತು ಥಾಮಸ್ ಕುಕ್ ವಿಭಿನ್ನ ಯೋಜನೆಯೊಂದನ್ನು ಹೊರತಂದಿದ್ದು ಸಂಸ್ಥೆಯ ಸ್ಲೋಗನ್ ಪ್ರವಾಸಿಗರನ್ನು ಸೆಳೆಯುವಂತಿದೆ. ಮೊದಲು ರಜಾದಿನವನ್ನು ಅನುಭವಿಸಿ ನೀವು ಹಿಂತಿರುಗವಾಗ ಪಾವತಿಸಿ ಎಂಬ ಸ್ಲೋಗನ್ ಮೂಲಕ ಪ್ರವಾಸಿಗರಿಗೆ ರಜಾದಿನದ ಮಜಾವನ್ನು ನೀಡ ಹೊರಟಿದೆ. ಈ ಕಂಪೆನಿಗಳು ಬ್ಯಾಂಕಿಂಗ್ ರಹಿತ ಆರ್ಥಿಕ ಕಂಪೆನಿಯೊಂದಿಗೆ ಕೈಜೋಡಿಸಿಕೊಂಡು ಈ ಯೋಜನೆಯನ್ನು ಪರಿಚಯಿಸಿದೆ.
![Travel]()
ಸಾಂದರ್ಭಿಕ ಚಿತ್ರ (Photo: Google)
ಪ್ರಯಾಣದಲ್ಲಿ ಉಂಟಾಗುವ ಏರುಪೇರುಗಳು, ಬುಕ್ಕಿಂಗ್ ಕ್ಯಾನ್ಸಲೇಶನ್, ರಿಫಂಡ್ನಲ್ಲಿ ತಡವಾಗುವುದು ಮೊದಲಾದ ಸಮಸ್ಯೆಗಳನ್ನು ಭಾರತೀಯ ಪ್ರಯಾಣಿಕರು ಎದುರಿಸಿದ್ದನ್ನು ಎಸ್ಓಟಿಸಿ ಮತ್ತು ಥಾಮಸ್ ಕುಕ್ ಸಂಸ್ಥೆ ಗಮನಿಸಿತ್ತು. ಅಂತೆಯೇ ಈ ಸಮಸ್ಯೆಗಳನ್ನೇ ಪ್ರಧಾನವಾಗಿಸಿಕೊಂಡು ಅವುಗಳು ಟೂರಿಸಂ ಅನ್ನು ಬಲಪಡಿಸುವ ನಿಟ್ಟಿನಲ್ಲಿವೆ.
ಇದನ್ನೂ ಓದಿ: Darshan: ದರ್ಶನ್ ಮನವಿಗೆ ಕೈ ಜೋಡಿಸಿದ ಸ್ಯಾಂಡಲ್ವುಡ್ ತಾರೆಯರು..!
ಜೂನ್ 16 ರಂದು ಈ ಯೋಜನೆಯನ್ನು ಘೋಷಿಸಲಾಗಿದ್ದು, ಇದರಲ್ಲಿ ಆರೋಗ್ಯ, ನೈರ್ಮಲ್ಯಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಈ NBFC ಗಳು ಈ ಪ್ರಸ್ತಾಪವನ್ನು ಪಡೆಯಲು ಬಯಸುವ ಜನರ ಕ್ರೆಡಿಟ್ ಅರ್ಹತೆಯನ್ನು ಪರಿಶೀಲಿಸುತ್ತದೆ. ಉತ್ತಮ ಕ್ರೆಡಿಟ್ ಅರ್ಹತೆ ಹೊಂದಿರುವ ಜನರು ತಮ್ಮ ದೇಶೀಯ ಪ್ಯಾಕೇಜ್ನ ವೆಚ್ಚದ 15-20 ಪ್ರತಿಶತದಷ್ಟು ಮತ್ತು ಉಳಿದ ಮೊತ್ತವನ್ನು ಒಂದೇ ಸಮಯದಲ್ಲಿ ಪಾವತಿಸಿದರೆ ಯಾವುದೇ ಹೆಚ್ಚುವರಿ ಶುಲ್ಕ ಅಥವಾ ಶುಲ್ಕವಿಲ್ಲದೆ NBFC ಗೆ ಹಿಂದಿರುಗಿದ ಬಾಕಿ ಪಾವತಿಸಬೇಕಾಗುತ್ತದೆ. ಅವರು ಇಎಂಐಗಳಲ್ಲಿ ಪಾವತಿಸಲು ಬಯಸಿದರೆ, ಆ ಸಂದರ್ಭದಲ್ಲಿ ಮಾತ್ರ NBFC ಬಡ್ಡಿಯನ್ನು ವಿಧಿಸುತ್ತದೆ” ಎಂದು ಥಾಮಸ್ ಕುಕ್ ಇಂಡಿಯಾ ಅಧ್ಯಕ್ಷ ಮತ್ತು ಗ್ರೂಪ್ ಹೆಡ್ (ಮಾರ್ಕೆಟಿಂಗ್) ಅಬ್ರಹಾಂ ಅಲಪಟ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಇನ್ನು ಪ್ರವಾಸ ಮುಗಿಸಿ ಮರಳಿದವರು ರಜಾದಿನದ ಶುಲ್ಕವನ್ನು ಪಾವತಿಸದೇ ಇದ್ದಲ್ಲಿ ಲೋನ್ ಶುಲ್ಕ ಕಟ್ಟದವರ ವಿರುದ್ಧ ತೆಗೆದುಕೊಳ್ಳುವ ಕ್ರಮಗಳನ್ನೇ ಇಂತಹವರ ಮೇಲೆ ತೆಗೆದುಕೊಳ್ಳಲಾಗುತ್ತದೆ. ಇದು ಅವರ ಸಾಲದ ಅರ್ಹತೆಯಲ್ಲೂ ಪ್ರತಿಫಲಿಸುತ್ತದೆ ಮತ್ತು ಭವಿಷ್ಯದಲ್ಲಿ ಸಾಲಗಳನ್ನು ಪಡೆಯುವಲ್ಲಿ ನೇರ ಪರಿಣಾಮಗಳನ್ನು ಬೀರುತ್ತದೆ. ಅಂತೂ ಇಂತು ಆರ್ಥಿಕವಾಗಿ ಜರ್ಝರಿತಗೊಂಡಿದ್ದ ಪ್ರವಾಸೋದ್ಯಮ ಕ್ಷೇತ್ರವು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದು ಈ ರೀತಿಯಲ್ಲಾದರೂ ಆರ್ಥಿಕ ನಷ್ಟವನ್ನು ಸರಿದೂಗಿಸಲು ಎಂಬುದು ನಮ್ಮ ಪ್ರಾರ್ಥನೆಯಾಗಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಬಿಎಸ್ಎಫ್ ಯೋಧರ ಜೊತೆ ಹಾಡಿ-ಕುಣಿದ ಅಕ್ಷಯ್ ಕುಮಾರ್: ಮಾಸ್ಕ್ ಎಂದ ನೆಟ್ಟಿಗರು
ನ್ಯೂಸ್18 ಕನ್ನಡ ಕಳಕಳಿ
ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ