ಕಳೆದ ಎರಡು ವರ್ಷಗಳಿಂದ ಹೋಳಿ ಹಬ್ಬಕ್ಕೆ (Holi Festival) ಕೊರೊನಾ (Corona Virus) ಬ್ರೇಕ್ ಹಾಕಿತ್ತು. ಈ ವರ್ಷ ಕೊರೊನಾ ಪಸರಿಸುವಿಕೆ ಪ್ರಮಾಣ (Corona Positivity Rate) ಕಡಿಮೆ ಇರೋದರಿಂದ ಬಹುತೇಕ ಎಲ್ಲ ನಿರ್ಬಂಧಗಳನ್ನು ಸರ್ಕಾರ ಸಡಿಲಿಕೆ ಮಾಡಿದೆ. ಹಾಗಾಗಿ ಈ ವರ್ಷ ಎಲ್ಲರೂ ಸಂಭ್ರಮದಿಂದ ಹಬ್ಬ ಆಚರಣೆ (Holi Celebration) ಮಾಡುತ್ತಿದ್ದಾರೆ. ಆಪ್ತರು, ಸಂಬಂಧಿಕರು ಮತ್ತು ಕುಟುಂಬಸ್ಥರಿಗೆ ಬಣ್ಣ ಹಚ್ಚುವ ಮೂಲಕ ಎಲ್ಲರೂ ಬಣ್ಣದೋಕುಳಿಯಲ್ಲಿ ಮಿಂದೇಳುತ್ತಿದ್ದಾರೆ. ಇನ್ನು ಮಕ್ಕಳು (Children) ಬಣ್ಣದ ಪುಡಿ (Color Powder), ವಾಟರ್ ಗನ್ (Water Gun) ಹಿಡಿದು ಸಿಕ್ಕ ಸಿಕ್ಕವರಿಗೆಲ್ಲ ಬಣ್ಣ ಹಾಕುವ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಇತ್ತೀಚಗೆ ಹೋಳಿ ಹಬ್ಬದಂದು ಮೊಟ್ಟೆ ಎಸೆಯೋದು, ಟೊಮ್ಯಾಟೋಗಗಳಿಂದ ಹೊಡೆದಾಡಿಕೊಳ್ಳುವ ಟ್ರೆಂಡ್ ಸಹ ಹೆಚ್ಚಾಗುತ್ತಿದೆ.
ಬಣ್ಣದಾಟ ಬೇಡೆಂದು ಮನೆಯಲ್ಲಿ ಕುಳಿತಿರೋ ಯುವಕರನ್ನು ಅವರ ಗೆಳೆಯರು ಹುಡುಕಿ ಬಣ್ಣದಲ್ಲಿ ಮುಳುಗಿಸುತ್ತಾರೆ. ಇಲ್ಲೊಬ್ಬ ಬಾಲಕ ತನಗೆ ಬಣ್ಣ ಹಚ್ಚಿದ್ದಕ್ಕೆ ಸ್ನೇಹಿತರ ಮೇಲೆ ಚರಂಡಿ ನೀರು ಸಿಂಪಡಿಸಲು ಪ್ರಯತ್ನಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಏನಿದು ವೈರಲ್ ವಿಡಿಯೋ?
ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ 'Yourfunzone' ಹೆಸರಿನ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಮಕ್ಕಳ ಬಣ್ಣದಾಟದಲ್ಲಿ ತೊಡಗಿರೋದನ್ನು ನೋಡಬಹುದು. ಈ ವೇಳೆ ವಾಟರ್ ಗನ್ ಹಿಡಿದ ಬಾಲಕನೋರ್ವ, ಚರಂಡಿ ಹತ್ತಿರ ಬರುತ್ತಾನೆ. ನಂತರ ವಾಟರ್ ಗನ್ ನಿಂದ ಚರಂಡಿ ನೀರನ್ನು ತುಂಬಿಕೊಂಡು ಓಡಿ ಹೋಗಿ ಗೆಳೆಯರ ಮೇಲೆ ಹಾಕಲು ಪ್ರಯತ್ನಿಸುತ್ತಾನೆ. ಬಾಲಕ ಬರುತ್ತಿದ್ದಂತೆ ಆತನ ಗೆಳೆಯರೆಲ್ಲರೂ ಓಡಿ ಹೋಗುತ್ತಾರೆ.
View this post on Instagram
ನೀರು ಕುಡಿಯುತ್ತಿದ್ದ ಜಾಗ್ವಾರ್ ಗೆ ಅಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ನೀರು ಕುಡಿಯುವಾಗಲೇ ಹೆಬ್ಬಾವನ್ನು ಬೇಟೆಯಾಡಲು ಜಾಗ್ವಾರ್ ಮುಂದಾಗಿದೆ. ಹೆಬ್ಬಾವಿನ ಮೇಲೆ ದಾಳಿ ನಡೆಸಿದ ಜಾಗ್ವಾರ್ ತನ್ನ ಹಲ್ಲುಗಳಿಂದ ಅದನ್ನು ಬಿಗಿಯಾಗಿ ಹಿಡಿದಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಜಾಗ್ವಾರ್ ಹೆಬ್ಬಾವನ್ನು ಬೇಟೆಯಾಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: Viral News: ಒಂದೇ ವರ್ಷದಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..! ಇದು ಹೇಗೆ ಸಾಧ್ಯ?
ಶಕ್ತಿಯುತವಾದ ಹಲ್ಲುಗಳು, ಬಿಗಿಯಾದ ಹಿಡಿತ
ಜಾಗ್ವಾರ್ ಗಳು ಇತರ ದೊಡ್ಡ ಬೆಕ್ಕುಗಳಿಗಿಂತ ಹೆಚ್ಚು ಶಕ್ತಿಯುತವಾದ ಕಚ್ಚುವಿಕೆಯನ್ನು ಅಂದ್ರೆ ಬಾಯಲ್ಲಿ ತನ್ನ ಬೇಟೆಯನ್ನು ಬಲವಾಗಿ ಹಿಡಿದುಕೊಳ್ಳುವ ಸಾಮಾರ್ಥ್ಯವನ್ನು ಹೊಂದಿವೆ. ಜಾಗ್ವಾರ್ ಹಲ್ಲುಗಳು ಮೊಸಳೆಗಳ ದಪ್ಪ ಚರ್ಮ ಮತ್ತು ಆಮೆಗಳ ಗಟ್ಟಿಯಾದ ಚಿಪ್ಪುಗಳ ಮೂಲಕ ಕಚ್ಚುವಷ್ಟು ಬಲವಾಗಿರುತ್ತವೆ. ಯಾವುದೇ ಬೇಟೆಯನ್ನಾಗಲಿ ಅದು ತನ್ನ ಚೂಪಾದ ಹಲ್ಲುಗಳಿಂದಲೇ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ.
View this post on Instagram
ಸಿಂಗಾಪುರದ ಜನನಿಬಿಡ ರಸ್ತೆಯನ್ನು ನೀರು ನಾಯಿಗಳ ಗುಂಪು ಪೊಲೀಸರ ಸಹಾಯದಿಂದ ದಾಟಿವೆ. ನೀರು ನಾಯಿಗಳು ರಸ್ತೆ ದಾಟುತ್ತಿರುವ ವಿಡಿಯೋ ಸುಳಿ ಮಿಂಚಿನಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಟ್ರಾಫಿಕ್ ಪೊಲೀಸ್ ನೀರುನಾಯಿಗಳು ದಾಟುವರೆಗೂ ವಾಹನಗಳ ಬರದಂತೆ ನಿಲ್ಲಿಸಿದ್ದಾರೆ.
ಇದನ್ನೂ ಓದಿ: Viral Video: ವೇದಿಕೆ ಮೇಲೆ ಬರುತ್ತಿದ್ದ ವಧುವನ್ನ ನೋಡಿ ವರ ಕೊಟ್ಟ ರಿಯಾಕ್ಷನ್ ನೋಡಿ ಎಲ್ಲರೂ ಶಾಕ್!
Our local otters have been dropping in on the Istana. Appreciate the care by Istana staff, @nparksbuzz, @SingaporePolice and members of public to help them co-exist with us safely in our urban environment, e.g. crossing the road safely. – LHL https://t.co/H8jGiAmTLB pic.twitter.com/j0lzTZIiyU
— leehsienloong (@leehsienloong) March 11, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ