• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Successful Treatment: ಕ್ಯಾನ್ಸರ್ ಮತ್ತು HIV ಪಾಸಿಟಿವ್ ಎರಡನ್ನೂ ಗೆದ್ದು ಪವಾಡ ಸೃಷ್ಟಿಸಿದ ವ್ಯಕ್ತಿ!

Successful Treatment: ಕ್ಯಾನ್ಸರ್ ಮತ್ತು HIV ಪಾಸಿಟಿವ್ ಎರಡನ್ನೂ ಗೆದ್ದು ಪವಾಡ ಸೃಷ್ಟಿಸಿದ ವ್ಯಕ್ತಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2008 ರಲ್ಲಿ, ಜರ್ಮನ್ ವ್ಯಕ್ತಿಯು ಎಚ್‌ಐವಿ ಪಾಸಿಟಿವ್ ಎಂದು ಕಂಡುಬಂದಿದ್ದು, ನಂತರ ಮೂರು ವರ್ಷಗಳ ನಂತರ ಅವರು ತೀವ್ರವಾದ ಮೈಲೋಯ್ಡ್ ಲ್ಯುಕೇಮಿಯಾದಿಂದ ಬಳಲುತ್ತಿದ್ದರು, ಇದು ರಕ್ತದ ಕ್ಯಾನ್ಸರ್‌ನ ಮಾರಣಾಂತಿಕ ರೂಪವಾಗಿದೆ.

  • Trending Desk
  • 5-MIN READ
  • Last Updated :
  • Share this:

ಎಚ್‌ಐವಿ ಪಾಸಿಟಿವ್(HIV Positive) ಆಗಿದ್ದ ಜರ್ಮನಿಯ 53 ರ ಹರೆಯದ ವ್ಯಕ್ತಿಯೊಬ್ಬರು ಇದೀಗ ಮಾರಕ ರೋಗದಿಂದ ಮುಕ್ತರಾಗಿದ್ದು, ಲ್ಯುಕೇಮಿಯಾ (Leukemia) (ರಕ್ತ ಕ್ಯಾನ್ಸರ್‌ನ ಮಾರಣಾಂತಿಕ ರೂಪ) ಕಾಯಿಲೆಗೆ ಪಡೆದುಕೊಂಡ ಕಾಂಡಕೋಶ ಕಸಿ ಚಿಕಿತ್ಸೆಯು ಅವರನ್ನು ಎಚ್‌ಐವಿ ಮುಕ್ತರನ್ನಾಗಿಸಿದೆ ಎಂದು ವೈದ್ಯರು(Doctors) ತಿಳಿಸಿದ್ದಾರೆ. ಈ ಕುರಿತು ಅಧ್ಯಯನಗಳು ನೇಚರ್ ಜರ್ನಲ್‌ನಲ್ಲಿ ಪ್ರಕಟವಾಗಿವೆ.


 ಫಲಕಾರಿಯಾದ ಚಿಕಿತ್ಸಾ ವಿಧಾನ


ಹಿಂದೆ, ಬರ್ಲಿನ್ ಮತ್ತು ಲಂಡನ್‌ನಲ್ಲಿ ಎಚ್‌ಐವಿ ಮತ್ತು ಕ್ಯಾನ್ಸರ್ ಎರಡನ್ನೂ ಹೊಂದಿರುವ ಇನ್ನೆರಡು ರೋಗಿಗಳು ಇದೇ ರೀತಿಯ ಚಿಕಿತ್ಸಾ ವಿಧಾನವನ್ನು ಅನುಸರಿಸಿ ಗುಣಮುಖರಾಗಿದ್ದಾರೆ ಎಂದು ವೈಜ್ಞಾನಿಕ ಜರ್ನಲ್‌ಗಳಲ್ಲಿ ವರದಿಯಾಗಿದೆ.


2008 ರಲ್ಲಿ, ಜರ್ಮನ್ ವ್ಯಕ್ತಿಯು ಎಚ್‌ಐವಿ ಪಾಸಿಟಿವ್ ಎಂದು ಕಂಡುಬಂದಿದ್ದು, ನಂತರ ಮೂರು ವರ್ಷಗಳ ನಂತರ ಅವರು ತೀವ್ರವಾದ ಮೈಲೋಯ್ಡ್ ಲ್ಯುಕೇಮಿಯಾದಿಂದ ಬಳಲುತ್ತಿದ್ದರು, ಇದು ರಕ್ತದ ಕ್ಯಾನ್ಸರ್‌ನ ಮಾರಣಾಂತಿಕ ರೂಪವಾಗಿದೆ.


ಇದನ್ನೂ ಓದಿ: Cancer Patient: ಕ್ಯಾನ್ಸರ್ ರೋಗಿಯ ಅಂತಿಮ ಕೋರಿಕೆಯನ್ನು ನೆರವೇರಿಸಿದ ಆಸ್ಪತ್ರೆ ಸಿಬ್ಬಂದಿ!


ಎಚ್‌ಐವಿ ಮುಕ್ತರಾದ ರೋಗಿ


ಅಧ್ಯಯನದ ಪ್ರಕಾರ, ಡಸೆಲ್ಡಾರ್ಫ್ ರೋಗಿ ಎಂದೂ ಕರೆಯಲ್ಪಡುವ ಈ ವ್ಯಕ್ತಿ ತಮ್ಮ CCR5 ಜೀನ್‌ನಲ್ಲಿ ಅಪರೂಪದ ರೂಪಾಂತರದೊಂದಿಗೆ ಸ್ತ್ರೀ ದಾನಿಯಿಂದ ಕಾಂಡಕೋಶಗಳನ್ನು ಬಳಸಿಕೊಂಡು ಮೂಳೆ ಮಜ್ಜೆಯ ಕಸಿ ಮಾಡಿಸಿಕೊಂಡಿದ್ದಾರೆ.


ಎಚ್ಐವಿಯು ಜೀವಕೋಶಗಳಿಗೆ ಪ್ರವೇಶಿಸುವುದನ್ನು ತಡೆಯಲು ರೂಪಾಂತರವು ನೆರವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.


ಡಸೆಲ್ಡಾರ್ಫ್ ರೋಗಿಯು 2018 ರಲ್ಲಿ ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ ಮತ್ತು ಅಂದಿನಿಂದ ಎಚ್‌ಐವಿ ಮುಕ್ತರಾಗಿದ್ದಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.


ಸ್ಟೆಮ್ ಸೆಲ್ ಕಸಿ ಸಹಾಯದಿಂದ ಎಚ್ಐವಿ ಗುಣಪಡಿಸಿದ 5 ಪ್ರಕರಣಗಳ ವರದಿಗಳಿವೆ ಎಂದು ರಕ್ತ ಮತ್ತು ಮಜ್ಜೆ ಕಸಿ, ಸನಾರ್ ಇಂಟರ್ನ್ಯಾಷನಲ್‌ನ ನಿರ್ದೇಶಕ ಮತ್ತು HOD ಡಾ. ಧರ್ಮ ಚೌಧರಿ ತಿಳಿಸಿದ್ದಾರೆ.


ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆ


ಈ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್‌ಗಳನ್ನು ಗುಣಪಡಿಸಲಾಗದ ರಕ್ತ ಕಾಯಿಲೆಗಳಿಗೆ, ಮುಖ್ಯವಾಗಿ ರಕ್ತದ ಕ್ಯಾನ್ಸರ್‌ಗಳಿಗೆ ಚಿಕಿತ್ಸಾ ರೂಪದಲ್ಲಿ ನಡೆಸಲಾಯಿತು.


ಹೋಮೋಜೈಗಸ್ CCR5 ಡೆಲ್ಟಾ 32 ರೂಪಾಂತರವನ್ನು ಹೊಂದಿರುವ ದಾನಿಯಿಂದ ಈ ಕಾಂಡಕೋಶಗಳನ್ನು ಬಳಸಲಾಗಿದೆ. ಇದೀಗ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳು ಮತ್ತು ಅಧ್ಯಯನಗಳು ನಡೆಯುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.


ಇದನ್ನೂ ಓದಿ: Flight Benefits: ವಿಮಾನದಲ್ಲಿ ಮಗು ಹುಟ್ಟಿದ್ರೆ ಲೈಫ್​ ಟೈಮ್​ ಫ್ರೀಯಾಗಿ ಪ್ರಯಾಣಿಸಬಹುದಾ? ಇಲ್ಲಿದೆ ಕಂಪ್ಲೀಟ್​​ ಡೀಟೇಲ್ಸ್​


2019 ರಲ್ಲಿ, ಅದೇ ವಿಧಾನವು ಲಂಡನ್ ರೋಗಿ ಆಡಮ್ ಕ್ಯಾಸ್ಟಿಲ್ಲೆಜೊ ಅವರನ್ನು ಗುಣಪಡಿಸಿದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಮತ್ತು, 2022 ರಲ್ಲಿ, ವಿಜ್ಞಾನಿಗಳು 14 ತಿಂಗಳ ಕಾಲ HIV-ಮುಕ್ತವಾಗಿ ಉಳಿದಿರುವ ನ್ಯೂಯಾರ್ಕ್ ರೋಗಿಯನ್ನು ಸಹ ಗುಣಪಡಿಸಬಹುದೆಂದು ಅವರು ಅಂದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.


ಕ್ಯಾನ್ಸರ್ ಹಾಗೂ ಎಚ್‌ಐವಿ ಎರಡೂ ಗುಣಮುಖ


ಕ್ಯಾನ್ಸರ್ ಹೊಂದಿರುವ HIV ರೋಗಿಗಳಿಗೆ ಚಿಕಿತ್ಸೆ ನೀಡುವ WHO ಇಂಪ್ಯಾಕ್ಟ್ P1107 ಪ್ರಯೋಗವು ಕೆಲವು ಭರವಸೆಯ ಫಲಿತಾಂಶಗಳನ್ನು ತೋರಿಸಿದೆಯಾದರೂ ಸಮರ್ಥನೀಯ ಚಿಕಿತ್ಸಾ ವಿಧಾನವಾಗಿ ಬಳಸಲು ಇನ್ನಷ್ಟು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ಕೂಪರ್ ಆಸ್ಪತ್ರೆ ಮತ್ತು HBT ನ ಸಲಹೆಗಾರ ನರಶಸ್ತ್ರಚಿಕಿತ್ಸಕ ಡಾ. ಸಿದ್ಧಾರ್ಥ್ ಗೌತಮ್ ತಿಳಿಸಿದ್ದಾರೆ.


ಕ್ಯಾನ್ಸರ್ ಮತ್ತು ಎಚ್ಐವಿ ಎರಡೂ ಗುಣಪಡಿಸಲಾಗದ ಕಾಯಿಲೆಗಳಾಗಿವೆ, ಆದಾಗ್ಯೂ ಈ ಅದ್ಭುತ ವೈದ್ಯಕೀಯ ಪ್ರಕರಣದಲ್ಲಿ, "ಲಂಡನ್ ರೋಗಿಯ" ಕಾಂಡಕೋಶ ಕಸಿ ಮಾಡಿದ ನಂತರ ಎರಡನ್ನೂ ಗುಣಪಡಿಸಲಾಯಿತು.


ರೋಗಿಯು ಅಪರೂಪದ ಆನುವಂಶಿಕ ರೂಪಾಂತರವನ್ನು ಹೊಂದಿರುವ ದಾನಿಯಿಂದ ಕಸಿ ಮಾಡಿಸಿಕೊಂಡರು, ಅದು ಅವರನ್ನು HIV ಗೆ ನಿರೋಧಕವಾಗಿಸಿತು ಎಂದು ಸಿದ್ಧಾರ್ಥ್ ತಿಳಿಸಿದ್ದಾರೆ.


ಕೆಲವು ಕ್ಯಾನ್ಸರ್‌ಗಳಿಗೆ ಸ್ಟೆಮ್ ಸೆಲ್ ಚಿಕಿತ್ಸೆಯು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಆದಾಗ್ಯೂ, ಎಚ್‌ಐವಿ ಪಾಸಿಟಿವ್‌ನಿಂದ ಬಳಲುತ್ತಿರುವ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವುದು ಚಿಕಿತ್ಸೆಯ ಯಶಸ್ಸಿಗೆ ಗಮನಾರ್ಹ ಸವಾಲನ್ನು ಮುಂದಿಡುತ್ತದೆ ಎಂದು ಡಾ. ಜೈನ್ ತಿಳಿಸಿದ್ದಾರೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು