Dog Meat: ನಾಯಿ ಮಾಂಸ ತಿಂದ್ರೆ ಪೌರುಷ ಹೆಚ್ಚಾಗುತ್ತಾ? ರಾಜಮನೆತನವೊಂದು ಸೇವಿಸಿರುವುದು ಇತಿಹಾಸದಲ್ಲಿದೆ!

Dog Meat History: ಚೀನಾ ಕೂಡ ವಿಚಿತ್ರ ಆಹಾರ ಪದ್ಧತಿಯನ್ನು ಹೊಂದಿದ ದೇಶವಾಗಿದೆ. ಆಹಾರ, ಪಾನೀಯವನ್ನು ಗಮನಿಸಿದಾಗ ಬಲು ವಿಚಿತ್ರವಾಗಿದೆ. ಚೀನಾದಲ್ಲಿ ಹಾವಿನ ಸೂಪ್ ಕೂಡ ಸಿಗುತ್ತದೆ. ಹಾಗಾಗಿ ಕೋಳಿ, ಕುರಿ, ಆಡು ಜೊತೆಗೆ ನಾಯಿ ಮಾಂಸಕೂಡ ಮಾಂಸಹಾರಿ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.

Dog (Photo: Google)

Dog (Photo: Google)

  • Share this:
    ನಾಯಿ (Dog) ನಿಯತ್ತಿನ ಪ್ರಾಣಿ. ಭಾರತದಲ್ಲಿ ಬಹುತೇಕರು ಮನೆಯಲ್ಲಿ ಶ್ವಾನವನ್ನ ಸಾಕುತ್ತಾರೆ. ಅಷ್ಟೇ ಏಕೆ ಶ್ವಾನವನ್ನು ದೇವರೆಂದು ಪೂಜಿಸುವವರು ಇದ್ದಾರೆ. ಕೇರಳದ (Kerala) ಮುತ್ತಪ್ಪ ತಿರುವಪ್ಪ ದೈವದ ಬಗ್ಗೆ ತಿಳಿದಾಗ ಅಲ್ಲಿಯೂ ಶ್ವಾನದ ಬಗ್ಗೆ ಒಂದು ಇತಿಹಾಸ ಬರುತ್ತದೆ. ಹಾಗಾಗಿ ಬಹುತೇಕ ಭಾರತೀಯರು ಶ್ವಾನಪ್ರಿಯರು.

    ಶ್ವಾನವನ್ನು ಮಾಂಸಕ್ಕೆಂದು ಬಳಸುವರು ಭಾರತದಲ್ಲಿದ್ದಾರೆ. ಶ್ವಾನದ ಮಾರುಕಟ್ಟೆಯೂ ಇದೆ. ಭಾರತ (India) ಮತ್ತು ನೇಪಾಳ (Nepal) ಭಾಗದಲ್ಲಿ ಶ್ವಾನದ ಮಾಂಸವನ್ನು ಸೇವಿಸುವವರನ್ನು ಕಾಣಬಹುದಾಗಿದೆ. ಅದರೆ ಅತಿ ಕಡಿಮೆ ಸಂಖ್ಯೆ ಈ ನಾಯಿ ಮಾಂಸ ಸೇವಿಸುವವರು ಕಾಣಸಿಗುತ್ತಾರೆ. ಅದರಲ್ಲೂ ವಿದೇಶವನ್ನು ಗಮನಿಸಿದಾಗ ಭಾರತೀಯರ ಸಂಖ್ಯೆ ತೀರಾ ಕಡಿಮೆಯಿದೆ. ದಕ್ಷಿಣ ಕೊರಿಯಾ, ಚೀನಾದಲ್ಲಿ ನಾಯಿ ಮಾಂಸ ಸೇವಿಸುವವರ ಸಂಖ್ಯೆ ಹೆಚ್ಚಿದೆ.

    ಆದರೀಗ ದಕ್ಷಿಣ ಕೊರಿಯಾದ (South Korea) ಅಧ್ಯಕ್ಷ ತಮ್ಮ ದೇಶದಲ್ಲಿ ಮೂನ್​ ಜೇ-ಇನ್​ ನಾಯಿ ಮಾಂಸದ ನಿಷೇಧವನ್ನು ಸೂಚಿಸಿದ್ದಾರೆ. ಅಂದಹಾಗೆಯೇ ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸ ಸಂಪ್ರದಾಯದ ಒಂದು ಭಾಗವಾಗಿದೆ. ಜನರು ಇದನ್ನು ಗತಕಾಲದಿಂದ ಸೇವಿಸುತ್ತಾ ಬಂದಿದ್ದಾರೆ. ಆದರೀಗ ಅಧ್ಯಕ್ಷ ಜೇ –ಇನ್​ ನಾಯಿ ಮಾಂಸ ಸೇವನೆ ನಿಷೇಧಿಸಿರು ಸುಮಾರು 60 ಪ್ರತಿಶತದಷ್ಟು ಜನರು ಅದನ್ನು ಪರಿಗಣಿಸಿದೆ ನಾಯಿ ಮಾಂಸ ಸೇವಿಸುತ್ತಿದ್ದಾರೆ.

    ಚೀನಾ ಕೂಡ ವಿಚಿತ್ರ ಆಹಾರ ಪದ್ಧತಿಯನ್ನು ಹೊಂದಿದ ದೇಶವಾಗಿದೆ. ಆಹಾರ, ಪಾನೀಯವನ್ನು ಗಮನಿಸಿದಾಗ ಬಲು ವಿಚಿತ್ರವಾಗಿದೆ. ಚೀನಾದಲ್ಲಿ ಹಾವಿನ ಸೂಪ್ ಕೂಡ ಸಿಗುತ್ತದೆ. ಹಾಗಾಗಿ ಕೋಳಿ, ಕುರಿ, ಆಡು ಜೊತೆಗೆ ನಾಯಿ ಮಾಂಸಕೂಡ ಮಾಂಸಹಾರಿ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೀಗ ದಕ್ಷಿಣ ಕೊರಿಯಾದ ಅಧ್ಯಕ್ಷ ಜೇ –ಇನ್​ ನಾಯಿ ಮಾಂಸ ನಿಷೇಧಿಸುವಂತೆ ಹೇಳಿದ್ದರು. ಮನೆಯ ಮಾಲೀಕರು ನಾಯಿಯನ್ನು ಬಡಿದು ಪದಾರ್ಥ್ಯ ಮಾಡಿ ಸೇವಿಸುತ್ತಾರೆ.

    ಪ್ರಾಣಿಗಳ ಹಕ್ಕು ಮತ್ತು ಆಹಾರಕ್ಕಾಗಿ ನಾಯಿಯನ್ನು ಕೊಳ್ಳುತ್ತಿರುವ ವಿಚಾರಕ್ಕೆ ಸಂಬಂಧಿಸಿ ದಕ್ಷಿಣ ಕೊರಿಯಾದ ಅಧ್ಯಕ್ಷ ಜೇ –ಇನ್​ ಈ ಕಾನೂನನ್ನು ಹೊರಗೆ ತಂದಿದ್ದಾರೆ. ಪ್ರಾಣಿಗಳಿಗೆ ಕಾನೂನು ಸ್ಥಾನಮಾನ ನೀಡಲು ನಾಗರಿಕ ಸಂಹಿತೆಗೆ ತಿದ್ದುಪಡಿ ತರಲು ಯೋಜಿಸಿದ್ದಾರೆ. ಒಂದು ವೇಳೆ ಜನರು ಸಾಕುಪ್ರಾಣಿಗಳನ್ನು ಕೊಂದು ಸೇವಿಸಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.



    ಇದನ್ನು ಓದಿ: Red vs Green Apple: ಕೆಂಪು? ಹಸಿರು? ಯಾವ ಬಣ್ಣದ ಆ್ಯಪಲ್ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು?

    ರಾಯಿಟರ್ಸ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ದೇಶದಲ್ಲಿ ಆಹಾರದ ಹೆಸರಿನಲ್ಲಿ ಪ್ರತಿವರ್ಷ ಲಕ್ಷಾಂತರ ನಾಯಿಗಳನ್ನು ಕೊಲ್ಲಲಾಗುತ್ತದೆ. ಆದಾಗ್ಯೂ, ಚೀನಾ, ದಕ್ಷಿಣ ಕೊರಿಯಾ ದೇಶಗಳಲ್ಲಿ ನಾಯಿ ಮಾಂಸವನ್ನು ತಿನ್ನುವ ಪ್ರವೃತ್ತಿ ಕಡಿಮೆಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದರ ಹೊರತಾಗಿಯೂ, ದೇಶದಲ್ಲಿ ನಾಯಿ ಮಾಂಸವನ್ನು ನಿಷೇಧಿಸಬೇಕೆಂಬ ಬೇಡಿಕೆ ಮತ್ತೊಮ್ಮೆ ತೀವ್ರಗೊಂಡಿದೆ. ಮುಂದಿನ ವರ್ಷ ದೇಶದಲ್ಲಿ ಚುನಾವಣೆ ನಡೆಯಲಿದೆ. ಪ್ರಾಣಿ ಕಾರ್ಯಕರ್ತ ರ ಬೇಡಿಕೆಯನ್ನು ಪರಿಶೀಲಿಸುವುದಾಗಿ ಎಲ್ಲ ಪಕ್ಷಗಳು ಭರವಸೆ ನೀಡಿವೆ.

    ದೇಶದಲ್ಲಿ ಈ ಚರ್ಚೆಯ ಮಧ್ಯೆ, ಗೋರಿಯೋ ಮತ್ತು ಜೋಸೋನ್ ರಾಜವಂಶದ ಸಮಯದಲ್ಲಿ ನಾಯಿ ಮಾಂಸವನ್ನು ಸೇವಿಸಲಾಗುತ್ತಿತ್ತು ಎಂದು ಐತಿಹಾಸಿಕ ದಾಖಲೆಗಳಿಂದ ಹೇಳಲಾಗುತ್ತಿದೆ. ಆ ಯುಗದಲ್ಲಿಯೂ, ಇತರ ಪ್ರಾಣಿಗಳಿಗೆ ಹೋಲಿಸಿದರೆ ನಾಯಿ ಮಾಂಸದ ಪ್ರವೃತ್ತಿಯು ಹೆಚ್ಚಾಯಿತು ಏಕೆಂದರೆ ಅದು ಸುಲಭವಾಗಿ ಲಭ್ಯವಿತ್ತು. ಹಲವು ದಶಕಗಳಿಂದ ದೇಶದಲ್ಲಿ ಇದನ್ನು ನಿಷೇಧಿಸಬೇಕೆಂಬ ಬೇಡಿಕೆ ಇತ್ತು. ಇದರ ಹೊರತಾಗಿಯೂ, ಒಂದು ಸಂಪ್ರದಾಯದ ಹೆಸರಿನಲ್ಲಿ ಪುರುಷರು ನಾಯಿ ಮಾಂಸವನ್ನು ತಿನ್ನುತ್ತಿದ್ದರು.



    ಇದನ್ನು ಓದಿ: Mattress Tester: ನಿದ್ರೆ ಮಾಡಿದರೆ ಸಾಕು 25 ಲಕ್ಷ ರೂ ಸಂಬಳ! ಹೀಗೊಂದು ಕೆಲಸಕ್ಕೆ ಉದ್ಯೋಗಿಗಳು ಬೇಕಂತೆ!

    ನಾಯಿ ಸಾಕು ಪ್ರಾಣಿಯಾಗಿದ್ದು, ಕೊರಿಯಾದಲ್ಲಿ ಲಕ್ಷಾಂತರ ಜನರು ಆಹಾರಕ್ಕಾಗಿ ನಾಯಿಯನ್ನು ಕೊಲ್ಲುತ್ತಿದ್ದಾರೆ. ಇದನ್ನು ಕಂಡು ಪ್ರಾಣಿದಯಾ ಸಂಘದವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ದಕ್ಷಿಣ kಒರಿಯಾದ ಅಧ್ಯಕ್ಷ ನಿಯವೊಂದನ್ನು ಜಾರಿಗೆ ತರುವ ಮೂಲಕ ನಾಯಿಯನ್ನು ಕೊಲ್ಲುವುದು ಮತ್ತು ಮಾಂಸ ಸೇವಿಸುವುದನ್ನು ನಿಷೇಧಿಸಿದೆ.
    Published by:Harshith AS
    First published: