Mothers Day 2022: ಜನ್ಮ ಕೊಟ್ಟವಳಿಗೆ ಧನ್ಯವಾದ ಹೇಳುವ ದಿನವಿದು, "ಅಮ್ಮಾ ಐ ಲವ್ ಯೂ..."

ಅಮ್ಮನಿಗೆ ಪುಟ್ಟದೊಂದು ಧನ್ಯವಾದ ಹೇಳಲು Mothers Day ಆಚರಿಸಲಾಗುತ್ತದೆ. ಅಮ್ಮನಿಗೆ ಪುಟ್ಟದಲ್ಲ, ಅದೆಷ್ಟೇ ದೊಡ್ಡ ಧನ್ಯವಾದ ಹೇಳಿದರೂ ಸಾಕಾಗುವುದಿಲ್ಲ! ಆದರೂ ಮನಸ್ಸು ಬಿಚ್ಚಿ "ಅಮ್ಮಾ, I Love You" ಅಂದರೆ ಆಕೆ ಸಂತಸಗೊಳ್ಳದೇ ಇರುತ್ತಾಳೆಯ? anyway.. Happy Mothers Day...

ವಿಶ್ವ ತಾಯಂದಿರ ದಿನ

ವಿಶ್ವ ತಾಯಂದಿರ ದಿನ

  • Share this:
ಇಂದು ‘ವಿಶ್ವ ತಾಯಂದಿರ ದಿನ’ (World Mothers Day). ಮಗಳಾಗಿ, ಸೋದರಿಯಾಗಿ, ಗೆಳತಿಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಪೋಷಕಿಯಾಗಿ, ಮಾರ್ಗದರ್ಶಿಯಾಗಿ ಸಲಹುವ ಹೆಣ್ಣಿಗೆ (Women) ಕೃತಜ್ಞತೆ ಹೇಳಲು ಇನ್ನೊಂದು ನೆವ ಅಷ್ಟೇ. ಅಮ್ಮನಿಗೆ (Mother) ಪುಟ್ಟದೊಂದು ಧನ್ಯವಾದ (Thanks) ಹೇಳಲು ಈ ದಿನವನ್ನು ಇಂದು ಆಚರಿಸಲಾಗುತ್ತದೆ. ಅಮ್ಮನಿಗೆ ಪುಟ್ಟದಲ್ಲ, ಅದೆಷ್ಟೇ ದೊಡ್ಡ ಧನ್ಯವಾದ ಹೇಳಿದರೂ ಸಾಕಾಗುವುದಿಲ್ಲ. ಯಾಕೆಂದರೆ ಮಗ (Son) ಇರಲಿ, ಮಗಳಿರಲಿ (Daughter) ಅವರ ಭವಿಷ್ಯ ರೂಪಿಸುವಲ್ಲಿ, ಬದುಕು ಕಟ್ಟಿಕೊಡುವುದರಲ್ಲಿ ಅಮ್ಮನ ಪಾತ್ರ ಹಿರಿದು. ಆದರೂ ಆಕೆಗೊಂದು ಕೃತಜ್ಞತೆ ಹೇಳಲು, “ಅಮ್ಮಾ ಐ ಲವ್ ಯೂ” (Amma I Love You) ಅಂತ ಮನಸ್ಸು ಬಿಚ್ಚಿ ಮಾತಾಡಲು ಪ್ರತಿ ವರ್ಷ ಮೇ (May) ತಿಂಗಳ 2ನೇ ಭಾನುವಾರದಂದು (2nd Sunday) ‘ವಿಶ್ವ ತಾಯಂದಿರ ದಿನ’ ಆಚರಣೆ ಮಾಡಲಾಗುತ್ತದೆ. ಹಾಗಿದ್ರೆ ಇದರ ಇತಿಹಾಸ, ಮಹತ್ವಗಳೇನು ಅಂತ ತಿಳಿದುಕೊಳ್ಳೋಣ ಬನ್ನಿ…

 1908ರಲ್ಲಿ ಮೊದಲ ‘ಅಮ್ಮಂದಿರ ದಿನ’ ಆಚರಣೆ

ಪ್ರತೀ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ಅಮ್ಮಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಅಮೆರಿಕಾದಲ್ಲಿ 1908ರಲ್ಲಿ ಪ್ರಾರಂಭವಾದ ಈ ವಿಶೇಷ ದಿನವನ್ನು ಪ್ರತಿ ವರ್ಷವೂ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನದ ಪ್ರಮುಖ ಉದ್ದೇಶವೆಂದರೆ ತಾಯಿಯ ಮಹತ್ವವನ್ನು ಜನರಿಗೆ ತಿಳಿಸಿಕೊಡುವುದು  ಹಾಗೂ ಆಕೆಗೊಂದು ಧನ್ಯವಾದ ತಿಳಿಸುವುದು.

ವಿಶ್ವ ಅಮ್ಮಂದಿರ ದಿನ ಪ್ರಾರಂಭವಾಗಿದ್ದು ಹೇಗೆ?

ಮೊದಲು 1907ರಲ್ಲಿ, ತಾಯಂದಿರ ದಿನವನ್ನು ನೆನಪಿಸುವ ಆಧುನಿಕ ಪರಿಕಲ್ಪನೆಯು ಹುಟ್ಟಿಕೊಂಡಿತು. ಅಮೆರಿಕದಲ್ಲಿ ತಾಯಂದಿರ ದಿನದ ಪರಿಕಲ್ಪನೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾದ ಜೂಲಿಯಾ ವಾರ್ಡ್ ಹೋವ್ ಮತ್ತು ಅನ್ನಾ ಜಾರ್ವಿಸ್ ಎಂಬ ಇಬ್ಬರು ಮಹೋನ್ನತ ಮಹಿಳೆಯರು. 1908 ರಲ್ಲಿ ಅನ್ನಾ ಜಾರ್ವಿಸ್ ತನ್ನ ತಾಯಿ, ಮೂರು ವರ್ಷಗಳ ಹಿಂದೆ ನಿಧನರಾದ ಶಾಂತಿ ಕಾರ್ಯಕರ್ತೆ ಆನ್ ರೀಸ್ ಜಾರ್ವಿಸ್ ಅವರನ್ನು ಗೌರವಿಸಲು ತಾಯಂದಿರ ದಿನವನ್ನು ಮಾನ್ಯತೆ ಪಡೆದ ರಜಾದಿನವಾಗಿ ಸ್ಮರಿಸಲು ಬಯಸಿದರು.

ಇದನ್ನೂ ಓದಿ: Mother's Day 2022: ಜೀವದ ಗಿಫ್ಟ್ ನೀಡಿದವಳಿಗೆ ಇವುಗಳನ್ನು ಕೊಟ್ಟು, 'ಅಮ್ಮ I Love You' ಅಂತ ಹೇಳಿ

ಚರ್ಚ್‌ನಲ್ಲಿ ನಡೆಯಿತು ಮೊದಲ ‘ತಾಯಂದಿರ ದಿನ’

ದುರಾದೃಷ್ಟವಶಾತ್ ತಾಯಿ ಬದುಕಿರುವಾಗ ಅವರಿಗೆ ಅಮ್ಮಂದಿರ ದಿನ ಆಚರಿಸಲು ಆಗಲೇ ಇಲ್ಲ. ಅವರು ತೀರಿಕೊಂಡ 3 ವರ್ಷಗಳ ಬಳಿಕ ವೆಸ್ಟ್ ವರ್ಜೀನಿಯಾದ ಗ್ರಾಫ್ಟನ್‌ನಲ್ಲಿರುವ ಆಂಡ್ರ್ಯೂಸ್ ಮೆಥೋಡಿಸ್ಟ್ ಎಪಿಸ್ಕೋಪಲ್ ಚರ್ಚ್‌ನಲ್ಲಿ ಅನ್ನಾ ಜಾರ್ವಿಸ್ ಅವರು ತಮ್ಮ ತಾಯಿ ನೆನಪಿಗಾಗಿ ಮದರ್ಸ್ ಡೇ ಆಚರಿಸಿದರು. ಐದು ವರ್ಷಗಳಲ್ಲಿ, ಪ್ರತಿಯೊಂದು ರಾಜ್ಯವೂ ಈ ದಿನವನ್ನು ಆಚರಿಸಿತು ಮತ್ತು ಯುನೈಟೆಡ್ ಸ್ಟೇಟ್ಸ್ನ ಅಧ್ಯಕ್ಷ ವುಡ್ರೋ ವಿಲ್ಸನ್ 1914 ರಲ್ಲಿ ಇದನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿದರು. ಅಂದಿನಿಂದ ಜನಪ್ರಿಯವಾದ ಈ ದಿನ, ಇಂದು ವಿಶ್ವದಾದ್ಯಂತ ಆಚರಿಸಲ್ಪಡುತ್ತಿದೆ.

ವಿಶ್ವದಲ್ಲಿ ಬೇರೆ ಬೆೇರೆ ದಿನ ಆಚರಣೆ

ತಾಯಂದಿರ ದಿನವು ಅಮೆರಿಕದಲ್ಲಿ ಸಾಮಾನ್ಯವಾಗಿ ಗೌರವಾನ್ವಿತ ರಾಷ್ಟ್ರೀಯ ರಜಾದಿನವಾಗಿದ್ದರೂ, ಇದು ಫೆಡರಲ್ ಅಥವಾ ಸಾರ್ವಜನಿಕ ರಜಾದಿನವಲ್ಲ. ಎಲ್ಲಾ ದೇಶಗಳು ಒಂದೇ ದಿನದಲ್ಲಿ ತಾಯಂದಿರ ದಿನವನ್ನು ಆಚರಿಸದಿದ್ದರೂ, ಮೇ ತಿಂಗಳ ಎರಡನೇ ಭಾನುವಾರವನ್ನು 50 ಕ್ಕೂ ಹೆಚ್ಚು ದೇಶಗಳಲ್ಲಿ ವಿಶೇಷ ದಿನವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: Mother's Day 2022: ನಿಮ್ಮ ಅಮ್ಮಂದಿರನ್ನು ಬೆಂಗಳೂರಿನ ಈ ವಿಶೇಷ ಸ್ಥಳಗಳಿಗೆ ಕರೆದುಕೊಂಡು ಹೋಗಿ

ವಿಶ್ವ ತಾಯಂದಿರ ದಿನದ ಮಹತ್ವ

ತಾಯಂದಿರ ದಿನದ ಮಹತ್ವ ಈ ದಿನ ತಾಯಂದಿರ ಅಸ್ತಿತ್ವವನ್ನು ಆಚರಿಸಲಾಗುತ್ತದೆ ಮತ್ತು ಅವರು ತಮ್ಮ ಮಕ್ಕಳಿಗಾಗಿ ಮಾಡುವ ಎಲ್ಲಾ ಕಾರ್ಯಗಳನ್ನು ಪ್ರಶಂಸಿಸುವುದರಿಂದ ಈ ದಿನವು ಮಹತ್ವದ್ದಾಗಿದೆ. ಇದು ತಾಯಂದಿರನ್ನು ಗೌರವಿಸುತ್ತದೆ. ಜೊತೆಗೆ ಮಾತೃತ್ವ, ತಾಯಿಯ ಬಂಧಗಳು ಮತ್ತು ಸಮಾಜದಲ್ಲಿ ತಾಯಂದಿರ ಪ್ರಭಾವವನ್ನು ಗೌರವಿಸುತ್ತದೆ.
Published by:Annappa Achari
First published: